ಗಂಗಾವತಿ: ದಾವಣಗೆರೆ ನಗರದ ಗುರು ಭವನದಲ್ಲಿ ಭಾನುವಾರ ನಡೆದ ‘ಬಂಜಾರ ಉತ್ಸವ – 2026’ ಸಮಾರಂಭದಲ್ಲಿ ನಗರದ ಸಂಶೋಧಕರಾದ ಶ್ರೀಮತಿ ಡಾ. ಕಾಳಮ್ಮ ರವರಿಗೆ ಪ್ರತಿಷ್ಠಿತ ‘ಬಂಜಾರ ಸಾಧಕಿ’ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕರ್ನಾಟಕ ರಾಜ್ಯ ಬರಹಗಾರರ ಸಂಘ (ಹೂವಿನಹಡಗಲಿ)ದ ನೇತೃತ್ವದಲ್ಲಿ, ಬಂಜಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಘಟಕ, ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಘಟಕ, ದಾವಣಗೆರೆ ಜಿಲ್ಲಾ ಬಂಜಾರ (ಲಂಬಾಣಿ) ಕಲ್ಯಾಣಾಭಿವೃದ್ಧಿ ಸಂಘ ಮತ್ತು ದಾವಣಗೆರೆ ಬಂಜಾರ ಸೇವಾ ಸಂಘ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸುಮಾರು ವರ್ಷಗಳಿಂದ ಬಂಜಾರ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಹಲವಾರು ಸಂಶೋಧನ ಲೇಖನವನ್ನು ರಚಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷ ಮಧುನಾಯ್ಕ ಲಂಬಾಣಿ ಪ್ರಶಸ್ತಿ ಪ್ರದಾನ ಮಾಡಿದರು. ಘಟಕದ ಅಧ್ಯಕ್ಷರಾದ ಭಾಗ್ಯನಾಗರಾಜ ಲಂಬಾಣಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ವೇಳೆ ಬಂಜಾರ ಸಾಹಿತಿಗಳು, ಗಾಯಕರು ಹಾಗೂ ಇತರರಿದ್ದರು.
