ಅನುದಿನ ಕವನ-೧೬೯೯, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ ಅಂದರೆ ಅಪ್ಪ ಅಷ್ಟೆ

ಅಪ್ಪ ಅಂದರೆ ಅಪ್ಪ ಅಷ್ಟೆ ಹೊಡೆದು ಹೊಡೆದೂ ಮಗ್ಗಿ ಕಲಿಸಿದ ಅಕ್ಷರದ ದಾರಿ ತೋರಲು ಶಾಲೆಗೆ ಕಳಿಸಿದ ತನ್ನೆಲ್ಲ ಕಷ್ಟಗಳ ನುಂಗಿ ಸುಖವನ್ನಷ್ಟೇ ಉಣಿಸಿದ ಆಲದ ಮರದಂತೆ ವಿಶಾಲವಾಗಿ ಹರಡಿ ತನ್ನ ಕುಡಿಯೆಂದು ಬೀಗಿದ ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ ನೆಲದ ನಡಿಗೆಯ…

ಅನುದಿನ ಕವನ-೧೬೯೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಕ್ಷಮಿಸಿ ನಮ್ಮದು ಒಂದೇ ಬೇಡಿಕೆ

ಕ್ಷಮಿಸಿ ನಮ್ಮದು ಒಂದೇ ಬೇಡಿಕೆ ಕೇರಿಯೊಂದರ ನಡುವಿನ ಮರದಲ್ಲಿ ಎಂದಿಗೂ ಸೂರ್ಯನ ಬೆಳಕು ಕಾಣದ ಸಮಾನವಿಲ್ಲದ ಸಾವಿರಾರು ಎಲೆಗಳು, ಕತ್ತಲಲ್ಲೇ ಅವಿತು ಕೂತ ಕೊಂಬೆಗಳು, ಎಲ್ಲದರ ಅನುದಿನದ ಕೋರಿಕೆ ಒಂದೇ- ಬೆಳಕಿನೊಳಗೊಂದು ಸಮ ಬೆಳಕು ಮಾತ್ರ! ಬಾಡಿದ ಎಲೆಗಳಿಗೋ ನೆಲಕಚ್ಚುವ ಮುನ್ನ,…

ಅನುದಿನ ಕವನ-೧೬೯೭, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ. ಶಿವಮೊಗ್ಗ, ಕವನದ ಶೀರ್ಷಿಕೆ:ಸೈನಿಕನಾದರೂ….

ಸೈನಿಕನಾದರೂ…. ಅವನು ಅವಳ ಅಪ್ಪ ಅವನು ಅವಳ ಮಗ ಅವನು ಅವರ ಸೋದರ ಅವನು ಅವಳ ಗಂಡ ಅವನು ಅವಳ ಪ್ರೇಮಿ ಅವನು ಅವರ ಗೆಳೆಯ ಅವನು ಮಾವ ಭಾವ ಅವನಾದರೂ ಹೊಡೆದಾಡಿ ಯಾಕೆ ಸಾಯಬೇಕು? ಈ ಭೂಮಿ ನೀನು ಬೆವರು…

ಅನುದಿನ ಕವನ-೧೬೯೬, ಕವಿ: ಬಸೂ, ಧಾರವಾಡ, ಕವನದ ಶೀರ್ಷಿಕೆ: ಸಮಯ

ಸಮಯ ಕೊನೆಗೂ ಗೆಳೆತನವ ಸಾಧಿಸಿದೆ ಮತ್ತು ಪ್ರೀತಿಸಿದೆ ನಾನು ಬರೆಯದಿರುವ ಕವನಗಳ ಜತೆಗೆ ನನ್ನ ಹತ್ತಿರಕೆ ಬರದ ಕನಸುಗಳ ಜತೆಗೆ ನನ್ನೊಳಗಿನ ಖಾಲಿ ಜಾಗಗಳ ಜತೆಗೆ ಮುನ್ಸೂಚನೆ ಕೊಡದೆ ಬದಲಾಗುವ ಮನ್ಸೂನಗಳ ಜತೆಗೆ ಮತ್ತು ಬದುಕನ್ನು ಪ್ರೀತಿಸಿದರೂ ಬೆಳೆವ ಏಕಾಂತಗಳ ಜತೆಗೆ…

ಮೈಸೂರು ದಸರಾ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಂದ ಚಾಲನೆ -ಮುಖ್ಯಮಂತ್ರಿ ಸಿದ್ಧರಾಮಯ್ಯ

ಬೆಂಗಳೂರು, ಆ.22: ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು.         ಅವರು ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,…

ಅನುದಿನ‌ ಕವನ-೧೬೯೫, ತೆಲುಗು ಮೂಲ : ಮಹಾಕವಿ ಶ್ರೀ ಶ್ರೀ, ಕನ್ನಡಕ್ಕೆ : ಡಾ.ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಪಯಣಿಗ

ಪಯಣಿಗ ಕೂಳಿಗಾಗಿ,ಕೂಲಿಗಾಗಿ ನಗರದೊಳಗೇ… ಬದುಕಬೇಕೆಂದ ತಾಯಿ ಮಾತ ಕೇಳಲಾರದೆ ಹೊರಟು ಹೋದ ಪಯಣಿಗನ ಮೂರು ದಿನಗಳು ! ದಿಕ್ಕು ತಿಳಿಯದ ಸಮುದ್ರದ ನಡು ನೌಕೆಯ ಹಾಗೆ ಸಂಚರಿಸುತ್ತ,ಸಂಚಲಿಸುತ್ತ ಆತಂಕ ಪಡುತ್ತ, ದೀನನಾಗುತ್ತ ಅಲೆಯುತಿದ್ದರೆ- ಕಠಿಣ,ಕಠಿಣ,ತೀವ್ರ ತೀವ್ರಗಳ ಜ್ವರ ದಹಿಸಿ, ಭಯವೇರಿ ಪ್ರಲಾಪಿಸಿ…

ಡಿ.ಕಗ್ಗಲ್: ಕೆ ಎಂ ಶಿವರುದ್ರಮ್ಮ ವಿಧಿವಶ

ಬಳ್ಳಾರಿ, ಆ.21: ಬಳ್ಳಾರಿ ಜಿಲ್ಲಾ  ಕನ್ನಡ ಪ್ರಭ ದಿನಪತ್ರಿಕೆಯ ಹಿರಿಯ ವರದಿಗಾರ ಕೆ.ಎಂ. ಮಂಜುನಾಥ ಅವರ ತಾಯಿ ಕೆ ಎಂ ಶಿವರುದ್ರಮ್ಮ(82 ವರ್ಷ) ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.                   …

ಕರೆದರೂ ಕೇಳದೇ….! ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾಖಾನ್ ರವರ ನೆನಪಿನಲ್ಲಿ….! ಬರಹ:✍ಸಿದ್ದರಾಮ ತಳವಾರ, ದಾಸ್ತಿಕೊಪ್ಪ

‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿನ ಡಾ.ರಾಜ್ ನಟನೆಗೆ ಫಿದಾ ಆಗದೇ ಇರೋರು ಯಾರಾದ್ರೂ ಇದ್ದೀರಾ? ಊಹೂಂ… ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಚಿತ್ರರಸಿಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಆ ‘ಕರೆದರೂ ಕೇಳದೇ….’ ಹಾಡು ಮತ್ತದರ ರಾಗಸಂಯೋಜನೆ ನಿಜಕ್ಕೂ ಕಲ್ಲಿಗೂ ಕೂಡ ಸಂಗೀತದ ರುಚಿ ಹಚ್ಚುವಂತದು.…

ದರೂರಿನಲ್ಲಿ ಶ್ರಾವಣ ಸಾಂಸ್ಕೃತಿಕ ಸಂಭ್ರಮ 2025:ಗ್ರಾಮೀಣ ಕಲೆ ಉಳಿಸಿ ಬೆಳೆಸಲು ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಸಹಕಾರಿ – ಶ್ರೀ ಸಂಗನ ಬಸವೇಶ್ವರ ಸ್ವಾಮೀಜಿ

ಬಳ್ಳಾರಿ, ಆ. 20: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರಾ ಮಹೋತ್ಸವಗಳೊಂದಿಗೆ ಇಂಥಹ ಸಾಂಸ್ಕೃತಿಕ ಕಲೆಗಳು ಪ್ರದರ್ಶನಗೊಂಡರೆ ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ದರೂರಿನ ಕೊಟ್ಟೂರು ಸ್ವಾಮಿ ಮಠದ ಶ್ರೀ ಸಂಗನ ಬಸವೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು. ಜಿಲ್ಲೆಯ ಸಿರುಗುಪ್ಪ…

ಅನುದಿನ ಕವನ-೧೬೯೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಅತೀತ‌ ಆಂತರ್ಯ

ಅತೀತ‌ ಆಂತರ್ಯ ಪ್ರೀತಿ… ದೇಹಾತೀತ ಎಂದು ಭಾವಿಸಿದ್ದೆ!! ನಿನ್ನ ಕೈಬೆರಳು ಸೋಕಲು ಚಡಪಡಿಸುವ ಈ ಕಾಯವ ಕಂಡು ದಿಗ್ಭ್ರಾಂತಳಾದೆ! ಪ್ರೀತಿ.. ನಿರಾಕರಣವೆಂದು ಭಾವಿಸಿದ್ದೆ! ನಿನ್ನ ಸಾಮಿಪ್ಯದಿ ಪುಟಿದೇಳುವ ಕಾಮನೆಗಳು ಅರಿವಿಗೆ ಬಂದು ಬೆಪ್ಪಳಾದೆ!! ಪ್ರೀತಿ… ಕಾಲವನ್ನು ಮೀರಿದ್ದು ಎಂದು ಭಾವಿಸಿದ್ದೆ! ನಿನ್ನ…