ಅವ್ವ ಮರವಾಗಿ ಚಿಗಿತಿದ್ದಾಳೆ ಮೈತುಂಬಾ ಹೂಬಿಟ್ಟು ನಳನಳಿಸುತ್ತಿದ್ದಾಳೆ ಎಸೆದ ಕಲ್ಲುಗಳ ಕಟ್ಟೆಯಾಗಿಸಿದಳು ತೂರಿದ ಮಣ್ಣುಗಳ ಬುಡವಾಗಿಸಿದಳು ಎರಚಿದ ಸಗಣಿಯ ಸಾರವಾಗಿಸಿದಳು ಅವ್ವ ಸಾವಿತ್ರವ್ವ ಬಿತ್ತಿದ ಬಿತ್ತುಗಳಿಗೆ ತಿಳಿವಿನ ನೀರುಣಿಸಿ ಮರದ ಎಲೆ ಎಲೆಯಲ್ಲೂ ಅವಳ ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳು ಮರಿ ಮರಿ…
Category: ಅನುದಿನ ಕವನ
ಅನುದಿನ ಕವನ-೧೪೬೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಕೊರಗು ನನ್ನ ಸ್ವತ್ತು….
ಕೊರಗು ನನ್ನ ಸೊತ್ತು…… ನೋಡ್ತಿದ್ದೆ ಈಗೀಗ ಬುದ್ಧಿಯ ತಳಮಳ ಚಡಪಡಿಕೆ ಅಡಿಗಡಿಗೆ ಬಲು ನಿರ್ಲಿಪ್ತ ಮನದ ಮೊಗ ಬಲು ನಿಶ್ಯಬ್ದ ಮೌನ ತಳವಿಲ್ಲದು ಮೌನ ಕೆದರಿ ಕೆದಕದೆ ನಾನೂ ಹುಯಿಲು ಒಮ್ಮೆಲೆ ಮನವರಳಿ ಇದೇನು ಕಿರಿಚಾಟ ಕುಣಿದಾಟ ನಿಶ್ಯಬ್ದ ತುಂಬ ಶಬ್ದ…
ಅನುದಿನಕವನ-೧೪೬೨, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಮಗಳು
ಹೊಸ ವರುಷದ ಹೊಸ ಕವಿತೆ ‘ಮಗಳು’ ಮಲ್ಲಿಗೆ ಹೂ ಪರಿಮಳದಂತೆ ನಿನ್ನ ನಗೆ ಹೊಸ ವರುಷದ ಹೊಸ ಹಾಡಿನ ಸಾಲು ನಿನ್ನ ನಗೆ… ನೀ ಎನಗೆ ಸಂಭ್ರಮ ಗರಿಗೆದರಿ ಹಬ್ಬಿದ ಮಳೆಬಿಲ್ಲು ಬಾನ್ನೀಲಿಯಲ್ಲಿ ಕೊನೆಯಿಲ್ಲದ ಬಣ್ಣಗಳ ತೋರಣ ತಿಳಿಗೊಳದಲ್ಲಿ ಕೊನೆ ಇರದಷ್ಟು…
ಅನುದಿನ ಕವನ-೧೪೬೧, ಹಿರಿಯ ಕವಯಿತ್ರಿ: ಎಂ ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಸೊನ್ನೆಯಾಗುವ ಭಯವಿಲ್ಲ!
ಸೊನ್ನೆಯಾಗುವ ಭಯವಿಲ್ಲ! ಬೆಳಕಿಗಾಗಿ ಹಾತೊರೆದು ಕೈ ಚಾಚುವ ಮರದ ರೆಂಬೆ ಕೊಂಬೆಗಳಿಗೆ ಅಕ್ಕಪಕ್ಕದ್ದನ್ನು ಮರೆಮಾಡುವ ಸಂಚುಗಳಿಲ್ಲ ತಾನೇ ಉರಿದು, ಬೆಳಕಿನಲ್ಲಿ ಮಿಂದು, ಮಿಂಚುಗಣ್ಣ ಮಿಟುಕಿಸುವ ಚುಕ್ಕೆಗೆ ನೆರೆಯವರ ಕತ್ತಲಾಗಿಸುವ ಗೋಜಿಲ್ಲ ಬಾನಲ್ಲೇ ಚಿತ್ರ ಬರೆವ ಇಂದ್ರಚಾಪಕ್ಕೆ ಹತ್ತಾರು ಬಣ್ಣದಲಿ ನಗುವ ಹೂಗಳ…
ಅನುದಿನ ಕವನ-೧೪೬೦, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಬೇಡದ ನೆನಪುಗಳು
ಬೇಡದ ನೆನಪುಗಳು ಬೇಡದ ನೆನಪುಗಳು ಕಗ್ಗತ್ತಲಲ್ಲಿ ಕರಗಿ ಹೋಗಲಿ ಮನವ ಕೊರಗಿಸುವ ಶಕ್ತಿ ಕಳೆದುಕೊಳ್ಳಲಿ. ಬೇಡದ ನೆನಪುಗಳು ಬಾರದ ನೆಲೆಗೆ ಬಾಯಾರಿ ಮನದ ಗುಡಿಯಿಂದ ಹಾರಿ ಕಣ್ಮರೆಯಾಗಲಿ. ಬೇಡದ ನೆನಪುಗಳು ಬೇಡದ ಘಟನೆಗಳ ನೆನಪಿತ್ತವರ ಹೊತ್ತುಕೊಂಡು ಬೇಡದವರೊಂದಿಗೆ ಕಾಲವಾಗಲಿ. ಬೇಡದ ನೆನಪುಗಳು…
ಅನುದಿನ ಕವನ-೧೪೫೯, ರಾಷ್ಟ್ರಕವಿ ಕುವೆಂಪು
ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವೂದು ಇಲ್ಲ; ಕೊನೆಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲದಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ…
ಅನುದಿನ ಕವನ-೧೪೫೮, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಕಲ್ಲರಳಿ
ಕಲ್ಲರಳಿ ಮೇಣ ಮಿದ್ದಿದ ಹಾಗೆ, ಕಲೆಯರಳಿದೆ ಇಲ್ಲಿ ಕಲ್ಲುಗಳಲ್ಲಿ; ಜೀವ- ದುಂಬಿದೆ ಸ್ಥಾವರಗಳೊಳಗೆ, ಧ್ಯಾನಸ್ಥ ಶಿಲ್ಪಿಗಳ ಕೈಚಳಕಗಳಲ್ಲಿ. -ಡಾ. ಬಸವರಾಜ ಸಾದರ, ಬೆಂಗಳೂರು
ಅನುದಿನ ಕವನ-೧೪೫೭, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಕನಸುಗಳಿರಬೇಕು
ಕನಸುಗಳಿರಬೇಕು ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ .. ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ … ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ ದುಃಖದ ಅನುಭವಕ್ಕೂ ಸೋಲದೆ ಜೀವಿಸಿ .. ಮತ್ತೆ ಎದ್ದು ನಿಲ್ಲಬೇಕು…
ಅನುದಿನ ಕವನ-೧೪೫೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಟಿ.ಪಿ. ಉಮೇಶ್, ಹೊಳಲ್ಕೆರೆ
ಹೂಗಳೆಲ್ಲ ಅರಳ್ಯಾವೊ ಮಳೆ ಹೊಡೆತಕೆ ಸೀಮೆ ಭೂಮಿಯೆಲ್ಲ ಅದುರಿ ಚದುರಿ ಮುದುರಿ ಹೊದರಿ ಮಣ್ಣ ಕಣಕಣಗಳು ಹುದುಗೆದ್ದು ಪುನುಗಿ ಬಯಲ ಬಿಲ ಹೊಲ ನೆಲದಲ್ಲು ಕಾದ ಬೀಜ ಗಿಡ ಗಂಟಿ ಬೇಲಿ ಬಳ್ಳಿ ಚಿಗುರಿ ನಿಗುರಿ ಕಲ್ಲ ಸಂದಿಗೊಂದಿಗಳಲ್ಲಿ ಹಸಿರು ಹರಡಿ…
ಅನುದಿನ ಕವನ-೧೪೫೫, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ. ಕವನದ ಶೀರ್ಷಿಕೆ: ಮುತ್ತಿದ ಸಾಲುಗಳು
ಮುತ್ತಿದ ಸಾಲುಗಳು ನಿನ್ನ ಬತ್ತಲೆ ಬೆನ್ನ ಮೇಲೆ ನನ್ನ ತುಟಿಗಳು ಏನನ್ನೋ ಹುಡುಕುತ್ತಿದ್ದವು… ಅಷ್ಟರಲ್ಲಿ ನೀನು ಮಗ್ಗುಲು ಬದಲಾಯಿಸಿದೆ… ಈಗ ನಾನು ನನ್ನ ತುಟಿಗಳನ್ನು ಹುಡುಕುತ್ತಿದ್ದೇನೆ….. ನಿನ್ನ ಬೆವರಿನ ಉಪ್ಪಲ್ಲಿ ನನ್ನ ತುಟಿಗಳನ್ನು ನೆನೆ ಹಾಕಿದ್ದೇನೆ… ಇನ್ನು ಮುಂದೆ ನನ್ನ ಮುತ್ತುಗಳು…