ಅನುದಿನ ಕವನ-೧೭೧೧, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಗುಲ್ಬರ್ಗಾ ಜಿ., ಕವನದ ಶೀರ್ಷಿಕೆ:ಹೆಪ್ಪುಗಟ್ಟಿದ ಮೌನ…?

ಹೆಪ್ಪುಗಟ್ಟಿದ ಮೌನ….? ಮೊನ್ನೆ ತಾನೆ ಕುಂಟಾ ಬಿಲ್ಲೆಯಾಡಿದವಳು ದಿಢೀರನೆ ಮೂಲೆ ಸೇರಿ ಅಪರಾಧಿಯೋ ನಿರಪರಾಧಿಯೋ ಯಾವುದೂ ಗೊತ್ತಿಲ್ಲದೆ ಬಿಳಿಬಿಳಿ ಕಣ್ಣು ಬಿಟ್ಟಾಗ ಮುಗ್ದ ಮುಖದಲಿ ಮೌನ ಹೆಪ್ಪುಗಟ್ಟಿತು ಮಗಳ ಮುಖ ನೋಡಿ ದಿಗಿಲುಗೊಂಡಳು ಅಮ್ಮ ಮನದ ಕದತಟ್ಟಿದಾಗ ಸತ್ಯ ಗೊತ್ತಾಗಿ ಎದೆ…

ಅನುದಿನ ಕವನ-೧೭೧೦, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.

ಮಕ್ಕಳ ಮನಸು ಬಿಳಿ ಹಾಳೆಯಿದ್ದಂತೆ, ಏನನ್ನು ಬರೆಯುತ್ತೇವೆಯೋ ಅದು ಗಾಢವಾಗಿ ಮೂಡಿಬಿಡುತ್ತದೆ. ಒಳ್ಳೆಯದನ್ನೇ ಬರೆಯೋಣ ಶಿಕ್ಷಕರು ಏನು ಹೇಳುವರೋ ಮಕ್ಕಳು ಅದನ್ನೇ ನಂಬುತ್ತಾರೆ ಯಾಕೆಂದರೆ ಶಿಕ್ಷಕರೇ ಅವರಿಗೆ ಆದರ್ಶ ಸುಳ್ಳು ಹೇಳದಿರೋಣ ಶಿಕ್ಷಕರು ಏನು ಮಾಡುವರೋ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಯಾಕೆಂದರೆ…

ಅನುದಿನ ಕವನ-೧೭೦೯, ಹಿರಿಯ ಕವಿ: ಮಹಿಮ, ಬಳ್ಳಾರಿ

ಸಾಗೋಣ ಸಾಗಿ ಬಿಡೋಣ ಬೇಗ ಬಾ ದೂರ ದೂರಕೆ, ಯಾರೂ ಇಲ್ಲದ ತಾಣದಲ್ಲಿ ನಾವಿಬ್ಬರೇ ಇದ್ದುಬಿಡೋಣ, ಮಾತುಗಳು ಬೇಡವೇ ಬೇಡ ಕಂಗಳಿಂದಲೇ ಮಾತನಾಡಿಬಿಡೋಣ, ಬಯಕೆಗಳ ಬದಿಗಿಟ್ಟು ಸೌಂದರ್ಯವ ಆಸ್ವಾದಿಸೋಣ.. ಗಾಳಿಯಲ್ಲಿ ಹಾಸುಹೊಕ್ಕಾಗಿ ಬರುವ ಸುಪ್ತ ಸಂದೇಶಗಳ ಆಲಿಸೋಣ.. ನೇಸರನ ಕಿರಣಗಳ ಸವಿಯೋಣ..…

ಅನುದಿನ ಕವನ-೧೭೦೮, ಕವಿ:ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ನೆತ್ತರ ಹಾದಿ ತಲುಪಿತೆ ಕವಿತೆ

ನೆತ್ತರ ಹಾದಿ ತಲುಪಿತೆ ಕವಿತೆ ನನ್ನ ಕವಿತೆ ಈಗ ನೆತ್ತರ ಹಾದಿಯ ಕಡೆ ಹೊರಟಿದೆ ನೋಡಿ ಸಮಾಜದಲ್ಲಿನ ಅನ್ಯಾಯಗಳ ಬಿಂಬಿಸಲು ನ್ಯಾಯದ ಕನ್ನಡಿ ಹಿಡಿದು ದುಡಿದು ತಿನ್ನುವ ಬಡವರು ಬೇಡುವ ಭಿಕ್ಷುಕರಾಗಿರುವರು ಯಾರದೋ ಭರವಸೆಗೆ ಕೈ ಚಾಚಿ ನಿಂತು ಸಿಕ್ಕಿಲ್ಲ ಇನ್ನು…

ಅನುದಿನ ಕವನ-೧೭೦೭, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಒಲವಿಂದ ಮುಕ್ತನಾದೆ

ಒಲವಿಂದ ಮುಕ್ತನಾದೆ ಒಲವೆ ನಿನ್ನಿಂದ ನನ್ನ ಕಳೆದುಕೊಂಡೆ ನಾನೆ ಹೆಚ್ಚು ನಿನ್ನ ಪ್ರೀತಿಸಿದೆನೆಂಬ ಹುಚ್ಚು ಕಳಚಿಕೊಂಡೆ ಒಲವೆ ನಿನ್ನಿಂದ ನನ್ನ ಪಡೆದುಕೊಂಡೆ ನೀನೆ ಒಲವ ರೂಪವಾಗಿ ನನ್ನ ಕುರೂಪ ಕಳೆದುಕೊಂಡೆ ಒಲವೆ ನನ್ನ ಅಜ್ಞಾನ ತೊಲಗಿಸಿದೆ ಅರಿವಿನ ಜ್ಯೋತಿಯ ಬೆಳಗಿಸಿ ಜಗಕೆಲ್ಲ…

ಅನುದಿನ ಕವನ-೧೭೦೬, ಹಿರಿಯ ಕವಿ: ಮುನಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅವನು!?

ಅವನು.??! ಅವನು ಹಾಗೇನೆ ಪ್ರೀತಿ ವಿಶ್ವಾಸದ ಪ್ರತಿರೂಪ ಸ್ವಲ್ಪ ಮುಂಗೋಪಿ ಮನಸು ಹೂವಿನಂತೆ ಮೃದು ಮಾತು ಕಡಿಮೆ ತಾನಾಯಿತು ತನ್ನಷ್ಟಕ್ಕೆ ಮುನಿದು ಕ್ಷಣದಲ್ಲಿ ಕರಗುತ್ತಾನೆ ಪ್ರಪಂಚಕ್ಕೆ ಕಾಣದಂತೆ ಏಕಾಂತದಿ ಅವನು ಅಳುತ್ತಾನೆ ಕಣ್ಣೀರ ಹನಿ ಹರಿದು ಎಳೆಬಿಸಿಲು ಹೊನ್ನಕಿರಣ ಹಸಿರು ನಗುವಂತೆ…

ಅನುದಿನ ಕವನ-೧೭೦೫, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ನಿಸ್ವಾರ್ಥಿ ನನ್ನ ಮನಸು

ನಿಸ್ವಾರ್ಥಿ ನನ್ನ ಮನಸು ಗೊತ್ತೇ ಆಗದೆ ಮತ್ತೆ ಮತ್ತೆ ಕಣ್ತುಂಬಿ ತುಟಿಯಲಿ ಡೊಂಕು ಮೊಗದಿ ಪ್ರಶ್ನೆ ಸೋತು ಸುಮ್ಮನೆ ಒರಗಿ ಮೆಲ್ಲಗೆ ಬಾಗಿ ಒಳಗಿಣುಕಿದರೆ ಎದೆ ತುಂಬಿದ ಗಾಬರಿ ಅದೇನು ಅಸ್ತವ್ಯಸ್ತ ವಿಲಕ್ಷಣ ಆವರಣ ಆ ಮೂಲೇಲಿ ಮುಖ ಬಿಗಿದ ಮನಸು…

ಅನುದಿನ ಕವನ-೧೭೦೪, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ವಿಸ್ಮಯ ವೃತ್ತಾಂತ….!

“ಇದು ನಮ್ಮ ನಿಮ್ಮದೇ ಜೀವ-ಜೀವನದ ವಿಚಿತ್ರ ತಲ್ಲಣಗಳ ಕವಿತೆ. ಎಂದೆಂದಿಗೂ ಅರ್ಥವೇ ಆಗದ ವಿಸ್ಮಯ ಸಂವೇದನೆಗಳ ನಿತ್ಯ ಸತ್ಯ ಭಾವಗೀತೆ. ಇದು ನಮ್ಮೆಲ್ಲರ ಅನುದಿನದ ಲೋಕಾನುಭವವೂ ಹೌದು. ಅನುಕ್ಷಣದ ಸ್ವಾನುಭವವೂ ಹೌದು. ಇದು ಯುಗಯುಗದಿಂದ ಬದಲಾಗದ ಜಗದ ಮನಸ್ಥಿತಿಯೂ ಹೌದು. ಹೀಗೇಕೆಂದು…

ಅನುದಿನ ಕವನ-೧೭೦೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಉರಿದ ಕುಲುಮೆ

ಉರಿದ ಕುಲುಮೆ ತಿರುಗಾಡುತ್ತಿದೆ ಭವ್ಯ ಭೂಮಿಯಲಿ ಅತಂತ್ರದ ಕುಲುಮೆ ಸ್ವಚ್ಛ ಝಳಕೆ ಸುತ್ತುತಿದೆ ಆದರೂ ಕೊನೆಯರಿಯದ ನಿಲುವು ಬರಿಗಾಲಿನ ಬೆಂಕಿಯೊಳು ನಡೆಯುತ್ತಿದೆ ಬಿಟ್ಟಿರುವ ಭುವ ಭಿಕ್ಷೆಗೆ ಎಲ್ಲಿಲ್ಲದ ಹಗರಣದ ಹಾರಾಟ ಬಿಸಿಲು ಕುದುರೆಯ ಮಾಧುರ್ಯಕೆ ಎಡರಿಲ್ಲದೆ ಕನಸ ಕಮರಿಕೆ…. ಬಾಳ ಬುತ್ತಿಗೆ…

ಅನುದಿನ ಕವನ-೧೭೦೨, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ನಾನು ಮಲ್ಲಿಗೆ

ನಾನು ಮಲ್ಲಿಗೆ ಮನೆಯ ಹಿತ್ತಲಲ್ಲಿ ಹೂತು ಹಾಕುತ್ತಾರೆ ಬೆಂಬಲಕ್ಕೆ ಗೂಟ ಜಡಿದು ಬೆಳೆಯಲು ಬಿಡುತ್ತಾರೆ ಬೆಳೆದರೆ ಕತ್ತರಿಸುತ್ತಾರೆ ಕತ್ತರಿಸಿ ಮತ್ತೆ ಬೆಳೆಯಲು ಬಿಡುತ್ತಾರೆ ಮೈಯಲ್ಲ ಮೊಗ್ಗಾಗಲಿ ಎನ್ನುತ್ತಾರೆ ಅರಳಿ ಉದುರಿದರೆ ಕಸವೆಂದು ಮುಖ ಸಿಡಿಸಿಕೊಳ್ಳುತ್ತಾರೆ ಒಮ್ಮೊಮ್ಮೆ ಅರಳುವ ಮೊದಲೆ ಕಿತ್ತು ಕುತ್ತಿಗೆಗೆ…