ಶ್ವಾನಾಕ್ರೋಶ ತಿದ್ದಲಾಗದ ನಿಮ್ಮ, ಉದ್ದುದ್ದ ಡೊಂಕುಗಳ, ನನ್ನ ಬಾಲಕ್ಕೇಕೆ ಹೋಲಿಸುವಿರಿ; ನನ್ನದೋ ಕಾಯಗುಣ, ನಿಮ್ಮದು ಭ್ರಷ್ಟಮನ, ಎಲ್ಲಿಂದ ಸಂಬಂಧ ಕಲ್ಪಿಸುವಿರಿ? -ಡಾ.ಬಸವರಾಜ ಸಾದರ, ಬೆಂಗಳೂರು
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೫೦೦, ಯುವ ಕವಿ: ದಾದಾಪೀರ್ ಜೈಮನ್, ಬೆಂಗಳೂರು, ಚಿತ್ರ: ಮಲ್ಲಿಕಾರ್ಜನ ಗೌಡ, ದಾವಣಗೆರೆ
ಧಡಲ್ ಧಡಲ್ ಧಡಲ್ ಧಡಲ್ ಧಡಲ್ ಧಡಲ್ ಧಡಲ್ ಧಡಲ್ ಖೂ.. ಎಂದು ಕೂಗಿಕೊಂಡು ದೌಡಾಯಿಸುವ ರೈಲಿಗೆ ಬೆನ್ನು ಕೊಟ್ಟು ನಡೆವವನ ತಲೆಯೊಳಗೆ ಆ ಹೊತ್ತು ಏನು ಸುಳಿದಿತ್ತು? ಈ ಬದುಕು ಭವಿಷ್ಯದ್ದು ಎನ್ನುವುದು ಉಳಿದವರ ಉಯಿಲು ಬದುಕುವವರದ್ದು ಆ ಹೊತ್ತಿನ…
ಅನುದಿನ ಕವನ-೧೪೯೯, ಯುವ ಕವಿ: ತರುಣ್ ಎಂ✍️ ಆಂತರ್ಯ, ಚಿತ್ರದುರ್ಗ, ಕವನದ ಶೀರ್ಷಿಕೆ:ಪ್ರಕೃತಿಯೊಂದಿಗೆ ನಾ ತುಸು ಬೆರೆತಾಗ..
ಪ್ರಕೃತಿಯೊಂದಿಗೆ ನಾ ತುಸು ಬೆರೆತಾಗ.. ಮುಗಿಲಿನಲಿ ಮೋಡ ಮಳೆಯು ಮಾಗಿ ಮೈ ಮರೆತು ಸರಸಕ್ಕಿಳಿದರೆ ಇಳೆಯೊಂದು ಎದೆ ತೆರೆಯಿತು ಕಡಲೊಂದು ಭೋರ್ಗರೆದು ಅಲೆಯೊಂದಿಗೆ ಅಲೆದಾಡುವಾಗ ಯಾಕೊ ತೀರವು ಮೌನ ಪರ್ವತದ ಒಡಲಿನಿಂದ ಕಣ್ಣುಜ್ಜುತ ಸೂರ್ಯ ಉದಯಿಸಿದರೆ ಮುಖ ಮುದುರಿಕೊಂಡ ಹೂವೊಂದು ನಕ್ಕಿತು ಹಕ್ಕಿಗಳ…
ಅನುದಿನ ಕವನ-೧೪೯೮, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅಪ್ಪ
ಇಂದು 75 ವರ್ಷಗಳನ್ನು ಪೂರೈಸಿದ…. ಅಣ್ಣ(ಅಪ್ಪ)ನ ಜೊತೆ ಒಂದಿದಿಷ್ಟು ಪ್ರೀತಿಯ ಹೊತ್ತು… ಈ ಪದಗಳ ಕಾಣಿಕೆ ಇತ್ತು…. ಅಪ್ಪಿ ನಿಂತಾಗ…. ಅಪ್ಪನ ಹುಟ್ಟು ಹಬ್ಬವಾದ ಸಂಭ್ರಮ….. ಮೈ ಮನಸಿಗೆಲ್ಲಾ! ಅಪ್ಪ…. ಬದುಕಿನ ಆಗುಹೋಗುಗಳ ಮಧ್ಯೆ ಸ್ಥಿರವಾಗಿ ನನ್ನೊಳಗೆ ಬೇರೂರಿ ನನಗೆ ಸಮಯಕ್ಕಾಗುವ…
ಅನುದಿನ ಕವನ-೧೪೯೭, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ಅವರೆಕಾಳು ಸಾರು V/s ಕವಿತೆ…
ಅವರೆಕಾಳು ಸಾರು V/s ಕವಿತೆ… ಲಯ ತಪ್ಪಿ ಮೂಲೆಯಲ್ಲಿ ಕುಳಿತ ಕವಿತೆಯ ಮುಂಗೈ ಹಿಡಿದು ಅವಳು ಅಡುಗೆ- ಮನೆಗೆ ಕರೆದೊಯ್ದಳು. ಹೊಲದಲ್ಲಿ ಬಿಡಿಸಿ ತಂದು ಆಗತಾನೆ ಸುಲಿದ ಸೊಗಡಿನ ಅವರೆಕಾಳಿನ ಸಾರು ಕೊತಕೊತ ಕುದಿಯುತ್ತಿತ್ತು. ಅವಳ ಮೂಗು ಅವಳಿಗೆ ಏನು ಹೇಳಿತೋ;…
ದೇಶದ ಬಹುಜನರ ಘನತೆಯ ಬದುಕಿಗೆ ಭಾರತದ ಸಂವಿಧಾನ ಕಾರಣ – ಸಾಹಿತಿರಂಜಾನ್ ದರ್ಗಾ
ವಿಜಯಪುರ ಫೆ. 4: ಭಾರತದ ಬಹುಸಂಖ್ಯಾತ ದಲಿತರು, ಶೋಷಿತರು, ವಿಶೇಷವಾಗಿ ಮಹಿಳೆಯರು ಇವತ್ತು ಗೌರವಯುತವಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನ ಕಾರಣ ಎಂಬುದನ್ನು ಯಾರೂ ಮರೆಮಾಚಲಾಗದು ಎಂದು ಪ್ರಗತಿಪರ ಚಿಂತಕ, ಸಾಹಿತಿ, ಹಿರಿಯ ಪತ್ರಕರ್ತ ರಂಜಾನ್ ದರ್ಗಾ…
ಬೆಂಗಳೂರು: ಹೆಚ್.ಕೆ.ಬಿ.ಕೆ ಇಂಜಿನಿಯರಿಂಗ್ ಕಾಲೇಜಿನ ಐಕ್ಯೂಎಸಿ ವಿಭಾಗದಿಂದ ಐದು ದಿನಗಳ ಎಫ್.ಡಿ.ಪಿ ಕಾರ್ಯಕ್ರಮ ಆರಂಭ
ಬೆಂಗಳೂರು, ಫೆ.4: ಮಹಾನಗರದ ಹೆಚ್.ಕೆ.ಬಿ.ಕೆ. ಇಂಜಿನಿಯರಿಂಗ್ ಕಾಲೇಜಿನ ಆಂತರಿಕ ಭರವಸೆ ಕೋಶ (ಐಕ್ಯೂಎಸಿ) ವಿಭಾಗದ ಸಹಯೋಗದಲ್ಲಿ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಮಂಗಳವಾರ ಆರಂಭವಾಯಿತು. ಮಹಾನಗರದ ಹೆಚ್.ಕೆ.ಬಿ.ಕೆ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ಅವರು ಕಾರ್ಯಕ್ರಮವನ್ನು…
ಅನುದಿನ ಕವನ-೧೪೯೬, ಕವಿ: ಟಿ.ಪಿ.ಉಮೇಶ್ ಹೊಳಲ್ಕೆರೆ, ಚಿತ್ರದುರ್ಗ ಜಿ, ಕವನದ ಶೀರ್ಷಿಕೆ: ನೀ…ಚಳಿ!
ನೀ… ಚಳಿ! ಚಳಿಯಲ್ಲೆೇ ನೆನಪಾಗಿ; ಬೇಕಿನಿಸುವುದು ಭರ್ಜರಿ ನಿನ್ನ ಸಿಟ್ಟಿನ ಬೇಸಿಗೆ! ** ಬಿಸಿಲು ಬೆವರಿಳಿಸಿ ಚಳಿಗೆ ಸುಖ ನಿದ್ದೆ; ನಿನ್ನ ಬೆಚ್ಚನೆಯ ಪ್ರೀತಿ ನೆನಪುಗಳಲಿ! ** ಬೇಸಿಗೆ ಕಾವು; ಮಳೆಯ ಮಾಗು; ಚಳಿಯ ಚಿಗುರು! ** ಬೇಸಿಗೆಯಲಿ ವಿರಾಮ; ಮಳೆಯಲ್ಲಿ…
ಅನುದಿನ ಕವನ-೧೪೯೫, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ನೀನಲ್ಲವೇ ಸೂಫಿ
ನೀನಲ್ಲವೇ ಸೂಫಿ ಕವಿದ ಕತ್ತಲ ಕುರುಡು ಹಾದಿಯಲಿ ದಾರಿ ತೋರುವ ಬೆಳಕ ಮನದ ಮೋಹಿ ನೀನಲ್ಲವೇ ಸೂಫಿ ಕೆಂಡವ ಮುಚ್ಚಿದ ಬೂದಿಯ ಸರಿಸಿ ಸತ್ಯವ ಸಾಕ್ಷಾತ್ಕರಿಸುವ ದೇಹಿ ನೀನಲ್ಲವೇ ಸೂಫಿ ಬದುಕು ಹಿಂಡುವ ನೋವನು ನಗೆಯ ಹಾಡಾಗಿಸುವ ರಾಹಿ ನೀನಲ್ಲವೇ ಸೂಫಿ…
ದಲಿತ ಬಂಡಾಯಕ್ಕೆ ಪ್ರಾರ್ಥನೆ ಗೀತೆ ಕೊಟ್ಟ ಡಾ. ಸಿದ್ಧಲಿಂಗಯ್ಯ ಲೇಖಕರು: ತಿರು ಶ್ರೀಧರ್, ದುಬೈ
ದಲಿತ ಬಂಡಾಯಕ್ಕೆ ಪ್ರಾರ್ಥನೆ ಗೀತೆ ಕೊಟ್ಟ ಡಾ. ಸಿದ್ಧಲಿಂಗಯ್ಯ ಅವರ ಜನುಮ ದಿನ ಇಂದು(ಫೆ.೩)! ಈ ಹಿನ್ನಲೆಯಲ್ಲಿ ದುಬೈಯಲ್ಲಿ ಇರುವ ಲೇಖಕ ತಿರು ಶ್ರೀಧರ್ ಅವರು ಜನಕವಿಯನ್ನು ಪ್ರೀತಿಯಿಂದ ಸ್ಮರಿಸಿದ್ದಾರೆ. ಡಾ. ಸಿದ್ಧಲಿಂಗಯ್ಯ ಅವರು ಕನ್ನಡ ನಾಡಿನ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಸಿದ್ಧಲಿಂಗಯ್ಯ…