ನೀನಲ್ಲವೇ ಸೂಫಿ ಕವಿದ ಕತ್ತಲ ಕುರುಡು ಹಾದಿಯಲಿ ದಾರಿ ತೋರುವ ಬೆಳಕ ಮನದ ಮೋಹಿ ನೀನಲ್ಲವೇ ಸೂಫಿ ಕೆಂಡವ ಮುಚ್ಚಿದ ಬೂದಿಯ ಸರಿಸಿ ಸತ್ಯವ ಸಾಕ್ಷಾತ್ಕರಿಸುವ ದೇಹಿ ನೀನಲ್ಲವೇ ಸೂಫಿ ಬದುಕು ಹಿಂಡುವ ನೋವನು ನಗೆಯ ಹಾಡಾಗಿಸುವ ರಾಹಿ ನೀನಲ್ಲವೇ ಸೂಫಿ…
Category: ಅನುದಿನ ಕವನ
ಅನುದಿನ ಕವನ-೧೪೯೪, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕಾಯಬೇಕು
ಕಾಯಬೇಕು ಚೊಲೊದ್ದು , ಲಗೂನ ಸಿಗಂಗಿಲ್ಲ್ಯಾಕ? ಕೆಟ್ಟದ್ದು , ಲಗೂನ ಸಿಗತೈತ್ಯಾಕ? ದೊಡ್ಡಮನಿ, ಲಗೂನ ಸಿಗಂಗಿಲ್ಲ್ಯಾಕ? ಫೂಟ್ಪಾತ್, ಲಗೂನ ಸಿಗತೈತ್ಯಾಕ? ಊಟ, ಲಗೂನ ಸಿಗಂಗಿಲ್ಲ್ಯಾಕ? ಕುರುಕಲು, ಲಗೂನ ಸಿಗತೈತ್ಯಾಕ? ಚಂದನಮೈ, ಲಗೂನ ಸಿಗಂಗಿಲ್ಲ್ಯಾಕ? ಕೆರಕೊಳಾಕ ತಿಂಡಿ, ಲಗೂನ ಸಿಗತೈತ್ಯಾಕ? ಸುಂದರಿ, ಲಗೂನ…
ಅನುದಿನಕವನ-೧೪೯೩, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಪೂರ್ಣಚಂದ್ರ ಹಾಡು ಹಾಡಿದ
ಪೂರ್ಣಚಂದ್ರ ಹಾಡು ಹಾಡಿದ ಮುಗಿಲಿನ ಬಯಲಾಗ ಕವಿದ ಕತ್ತಲು ಗಾಢ ಹೊದಿಕಿ ಹೊದಿಸಿ ಸುಮ್ಮ ನಿಂತಿತ್ತ ಕವಿದ ಕತ್ತಲ ಎದೆಯ ಸೀಳಿ ಚಂದಿರ ಬಂದಿದ್ದ ಸುತ್ತ ಮುತ್ತ ನೋಡಿದ್ದ ಕಳ್ಳ ನಗೀ ನಕ್ಕಿದ್ದ ತಿಂಗಳನ್ಬೆಳಕು ಚಿಗುರಿ ಅಲ್ಲಿ ಚೇತರಿಕಿ ತಂದಿತ್ತ ಬಾನೆತ್ತರಕ…
ಅನುದಿನ ಕವನ-೧೪೯೨, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಮೌನ
ಮೌನ ಮೌನವೊಂದು ಮೈಗೂಡಿಸಿಕೊಂಡೆ ನಾ ಮೂರ್ಖ ಜನರೆದುರು ಮಾತನಾಡಿ ಮಾತಿನ ಮೌಲ್ಯ ಕಳೆಯಬಾರದೆಂದು. ಮೌನವೊಂದು ಮೈಗೂಡಿಸಿಕೊಂಡೆ ನಾ ಭಾವನೆಗಳನು ಅರ್ಥಮಾಡಿಕೊಳ್ಳದ ಜನರೆದುರು ಮಾತಾಡಿ ಮತಿಹೀನಳೆನಿಕೊಳಬಾರದೆಂದು. ಮೌನವೊಂದು ಮೈಗೂಡಿಸಿಕೊಂಡೆ ನಾ ಮುಖವಾಡದ ಜನರೆದುರು ಸುಳ್ಳಿನ ಕಂತೆಯೊತ್ತು ನಟಿಸಲುಬಾರದೇ ನಗೆಪಾಟಲಿಗಿಡಾಗಬಾರದೆಂದು ಮೌನವೊಂದು ಮೈಗೂಡಿಸಿಕೊಂಡೆ ನಾ…
ಅನುದಿನ ಕವನ-೧೪೯೧, ಚಿತ್ರ ಮತ್ತು ಕವನ:ತಮ್ಮಣ್ಣ ಬೀಗಾರ, ಸಿದ್ದಾಪುರ, ಉತ್ತರಕನ್ನಡ, ಕವನದ ಶೀರ್ಷಿಕೆ: ಮಗುವಾಗಿ ಬಿಟ್ಟ
ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿ ಇಟ್ಟಿದ್ರಪ್ಪ ಹಾಗೆ ಹೂಗಳ ಮಾಲೆ ಎಲ್ಲ ತಂದು ತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿ ಘಮ ಘಮ ಕಡ್ಡಿಯ ಕಂಪು ಪುಟ್ಟ ಹಾಗೇ ನೋಡ್ತಾ ಇದ್ದ ಹತ್ತಿತು ಅವನಿಗೆ ಜೊಂಪು ಹಣ್ಣು ಹೂವು…
ಅನುದಿನಕವನ-೧೪೯೦, ಹಿರಿಯ ಕವಿ: ಶಿವಸುಂದರ್, ಬೆಂಗಳೂರು, ಕವನದ ಶೀರ್ಷಿಕೆ: ಗೌರಿ
ಗೌರಿ ತಮಂಧದ ಘನವು ಜಗವ ಆವರಿಸುವಾಗ ಲೋಕದುರಿಗೆ ತೆತ್ತುಕೊಂಡು.. ಬೇಯುತ್ತಾ ಬೇಯುತ್ತಾ ಬೆಳಕಾದವಳಲ್ಲವೇ ಗೌರಿ…? ಬಹಿರಂಗದ ಬೆಂಕಿಯಲ್ಲಿ ಅಂತರಂಗದ ಹಿಮಕರಗಿದಾಗ ಉಕ್ಕಿಹರಿದ ಮಮಕಾರದಲ್ಲಿ ರೂಪುಗೊಂಡ ರೂಹಲ್ಲವೇ ಗೌರಿ…? ಹೊರಗಿನ ಬಿರುಗಾಳಿಗೆ ಒಳಗಿನ ಸುಳಿಗಾಳಿಗೆ.. ಒಡಲ ಸೊಡರು ಆರದಂತೆ ದೀಕ್ಷೆತೊಟ್ಟ ದೀವಟಿಗೆಯಲ್ಲವೇ ಗೌರಿ?…
ಅನುದಿನ ಕವನ-೧೪೮೯, ಕವಯತ್ರಿ: ಎಚ್. ಎಸ್. ಮುಕ್ತಾಯಕ್ಕ, ರಾಯಚೂರು
ನನ್ನ ಜನುಮದಿನಕ್ಕೆ ನಾನು ನನಗಾಗಿ ಬರೆದ ನನ್ನ ಮನಸ್ಸಿಗೆ ಹೊಳೆದ ಕವಿತೆ ಇದು ನಿಮ್ಮ ಓದಿಗಾಗಿ -ಎಚ್.ಎಸ್. ಮುಕ್ತಾಯಕ್ಕ ಮುಂಜಾನೆ ಕವಿತೆ ನನಗೊಂದು ಕೆಂಪು ಗುಲಾಬಿಯ ಕೊಡುತ್ತ ಹೇಳಿತು, “ಇಂದು ನಿನ್ನ ಜನುಮದಿನ ನಿನಗೇನು ಬೇಕು?” “ನನಗೇನು ಬೇಕು” ನಾನು ಮೌನವಾದೆ…
ಅನುದಿನ ಕವನ-೧೪೮೮, ಕವಯಿತ್ರಿ: ಡಾ.ಭಾರತಿ ಅಶೋಕ್, ಹೊಸಪೇಟೆ
ಸದಾ ಒಳಗನ್ನೇ ಧ್ಯಾನಿಸುವ ನನಗೆ ನಿನ್ಹೊರಗನ್ನು ಕುರಿತು ಹೇಳೆಂದರೆ ಏನು ತಾನೆ ಹೇಳಿಲಿ ಹೊರಗನ್ನು ಪ್ರೀತಿಸುವವನಿಗೆ ಒಳಗೆಂದರೆ ಬಂಧನ ನನಗದೇ ಬಯಲು ಸದಾ ಬಯಲಾಗುವ ನನಗೆ ನಿನ್ನದು ಬಂಧನ ನನಗೆ ಬಯಲು ನಿನ್ನ ಬಯಲ ಬಂಧನ ನನ್ನ ಘಾಸಿಗೊಳಿಸಲು ಮತ್ತದೇ ಬಂಧನದ(ಬಯಲ)…
ಅನುದಿನ ಕವನ-೧೪೮೭, ಹಿರಿಯ ಕವಿ: ಎಂ ಎಸ್ ರುದ್ರೇಶ್ವರ ಸ್ವಾಮಿ, ಬೆಂಗಳೂರು
…where is he, her lover? is he lost ನಕ್ಷತ್ರಗಳೇ, ಬೇಹುಗಾರಿಕೆ ಮಾಡದಿರಿ ಒಂಟಿ ಹೆಣ್ಣು ನಾನು. ಅವನಿಲ್ಲದ ರಾತ್ರಿಗಳನ್ನು ನಿಮ್ಮತ್ತ ನೋಡುತ್ತ ಕಳೆಯುತ್ತೇನೆ, ಕೂಡುತ್ತ, ಕಳೆಯುತ್ತ, ಎಣಿಸುತ್ತೇನೆ. ಲೆಕ್ಕ ತಪ್ಪುತ್ತದೆ. ಗೊತ್ತು ನನಗೆ, ನನ್ನ ಹಾಗೆಯೇ ನಿಮ್ಮದೂ ಒಂಟಿ…
ಅನುದಿನ ಕವನ-೧೪೮೬, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಮಣ್ಣಿನ ಮರ್ಮ
ಮಣ್ಣಿನ ಮರ್ಮ ಮಣ್ಣ ಮಹಿಮೆಗೆ ಮಾನವ ಮಡಕೆಯ ಬಿಂದು ಆದರೂ ಹಿಸುಕುತಿದೆ ವಿಷದ ಕಲ್ಮಶ.. …