ತಂತ್ರಜ್ಞಾನದ ವೇಗ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ತರಬೇತಿ ಪತ್ರಕರ್ತರಿಗೆ ಅಗತ್ಯವಿದೆ: ಕೆ.ವಿ.ಪ್ರಭಾಕರ್

ದಾವಣಗೆರೆ ಆ. 27: ತಂತ್ರಜ್ಞಾನದ ಬೆಳವಣಿಗೆ ಮುಂದಿಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪತ್ರಕರ್ತರಿಗೆ ತರಬೇತಿ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.                 ದಾವಣಗೆರೆ ಜಿಲ್ಲಾ ವರದಿಗಾರರ ಕೂಟ…

ಅನುದಿನ ಕವನ-೮೬೯, ಕವಿ:ಅಶ್ವತ್ಥನಾರಾಯಣ, ಮೈಸೂರು, ಕವನದ ಶೀರ್ಷಿಕೆ: ಬಣ್ಣದ ಶುಕ್ತಿ(ಶಿಶು ಗೀತೆ)

ಬಣ್ಣದ ಶುಕ್ತಿ(ಶಿಶುಗೀತೆ) ಇತ್ತ ನೋಡು ಪುಟ್ಟ ಕಂದ ಕಪ್ಪೆಚಿಪ್ಪು ಇರುವುದು| ಮುತ್ತು ಕೂಡ ಅದರ ಒಳಗೆ ಜನಕೆ ಸಿಗುತಲಿರುವುದು|| ಬಣ್ಣಬಣ್ಣ ಚಿಪ್ಪು ತಂದು ಜೋಡಿಸುತ್ತಲಿಟ್ಟರು| ಕಣ್ಣ ಸೆಳೆವ ಹೆಣ್ಣರೂಪ ತಂದು ಮುದವ ಕೊಟ್ಟರು|| ಹಲವು ಬಣ್ಣ ಶುಕ್ತಿ ತಂದು ನಿನಗೆ ನಾನು…

ದಾವಣಗೆರೆ: ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನ ಅರ್ಥಪೂರ್ಣ ಯಶಸ್ಸಿಗೆ ಸಂಪೂರ್ಣ ಸಹಕಾರ -ಕೆ.ವಿ.ಪ್ರಭಾಕರ್

ದಾವಣಗೆರೆ ಆ. 27: ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ 38 ನೇ ರಾಜ್ಯ ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.‌ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ…

ಅನುದಿನ‌ ಕವನ-೯೬೮, ಕವಿ: ಡಾ.ಸತ್ಯಮಂಗಲ‌ ಮಹದೇವ, ಬೆಂಗಳೂರು

ಸಖೀ ನೂರು ಕನಸುಗಳು ಒಂದೇ ಸಲ ನೆಲಕಪ್ಪಳಿಸಿದಾಗ ಹೃದಯ ಚಿಲ್ ಎಂದು ಚೀರುತ್ತದೆ ನೋವಿನ ಆದ್ರತೆಗೆ ನೂರು ನಕ್ಷತ್ರಗಳು ಧರೆಗಪ್ಪಳಿಸಿದರೆ ನೆಲದ ಎದೆ ಹೇಗೆ ತಡೆದೀತು ನೆಲಕೆ ಬಿದ್ದ ನಕ್ಷತ್ರಗಳ ಎದೆಗಪ್ಪುವ ಸಾವಿರ ಪ್ರೇಮಿಗಳು ಅನುಕ್ಷಣವು ಪ್ರತೀಕ್ಷೆ ಮಾಡುತ್ತಾರೆ ಹೃದಯವು ಚೀರಿದ…

ಅನುದಿನ‌ ಕವನ-೯೬೭, ಕವಿಯಿತ್ರಿ:ಶ್ರೀ ಮಂಗಳೂರು, ಕವನದ ಶೀರ್ಷಿಕೆ: ಜೀವ ಸಂಚಾರ

ಜೀವ ಸಂಚಾರ… ಎಷ್ಟೊಂದು ದಿನಗಳಾದವು ನಿನ್ನ ಊರಿನ ದಾರಿ ಮರೆತು ಖುಷಿಯ ಹೆಗಲನ್ನೇರಿದ ಸವಾರಿ ಮರೆತು ಎದೆಯ ಅಂಗಳದಲ್ಲಿ ಹರವಿದ ನಿನ್ನ ಮುಗುಳ್ನಗೆಯ ಮೌನ ಮರೆತು ಅದೆಷ್ಟೊಂದು ನಿರಾಸಕ್ತಿ ಅನಾಸಕ್ತಿಗಳ ಧೂಳಿನ ಕಣಗಳು ಹಾರಾಡುತಿವೆ ಗಾಳಿಗುಂಟ ಮುಸ್ಸಂಜೆಯ ಕೊನೆ ದಿನಪನ ನಡೆಯೂ…

ಅನುದಿನ ಕವನ-೯೬೬, ಕವಿ: ಸಿದ್ಧರಾಮ‌ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಎದೆಯಾಳದಲ್ಲೊಂದು ಕಂಬನಿಯಿತ್ತು ನನ್ನ ನಗೆಯಲ್ಲಿ ನೀನದನ್ನು ನೋಡಲೇ ಇಲ್ಲ ಉಸಿರಿನೊಳಗೊಂದು ನಿಟ್ಟುಸಿರಿತ್ತು ನನ್ನ ಮಾತುಗಳ ಸುಳಿಯಲ್ಲಿ ನೀನದ ಕಾಣಲೇ ಇಲ್ಲ ಮನದೊಳಗೊಂದು ದಿಕ್ಕೇಡಿಯಾಗಿ ಅಲೆಯುತಿಹ ಭೋರ್ಗರೆವ ಪ್ರವಾಹ ಅಡಗಿಹುದು ಚಂದದ ಮನೆಯೊಂದು ಕುಸಿದುಬಿತ್ತು ನೆಲ ನಡುಗಿದ ಭರದಲ್ಲಿ ನೀನು ಗುರುತಿಸಲೇ…

ಅನುದಿನ ಕವನ-೯೬೫, ಕವಿ:ಮಹಿಮ, ಬಳ್ಳಾರಿ, ಚಿತ್ರ:ಯಜ್ಞ ಮಂಗಳೂರು

ಬರೆಯುವೆನೆಂಬ ಹಮ್ಮೇಕೆ ಹಳ್ಳಿಗಳಲ್ಲಿವೆ ಓದು ಬರಹ ಬರದ ಅಕ್ಕರೆಯ ಮನಗಳು ನೀನು ಬರೆಯುವುದು ಪೆನ್ನಿನಿಂದ ಅವರು ಬರೆಯುತ್ತಾರೆ ಹೃದಯದಿಂದ ಮಾತನಾಡುತ್ತಾರೆ ಮಮತೆಯಿಂದ ನಿನಗಿರದ ಭಾವನೆಗಳಿವೆ ಅವರಲ್ಲಿ ನಿನಗೆ ಬದುಕುವ ಚಿಂತೆ ಅವರು ನಿನ್ನಂತೆ ಬರೆಯಲಾರರು ಆದರೆ ನಿನ್ನ ಬದುಕಿಸುವವರು ಅವರು ಮೂಗು…

ಅನುದಿನ‌ ಕವನ-೯೬೪, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು

ಜಗವ ತೊರೆಯಬೇಕು ನನ್ನ ಜಗದೊಳಗೆ ಉಳಿಯಲು ಬದುಕೆಷ್ಟು ಗಲಾಟೆ ಅದೆಷ್ಟು ನಿರಾಳ ಒಮ್ಮೆ ಸುಂದರ ಗಾಳಿ ಎಂದಿಗೋ ಒಮ್ಮೆ ಸುನಾಮಿ ಮತ್ತೊಮ್ಮೆ ಹಾಗೇ ಶಾಂತ ಸಮುದ್ರ ತನ್ನವರೆಷ್ಟು ಹಿತ ಅಷ್ಟೇ ಸುಡು ಅಗ್ನಿ ಸುಧಾರಿಸಿಕೊಳ್ಳದ ಮನಸ್ಸು ಸಹಿಸಿಕೊಳ್ಳದ ಮನಸ್ಸು ಹೆಸರು ಕೇಳಿದರೆ…

ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದ ರೈತರ ಸಮಸ್ಯೆ ಬಗೆಹರಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಭೆ: ರೈತ ಮುಖಂಡರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

  ಬೆಂಗಳೂರು, ಆ. 22: ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಓ.ಟಿ.ಎಸ್. (ಒನ್ ಟೈಮ್ ಸೆಟ್ಲ್ ಮೆಂಟ್) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್‌ ಹಾಗೂ ಪ್ರವರ್ತಕ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌…

ಅನುದಿನ ಕವನ-೯೬೩, ಕವಿಯಿತ್ರಿ: ವಿನಿಶಾಗೋಪಿನಾಥ್ ಬೆಂಗಳೂರು

ನನ್ನ ಒರಟುತನ ನಿನ್ನನ್ನು ಘಾಸಿಗೊಳಿಸುವುದು, ಗೊತ್ತು ನಿನ್ನ ಗುಣವೇ ನನಗೂ ಬಂದಿರುವುದು, ಮರೆಯಬೇಡ ನಿನಗೇನು ಗೊತ್ತು ಕಡಲಿನಷ್ಟು ಪ್ರೀತಿಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿರುವೆ ಹೃದಯದ ಮಾತುಗಳನ್ನು ಮೌನದಲಿ ಪೋಣಿಸಿಟ್ಟಿರುವೆ ಎಲ್ಲಿದ್ದರೂ ಈಗಲೇ ಬಂದುಬಿಡು ಅನುರಾಗದ ಅಲೆಗಳ ಮೇಲೆ ತೇಲಿ ತಂಗಾಳಿಯ ಜೊತೆಗೂಡಿ ಬಿಡದೆ…