ಸುವರ್ಣ ಬಳ್ಳಾರಿ ನಮ್ಮ ಗುರಿ: ನುಡಿದಂತೆ ನಡೆಯುತ್ತಿದ್ದೇವೆ  -ಶಾಸಕ ನಾರಾ ಭರತ್ ರೆಡ್ಡಿ

  ಬಳ್ಳಾರಿ, ಡಿ.1: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಇಲ್ಲಿನ ಬಸವೇಶ್ವರ ನಗರದಲ್ಲಿ ಸೋಮವಾರ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ…

ಅನುದಿನ ಕವನ-೧೭೯೬, ಕವಯತ್ರಿ: ಮಂಜುಳಾ ಹುಲಿಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಅವಳ‌ ಪ್ರೇಮಿಗೆ

ಅವಳ ಪ್ರೇಮಿಗೆ… ಸಂಬಂಧಗಳು ನಿನ್ನ ಕುತ್ತಿಗೆಯ ಸರಪಳಿಯಾದಾಗ ತುಂಡು ಮಾಡು ಲೋಕದ ತಕ್ಕಡಿಗಳಿಗೆಲ್ಲಾ ಕೋಟಿ ತೂತು.. ನಿನ್ನ ತೂಗುವವರ ಲೆಕ್ಕ ಇಂದೇ ಚುಕ್ತ ಮಾಡು… ರೆಕ್ಕೆ ಬಲಿತ ಹಕ್ಕಿ ಉಂಡು ಹಾರಿಹೋಗುವಂತೆ ಹಾರಲಾಗದ ಮನುಷ್ಯನ ಬಂಧಗಳೆಲ್ಲವೂ ಅಕ್ರಮವೇ ಬಂಧಿಯಾಗಬೇಡಾ ಪ್ರೇಮ ರೆಕ್ಕೆ…

ಅನುದಿನ ಕವನ-೧೭೯೫, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಸಾಧ್ಯವಾಗಿಸಿಕೊ ಸಾಧ್ಯವಾದರೆ…

ಸಾಧ್ಯವಾಗಿಸಿಕೊ ಸಾಧ್ಯವಾದರೆ… ನನ್ನನ್ನು ನಿನ್ನ ಆತ್ಮಕ್ಕೆ ಅಂಟಿಸಿಕೊಳ್ಳಲು ನಿನ್ನ ಹೃದಯ ಬಡಿತವಾಗಲು ನಿನ್ನ ನಿಟ್ಟುಸಿರ ಶಬ್ದವಾಗಲು ನಿನ್ನ ನಾಡಿಯೊಳಗಿನ ಮಿಡಿತವಾಗಲು ನಿನ್ನ ಹೊಕ್ಕುಳೊಳಗಿಂದ ಉಬ್ಬುವ ಆಲೋಚನೆಯ ಸಂತತನವಾಗಲು ಆಯಾಚಿತವಾಗಿ ಒದಗಿದೆ ಸಂದರ್ಭ ಯಾವತ್ತಿಗೂ ನೀನು ಕಾಣುವ ಅಸಹಜ ಕನಸಿನ ಸಣ್ಣ ಭಾಗವಾಗಿಸಿಕೊಳ್ಳಲು…

ಅನುದಿನ ಕವನ-೧೭೯೪, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಸಾವಿರ ಜಪಗಳ ಮಾಡಿದರೂ ಮನ ಶುದ್ಧಿಯಾದವರ ಕಾಣಲಿಲ್ಲ ಹತ್ತು ಹುದ್ದೆಗಳನೇರಿದರೂ ಜನರ ಸೇವೆ ಮಾಡಿದವರ ಕಾಣಲಿಲ್ಲ ನೂರು ಕೂವೆಗಳ ಚಿತ್ತದ ಹುತ್ತದಲಿ ಅಡಗಿಹುದು ಕರಿನಾಗರ ವ್ರತ ನೇಮಗಳನು ಮಾಡಿಯೂ ಸರಳ ನಡೆಯವರ ಕಾಣಲಿಲ್ಲ ಹಗಲಿರುಳುಗಳ ಜೋಕಾಲಿಯಲಿ ಜೀಕಿ ಮರೆತು ಬೆಳೆದಿಹರು…

ಬಿಸಿ ಚೈತನ್ಯ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ನೇಮಕ

ಬಳ್ಳಾರಿ, ನ. 29: ದೇಶದ ಅತ್ಯಂತ ಹಿಂದುಳಿದ ಬಿಸಿ ಗಳ ಕಲ್ಯಾಣಕ್ಕಾಗಿ ಸ್ಥಾಪನೆಗೊಂಡಿರುವ ಬಿಸಿ ಚೈತನ್ಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನಗರದ ಪತ್ರಕರ್ತ ಬೆಲ್ಡೋನಾ ಗಿರಿ ಯಾದವ್ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಗಿದೆ ಎಂದು ರಾಷ್ಟ್ರೀಯ ಬಿಸಿ ಚೈತನ್ಯ…

ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ: ಸಮಾಜದ ಮುಖಂಡರಿಂದ ವೃತ್ತ ವೀಕ್ಷಣೆ

ಬಳ್ಳಾರಿ, ನ.29:  ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ  ಬರುವ  ಜ 3ರಂದು ನಡೆಯಲಿರುವ ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿಯವರ ಪುತ್ಥಳಿಯನ್ನು ಅನಾವರಣ ಕಾರ್ಯಕ್ರಮದ ಹಿನ್ನಲೆಯಲ್ಲಿ ನಗರ ಹಾಗೂ ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ…

ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ಬೆಂಗಳೂರು: ಹಿರಿಯ ಪತ್ರಕರ್ತರಾಗಿದ್ದ ಅ.ಚ.ಶಿವಣ್ಣ (85) ಅವರು ಬೆಂಗಳೂರು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಇಂದಿರಾ ಮತ್ತು ಓರ್ವ ಪತ್ರ ವಿಕ್ಟೋರಿಯಾ ಆಸ್ಪತ್ರೆ ಸೂಪರಿಟೆಂಡೆಂಟ್ ಡಾ.ದೀಪಕ್ ಶಿವಣ್ಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಎಪ್ಪತ್ತ್ತರ ದಶಕದಲ್ಲಿ ಲೋಕವಾಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ್ದ…

ಹಾಸನದ ತಗಡೂರು ಶಾಲೆಯಲ್ಲಿ ಸಂವಿಧಾನ ದಿನಾಚರಣೆ: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಶಿವಾನಂದ ತಗಡೂರು

ಬೆಂಗಳೂರು: ತಾವು ಓದಿದ ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಶಾಲಾ ಮಕ್ಕಳೊಂದಿಗೆ ಸಂವಿಧಾನ ದಿನಾಚರಣೆ ಆಚರಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.…

ಅನುದಿನ ಕವನ-೧೭೯೩, ಕವಯತ್ರಿ: ಭುವನಾ ಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ: ಒಂದು ಮಧ್ಯಂತರ

ಒಂದು ಮಧ್ಯಂತರ ಬಿಟ್ಟು ಹೋದೆ ನೀನು ನಡುದಾರಿಯಲಿ ಪೋಣಿಸುತ್ತಿರುವಾಗ ನಾನು ಕೊನೆಯ ಮುತ್ತನು ನುಂಗಿ ಹಾಕಿತು ಮಾತು ಕೊನೆಯ ಮೌನವನು ನಟ್ಟಿರುಳ ಕತ್ತಲೆ ಸ್ಫೋಟಿಸುತ್ತಿತ್ತು ಕಟ್ಟಕಡೆಯ ನಕ್ಷತ್ರವೂ ಸುಟ್ಟು ಕರಕಲಾಗುತಿತ್ತು ಬರಿದಾಗುತ್ತಿರೋ ಕಡಲ ಕೊನೆಯ ಹನಿಗಳಲಿ ಕಡಲ ತೀರ ಉಸಿರಾಡುತಿತ್ತು ಬರಡು…

ಅನುದಿನ ಕವನ-೧೭೯೨, ಕವಿ: ತನಾಶಿ, ಮಂಡ್ಯ

ಸಂವಿಧಾನವೇ ನಮ್ಮ ಭಾಗ್ಯವು                      ಭಾರತೀಯರ ಜೀವವು                               …