#ಹುಟ್ಟಿಗೊಂದು ಕವಿತೆ ಅಮ್ಮನಿಗೆ ಋಣಿ ಜೋಲಿ ಹಾಕಿ ಲಾಲಿ ಹಾಡಿ ನೀ ತೂಗಿ ಬಿಟ್ಟ ಕಾಯ ನಾನು ಖಾಲಿ ಇದ್ದ ಕುಂಭದಲ್ಲಿ ನೀ ತುಂಬಿಸಿಟ್ಟ ವಾಯು ನಾನು ಕಾಣದಂತೆ ಕರುಳಿನೊಳಗೆ ಗುಡಿಯ ಕಟ್ಟಿ ಇರಿಸಿದೆ ನೋಯದಂತೆ ಕಾವುಕೊಟ್ಟು ಹುಡಿಯಲಿರಿಸಿ ರಮಿಸಿದೆ ಅರಿಯದಾದೆ…
Category: ಅನುದಿನ ಕವನ
ಅನುದಿನ ಕವನ-೧೮೬೫, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಇಲ್ಲಿ ಕೇಳೆ ಇವಳೇ
ಇಲ್ಲಿ ಕೇಳೆ ಇವಳೇ ಇಲ್ಲಿ ಕೇಳೆ ಇವಳೇ ಅದೆಷ್ಟು ದಿನ ಬಯಸಿದ್ದೇನೋ ನಿನ್ನೊಡನೆ ಹೀಗೆ ಜಗವ ಮರೆತು ಬುಜಕ್ಕೆ ಭುಜ ಹಚ್ಚಿ ಕೂಡಬೇಕೆಂದು ಇಂದು ಈಡೇರಿದಂತಿದೆ ನೋಡು ಆದರೆ ಅದೆಷ್ಟು ಹೊತ್ತು ಕೂಡುವುದು ಸುಮ್ಮನೆ ಭಾವ ತೀರದ ಮೇಲೆ ಏರಿ ಇಳಿಯುತಿರುವ…
ಅನುದಿನ ಕವನ-೧೮೬೪, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಲ್ಯಾಂಡ್ ಲಾರ್ಡ್….
ಲ್ಯಾಂಡ್ ಲಾರ್ಡ್…. ಬಡವನೆದೆಯ ಬೆಂಕಿ ಜ್ವಾಲೆ ಆರದು ಉಕ್ಕಿ ಹರಿದ ನೆಲದ ಲಾವಾರಸವದು ಯಾರು ಏನೇ ಅಂದರೂ ಮುಂದೆ ನಾವು ನಡೆವೆವು ಭೂಮಿಗಾಗಿ ನಮ್ಮ ಹೋರಾಟ ನಡೆಯುತ್ತಲೇ ಇದೆ ನಮ್ಮ ಕಾದಾಟ… ಜಾತಿ ಶೋಷಣೆ ಮೇಲುಕೀಳೆಂಬ ಧೋರಣೆ ದೇವದಾಸಿ ಪದ್ದತಿ ಜಾತಿ…
ಅನುದಿನ ಕವನ-೧೮೬೩, ಕವಿ:ಸದಾಶಿವ ಸೊರಟೂರು
ಸಾಕಿಕೊಂಡಿದ್ದಾಳೆ ಮುದ್ದು ಉಗುರುಗಳನ್ನು ಅಪ್ಪ ಬಿಟ್ಟು ಹೋದ ಪುಟ್ಟ ಕನಸುಗಳಂತೆ.. ಕನಸಿಗೆ ಕನಸು ತಾಕಿದೊಡೆ ಕನಸು ಒಡೆಯುವುದಿಲ್ಲ ಜಿನುಗುತ್ತದೆ ಪುಟ್ಟ ಬದುಕೊಂದು ಎರಡು ಮಾತುಗಳ ನಡುವಿನ ಸಣ್ಣ ಮೌನದಲ್ಲಿ ತುಂಬು ಬಸ್ಸಿನಲ್ಲೂ ದಕ್ಕುವ ಒಂಟಿತನದಲ್ಲಿ ಈಕೆಗೆ ಸಿಗದೇ ಹೋದದ್ದು ಉಗುರಿನ ಮೋಹಕ…
ಅನುದಿನ ಕವನ-೧೮೬೨, ಹಿರಿಯ ಕವಿ:ಸಿದ್ದರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಬದುಕು ಅರಿಯದೆ ಸವೆಯಿತು ಗರಿಯಿರದ ಹಕ್ಕಿಯಂತೆ ಕನಸು ರಂಗಿರದೆ ಕರಗಿತು ಮಳೆಯಿರದ ಮೋಡದಂತೆ ಗಂಟಲೊಣಗಿದ ಕೆರೆಯಲ್ಲಿ ಉಸಿರೆಳೆಯುತಿದೆ ಮೀನು ಜೀವನವೆ ಕೊನೆಯಾಯಿತು ಒಲವಿರದ ಗೆಳತಿಯಂತೆ ಗಾಳಿಗೊಡ್ಡಿದ ಒಣಮರವು ಚಣಗಳನೆದುರಿಸುತಿಹುದು ಆಸೆಯೆ ಉರುಳಿಹೋಯಿತು ತಡೆಯಿರದ ಗಾಲಿಯಂತೆ ಚೂರುಗಳಾದ ಕನ್ನಡಿ ಆಯುವವರಿಲ್ಲದೆ ಅನಾಥವಾಗಿದೆ…
ಅನುದಿನ ಕವನ-೧೮೬೧, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅತ್ತು ಹಗುರಾಗಿ ಬಿಡು
ಅತ್ತು ಹಗುರಾಗಿ ಬಿಡು ಮನದ ಮುಗಿಲಲಿ ಕವಿದ ದುಗುಡದ ಹಿಮವ ಕಣ್ಣೀರಾಗಿ ಹರಿಸಿಬಿಡೇ ಗೆಳತಿ ಯಾವುದು ಹಾಲೆಂದು – ನೀರೆಂದು ತಿಳಿದುಹೋಗಲಿ ಅತ್ತು ಹಗುರಾಗಿಬಿಡು// ಸ್ನೇಹವೇ ದುಗುಡಕೆ ? ಅಮ್ಮನುಣಿಸಿದ ಎದೆ ಹಾಲಿಗಿಂತಲೇ ? ಮೈಯ್ಯಿಡಿದು ಕೈಯ್ಯಿಡಿದು ನಡೆಸಿದ ಪ್ರಸಂಗಗಳಿಂದು ಸರಿದಾಗಿದೆ…
ಅನುದಿನ ಕವನ-೧೮೬೦, ಕವಯತ್ರಿ: ಡಾ. ಭಾರತಿ ಅಶೋಕ್, ಹೊಸಪೇಟೆ
ಗಾಳಿ ಬೀಸಿದೆಡೆ ತೇಲುವ ಮೋಡಕ್ಕೆ ಜೋತು ಬಿದ್ದ ನಿನಗೆ ಗುಡುಗು ಸಿಡಿಲಾರ್ಭಟ ಇಲ್ಲದೆ ಕವಿದಲ್ಲೇ ಸುರಿವ ಕಾರ್ಮೊಡದ ನಿಶ್ಚಿತದರಿವಿಲ್ಲ ನೆನಪಿರಲಿ ಗಾಳಿ ಯಾವಾಗಲೂ ನಿನ್ನೆಡೆಗೆ ಬೀಸುವುದಿಲ್ಲ ಇಂದು ಈ ಕ್ಷಣ ನಿನ್ನೆಡೆಗೆ ಮರುಕ್ಷಣವೆ ದಿಕ್ಕು ಬದಲಿಸುವ ಚಂಚಲತೆ ಗಾಳಿಗೂ ಇದೆ ತೇಲುವ…
ಅನುದಿನ ಕವನ-೧೮೫೯, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಮತ್ತೇನಿಲ್ಲ…!
ಮತ್ತೇನಿಲ್ಲ…! ನನ್ನ ನಿನ್ನ ನಡುವೆ ಪ್ರೀತಿಯ ಹೊರತು ಮತ್ತೇನಿಲ್ಲ… ಮೋಹ ವ್ಯಾಮೋಹ ಇವುಗಳ ಹೊರತಾಗಿ ನನ್ನ ನಿನ್ನ ನಡುವೆ ಇರುವುದು ಅಚ್ಚುಕಟ್ಟಾದ ಪ್ರೀತಿಯೇ ಹೊರತು ಮತ್ತೇನಿಲ್ಲ… ಆಕಾಶದ ನೀಲಿಯಂತೆ ನನ್ನೊಳಗೆ ಅಚಲವಾಗಿ ನೆಲೆ ನಿಂತ ನಿನ್ನ ಎಂದಿಗೂ ಬಿಟ್ಟು ಕೊಡದೆ ನೀಲಿ…
ಅನುದಿನ ಕವನ-೧೮೫೮, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೆಸೆದ ತುಟಿಯಂಚು
ಬೆಸೆದ ತುಟಿಯಂಚು ಒಳಗೆ ಕುದಿತ ಅಲ್ಲೆ ತಳಮಳ ಚೆಲ್ಲದಂತೆ ಕುದಿ ಎಸರು ಉಕ್ಕಿ ಕಣ್ಣಂಚಿನುದ್ದ ಮಂಜು ತುಂಬಿ ಅರ್ಥವಾಗದ ನೋಟ ಹೊಮ್ಮಿದೆ ಚುಕ್ಕಿಗಳ ಹೊದಿಕೆಯಲಿ ಹೊರಳಿ ಇರುಳ ಗಳಿಗೆ ಭಾವಗಳರಳಿಸಿ ಬೆರಳ ತುದಿಯಲಿ ಬರೆದ ಕವಿತೆ ತಿಳಿವಿನ ಗೆರೆ ಮೀರಿ ಮಂಕಾಗಿದೆ…
ಅನುದಿನ ಕವನ-೧೮೫೭, ಕವಿ:ತನಾಶಿ, ಬೆಳಗಾವಿ
ಬುದ್ಧಿ ಮತ್ತು ಹೃದಯ ಧೋ ಎಂದು ಸುರಿವ ಮಳೆಗೆ ಹಿಡಿದ ಕೊಡೆ ಬುದ್ಧಿಯ ಬಾಲ ಹಿಡಿದ ಛತ್ರಿಗಳು ಮಳೆ ಬಂದ ಕಾಲಕ್ಕೆ ಎದೆಹಾಲ ಉಣಿಸಿದ ಹಾಗೆ ಮನದೊಳಗಿನ ಗರಿಗೆದರಿದ ಭಾವ. ಶೀತವಾದೀತು ಹೆಜ್ಜೆಯಿಡು ಎಂದ ಮತಿ ಖುಷಿ ಪಡು ಗೆಜ್ಜೆಕಟ್ಟಿದ ಹೆಜ್ಜೆನಾದಕೆ…
