ಹೊಸಪೇಟೆ: ಶ್ರೀ ಅನ್ನಪೂರ್ಣೇಶ್ವರಿ ನಿಧಿ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಣೆ

ಹೊಸಪೇಟೆ: ನಗರದ ಶ್ರೀ ಅನ್ನಪೂರ್ಣೇಶ್ವರಿ ನಿಧಿ ಟ್ರಸ್ಟ್ ಕೊವೀಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಬಡಜನರಿಗೆ ಸಹಾಯ ಹಸ್ತ ಚಾಚಿದೆ.
ಸ್ಥಳೀಯ ಜೆ ಎಫ್ ರಸ್ತೆಯಲ್ಲಿರುವ ಮಾರುತಿ ನಗರದ ಸುಮಾರು 200 ಬಡ ಕುಟುಂಬಗಳಿಗೆ ಟ್ರಸ್ಟ್ ಅಧ್ಯಕ್ಷ ಪಿ.ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿ ತಲ್ಲಂ ಗಣೇಶ್ ಹಾಗೂ ಖಜಾಂಚಿ ಎಂ ಶ್ರೀನಿವಾಸ್ ಆಹಾರ ಕಿಟ್ ವಿತರಿಸಿದರು.
ಟ್ರಸ್ಟ್ ಸಮಾಜ ಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *