ಅನುದಿನ ಕವನ-೧೮೧೪, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?

ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ? ಅವಳ ಮುಗುಳ್ನಗೆ ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು. ಅಲ್ಲಿ ನಾನಿದ್ದೆ, ಅವಳಿದ್ದಳು ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ ಇದ್ದಿರಿ… ಈಗ ಅವಳ ಹುಬ್ಬು ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ- ಹಾಗೆ, ಸಾಯುತ್ತಿದೆ ಪ್ರೀತಿ ಉಸಿರುಕಟ್ಟಿ.…

ಅನುದಿನ ಕವನ-೧೮೧೩, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಗೆಳತಿ ಕವಿತೆಯೆಂದರೆ…

“ಕವಿತೆಯ ಮಾಧುರ್ಯ ಬಣ್ಣಿಸುವ ಸ್ವರ ರಿಂಗಣಗಳ ಸವಿ ಸುಂದರ ಕವಿತೆ. ಕಾವ್ಯ ಸೌಂದರ್ಯದ ಭಾವಭಾಷ್ಯಗಳ ಅನಾವರಣಗೊಳಿಸುವ ಮಧು ಮಧುರ ಅಕ್ಷರಪ್ರಣತೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ಆಪ್ತವಾಗುತ್ತದೆ. ಆಳಕ್ಕಿಳಿದಷ್ಟೂ ಆತ್ಮೀಯವಾಗುತ್ತದೆ. ಆಸ್ವಾಧಿಸಿದಷ್ಟೂ ಆನಂದವಾಗುತ್ತದೆ. ಆರಾಧಿಸುವವರ ಆಂತರ್ಯ ಬೆಳಗುವ ಮಧುರಾನುಭೂತಿಯೇ ಕಾವ್ಯದ ಔದಾರ್ಯ. ಇದುವೆ…

ಅನುದಿನ ಕವನ-೧೮೧೨, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಸಮಾಧಿಯಾಗುವ ತನಕ…..

ಸಮಾಧಿಯಾಗುವ ತನಕ….. ಅಲ್ಲಿ ಯುದ್ಧ ಶುರು ಆಯಿತೆ? ಒಹ್! ಇಲ್ಲಿ ಮಾತುಕತೆ ಸಂಧಾನವೆ? ಮುರಿದು ಬಿದ್ದು ಮತ್ತೆ ಯುದ್ಧವೆ? ನಿಂತು ಯುದ್ಧ ಅಲ್ಲಿ ಕದನ ವಿರಾಮವೆ? ಎಷ್ಟು ದಿನ? ಅಷ್ಟು ದಿನ ! ಇಷ್ಟು ದಿನ…. ನಡೆಯುವುದು ನಡೆಯುತ್ತಲೇ ಇರುವುದು ಯುದ್ಧ….…

ಅನುದಿನ ಕವನ-೧೮೧೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಹಾದು ಹೋದ ಬೆಳಕು ಕತ್ತಲೆ ಸರಿಸಿ ಬದುಕ ಹರಸಿ ಹಾದು ಹೋದ ಬೆಳಕು… ಈ ಜೀವನ ಜೀವನ ಬದಲಾಯಿಸಿ… ಯಾರು ಬಲ್ಲವರು ಯಾರು ತಿಳಿದವರು ಜೀವನ ಮುಗಿಯದ ಕವಿತೆ…ಏ… ಯಾರೋ ಹೆತ್ತವರು ಯಾರೋ ಹೊತ್ತವರು ನಿನಗಿದೆ ನಿನ್ನದೆ ಚರಿತೆ…ಏ… ಮುಗಿಯದ…ಬಾಳೊಂದು ಮೌನಗೀತೆ…

ಅನುದಿನ ಕವನ-೧೮೧೦, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ:ಅವಳಿಗೊಂದು ಹೆಸರಿದೆ

ಅವಳಿಗೊಂದು ಹೆಸರಿದೆ ಒಂದೇ ಹೆಸರಿತ್ತು ಅವಳಿಗೆ! ನದಿ ತಟದ ಮರಳೂ ಮರುಳುಗೊಳ್ಳುವಂತೆ ಹೊಸ ಕತೆಗಳ ಕಟ್ಟಿದ ನೀವು ಅವಳೇ ಮರೆತು ಹೋಗುವಷ್ಟು ಹೆಸರ ಕೊಟ್ಟಿರಿ… ಅಲೆಮಾರಿ ಹೈದನೊಬ್ಬ ಪಾರಿಜಾತ ಹೆಕ್ಕುತ್ತಿದ್ದವಳ ಬೆರಳು ಸವರಿ ಹೋದ ಸಂಗತಿಯನ್ನಿಟ್ಟು ಎಷ್ಟೆಲ್ಲ ಪುಳಕ ಕೊಟ್ಟಿರಿ! ವಯಸಿನ…

ಅನುದಿನ ಕವನ-೧೮೦೯, ಕವಿ:ಜಬೀವುಲ್ಲಾ ಎಂ. ಅಸದ್ ಹಿರಿಯೂರು, ಕವನದ ಶೀರ್ಷಿಕೆ: ಅಪ್ಪ‌ಎಂಬ ಜೀವ

ಅಪ್ಪ ಎಂಬ ಜೀವ ಅಪ್ಪನ ಬಗೆಗೆ ಚಂದದ ಕವಿತೆಯೊಂದನ್ನು ಬರೆದು ಕೊಡಿ, ಪ್ರಕಟಿಸುತ್ತೇವೆ ಎಂದು, ಹೀಗೆ… ಅವರು ಕೇಳುತ್ತಾರೆ ನೋಡಿ ಹೇಗೆ ಹೇಳಲಿ ಅವರಿಗೆ ಅಪ್ಪ ಎಂಬುವ ದರ್ಪ ಅಮ್ಮನ ಹಾಗೆ ಎಂದೂ ಮಾಡಿಲ್ಲ ಮೋಡಿ! ಅವನದೇನಿದ್ದರೂ, ಮರೀಚಿಕೆಯ ಪ್ರೇಮದ ಫಲವತ್ತಾದ…

ಅನುದಿನ ಕವನ-೧೮೦೮, ಕವಯತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಪರಿ-ಪೂರ್ಣತೆ

ಪರಿ-ಪೂರ್ಣತೆ ಪರಿಪೂರ್ಣತೆ ಸೃಷ್ಟಿಯಾಗಿದ್ದೇ ನಾವೆಲ್ಲಾ , ಅಪೂರ್ಣರೆನಿಸಲು ನಾವೆಲ್ಲರೂ ಅಪೂರ್ಣರೆ ಅಲ್ಲವೇ? ಮತ್ತೇಕೆ ಪರಿಪೂರ್ಣತೆಯ ಅಮಲು ಪ್ರತಿ ದಿನ, ಕ್ಷಣದ ನಿಲ್ಲದ ಪ್ರಯತ್ನ ಪರಿಪೂರ್ಣರೆನಿಸಿಕೊಳ್ಳುವ ತುಮುಲ ಸದಾ ಹೊಸದನ್ನು ಅರಸುತ್ತಾ ವಿಭಿನ್ನ , ವಿಶಿಷ್ಟರಾಗುವ ಹಂಬಲ.. ಬದುಕಿನ ನೂರು ಪ್ರಶ್ನೆಗಳಿಗೆ ಉತ್ತರಗಳ…

ಅನುದಿನ ಕವನ-೧೮೦೭, ಕವಯತ್ರಿ: ಗಾಯತ್ರಿ ಬಿ, ಜಿಂದಾಲ್-ತೋರಣಗಲ್ಲು, ಕವನದ ಶೀರ್ಷಿಕೆ: ಗುಲಾಬಿ ಪಕಳೆ

ಗುಲಾಬಿ ಪಕಳೆ ಚಂದಿರನ ವದನದಲಿ ನೀರೆಯ ಮೌನ ಕಾಲ್ಗೆಜ್ಜೆ ನಾದದಲಿ ಮುಗುಳ್ನಗೆಯ ಬಾಣ. ವನಸಿರಿಯ ಹಸಿರಲಿ ಹೊದಿಕೆಯುಟ್ಟ ನಾರಿ ಸೆರಗಲಿ ಲಜ್ಜೆಯ ಮುಚ್ಚಿಟ್ಟ ಪೋರಿ. ಬಳುಕುವ ಬಳ್ಳಿಯ ಮಾಟದ ಬೆಡಗಿ ಸಿಂಗಾರದ ತೋಟದಲಿ ವೈಯ್ಯಾರದ ಹುಡುಗಿ. ಭೂರಮೆಯ ಸಿಂಗಾರ ಹಣೆಯಲ್ಲಿ ಸಿಂಧೂರ…

ಅನುದಿನ ಕವನ-೧೮೦೬, ಕವಿ: ವೈ ಬಿ ಹಾಲಬಾವಿ, ರಾಯಚೂರು, ಕವನದ ಶೀರ್ಷಿಕೆ: ನಿಯತ್ತು…

ನಿಯತ್ತು… ನೋಡುತ್ತೇನೆ ಪ್ರತಿ ಮುಂಜಾವು ದೂರದಲ್ಲಿನ ಬೆಟ್ಟ ಸಾಲು, ಸುತ್ತಲಿನ ಮರ ಗಿಡ, ಪಶು, ಪಕ್ಷಿ, ಎಂತಹ ದಿವ್ಯ ಮೌನ ಅವುಗಳಲ್ಲಿ… ಒಂದು ಮುಂಜಾನೆ ವಾಕಿಂಗ್ ನಲ್ಲಿ ಎದುರು ಸಿಕ್ಕಿತೊಂದು ಬೀದಿ ಬದಿಯಲ್ಲಿ ನಾಯಿ ಮರಿ ಮೌನದಲಿ ಬಾಲ ಅಲ್ಲಾಡಿಸುತ್ತ, ಬಾಯಿ…

ಅನುದಿನ ಕವನ-೧೮೦೫, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಒಲೆ ಮೇಲೆ ಉಕ್ಕುತ್ತಿದ್ದ ಅನ್ನದ ಪಾತ್ರೆಯ ಮೇಲಿನ ಪ್ಲೇಟ್ ಸರಿಸಿ ಒಂದು ಅಗಳು ಕಚ್ಚಿ, ಅನ್ನ ಬೆಂದಿದೆಯೋ ಇಲ್ಲವೋ ನಿಕ್ಕಿ ಮಾಡಿಕೊಂಡು ಪಾತ್ರೆ ಬಗ್ಗಿಸಿ ಮೇಲಿನ ಗಂಜಿ ಬಸಿಯುತ್ತಿರುವಾಗ ಅವಳು ಥಟ್ಟನೇ ಬಂದು ಗಲ್ಲಕ್ಕೆ ಮುತ್ತು ಕೊಡುತ್ತಾಳೆ. ಒಂದು ನಿಶಾಂತ ಸಂಜೆ…