ಹೂವಿಲ್ಲದ ಹಾಸಿಗೆ ಮೈ ತುಂಬಲು ಒಡವೆಯಿದೆ ಮನೆಯೊಡತಿ ಮನೆಯೊಳಿಲ್ಲ… ಅವನೋ ಬರಿ ಮೈ ದಾಸ ದಾಸವಾಳ ಗಿಡದಂತೆ ಮಡದಿ ಮನೆ ತುಂಬಾ ಹೂಗಳು… ಮಲ್ಲಿಗೆ ಸಂಪಿಗೆಯರು ಊರ ತುಂಬ ಘಮಲು ಕಿತ್ತು ಮುಡಿಯುವವರಿಗೆ ಬರವಿಲ್ಲ ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು ಕೇಳುವವರು…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಹಿರಿಯ ಪತ್ರಕರ್ತ ಕಲ್ಲೇ ಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ: ಕೆಯುಡಬ್ಲ್ಯೂಜೆ ಅಭಿನಂದನೆ
ಬೆಂಗಳೂರು: ಕರ್ನಾಟಕ ಸರ್ಕಾರ ಕೊಡಮಾಡುವ ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿಗೆ ತೋಂಬತ್ತೈದು ವರ್ಷದ ಹಿರಿಯ ಪತ್ರಕರ್ತ ಕಲ್ಲೇ ಶಿವೋತ್ತಮರಾವ್ ಅವರು ಆಯ್ಕೆಯಾಗಿದ್ದಾರೆ. …
ಅನುದಿನ ಕವನ-೧೬೯೨, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಕವಿತೆಯೆಂದರೆ…
“ಇದು ಕವಿತೆಯ ಮೇಲೊಂದು ಮಧು ಮಧುರ ಕವಿತೆ. ಕಾವ್ಯದ ಭಾವಭಾಷ್ಯಗಳ ಬೆಳಕಾಗಿಸುವ ಅಕ್ಷರ ಪ್ರಣತೆ. ಕವಿತೆಯ ಈ ಸಾಲುಗಳು ನನ್ನದಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಸ್ವಾನುಭವ, ಲೋಕಾನುಭವ, ರಸಾನುಭಾವಗಳ ಚಿರ ಚಿರಂತನ ಜೀವದೊರತೆಯೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. ಕವಿತೆಯೆಂದರೆ……
ಅನುದಿನ ಕವನ-೧೬೯೧, ಕವಯಿತ್ರಿ: ✍️ ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ತನಗಗಳು
ತನಗಗಳು ಅಳೆಯಲಾಗದೆಂದೂ ಶರಧಿ ಒಡಲನು ಹಿಡಿಯಲು ಆಗದು ಮುಗಿಲಿನ ಬಿಲ್ಲನು ಬಾನ ತಾರೆಗಳಲಿ ಚಿತ್ತಾರದ ಸೊಬಗು ಕಂಗಳ ಬಿಂಬದಲಿ ಸೆಳೆವುದು ಹೊಳಪು ಅನುರಾಗ ಮೂಡಲು ಜಗದ ಭಯವಿಲ್ಲ ಕಡಿವಾಣ ಹಾಕಲು ಮನಸು ಒಪ್ಪದಲ್ಲ ನುಡಿಯಲಿ ಮೆರುಗು ತೊರೆವುದು ಮಸುಕು ನೀಗುವುದು ಕೊರಗು…
ಅನುದಿನ ಕವನ-೧೬೯೦, ಕವಯತ್ರಿ: ಮಮತಾ ಅರಸೀಕೆರೆ
ಒಲುಮೆಯೊಂದು ಬಳಿ ಬರಲು ಕಾಯುತಿದೆ ಆಸೆ ಹಲವು ಮನಕೆ ನಲುಮೆಯೊಂದು ಬಳಸು ದಾರಿಯಲಿ ನಿಂತಿದೆ ಏನು ಹೇಳಲಿ ಅದಕೆ ಸುಪ್ತ ಬಯಕೆ ಗರಿಗೆದರಿ ಧಾವಿಸಿದೆ ನವಿರಾಗಿ ಸವರಲೆಂದೆ ತನುವ ತಪ್ತ ಸಾಗರ ದಾಟಿ ಹಾಯ್ದಿದೆ ಕನಸು ಹಿಡಿಯಲೆಂದೆ ಕರವ ನೆಲವ ತಾಕದೆ…
ವಂದೇಕರ್ನಾಟಕ ಮಾಸಿಕ ವಾರ್ಷಿಕೋತ್ಸವ: ಪತ್ರಿಕೋದ್ಯಮ ನಿಂತ ನೀರಲ್ಲ -ಶಿವಾನಂದ ತಗಡೂರು
ಬೆಂಗಳೂರು, ಆ.15 : ಪತ್ರಿಕೋದ್ಯಮ ನಿಂತ ನೀರಾಗಬಾರದು. ಅದು ಲೋಕ ಸತ್ಯಾನ್ವೇಷಣೆಗೆ ನಿರಂತರ ಚಿಲುಮೆಯಾಗಬೇಕು ಎಂದು ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯಪಟ್ಟರು. ಶುಕ್ರವಾರಂದು ನಗರದಲ್ಲಿ ನಡೆದ ವಂದೇ ಕರ್ನಾಟಕ ದ್ವಿಭಾಷಿಕ ಮಾಸಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ…
ಅನುದಿನ ಕವನ-೧೬೮೯, ಕವಿ: ಎಎಂಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಭಾರತ ಸ್ವಾತಂತ್ರ್ಯ
ಭಾರತ ಸ್ವಾತಂತ್ರ್ಯ ಫಿರಂಗಿ ಗುಂಡಿನ ಗುಡುಗಲ್ಲ ಖಡ್ಗದಿ ಚಿಮ್ಮಿದ ರಕ್ತವೃಷ್ಟಿಯಲ್ಲ ಸತ್ಯಾಗ್ರಹದ ಶಾಂತಿ ಮಂತ್ರದಿ ಪಲ್ಲವಿಸಿತೀ ಸ್ವಾತಂತ್ರ್ಯಪುಷ್ಪ ಗಾಂಧಿಯ ಚರಕದಿ ಹೊಮ್ಮಿತು ಒಗ್ಗಟ್ಟಿನ ಖಾದಿ ಆಂಗ್ಲರ ದುರಾಡಳಿತದ ಅಂತ್ಯಕೆ ಹಾಡಿತು ನಾಂದಿ ಭಾರತೀಯರ ಸ್ವದೇಶಿ ಮಂತ್ರಕೆ ಬಿರುಕಾಯಿತು ಆಂಗ್ಲರ ಕೋಟೆ ಮ್ಯಾಂಚೆಸ್ಟರ್…
ಅನುದಿನ ಕವನ-೧೬೮೮, ಯುವ ಕವಿ:✍️ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ಇಲ್ಲಿ ಕೇಳು ಗೆಳೆಯ..
ಇಲ್ಲಿ ಕೇಳು ಗೆಳೆಯ.. ಜೋರುಮಳೆಯಾಗಿ ನೀನು ಒಮ್ಮೆಲೆ ಅಬ್ಬರಿಸಿ ತಣ್ಣಗಾಗ ಬೇಡ ಜಿಟಿ ಜಿಟಿ ಹನಿಯಂತೆ ಸುರಿದು ತೇವ ಕಾಯುವ ಜಡಿಯಂತಾಗು ಮೊದಲು ಮುತ್ತಿಡುತ್ತಲೆ ಮುಂದುವರೆಯ ಬೇಕು ಮೈಯೆಲ್ಲಾ ಹಣ್ಣಾಗಿ ಮೆತ್ತಗಾಗುವ ಮೊದಲು ಈಗತಾನೆ ಮಾಗಿದ ತುಟಿಗಳ ರುಚಿಸವಿಯಬೇಕು ಕತ್ತಲ ಕೋಣೆಗೆ…
ಬೆಂಗಳೂರು: ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ಸಿಎಂ
ಬೆಂಗಳೂರು, ಆ.14: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ಆ.28ರಂದು ನಡೆಯಲಿರುವ ರಾಜ್ಯ ಸಮ್ಮೇಳನದ ಲಾಂಛನವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಪತ್ರಿಕಾ ಅಸಂಘಟಿತ…
ಅನುದಿನಕವನ-೧೬೮೭, ಕವಯತ್ರಿ: ರಂಹೊ, ತುಮಕೂರು, ಚಿತ್ರ ಕೃಪೆ: ಸಂಘಮಿತ್ರೆ
ನನಗೆ ಗೊತ್ತು ನೀವೆಲ್ಲ ನನ್ನನ್ನು ದುರ್ಬೀನು ಹಾಕಿಕೊಂಡು ಹುಡುಕುತ್ತೀರಿ! ಸಂಪುಟ-ಸ್ಮಾರಕ ಮಂದಿರ-ಮಸೀದಿ ಗಲ್ಲಿ-ಗಟಾರ ಗುಡಿಸಲು-ಮಹಲುಗಳಲ್ಲಿ! ಸೂರ್ಯ ಚಂದ್ರ ಚುಕ್ಕಿಗಳ ವಿಸ್ಮಯಗಳಲ್ಲಿ ಈ ನೆಲದ ಬೇರಿನ ನೀರವ ಮೌನಗಳಲ್ಲಿ ಚಿಗುರು ಹೂ ಹಣ್ಣುಗಳ ಸಂಭ್ರಮದಲ್ಲಿ… ತಪ್ಪದೇ ಕೆದಕುತ್ತಿರಿ ಹೆದ್ದಾರಿ ಬದಿಯ ಹುಡುಗಿಯರ ಕನವರಿಕೆಗಳಲ್ಲಿ…
