ಚಿಂತನಶೀಲ‌ತೆ ಮತ್ತು ವೈಚಾರಿಕತೆ ಬೆಳೆಸುವುದೆ ಶಿಕ್ಷಣ -ಡಾ. ಯು ಶ್ರೀನಿವಾಸ ಮೂರ್ತಿ

ಬಳ್ಳಾರಿ: ತರಗತಿಯಲ್ಲಿ ದೇಶದ ಭವಿಷ್ಯ ನಿರ್ಮಾಣ ವಾಗುತ್ತದೆ, ಮಕ್ಕಳ ಮನಸ್ಸಿನಲ್ಲಿ ವೈಚಾರಿಕತೆ ಮತ್ತು ಚಿಂತನಶೀಲ ಮನೋಭಾವ ಬೆಳೆಸಿದಾಗ ಅದು ಸಾಧ್ಯ ವಾಗುತ್ತದೆ ಎಂದು ಸಾಹಿತಿ ಮತ್ತು ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಿಪುರ ಸಮೀಪದ ಕೊಳಗಲ್ಲಿನ ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ…

ರಾಜ್ಯ ಸರಕಾರ ಪುರುಷೋತ್ತಮ ಹಂದ್ಯಾಳು ಅವರ ಅನನ್ಯ ರಂಗ ಸೇವೆಯನ್ನು ಗುರುತಿಸಿ ಗೌರವಿಸಲು ಸಿ.ಮಂಜುನಾಥ ಒತ್ತಾಯ

ಬಳ್ಳಾರಿ, ನ.14 :ಪತ್ರಿಕಾ ಛಾಯಾಗ್ರಾಹಕ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ ಅವರು ಪತ್ರಿಕೋದ್ಯಮ ಹಾಗೂ ರಂಗಭೂಮಿಗೆ ಸಲ್ಲಿಸಿರುವ ಅನುಪಮ‌ ಸೇವೆಯನ್ನು ರಾಜ್ಯ ಸರಕಾರ ಹಾಗೂ ಅಕಾಡೆಮಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ…

ಅನುದಿನ ಕವನ-೧೭೭೮, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಕವಿದ ಮೋಡ ಕೊಂಚ ಬಾನಲಿ ಮಳೆಯ ತಂದ ನಿನ್ನ ಗುಂಗಲಿ ಕಳೆದು ಹೋದೆ ನಿನ್ನಲಿ ನೀನೆ ಕಾಣಲು ಕಣ್ಣಲಿ ಕನವರಿಕೆ ನೂರಾರು ಜನ ಜಾತ್ರೆ ನಡುವೆ ನಾ ದಾರಿ ತಪ್ಪಿ ನಿಂತೆ ನೀ ಎಲ್ಲೆಲ್ಲೂ ಹೀಗೇಕೆ ಕಾಡುವೆ ಓ ಬಾಲೆ ಕುಸುಮಬಾಲೆ…

ಬಳ್ಳಾರಿಯ ಗೋನಾಳ್‌ ನಲ್ಲಿ ಧೀಮಂತ ವೀರ ವನಿತೆ ಒನಕೆ ಓಬವ್ವ ಜಯಂತಿ: ಗಮನ ಸೆಳೆದ ಮೆರವಣಿಗೆ

ಬಳ್ಳಾರಿ, ನ.12:ನಗರದ  ರೂಪನಗುಡಿ ರಸ್ತೆಯ  ಬಿ ಗೋನಾಳ್ ನಲ್ಲಿ ಮಂಗಳವಾರ ಸಂಜೆ  ಜಿಲ್ಲಾ ಛಲವಾದಿ ಮಹಾಸಭಾದ(ಸಿಎಂಎಸ್) 17ನೇ ವಾರ್ಡ್ ಘಟಕದ ಆಶ್ರಯದಲ್ಲಿ ಭಾರತದ  ವೀರ ವನಿತೆ ಒನಕೆ ಓಬವ್ವರವರ ಜಯಂತೋತ್ಸವವನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.           …

ಅನುದಿನ ಕವನ-೧೭೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಗಂಡಸೆರಲ್ಲರೂ ಕೆಟ್ಟವರಲ್ಲ ..

ಗಂಡಸೆರಲ್ಲರೂ ಕೆಟ್ಟವರಲ್ಲ .. ಅರೆ ಇವಳೇನು ಇದಕ್ಕಿದಂತೆ ಹಾಯಿ ತಪ್ಪಿದ ದೋಣಿಯಂತೆ, ಅಲೆಗಳ ಮಧ್ಯ ತೇಲುತ್ತಾ ಸಾವಿರ ಮಾತುಗಳ ತೂಕ ಹೊತ್ತಂತೆ, ಫೆಮಿನಿಸಂನ ಹೊಳೆ ಬಿಟ್ಟಂತಿದೆ ಎಂದು ನೀವಂದುಕೊಂಡರೆ, ನನಗದು ಅಚ್ಚರಿಯೇನಲ್ಲ. ರಾತ್ರಿ ಊರೂರು ದಾಟಿ ಬರುವ ಅವರ ಹೆಜ್ಜೆಗಳಲ್ಲಿ ದಣಿದ…

ಗಿರೀಶ್ ಕುಮಾರ್.ಜಿ ಗೆ ಪಿಎಚ್ ಡಿ ಪದವಿ ಘೋಷಣೆ

ಬಳ್ಳಾರಿ, ನ. 12: ನಗರದ ಪತ್ರಕರ್ತ ಗಿರೀಶ್ ಕುಮಾರ್.ಜಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ಘೋಷಿಸಿದೆ. ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ  ಡಾ. ನಾಗೇಂದ್ರ ಅವರ ಮಾರ್ಗದರ್ಶನಲ್ಲಿ  ಸಲ್ಲಿಸಿದ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್…

ಬಳ್ಳಾರಿ: 13ನೇ ವಾರ್ಡಿನಲ್ಲಿ ಕಿಚನ್ ಕಿಟ್ ವಿತರಿಸಿದ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ನ.12: ಮನೆ ಮನೆಗೂ ಭರತ್ – ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಶಾಸಕ ನಾರಾ ಭರತ್ ರೆಡ್ಡಿಯವರು ಬುಧವಾರ ನಗರದ 13ನೇ ವಾರ್ಡಿನ ಮಿಲ್ಲರ್ ಪೇಟೆ ಮತ್ತಿತರ ಪ್ರದೇಶಗಳಲ್ಲಿ ತಮ್ಮ ಜನ್ಮ ದಿನದ ನಿಮಿತ್ಯ ಕಿಚನ್ ಕಿಟ್ ವಿತರಿಸಿದರು. ಈ…

ಅನುದಿನ‌ ಕವನ-೧೭೭೬, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಯುದ್ಧ!!?

ಯುದ್ದ!!? ಒಲವಯುದ್ದವೋ…? ವಿರಾಮವೋ..? ಸಂಧಾನವೋ..? ಆತ್ಮಾನುಬಂಧವೋ…? ಅದ್ಯಾವುದರ ಸೆಳೆತವೋ‌ ಕಾಣೆ ನಾ?!! ಒಲವಲಿ‌ ಮಿಂದೇಳುವ ಘಳಿಗೆಯಲಿ… ನನ್ನೊಳಗೆ ನೀನೋ…!? ನಿನ್ನೊಳಗೆ ನಾನೋ!!? ಏನೆಂದೂ ಅರಿಯೆ ನಾ.!. ಸೋತದ್ದು ನಾನೋ… ಗೆದ್ದದ್ದು ನೀನೋ…!? ಅಥವಾ ಸೋಲು ಗೆಲುವುಗಳ ಮೀರಿದ ಭಾವದ ಯುದ್ದದಲಿ ಇಬ್ಬರೂ…

ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು: ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ: ಸಿ.ಎಂ ಸಿದ್ದರಾಮಯ್ಯ

ಮೈಸೂರು ನ11: ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು. ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ ಸೂಚನೆ ನೀಡಿದ್ದೇನೆ. ಶಿಕ್ಷೆ ಪ್ರಮಾಣ ಹೆಚ್ಚಾಗಲು ಕ್ರಮ ವಹಿಸುವಂತೆ ಪೊಲೀಸ್ ಅಧಿಕಾರಿಗಳು, ಆಯುಕ್ತರು, ಐಜಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ವೀರ ವನಿತೆ ಒನಕೆ ಓಬವ್ವ ಅವರ ಧೈರ್ಯ ಸಾಹಸ ಮಹಿಳೆಯರಿಗೆ ಆದರ್ಶ -ಕೆ.ಇ.ಚಿದಾನಂದಪ್ಪ

ಬಳ್ಳಾರಿ,ನ.11:ವೀರ ವನಿತೆ ಒನಕೆ ಓಬವ್ವ ಅವರ ಕಾಯಕ ನಿಷ್ಠೆ, ಧೈರ್ಯ, ಸಾಹಸ ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ…