ಈ ನದಿ , ದಡ ಹರಿವು, ಕಡಲಿನೊಡಲು ಹದ ತಪ್ಪಿದ ಅಲೆ ಜಾಡು ತಪ್ಪಿದ ಹೊಳೆ ಚೆಲ್ಲಾಪಿಲ್ಲಿಯಾದ ಆಂತರ್ಯದ ಸಂಚಿತ ದುಗುಡ ದರ್ಶನ ಮಾರ್ಗ ಮರೆತ ಎಲ್ಲಾ ಸೂಚಿಗಳು ಒಳಗನ್ನು ಕದಡಿ ತಿರುಚಿದ ಸಂರಚನೆ ಮೇಲ್ನೋಟದ ಸ್ನಿಗ್ಧ ಶಾಂತತೆಯೊಂದಿಗೂ ರಾಜಿಯಾಗದ ಒಳಗೊಳಗಿನ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೪೭೭, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನಿನ್ನದೆ ಗುನುಗುನು ಗಾನದಲ್ಲಿ ತೇಲುತ್ತಿರುವೆ….
ನಿನ್ನದೆ ಗುನುಗುನು ಗಾನದಲ್ಲಿ ತೇಲುತ್ತಿರುವೆ… ನಾನು ಹುಡುಕಿ ಹುಡುಕಿ ನೀನು ಹಾಡುತ್ತಿದ್ದ ಹಾಡುಗಳನ್ನೆ ನಾ ಸಂತಸದಿ ಹಾಡುತ್ತಿರುವೆ ಗುನು ಗುನುಗುತ್ತಾ ನಿನ್ನ ಗಮನವ ಗಳಿಸಲು ನಿನ್ನ ರಾಗಗಳ ಎಳೆಗಳನ್ನೆ ಮೀಟುತ್ತಿರುವೆ ಮನಸ್ಸಿನ ಆಳದಲ್ಲಿ ನಿನ್ನ ರೂಪವ ಬೆಳೆಸುತ್ತಿರುವೆ. ನೀನು ನನಗಾಗಿ ಜೋಡಿಸಿದ…
ಅನುದಿನ ಕವನ-೧೪೭೬, ಜನ ಕವಿ: ಡಾ.ಸಿದ್ಧಲಿಂಗಯ್ಯ
ಸಂಕ್ರಾಂತಿಗೆ ಡಾ. ಸಿದ್ದಲಿಂಗಯ್ಯರವರ ಕಾವ್ಯ ಒಂದು ದನದ ಪದ ಗೊಂತಿನ ಮುಂದೆ ನಿಲಿಸವುರೆ ಗೂಟಕ್ಕೆ ನನ್ನ ಕಟ್ಟವರೆ ಹಿಡಿಹಿಡಿ ಒಣಹುಲ್ಲ ಹಾಕಿ ತಾನೆ ಮೆಚ್ಚಿಕೊಳ್ಳುತಾನೆ ದೇವರಂಥ ಮನುಷ ನನ್ನೊಡೆಯ ನನ್ನ ಬೆನ್ನ ಮ್ಯಾಲೆ ಬಾಸುಂಡೆ ಬರೆಯ ನೋಡಿ ತನ್ನ ಬಲಕೆ ತಾನೆ…
ಅನುದಿನ ಕವನ-೧೪೭೫, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಹೊಸ ಹಾದಿಯಲ್ಲೂ…
ಹೊಸ ಹಾದಿಯಲ್ಲೂ… ಎಷ್ಟೊಂದು ಪರಿಚಿತ ಮುಖಗಳ ನಡುವೆ ಅಪರಿಚಿತವೂ ಸೇರಿ ಹೋಗುತ್ತಿದೆ ಕೆಲವರು ಸದ್ದಿರದೆ ವಿದಾಯ ಹೇಳಿದ್ದಾರೆ ಹಲವರು ಸುಮ್ಮನೆ ಗದ್ದಲವೆಬ್ಬಿಸುತ್ತಿದ್ದಾರೆ ಇಲ್ಲೊಂದು ಕನಸಿನ ಮನೆ ಏಳುತ್ತಿದೆ ಅಲ್ಲೊಂದು ಆಗಲೋ ಈಗಲೋ ಎನ್ನುತ್ತಿದೆ ದಾರಿಯ ಕೊನೆಯೇ ಮೊದಲೆನ್ನುವವರು ಮೊದಲನ್ನೇ ಕೊನೆಯೆನ್ನುವವರ ಗೋಜಲು…
ಅನುದಿನ ಕವನ-೧೪೭೪, ಹಿರಿಯ ಕವಿ:ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?
ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ? ಅವಳ ಮುಗುಳ್ನಗೆ ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು. ಅಲ್ಲಿ ನಾನಿದ್ದೆ, ಅವಳಿದ್ದಳು ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ ಇದ್ದಿರಿ… ಈಗ ಅವಳ ಹುಬ್ಬು ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ- ಹಾಗೆ, ಸಾಯುತ್ತಿದೆ ಪ್ರೀತಿ ಉಸಿರುಕಟ್ಟಿ.…
ಆಡು ಮುಟ್ಟದ ಸೊಪ್ಪಿಲ್ಲ -ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು
ಆಡು ಮುಟ್ಟದ ಸೊಪ್ಪಿಲ್ಲ ಆಡಿನ ಮತ್ತೊಂದು ಹೆಸರು ಮೇಕೆ. ನಮ್ಮ ಮನೆಯಲ್ಲಿ ಸದಾ ಎರಡು ಮೇಕೆಗಳಿರುತ್ತಿದ್ದವು. ನಮ್ಮೂರಿನಲ್ಲಿ ಮೇಕೆಗಳ ಒಂದು ಹಿಂಡು ಇತ್ತು. ಆ ಹಿಂಡಿನಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮೇಕೆಗಳಿರುತ್ತಿದ್ದವು. ಆ ಹಿಂಡು ಊರಿನ ಸಾಹುಕಾರರೊಬ್ಬರಿಗೆ ಸೇರಿದ್ದಾಗಿತ್ತು. ಅವರಿಂದ ಒಂದು…
ಅನುದಿನ ಕವನ-೧೪೭೩, ಕವಿ: ಜಬೀವುಲ್ಲಾ ಎಂ. ಅಸದ್, ಬೆಂಗಳೂರು , ಕವನದ ಶೀರ್ಷಿಕೆ: ಬರಿದಾಗುವ ಅಚ್ಚರಿ
ಬರಿದಾಗುವ ಅಚ್ಚರಿ ನಿಂತಲ್ಲೇ ಬಯಲು ಕೊನೆಗೊಳ್ಳದು ಗೆಳೆಯ ನಡೆಯಬೇಕು ನೀನೇ ಖುದ್ದು ಭವದ ಬೇಲಿಗಳ ದಾಟುತ್ತ ಸಾವಿರ ಹೆಜ್ಜೆಗಳ ಮಿಡಿದು ಈ ಸಮಯ ಜಗ ಹುಚ್ಚನೆಂದರೂ ಸರಿಯೇ ಹತ್ತು ಮುಳ್ಳುಗಳ ಮಧ್ಯೆ ಹೂವೊಂದು ಬಿರಿವಂತೆ ನೂರು ಕಷ್ಟಗಳ ನಡುವೆ ನಲುಗದೆ ನಗಬೇಕು…
ಅನುದಿನ ಕವನ-೧೪೭೨, ಕವಿ: ರಘೋತ್ತಮ ಹೊ ಬ, ಮೈಸೂರು, ಕವನದ ಶೀರ್ಷಿಕೆ: ಬಸ್ಸು
ಬಸ್ಸು ಬಸ್ಸಲ್ಲಿ ಕುಳಿತ ನಮ್ ಜನ ಹೇಗೊ ಅಡ್ಜಸ್ಟ್ ಮಾಡ್ಕೊತಾರೆ ಮಾಡಿಕೊಂಡು ಸಮಾಧಾನ ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು ಮೂರ್ರಲ್ಲಿ ನಾಲಕ್ ಕುಳಿತುಕೊಂಡು ಡ್ರೈವರ್ ಪಕ್ಕದ ನೆಲವನ್ನು ಬಿಡದೆ ಹೇಗೊ ಹೋಯ್ತಾರೆ ಸಾವಧಾನ ಇಲ್ಲಿ ಸೀಟು ಸಿಕ್ಕವನೆ ರಾಜ ನಿಂತುಕೊಂಡವನೆ ಸೇವಕ…
ಅನುದಿನಕವನ-೧೪೭೧, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಜಾಗೃತ ಅಪ್ಪ
ಜಾಗೃತ ಅಪ್ಪ… ಅಪ್ಪ ನೋವುಂಡ ಒಬ್ಬ ಸಂತ ಮುಖದ ಬರೆಯಂತ ಗೆರೆಗಳೆ ಅವನ ಕಷ್ಟದ ಕುರಿತು ಹೇಳುತ್ತವೆ… ಅವನು ಬೆವರ ಬಸಿದಷ್ಟು ಇನ್ನಾರು ಕೂಡ ಬೆವರ ಬಸಿದಿಲ್ಲ ಮನೆಯಲ್ಲಿ ಅಕ್ಕಿ ಬೇಯುತ್ತಿತ್ತು ಅಂದರೆ ಅವನ ಬೆವರ ಹನಿಗಳೆ ಅನ್ನವಾಗಿ ಕುದಿಯುತಿದೆ ಎಂದರ್ಥ……
ಅನುದಿನ ಕವನ-೧೪೭೦, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು
1 ಅವಳು ಹಾಡುವುದನ್ನು ನಿಲ್ಲಿಸಿದಳು ಗಂಟಲು ಕಟ್ಟಿಯೇ ಹೋಯಿತು ಅವಳು ನರ್ತಿಸುವುದನ್ನು ನಿಲ್ಲಿಸಿದಳು ಕಾಲು ಜಡಗೊಂಡಿತು ಅವಳು ಬರೆಯುವುದನ್ನು ನಿಲ್ಲಿಸಿದಳು ಪದಗಳು ಪೆನ್ನಿನಲ್ಲಿ ಸಿಕ್ಕಿಕೊಂಡವು ಅವಳು ತನ್ನ ನುಡಿಯನ್ನೇ ಮರೆತಳು ಮಾತುಗಳು ಎಲ್ಲೋ ಹೂತು ಹೋದವು ವೀಣೆ ನುಡಿಸುವುದನ್ನು ನಿಲ್ಲಿಸಿದಳು ತುಕ್ಕು…