ಗಝಲ್ ಎಷ್ಟು ಪ್ರೀತಿ ಕೊಟ್ಟರೂ ಮೌನವಾಗಿ ಇರಿಯುವ ಮನಸುಗಳಿವೆ ಇಲ್ಲಿ ಬಟ್ಟೆ ಕಳಚಿದಂತೆ ಬಣ್ಣ ಒರೆಸಿಕೊಂಡಂತೆ ಬಳಸಿ ಬಿಸಾಡುವ ಮನಗಳಿವೆ ಇಲ್ಲಿ ಒಲಿದ ಜೀವವೂ ಒಮ್ಮೊಮ್ಮೆ ಒಂಟಿಯಾಗಿಸಿ ಮೋಜು ನೋಡುವುದು ಭಾವನೆಗಳ ಜೊತೆ ಚೆಲ್ಲಾಟವಾಡಿ ಚುಚ್ಚುವ ಮನಗಳಿವೆ ಇಲ್ಲಿ ಕಟ್ಟಿಕೊಂಡ ಕನಸುಗಳೆಲ್ಲ…
Category: ರಾಜ್ಯ
ಅನುದಿನ ಕವನ-೧೨೨೬, ಕವಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ:ಒಂದಿಷ್ಟು ಪ್ರಾರ್ಥನೆಗಳು
ಒಂದಿಷ್ಟು ಪ್ರಾರ್ಥನೆಗಳು ಮೋಡಗಳು ಕದಡಿ ಮಳೆ ಸುರಿಯಲಿ ಬಿದ್ದ ಮಳೆ ಬದುಕಿನ ಬೀದಿಗಿಡದಿರಲಿ…. ಅನ್ನದಾತ ಕುಣಿಕೆಗೆ ಕೊರಳೊಡ್ಡದಿರಲಿ ಮನೆಯಲ್ಲಿ ಮೂರೊತ್ತು ಒಲೆ ಉರಿಯಲಿ… ಹಸುಗೂಸು ಕಸದ ಬುಟ್ಟಿಯಲಿ ಅಳದಿರಲಿ ಹೆತ್ತವರು ವೃದ್ಧಾಶ್ರಮದ ವಿಳಾಸ ಕೇಳದಿರಲಿ… ಹೂ ಮಾರುವ ಹುಡುಗಿ ಬೀದಿ ಹೆಣವಾಗದಿರಲಿ…
ಕಾವ್ಯ ಕಹಳೆ [೧೦-೦೫-೨೦೨೪], ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ: ಕಲ್ಯಾಣ ಪ್ರಣತಿ
ಕಲ್ಯಾಣ ಪ್ರಣತಿ ಕಲ್ಯಾಣ ಪ್ರಣತ್ಯಾಗ ಅರಿವಿನ ದೀವಿಗೆ ಕಾಯಕ ತುಂಬಾ ಕೈಲಾಸ / ಬಸವಣ್ಣ ಜಗದೊಳು ಜ್ಯೋತಿ ಬೆಳಿಗ್ಯಾನ -೧- ಮನುಕುಲಕ್ಕಂಟಿದ ಮೈಲಿಗೆ ಕಿತ್ತೊಗೆದು ಸಮಾನತೆ ತತ್ವ ಸಾರ್ಯಾನ / ಬಸವಣ್ಣ ಮೌಢ್ಯಕ್ಕೆ ಮೂಟೆ ಕಟ್ಯಾನ -೨- ಜಾತಿಯ ಜಾಲಾಡಿ ನೀತಿಗೆ…
ಅನುದಿನ ಕವನ-೧೨೨೫, ಕವಯಿತ್ರಿ: ವಸು ವತ್ಸಲೆ, ಬೆಂಗಳೂರು
ಎಲ್ಲೋ ಬಿದ್ದ ಬೀಜ ನಾನು ಕಲ್ಲು ಪೊಟರೆಗಳ ನಡುವಿಂದ ಸದ್ದಿಲ್ಲದೆ ಮೊಳಕೆ ಹೊಡೆದು ಚಿಗುರಿಕೊಂಡೆ ಚಿವುಟುವವರ ನಡುವೆಯೂ ತೋಳುಗಳರವಿ ನೀರು-ನಿಡಿ ಇಲ್ಲದೆ ಜೀವ ತುಂಬಿಕೊಂಡೆ ನಡು ನಡುವೆ ಆಡು ಕುರಿಗಳಿಗೂ ಕುಡಿಗಳರ್ಪಿಸಿ, ಮೆಲ್ಲೆನೆ ಗೆಲ್ಲುಗಳರಡಿದೆ ಜೋಕಾಲಿ ಜೀಗಿ ಗೆಲ್ಲುಗಳ ಮುರಿದವರಿಗೂ ಯಾವ…
ಅನುದಿನ ಕವನ-೧೨೨೪, ಹಿರಿಯ ಕವಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆಯಾಗಿಬಿಡಿ!
ಕವಿತೆಯಾಗಿಬಿಡಿ! ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು ಗಾಳಿ ಮರಗಳ ವೀಣೆ ನುಡಿಸುತ್ತೆ ಮೌನವಾಗಿ, ತಾನಕ್ಕೆ ಮುದಗೊಳ್ಳಿ ಗಾಳಿ ಗೀಳು, ಗಾಳಿ ಗೋಳು ಪದಗಳ ಕಿತ್ತೆಸೆದು ಹಾಗೇ ಕಿವಿಯೊಡ್ಡಿಕೊಳ್ಳಿ ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು…
ಅನುದಿನ ಕವನ-೧೨೨೩, ಕವಯಿತ್ರಿ: ಮಮತಾ ಅರಸೀಕೆರೆ., ಕವನದ ಶೀರ್ಷಿಕೆ: ಸಾಕಾಯ್ತು ನನಗೆ
ಸಾಕಾಯ್ತು ನನಗೆ…. ನೀನು ಹೂವಾಗಿ ಸೋಕಬಹುದಿತ್ತು ಗಂಧವಾಗಿ ಸವರಬಹುದಿತ್ತು. ಗಾಳಿಯಲ್ಲಿ ಸುಳಿದಾದರೂ ಸ್ಪರ್ಶವಾಗಬಹುದಿತ್ತು. ಕಣ್ಣಗಳಲ್ಲಾದರು ನೆನಪುಗಳ ಕನವರಿಕೆಯಾಗಬಹುದಿತ್ತೇನೊ. ನೀನು ಅಕಾಲಿಕ ಮಳೆಯಾಗಿಯಾದರೂ ಎದೆಯೊಳಗೆ ಮಣ್ಣ ಕಂಪನ್ನು ಆವಿಯಾಗಿಸಬಹುದಿತ್ತು. ತೂಗುಮಂಚದೊಳಗೆ ಮಲಗಿ ಮೈಮರೆಸುವ ಅಮಲಿಗೆ ನಿನ್ನ ತೆಕ್ಕೆಯೊಳಗೆ ಅಡಗಿ ಉಯ್ಯಾಲೆಯಾಡಿಸುವ ಬೇಷರತ್ತು ವಾಗ್ದಾನ…
ಅನುದಿನ ಕವನ-೧೨೨೨, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು, ಕವನದ ಶೀರ್ಷಿಕೆ: ಕತ್ತಲಾಗಿಸು ಪ್ರಭುವೇ
ಕತ್ತಲಾಗಿಸು ಪ್ರಭುವೇ ಪ್ರಭುವೇ, ಇನ್ನಾದರೂ ಹೊರಗೆ ಕತ್ತಲಾಗಿಸು ಈ ಬೆಳಕು ದಾರಿ ತೋರಿಸಿದ್ದು ಸಾಕು. ನಡೆದೂ ನಡೆದೂ ಸುಸ್ತಾಗಿದ್ದೇನೆ, ದಾರಿ ಗುರಿಗಳ ನಡುವೆ ಸಾಗುವಲ್ಲಿ ಸಾಧನೆಗಳ ಮಿಂಚುಳದ ಬೆಳಕಿನಲ್ಲಿ ದಾಹ ತೀರದ ಚಪ್ಪಾಳೆಯಲ್ಲಿ ನಾನಿಲ್ಲದಂತೆ ಬಂಧಿಯಾಗಿದ್ದೇನೆ. ನಿದ್ದೆ ಮತ್ತು ಎಚ್ಚರದ ನಡುವಿನ…
2024ರ ಚುನಾವಣೆ ದೇಶದ ಗಣತಂತ್ರ ವ್ಯವಸ್ಥೆ ಉಳಿಸಲು ಬೆಳೆಸಲು ನಿರ್ಣಾಯಕ -ಪ್ರೊ. ಎಸ್.ಜಿ ಸಿದ್ಧರಾಮಯ್ಯ ಅಭಿಮತ
ಬಳ್ಳಾರಿ, ಮೇ 5: ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಉಳಿವಿನ, ಸಂವಿಧಾನ ಸಂರಕ್ಷಣೆಯ ಚುನಾವಣೆ ಎಂದು ಜಾಗೃತ ನಾಗರೀಕರು, ಕರ್ನಾಟಕ ವೇದಿಕೆಯ ಮುಖಂಡರೂ, ಹಿರಿಯ ಸಾಹಿತಿ ಪ್ರೊ.ಎಸ್.ಜಿ ಸಿದ್ಧರಾಮಯ್ಯ ತಿಳಿಸಿದರು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ…
ಅನುದಿನ ಕವನ-೧೨೨೧, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು ೧ ನೂರು ಕತೆಗೆ ಮುನ್ನುಡಿ; ಸಾವಿರದ ಮುಗುಳು ನಗೆ ೨ ಪ್ರೀತಿಯೌಷಧಿ ಕುಡಿದ ದಿನವಿಡೀ ಉಲ್ಲಾಸಮಯ ೩ ಕಾದ ಕಾವಲಿ ನೆಲ; ಬೆಂಕಿಯುಗುಳಿ ದಣಿದ ಸೂರ್ಯ ೪ ನಿದ್ರೆ ಇರದ ಅದೆಷ್ಟೋ ರಾತ್ರಿ; ಬರೀ ನಿನ್ನದೇ ಧ್ಯಾನ ೫ ನೀಲಿ…
ಅನುದಿನ ಕವನ-೧೨೨೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ನೀನೆಂದರೇ ಹಾಗೆ
ನೀನೆಂದರೇ ಹಾಗೆ ನೀನೆಂದರೇ ಹಾಗೆ ಕಪ್ಪೆಚಿಪ್ಪೊಂದು ತನ್ನೊಳಗೇ ಮುತ್ತನ್ನು ಸೃಷ್ಟಿಸಿದ ಹಾಗೆ ನೀನೆಂದರೇ ಹಾಗೆ ನೆಲದೊಳಗಿನ ಬೀಜವೊಂದು ತನ್ನೊಳಗೇ ಬೆಳೆದು ಹೆಮ್ಮರವಾದಂತೆ ನೀನೆಂದರೇ ಹಾಗೆ ಮೋಡವೊಂದು ಕಡಲಿನ ಒಡಲ ಹೊತ್ತು ತೇಲಿ ಬಂದಂತೆ ನೀನೆಂದರೇ ಹಾಗೆ ಮೊಗ್ಗೊಂದು ಮೈಮುರಿದು ಸುಗಂಧ ಹರಡಿದ…
