ಇಂದು ಬಳ್ಳಾರಿಯಲ್ಲಿ ಡಾ.ರಾಜಶೇಖರ ನಿರಮಾನ್ವಿ ನೆನಪಿನ ಕಾರ್ಯಕ್ರಮ

ಬಳ್ಳಾರಿ, ಆ.10: ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ನಿರಮಾನ್ವಿ ಅವರ ನೆನಪಿನ‌ ಕಾರ್ಯಕ್ರಮ ನಗರದ ಬಿಪಿಎಸ್ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ. ಬೆಂಗಳೂರಿನ ಡಾ.‌ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮತ್ತು‌ ನಗರದ ಲೋಹಿಯಾ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದ್ದು, ಬೆ.10-30 ಗಂಟೆಗೆ…

ಅನುದಿನ ಕವನ-೧೬೮೩, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಮೂಕವಾಗಿವೆ….

ಮೂಕವಾಗಿವೆ…. ನಾನೇನೂ ಮಾಡಿಲ್ಲ ಆದರೂ….. ಇರುವೆ ಕಚ್ಚಿದೆ, ಬೆಕ್ಕು ಪರಚಿದೆ ನಾಯಿ ಬೆನ್ನಟ್ಟಿದೆ ಗೂಳಿ ಗುದ್ದಿದೆ ಎಮ್ಮೆ ತಿವಿದಿದೆ ಕತ್ತೆ ಒದ್ದಿದೆ ಇಂಬಳ ರಕ್ತ ಹೀರಿದೆ ಚೇಳು ಕಡಿದಿದೆ ಜೇನು ಕುಟುಕಿದೆ ಹೇಳಲೇನಿದೆಯೋ ಅವುಗಳಿಗೆ, ಮೂಕವಾಗಿವೆ ! -ಸವಿತಾ ನಾಗಭೂಷಣ, ಶಿವಮೊಗ್ಗ…

ಅನುದಿನ ಕವನ-೧೬೮೨, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ

ಅವರೇನೊ ವಿದಾಯ ಹೇಳಿ ಹೊರಟರು ಆದರೀಗ ಅವನವಳ ನಡುವೆ ನಿಜ ಪ್ರೇಮ ಅಂಕುರಿಸಿದೆ ಜೊತೆಗಿದ್ದ ಅಷ್ಟು ಕಾಲ ಕಚ್ಚಾಡಿ ಕಾಲೆಳೆಯುವುದರಲ್ಲೇ ಕಳೆದುದೀಗ ಚರಿತ್ರೆಯ ಪಳೆಯುಳಿಕೆ ಈಗ ವಿದಾಯ ಹೇಳಿ ಹೊರಟಾಗ ನೆನಪಿನ ಸುರುಳಿ ಸರಾಗ ತಿರುತರುಗಿ ಪರಿಚಯಿಸುತ್ತಿದೆ ಕಚ್ಚಾಟ ಪರಚಾಟಗಳೆಲ್ಲ ಆಳ…

ಡಿವಿಜಿ ಅವರ ಮಂಕುತಿಮ್ಮನ ಕಗ್ಗವು ಆದರ್ಶಗಳ ಗಣಿ -ಚಿಂತಕ ಪ್ರೊ ವಿ ಆರ್ ಪರಡ್ಡಿ

ಬಾಗಲಕೋಟೆ, ಆ. 8: ಮಂಕುತಿಮ್ಮನ ಕಗ್ಗವು ಪ್ರಸ್ತುತ ದಿನಗಳಲ್ಲಿ ಮಾನವನ ಜೀವನ ಮತ್ತು ಆದರ್ಶಗಳ ಗಣಿಯಾಗಿದೆ ಅಲ್ಲದೆ ಇದು ಮನುಷ್ಯನ ಬದುಕಿನ ಚಿತ್ರಣವನ್ನು ಹಾಗೂ ಮನುಷ್ಯ ಹೇಗೆ ಬದುಕಬೇಕು ಎಂಬ ಚಿಂತನೆಯನ್ನು ತಿಳಿಸುತ್ತದೆ ಎಂದು ಪ್ರಾಧ್ಯಾಪಕರು ಹಾಗೂ ಚಿಂತಕರಾದ ಪ್ರೊ ವಿ…

ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿ‌ಒಡೆಯರ್, ಹೂವಿನ‌ಹಡಗಲಿ, ಕವನದ ಶೀರ್ಷಿಕೆ: ವರವ ನೀಡು ವರಮಹಾಲಕ್ಷ್ಮಿ

ವರವ ನೀಡು ವರಮಹಾಲಕ್ಷ್ಮಿ ಮಂಗಳ ರೂಪಿಣಿ ಮಂಜುಳಭಾಷಿಣಿ ಮಹಾಲಕ್ಷ್ಮಿ ನಲಿಯುತ, ನಗುತಲಿ ಬಾರಮ್ಮ ದೇವಿ ವರಲಕ್ಷ್ಮಿ ಶುಕ್ರವಾರದ ಶುಭ ಸಂಜೆಯ ಘಳಿಗೆಗೆ ಬಾರಮ್ಮ ತಾಯಿ ಭಕ್ತರ ಮನೆ ಮನೆಗೆ || ಸಂಭ್ರಮ ಸಡಗರದಿ ಬಂದಿದೆ ಶ್ರಾವಣ ಮಾಸ ಹೆಂಗಳೆಯರ ಮೊಗದಲಿ ಮೂಡಿದೆ…

ಅನುದಿನ ಕವನ-೧೬೮೧, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ನೆಟ್ಟು ದಿಟ್ಟಿ ಅಗಮ್ಯದೆಡೆ….!!

ನೆಟ್ಟು ದಿಟ್ಟಿ ಅಗಮ್ಯದೆಡೆ….!! ಯಾಕೋ ಈಗೀಗ ಏನೋ ಗೊಂದಲ ಯೋಚನೆ ಮೀರಿ ವಿಚಾರಗಳ ಗಲಗಲ ಮನದಲ್ಲೊ ಎಲ್ಲ ವೀಕ್ಷೀಸೊ ಬುದ್ಧಿಲೊ ಉಂಹೂಂ ಬಾರದೆ ಅರಿವಿಗೆ ಗದ್ದಲ ಹೋಗಲಿ ಬಿಡೀಗ ಚಡಪಡಿಕೆ ಯಾತಕ್ಕೆ ಮಾತ್ರ ಬಲು ನಿಚ್ಚಳ ತಪ್ಪದ ಹಂಬಲಿಕೆ ಕಳೆದು ಹೋದ…

ಅನುದಿನ ಕವನ-೧೬೮೦, ಕವಿ: ಎಚ್ ಆರ್ ಕೃಷ್ಣಮೂರ್ತಿ, ಶಿವಮೊಗ್ಗ, ಕವನದ ಶೀರ್ಷಿಕೆ: ನೀನೆಂದರೆ…….

ನೀನೆಂದರೆ……. ನೀನೆಂದರೆ ನನಗೆ ಇಷ್ಟವಾಗುವುದೇಕೆ ? ನಿನ್ನ ಮಾತು ಕೇಳಿದರೆ ಮನಕೆ ಹಿತವಾಗುವುದೇಕೆ? ನಿನ್ನ ನೋಡಲು ಮನಸು ಹಾತೊರಿಯುವುದೇಕೆ..? ನೀ ನನ್ನ ಜೊತೆಯಿದ್ದರೆ ಸಮಯ ಸರಿದಿದ್ದೆ ಗೊತ್ತಾಗದೇಕೆ?. ನೀ ಹಗಲಿರುಳು ನನಗೆ ನೆನಪಾಗುವುದೇಕೆ?….. ನಿನಗೆ ನೋವಾದರೆ ನನಗೂ ನೋವಾಗುವುದೇಕೆ? ನಿನ್ನ ಯೋಚನೆಗಳು…

ಅನುದಿನ ಕವನ-೧೬೭೯, ಹಿರಿಯ ಕವಿ: ಡಾ.‌ಮೊಗಳ್ಳಿ‌ ಗಣೇಶ್, ಹೊಸಪೇಟೆ, ಕವನದ ಶೀರ್ಷಿಕೆ:ಒಂದು ಮೂಳೆಯ ಕೊಳಲು

ಒಂದು ಮೂಳೆಯ ಕೊಳಲು ಬಂದು ನಾದವಾಗಿ ನಿಶ್ಯಬ್ದದ ಅಲೆಯಲ್ಲಿ ಲೀನವಾದವರು ಎಷ್ಟೋ ನೆನ್ನೆ ತಾನೆ ನಕ್ಕವರು ಅತ್ತವರು ಇವತ್ತು ಎತ್ತ ಹೋದರೋ ಏನು ಬ್ಯಾನಿ ಇತ್ತೋ ಗಾಳಿ ಎಳೆದುಕೊಂಡು ಹೋಯಿತೋ ಯಾರಾದರೂ ಬಹಿಷ್ಕರಿಸಿದರೋ ಬಲಿ ಹಾಕಿದರೋ ಇವತ್ತು ಇದ್ದವರು ನಾಳೆಗಿಲ್ಲ ರಾತ್ರಿ…

ಕಾವ್ಯ ಕಹಳೆ, ಹಿರಿಯ ಕವಿ: ವಿ.ಆರ್. ಮುರಲೀಧರ್, ಬೆಂಗಳೂರು, ಕವನದ ಶೀರ್ಷಿಕೆ:ನನ್ನವಳು ಚಂದ್ರಿಕಾ

👍❤️🧏‍♂️ ನನ್ನವಳು ಚಂದ್ರಿಕಾ 🧏‍♂️❤️👍 ಬಾಳಿನಲಿ ಬಂದವಳು, ಭರವಸೆಯ ತಂದವಳು, ಸಪ್ತಪದಿಯ ತುಳಿದವಳು, ಸುಃಖ ದುಃಖಕದು ಸ್ಪಂದಿಸುವವಳು, ನನ್ನವಳು ಚಂದ್ರಿಕಾ.❤️🧏‍♂️ ತವರನು ತೊರೆದವಳು, ಸರ್ವರೊಳು ಬೆರೆತವಳು, ನಿತ್ಯ ಹರುಷಕದು ಜೊತೆಯಾದವಳು, ಸುಖ ಸಂಸಾರಕದು ಸ್ಫೂರ್ತಿಯಾದವಳು, ನನ್ನವಳು ಚಂದ್ರಿಕಾ.❤️🧏‍♂️ ಮನವರಿತು‌ ನಡೆಯುವಳು, ಮನೆಯದನು‌…

ಅನುದಿನ‌ ಕವನ-೧೬೭೮, ಯುವ ಕವಿ:ತರುಣ್ ಎಂ ಆಂತರ್ಯ, ಟಿ. ನಾಗೇನಹಳ್ಳಿ, ಕವನದ ಶೀರ್ಷಿಕೆ: ನನ್ನ ಪ್ರೇಮಿಯಾಗಲು ಬಿಡು

ನನ್ನ ಪ್ರೇಮಿಯಾಗಲು ಬಿಡು ನನ್ನನ್ನು ಹೀಗೆ ಕೊಳೆಯಲು ಬಿಡು ಹೃದಯದಲ್ಲಿರುವ ಪ್ರೇಮ ಮಣ್ಣಲಿ ಬೆರೆತು ಮೊಳಕೆಯೊಡೆದು ಮರವಾಗಿಯಾದರು ನಿನಗೆ ನೆರಳ‌ನೀಡಬಲ್ಲೆ ನನ್ನನ್ನು ಮಳೆಯಾಗಲು ಬಿಡು ಹೆಪ್ಪುಗಟ್ಟಿದ ಮೋಡದಂತೆ ಧಾರಾಕಾರವಾಗಿ ಸುರಿದು ಬರಡಾದ ನಿನ್ನೊಲವ ಅರೆ ಕ್ಷಣದಲ್ಲಿ ತಣಿಸಬಲ್ಲೆ ನನ್ನನ್ನು ಕಡಲಾಗಲು ಬಿಡು…