ಬಳ್ಳಾರಿ ನಗರದ ಪ್ರತಿ ವಾರ್ಡಿಗೆ ಭೇಟಿ ನೀಡುವೆ -ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಮಾ.3:  ನಗರದ ಸಮಗ್ರ ಅಭಿವೃದ್ಧಿ ಮಾಡುವ ಉದ್ಧೇಶದಿಂದ ಮುಂದಿನ ತಿಂಗಳಿನಿಂದ ಪ್ರತಿ ವಾರ್ಡಿಗೆ ಭೇಟಿ ನೀಡಿ, ಇಡೀ ದಿನ ಆಯಾ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಸೋಮವಾರ ನಗರದ ಬಸವ ಭವನದಲ್ಲಿ…

ಅನುದಿನ ಕವನ-೧೫೨೩, ಕವಿ: ಬಿ.ಪೀರ್ ಬಾಷ, ಹೊಸಪೇಟೆ, ಕವನದ ಶೀರ್ಷಿಕೆ:ನಮ್ಮ ಪಾಲಿಗಿಲ್ಲ ದೊರೆಯ ಕರುಣ

ನಮ್ಮ ಪಾಲಿಗಿಲ್ಲ ದೊರೆಯ ಕರುಣ. ಕೊರಳ ಮೇಲಿಟ್ಟ ಖಡ್ಗದಂತೆ ಚರಿತ್ರೆಯ ಪುಟವನ್ನೂ ಚೂಪಾಗಿಸಿ ಕೊರಳ ಹಿರಿದು, ಕರುಳ ಬಗೆದು ವಿರಾಟ ನೃತ್ಯಗೈದರೂ ಸುಮ್ಮನಿರಬೇಕು. ಸುಮ್ಮನಿರಬೇಕು ನರ ಮೇಧಯಾಗದ ಕೊನೆಗೆ ಕಾಲನ ನಾಲಗೆಯನ್ನೇ ಹವಿಸ್ಸಾಗಿಸಿದೆ ಕಾಲ ಅಸುರನೆಂದು ಹೆಸರಿಸಿದರೂ ಸಾಕು ಹುಲ್ಲು ಕೊಯ್ದಷ್ಟು…

ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಬಳ್ಳಾರಿ ಗುಡಾರನಗರದ ಕೆ.ಶಂಕರಪ್ಪ ಆಯ್ಕೆ

ಬಳ್ಳಾರಿ,ಮಾ.3: ಕರ್ನಾಟಕ ಜಾನಪದ ಅಕಾಡೆಮಿಯ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಶ್ರೀಧರಗಡ್ಡೆ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ. ಹಗಲುವೇಷ ಕಲಾ ಪ್ರಕಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಂಕರಪ್ಪ ಅವರನ್ನು…

ಅನುದಿನ ಕವನ-೧೫೨೨, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ನೀನು ಬರುವವರೆಗೂ……..

ನೀನು ಬರುವವರೆಗೂ………… ನೀನು ಬರುವವರೆಗೂ ನನಗಾದರೂ ಏನು ಗೊತ್ತಿತ್ತು ಪ್ರೇಮವು ಎರಡು ಆತ್ಮಗಳ ಸಮ್ಮಿಲನವೆಂದು ನೋವಿನಿಂದ ಬಿಕ್ಕುವ ಭಾವಗಳ ದೀಪಕ್ಕೆ ಕೈಯಾಸರೆಯೆಂದು – ನನಗಾದರೂ ಏನು ಗೊತ್ತಿತ್ತು ಎದೆಯ ಭಾವಶರಧಿ ಉಕ್ಕೇರಿದಾಗ ತಡೆಗೋಡೆಯಾಗಿ ಸಂತೈಸುವ ಮಳಲ ತೀರವೆಂದು ರೋದಿಸುವ ಕಪ್ಪುಬಿಳಿ ಕನಸುಗಳಿಗೆ…

ಅನುದಿನ ಕವನ-೧೫೨೧, ಕವಯಿತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಹಚ್ಚಡದವ್ವ

ಹಚ್ಚಡದವ್ವ ಓ ಹಚ್ಚಡದವ್ವ ನೀನು ಅವ್ವನಿಗೂ ಅವ್ವ! ನನ್ನ ಹಚ್ಚಡದವ್ವ ಹಾಸಿಗೆಯಲಿ ಮೈ ತಂಪು ತಬ್ಬಿ ಹಿತವಾಗಿ ಕಾವಿನಲ್ಲಿ ಸಂತೈಸುವಳು! ಹಗಲು ಬೆಂದ ಅಪಮಾನಕೆ, ಜನರ ಅನುಮಾನಕೆ ಇರುಳಿನಗೂಡ ಸುರಿವ ಕಣ್ಣೀರು ಒರೆಸುವ ಅವ್ವ ನೀನು ನನ್ನ ಪ್ರೀತಿಯ ಹಚ್ಚಡವ್ವ! ಗಂಡಿನ…

ಅನುದಿನ ಕವನ-೧೫೨೦, ಕವಿ: ಪ್ರಕಾಶ ಕೋನಾಪುರ, ಶಿವಮೊಗ್ಗ, ಕವನದ ಶೀರ್ಷಿಕೆ:ಕೆಲವೊಂದು ನೋವುಗಳೇ ಹಾಗೆ…..

ಕೆಲವೊಂದು ನೋವುಗಳೇ ಹಾಗೆ….. ಕೆಲವೊಂದು ನೋವುಗಳೇ ಹಾಗೆ ಹೆಂಡತಿ ಬಿಟ್ಟರೆ ಬೇರೆ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಗೆಳತಿ ಕೆಲವೊಂದು ನೋವುಗಳನ್ನು ಜೀವದ ಗೆಳೆಯನಿಗೆ ಬಿಟ್ಟರೆ ಗೆಳತಿ ಹೆಂಡತಿಯೊಡನೆಯೂ ಹಂಚಿಕೊಳ್ಳಲಾಗುವುದಿಲ್ಲ ಕೆಲವೊಂದು ನೋವುಗಳನ್ನು ಹೆಂಡತಿ ಜೀವದ ಗೆಳೆಯ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಅನುಭವಿಸಬೇಕು ನಾವೊಬ್ಬರೇ ಸದಾ…

ಪಕ್ಷಿ ಲೋಕದ ದ್ರೌಪದಿಯರು!? ಚಿತ್ರ-ಬರಹ: ವಿಜಯ್ ಇಟ್ಟಿಗಿ, ಹಗರಿಬೊಮ್ಮನಹಳ್ಳಿ

ಪಕ್ಷಿ ಲೋಕದ ದ್ರೌಪದಿಯರು!? “. Pesentail jacana” fight ಸ್ವಲ್ಪ ತಾಳಿ ಇದಕ್ಕೆ ಬೇರೆಯ ಅರ್ಥಕೊಡದೆ ಒದಿಕೊಳ್ಳಿ. ಏಕಪತ್ನಿ ವೃತಸ್ಥ ಎಂದ ತಕ್ಷಣವೇ ನಮಗೆ ಮರ್ಯಾದ ಪುರುಷೋತ್ತಮ ನೆನಪಾಗಯತ್ತಾನೆ ಅದೇ ರೀತಿಯಲ್ಲಿ ಹಲವಾರು ಗಂಡಂದಿರು ಅಂದ ತಕ್ಷಣವೇ ದ್ರೌಪದಿ ನೆನಪಾಗುತ್ತಾಳೆ…ಅದೇ ರೀತಿಯಲ್ಲಿ…

ವಿಎಸ್ ಕೆಯು: ನೂತನ ಕುಲಸಚಿವರಾಗಿ (ಮೌಲ್ಯಮಾಪನ) ಡಾ. ಎನ್. ಎಂ. ಸಾಲಿ ಅಧಿಕಾರ ಸ್ವೀಕಾರ

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಸಚಿವ(ಮೌಲ್ಯಮಾಪನ) ರಾಗಿ ಡಾ. ಎನ್. ಎಂ. ಸಾಲಿ ಅವರು ಶುಕ್ರವಾರ ಅಧಿಕಾರವನ್ನು ವಹಿಸಿಕೊಂಡರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎನ್. ಎಂ. ಸಾಲಿ ಅವರನ್ನು ಸರ್ಕಾರ…

ಅನುದಿನ ಕವನ-೧೫೧೯, ಕವಿ: ಲಿಂಗರಾಜ ಸೊಟ್ಟಪ್ಪನವರ್, ಹಾವೇರಿ, ಕವನದ ಶೀರ್ಷಿಕೆ:ಪ್ರತಿ ಮುಂಜಾವಿಗೂ ನಿನ್ನದೇ ಹೆಸರು

ಪ್ರತಿ ಮುಂಜಾವಿಗೂ ನಿನ್ನದೇ ಹೆಸರು ವಯಸ್ಸಾಯಿತು ಎಂದೇಕೆ ಹಲುಬುತ್ತಿ ಸರಿದು ಹೋಗುವ ಪ್ರತಿ ಕ್ಷಣವೂ ಮೈದುಂಬಿಕೊಂಡೆ ಸಾಗುತ್ತದೆ ಹರೆಯ ಎಂಬುದು ತುಂಬಿಕೊಂಡ ಎದೆ ಪೃಷ್ಠಗಳಷ್ಟೇ ಅಲ್ಲ ವಯಸ್ಸಲ್ಲದ ವಯಸ್ಸಲ್ಲಿ ಸಿಕ್ಕುಬಿಟ್ಟೆ ನೀನು ಮತ್ತೆ ಹರೆಯ ನೆನಪಾಗಲು ಏನೆಲ್ಲ ಒಪ್ಪಿಸಿಬಿಟ್ಟೆ ಕತ್ತಲಲಿ ಕೈಯಾಡಿಸದೆ…

ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಜಾನಪದದತ್ತ ವಿದೇಶಿಯರು ಆಕರ್ಷಿತ -ಕುಲಸಚಿವ ರುದ್ರೇಶ ಎಸ್. ಎನ್

  ಬಳ್ಳಾರಿ, ಫೆ.27:ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿ,  ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ‌ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್. ಎನ್ ಅವರು ಹೇಳಿದರು. ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತು…