Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೮೯ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಉದಯ - Karnataka Kahale

ಅನುದಿನ ಕವನ-೮೯ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ಉದಯ

ಉದಯ
(ಭಾಮಿನಿ ಷಟ್ಪದಿಯಲ್ಲಿ)
*******
ಹಸುರ ಮಧ್ಯದಿ ಸೂರ್ಯ ನುದಯವು
ಹೊಸೆದು ಸುಂದರ ಹೊನ್ನ ಬಣ್ಣವ
ಬೆಸೆದು ಹಿಮಮಣಿ ಕಣ್ಣಿಗಂದವು ಶುಭದ ಘಳಿಗೆಯಲಿ!
ನಸುಕು ಸಮಯವು ಧರಣಿಯೊಲವಿಗೆ
ರಸದನಿಮಿಷವು ನಲ್ಲನುಡುಗೊರೆ
ಹಸುರ ಹಾಸಿನ ಮೇಲೆ ಕಿರಣವ ಸೂಸಿ ಚುಂಬಿಸಿದ!!

ಚಲುವೆನಾಚುತ ಮನವನರಳಿಸಿ
ಹಲವುಫಲಗಳ ಧಾರೆಯೆರೆದಳು
ಸಲುಗೆಯಿಂದಲಿ ಮನದಿ ನಲಿದಳು ದಾಹತಣಿದಿರಲು!
ಕಳೆಯುಹೊಂದಿತು ಬಾನಿನಂಚಿಗೆ
ಹೊಳೆದುಜಗದಲಿ ರಸಿಕಮನಗಳು
ಜಳಕಮಾಡಲು ಸುರಿದಮಂಜಿನ ಹನಿಯ ಸಿಂಚನದಿ!!

ಸೆಳೆದು ಕಂಗಳಬಿರಿದ ಪುಷ್ಪವು
ಬಳಿಗೆ ಕರೆಯಲು ಮುದವು ಮನದಲಿ
ಹೊಳೆವಮುತ್ತಿನ ಮಣಿಯು ಮೇಲಣ ಚೆಂದ ಕಾಣುತಲಿ!
ತಳೆದು ಬೆಳಗಲಿ ಧರೆಯ ಸೊಬಗಿಗೆ
ಮಿಳತಗೊಂಡಿದೆ ಪಸುರ ಗಿಡದಲಿ
ಬಳಿಗೆ ನಸರಿಯು ಸುತ್ತುಹಾಕುತ ಹಾಡಿ ಸಂಗೀತ!!

-ಧರಣೀಪ್ರಿಯೆ, ದಾವಣಗೆರೆ