Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೧೦೫, ಕವಿ; ಎಚ್.ಎನ್. ಈಶಕುಮಾರ್, ಮೈಸೂರು - Karnataka Kahale

ಅನುದಿನ ಕವನ-೧೧೦೫, ಕವಿ; ಎಚ್.ಎನ್. ಈಶಕುಮಾರ್, ಮೈಸೂರು

ಮನದ ಹಂಬಲ
ಈ ದೇಹದ ದಾಹ
ಜೀವನದ ರೀತಿ
ಬದುಕಿನ ನೀತಿಯಲಿ
ತರ್ಕವನು ಹೊಂದಿಸಿ
ಹೊಂದಿಸಿ ಸೋತರು

ಕುಂದಿಲ್ಲ ತತ್ತ್ವದ
ಜಾಗಟೆಯ ಸದ್ದು
ದೇವಸ್ಥಾನದ ಗಂಟೆಯೂ
ಮೊಳಗುತ್ತಲಿವೆ
ಬೀದಿ ಬೀದಿಯಲ್ಲೂ!

ಸೋತವರ ಪದಗಳು
ತಮ್ಮನ್ನೇ ಹುಡುಕಿವೆ
ಇಲ್ಲಿ ಯಾವುದಕೂ
ಮೊದಲಿಲ್ಲ ಕೊನೆಯಿಲ್ಲ
ಉಳಿದಿಲ್ಲ ನಮ್ಮಲ್ಲಿ ನಾವು.

-ಎಚ್.ಎನ್. ಈಶಕುಮಾರ್, ಮೈಸೂರು
—–