ನಿಸರ್ಗದ ಗುಟುಕ ಚಹಾ! ಗಡಿಗಳಿಲ್ಲದ ಬಟಾ ಬಯಲು ಕಾಡಂಚಿನ ಹೊಲದ ಬಳಿ ಸೌದೆ ಪಿಳ್ಳೆಗಳ ಆಯ್ದು ಹಸುವಿನಲಿ ಹಾಲು ಕರೆದು ಬೆಂಕಿ ಹೊತ್ತಿಸಿ ಹದವಾಗಿ ಟೀ ಕಾಯಿಸಿ ಗುಟುಕು ಹೀರುವುದೆಂದರೆ ವಾರೆವ್ಹಾ! ರೋಮಾಂಚನ! ಗ್ಯಾಸ್ ಸ್ಟೌ ಯಾಂತ್ರಿಕತೆಗೆ ಒಗ್ಗಿಕೊಂಡ ದೇಹ ಮನಸು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೭೦೦, ರಾಷ್ಟ್ರಕವಿ ಡಾ.ಜಿ. ಎಸ್. ಶಿವರುದ್ರಪ್ಪ, ಕವನದ ಶೀರ್ಷಿಕೆ: ಹಣತೆ
ಹಣತೆ ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ ಇಂತೆ ಬೆಳಗುವುದಲ್ತೆ ಅಜ್ಞಾತವಾಸದಲಿ ದೀನವಾಗಿ. ಅಲ್ಲಿ ಸೌಧಗಳಲ್ಲಿ ಬೀದಿ ಸಾಲುಗಳಲ್ಲಿ ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ. ಧ್ಯಾನಗಾಂಭೀರ್ಯದಲಿ ಮತ್ತೆ ಸರಳತೆಯಲ್ಲಿ ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?…
ಅನುದಿನ ಕವನ-೧೬೯೯, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ ಅಂದರೆ ಅಪ್ಪ ಅಷ್ಟೆ
ಅಪ್ಪ ಅಂದರೆ ಅಪ್ಪ ಅಷ್ಟೆ ಹೊಡೆದು ಹೊಡೆದೂ ಮಗ್ಗಿ ಕಲಿಸಿದ ಅಕ್ಷರದ ದಾರಿ ತೋರಲು ಶಾಲೆಗೆ ಕಳಿಸಿದ ತನ್ನೆಲ್ಲ ಕಷ್ಟಗಳ ನುಂಗಿ ಸುಖವನ್ನಷ್ಟೇ ಉಣಿಸಿದ ಆಲದ ಮರದಂತೆ ವಿಶಾಲವಾಗಿ ಹರಡಿ ತನ್ನ ಕುಡಿಯೆಂದು ಬೀಗಿದ ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ ನೆಲದ ನಡಿಗೆಯ…
ಅನುದಿನ ಕವನ-೧೬೯೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಕ್ಷಮಿಸಿ ನಮ್ಮದು ಒಂದೇ ಬೇಡಿಕೆ
ಕ್ಷಮಿಸಿ ನಮ್ಮದು ಒಂದೇ ಬೇಡಿಕೆ ಕೇರಿಯೊಂದರ ನಡುವಿನ ಮರದಲ್ಲಿ ಎಂದಿಗೂ ಸೂರ್ಯನ ಬೆಳಕು ಕಾಣದ ಸಮಾನವಿಲ್ಲದ ಸಾವಿರಾರು ಎಲೆಗಳು, ಕತ್ತಲಲ್ಲೇ ಅವಿತು ಕೂತ ಕೊಂಬೆಗಳು, ಎಲ್ಲದರ ಅನುದಿನದ ಕೋರಿಕೆ ಒಂದೇ- ಬೆಳಕಿನೊಳಗೊಂದು ಸಮ ಬೆಳಕು ಮಾತ್ರ! ಬಾಡಿದ ಎಲೆಗಳಿಗೋ ನೆಲಕಚ್ಚುವ ಮುನ್ನ,…
ಅನುದಿನ ಕವನ-೧೬೯೭, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ. ಶಿವಮೊಗ್ಗ, ಕವನದ ಶೀರ್ಷಿಕೆ:ಸೈನಿಕನಾದರೂ….
ಸೈನಿಕನಾದರೂ…. ಅವನು ಅವಳ ಅಪ್ಪ ಅವನು ಅವಳ ಮಗ ಅವನು ಅವರ ಸೋದರ ಅವನು ಅವಳ ಗಂಡ ಅವನು ಅವಳ ಪ್ರೇಮಿ ಅವನು ಅವರ ಗೆಳೆಯ ಅವನು ಮಾವ ಭಾವ ಅವನಾದರೂ ಹೊಡೆದಾಡಿ ಯಾಕೆ ಸಾಯಬೇಕು? ಈ ಭೂಮಿ ನೀನು ಬೆವರು…
ಅನುದಿನ ಕವನ-೧೬೯೬, ಕವಿ: ಬಸೂ, ಧಾರವಾಡ, ಕವನದ ಶೀರ್ಷಿಕೆ: ಸಮಯ
ಸಮಯ ಕೊನೆಗೂ ಗೆಳೆತನವ ಸಾಧಿಸಿದೆ ಮತ್ತು ಪ್ರೀತಿಸಿದೆ ನಾನು ಬರೆಯದಿರುವ ಕವನಗಳ ಜತೆಗೆ ನನ್ನ ಹತ್ತಿರಕೆ ಬರದ ಕನಸುಗಳ ಜತೆಗೆ ನನ್ನೊಳಗಿನ ಖಾಲಿ ಜಾಗಗಳ ಜತೆಗೆ ಮುನ್ಸೂಚನೆ ಕೊಡದೆ ಬದಲಾಗುವ ಮನ್ಸೂನಗಳ ಜತೆಗೆ ಮತ್ತು ಬದುಕನ್ನು ಪ್ರೀತಿಸಿದರೂ ಬೆಳೆವ ಏಕಾಂತಗಳ ಜತೆಗೆ…
ಅನುದಿನ ಕವನ-೧೬೯೫, ತೆಲುಗು ಮೂಲ : ಮಹಾಕವಿ ಶ್ರೀ ಶ್ರೀ, ಕನ್ನಡಕ್ಕೆ : ಡಾ.ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಪಯಣಿಗ
ಪಯಣಿಗ ಕೂಳಿಗಾಗಿ,ಕೂಲಿಗಾಗಿ ನಗರದೊಳಗೇ… ಬದುಕಬೇಕೆಂದ ತಾಯಿ ಮಾತ ಕೇಳಲಾರದೆ ಹೊರಟು ಹೋದ ಪಯಣಿಗನ ಮೂರು ದಿನಗಳು ! ದಿಕ್ಕು ತಿಳಿಯದ ಸಮುದ್ರದ ನಡು ನೌಕೆಯ ಹಾಗೆ ಸಂಚರಿಸುತ್ತ,ಸಂಚಲಿಸುತ್ತ ಆತಂಕ ಪಡುತ್ತ, ದೀನನಾಗುತ್ತ ಅಲೆಯುತಿದ್ದರೆ- ಕಠಿಣ,ಕಠಿಣ,ತೀವ್ರ ತೀವ್ರಗಳ ಜ್ವರ ದಹಿಸಿ, ಭಯವೇರಿ ಪ್ರಲಾಪಿಸಿ…
ಅನುದಿನ ಕವನ-೧೬೯೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಅತೀತ ಆಂತರ್ಯ
ಅತೀತ ಆಂತರ್ಯ ಪ್ರೀತಿ… ದೇಹಾತೀತ ಎಂದು ಭಾವಿಸಿದ್ದೆ!! ನಿನ್ನ ಕೈಬೆರಳು ಸೋಕಲು ಚಡಪಡಿಸುವ ಈ ಕಾಯವ ಕಂಡು ದಿಗ್ಭ್ರಾಂತಳಾದೆ! ಪ್ರೀತಿ.. ನಿರಾಕರಣವೆಂದು ಭಾವಿಸಿದ್ದೆ! ನಿನ್ನ ಸಾಮಿಪ್ಯದಿ ಪುಟಿದೇಳುವ ಕಾಮನೆಗಳು ಅರಿವಿಗೆ ಬಂದು ಬೆಪ್ಪಳಾದೆ!! ಪ್ರೀತಿ… ಕಾಲವನ್ನು ಮೀರಿದ್ದು ಎಂದು ಭಾವಿಸಿದ್ದೆ! ನಿನ್ನ…
ಅನುದಿನ ಕವನ-೧೬೯೩, ಕವಿ: ವೈ.ಜಿ. ಅಶೋಕಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ:ಹೂವಿಲ್ಲದ ಹಾಸಿಗೆ
ಹೂವಿಲ್ಲದ ಹಾಸಿಗೆ ಮೈ ತುಂಬಲು ಒಡವೆಯಿದೆ ಮನೆಯೊಡತಿ ಮನೆಯೊಳಿಲ್ಲ… ಅವನೋ ಬರಿ ಮೈ ದಾಸ ದಾಸವಾಳ ಗಿಡದಂತೆ ಮಡದಿ ಮನೆ ತುಂಬಾ ಹೂಗಳು… ಮಲ್ಲಿಗೆ ಸಂಪಿಗೆಯರು ಊರ ತುಂಬ ಘಮಲು ಕಿತ್ತು ಮುಡಿಯುವವರಿಗೆ ಬರವಿಲ್ಲ ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು ಕೇಳುವವರು…
ಅನುದಿನ ಕವನ-೧೬೯೨, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಕವಿತೆಯೆಂದರೆ…
“ಇದು ಕವಿತೆಯ ಮೇಲೊಂದು ಮಧು ಮಧುರ ಕವಿತೆ. ಕಾವ್ಯದ ಭಾವಭಾಷ್ಯಗಳ ಬೆಳಕಾಗಿಸುವ ಅಕ್ಷರ ಪ್ರಣತೆ. ಕವಿತೆಯ ಈ ಸಾಲುಗಳು ನನ್ನದಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಸ್ವಾನುಭವ, ಲೋಕಾನುಭವ, ರಸಾನುಭಾವಗಳ ಚಿರ ಚಿರಂತನ ಜೀವದೊರತೆಯೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. ಕವಿತೆಯೆಂದರೆ……
