Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ - Karnataka Kahale

ಪತ್ರಕರ್ತರು ಸಮಾಜಕ್ಕೆ ಮಾದರಿ -ಶಾಸಕ ನಾರಾ ಭರತ್ ರೆಡ್ಡಿ ಗೆದ್ದ ತಂಡಕ್ಕೆ 1 ಲಕ್ಷ ರೂ., ರನ್ನರ್ ಅಪ್ ಗೆ 50 ಸಾವಿರ ರೂ.ಗಳ ವೈಯಕ್ತಿಕ ಬಹುಮಾನ ಘೋಷಣೆ

ಬಳ್ಳಾರಿ, ಜೂ.27: ಪತ್ರಕರ್ತರು ಒಟ್ಟಾರೆ ಸಮಾಜಕ್ಕೆ ಮಾದರಿ ಆಗುವಂತಹವರು, ಸಾಮಾನ್ಯ ಜನ ಪತ್ರಕರ್ತರನ್ನು ಅನುಸರಿಸುವುದರಿಂದ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ವೀ.ವಿ ಸಂಘದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಕ್ರೀಡಾ ಚಟುವಟಿಕೆಯಲ್ಲೂ ತೊಡಗುವುದು ಸ್ಪೂರ್ತಿದಾಯಕ ವಿಷಯ, ನೀವೆಲ್ಲರೂ ಪಂದ್ಯಾವಳಿ ಆಯೋಜಿಸಿದ್ದು ಸಂತೋಷದ ವಿಷಯ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳ ಒಂದು ತಂಡ-ಮಾಧ್ಯಮ ಮಿತ್ರರ ಒಂದು ತಂಡ ರಚಿಸಿ ನಾವು ನೀವು ಕ್ರಿಕೆಟ್ ಆಡೋಣ ಎಂದರು.


ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 1 ಲಕ್ಷ ರೂ.ಗಳು, ರನ್ನರ್ ಅಪ್ ತಂಡಕ್ಕೆ 50 ಸಾವಿರ ರೂ.ಗಳನ್ನು ವೈಯುಕ್ತಿಕವಾಗಿ ಬಹುಮಾನ ನೀಡುವುದಾಗಿ ಘೋಷಿಸಿದ ಶಾಸಕ ನಾರಾ ಭರತ್ ರೆಡ್ಡಿ, ಕಾನಿಪ ಪತ್ರಕರ್ತರ ಶ್ರಯೋಭಿವೃದ್ಧಿ ನಿಧಿಗೆ ಮುಂಬರುವ ದಿನಗಳಲ್ಲಿ ದೇಣಿಗೆ ನೀಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ರಾಜೇಶ್ವರಿ, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ಕಾನಿಪ ಅಡಾಕ್ ಸಮಿತಿಯ ಎನ್. ವೀರಭದ್ರಗೌಡ, ಮೋಕ ಮಲ್ಲಯ್ಯ, ವೆಂಕೋಬಿ ಸಂಗನಕಲ್ಲು,  ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್ ಇದ್ದರು. ಪತ್ರಕರ್ತ ನರಸಿಂಹ ಮೂರ್ತಿ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.