ಅನುದಿನ ಕವನ-೧೮೭೪, ಕವಯತ್ರಿ: -ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ:ಗಜಲ್

ಗಜಲ್ ಭೂರಮೆ ಸೊಬಗಿಗೆ ಮಾಧವ ಸೋಲಲು ರಾಧೆಯು ಬಾಗಿದಳು ಶರದ ವೇಗದಲಿ ಧಾವಿಸಿ ಸಿಗ್ಗಲಿ ಚೆಲುವನ ಕೂಗಿದಳು ಕರಗಿ ಮುರಳಿಯ ನಾದಕೆ ಚಿತ್ತವು ಶಿರವ ತೂಗದಿಹುದೇ ಭರದಿ ಒಲವ ಕಡಲಲಿ ತೇಲುತ ತರುಣಿಯು ಸಾಗಿದಳು ಕರವ ಮುಗಿಯುತ ಭಕುತಿ ತೋರಲು ಮುರಾರಿ…

ಅನುದಿನ ಕವನ-೧೮೭೩, ಕವಯತ್ರಿ: ಡಾ. ಕೆ.ಎನ್.ಲಾವಣ್ಯ ಪ್ರಭಾ, ಮೈಸೂರು

ಆಕಾಶದಗಲಕ್ಕೂ ಹರಡಿದ ಬಿರಿಮುಡಿ ಕೇಶದೆಳೆಗಳು ನವಿರಾಗಿ ಭುಜ ನೇವರಿಸಿ ಆಪ್ತ… ಕಣಕಣಗಳಲ್ಲೂ ಸ್ಪರ್ಶಮಣಿಯ ದೇದೀಪ್ಯಮಾನ ಮಿಂಚು ! ಬಲಗೈನ ಡಮರುಗದ ಸದ್ದಿಗೆ ತೆರೆದೆದೆಯ ಪಕ್ಕದ ಹೆಣ್ತನದ ಹೃದಯದೊಳು ಢಮಢಮ ಬಡಿತ ಏರಿಳಿಯುತ್ತ ಉನ್ಮತ್ತ ಭಾವ. ಎರಡೂ ಹಣೆಗಳ ಬೆಸೆದ ಮೂರನೇ ಕಣ್ಣು…

ಅನುದಿನ ಕವನ-೧೮೭೨, ಕವಿ:ಸದಾಶಿವ ಸೊರಟೂರು, ಹೊನ್ನಾಳಿ

ಪ್ರೇಮಿಗಳ ದಿನಾಚರಣೆ ಯ ಶುಭಾಶಯಗಳು🍀🌺🍀💐 ಚಿಂತಿಸಬೇಡ ನಾನು ಅಥವ ನೀನು ಇಲ್ಲವಾದ ಮೇಲೂ ಇಲ್ಲೇ ಆಡಿಕೊಂಡಿರುತ್ತದೆ ಈ ಪ್ರೀತಿ ಕೊನೆಗೆ ನಿನ್ನದೊ ನನ್ನದೊ ಯಾತ್ರೆ ಯಾರಿಗೊತ್ತು..? ಆಗಲೂ ಬರುವುದಿಲ್ಲ ಅದು ಹೀಗೆ ಜೊತೆಗೆ ಯಾವುದೊ ಬೇರಿನಲಿ ನುಗ್ಗಿ ಹೂವಾಗುತ್ತದೆ ಯಾವುದೊ ಹನಿಯ…

ಅನುದಿನ ಕವನ-೧೮೭೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಈ ಮಾಗಿಯ ಚಳಿಯಲ್ಲಿ…!

ಈ ಮಾಗಿಯ ಚಳಿಯಲ್ಲಿ…! ನಾನು ನಿನ್ನ ನಗುವನ್ನಷ್ಟೆ ಕಾಯುವೆ ಅಳುವ ಆಗೆ ದೂರಮಾಡಿ… ತಣ್ಣನೆ ಗಾಳಿಯಾಗಿ ನೇವರಿಸಿ ಸಂತೈಸುವ ಆಸೆ ನಿನ್ನೆಲ್ಲಾ ನೋವಿಗೆ ಒಂದು ದನಿಯಾಗಿ… ಹೂವಿಗೆ ಚೆಲುವು ಬಂದಂತೆ ನಿನ್ನ ಮೊಗದ ತುಂಬಾ ಬೇಸರವಿಲ್ಲದ ಗುರುತಾಗಿ ನಿಲ್ಲುವೆ… ಈ ಮಾಗಿಯ…

ಅನುದಿನ ಕವನ-೧೮೭೦, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಕವಿಯಾಗದೆ ಉಳಿದಿದ್ದೇನೆ!

ಕವಿಯಾಗದೆ ಉಳಿದಿದ್ದೇನೆ! ಅವರು ಹೇಳುತ್ತಾರೆ ಎಲ್ಲರೂ ಮೆಚ್ಚುವ ಹಾಗೆ ಕವಿತೆ ಕಟ್ಟಬೇಕೆಂದು ಕವಿಯೇನು ಕಾಂಟ್ರಾಕ್ಟರೆ ಗೋಡೆಗಳ ಹಾಗೆ ಕವಿತೆಗಳ ಕಟ್ಟಲು? ನೆಲದಲ್ಲಿ ಅಡಗಿಸಿದ ಟೆಲಿಫೋನಿನ ವೈರುಗಳ ಜಟಿಲ ಸಂಯೋಗದಂತೆ ಸಾಲುಗಳ ಹೆಣಿಯಬೇಕಂತೆ ಸುಲಭಕ್ಕೆ ಅರ್ಥವಾಗದಂತೆ ಯಾರಿಗೂ ಅರ್ಥವಾಗದ ಕವಿತೆಗಳನ್ನು ಮತ್ತೇಕೆ ಬರೆಯುವುದು…

ಅನುದಿನ ಕವನ-೧೮೬೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೈಜತೆಯ ಪ್ರೀತಿ

ನೈಜತೆಯ ಪ್ರೀತಿ ಹುಡುಕಿದೆ ದಾರೀ ಪ್ರೀತಿಯ ಪಟಾರೆಗಳಲಿ ಆದರೂ ಆಗಾಗ ಮುನಿಸಿ ಆಚೆ ಈಚೆ ತಡಬಡಿಸಿದೆ .. ಕಾಣದ ಪ್ರೀತಿ ಗೆ ಎಷ್ಟೊಂದು ಅಹವಾಲು ಸೋಲುತ್ತಿದೆ ಗೊತ್ತಿಲ್ಲದ ನಿಜ ಪಯಣಕೆ ಕವಿತೆಯ ಪ್ರೀತಿ ಸಾಲು ಹೃದಯದ ಬಡಿತಕೆ ಮುಟ್ಟುತಿದೆ ಕಲಾಮಿನ ಇಂಕು…

ಅನುದಿನ ಕವನ-೧೮೬೮, ಪ್ರಸಿದ್ಧ ಜನ ಕವಿ: ಡಾ.ಸಿದ್ದಲಿಂಗಯ್ಯ

ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ ಆಕಾಶದ ಅಗಲಕ್ಕೂ ನಿಂತ ಆಲವೇ // ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತೆ ನೀರಿನಾಚೆ ಮೋಡದಾಚೆ ಮೊಳಗಿದಂಥ ಘೋಷವೆ// ಬಾಳಿನಲ್ಲಿ ಕಂಡು ಕೊಂಡೆ ಹೋರಾಟದ ದಾರಿಯ ಕರೆದು ಕರೆದು ತೋರಿಸಿದೆ ಮಹಾಮನೆಯ…

ಅನುದಿನ ಕವನ-೧೮೬೭, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

the cold wind blow as hard as it would, she said… ಚಂದ್ರನ ಬೆಳಿಕಿನ ಜೊತೆ ಶಾಮೀಲಾಗಿ ಥಳಥಳ ಹೊಳೆಯುತ್ತಿದ್ದ ಕಡಲ ಅಲೆಗಳಲ್ಲಿ ಪ್ರಶ್ನೆಗಳಿದ್ದವು. ಮರಳಲ್ಲಿ ಗೂಡು ಕಟ್ಟಿ ಆಟವಾಡಿ, ಸಾಕೆನಿಸಿದಾಗ ಆಟಬಿಟ್ಟು ಎದ್ದು- ಗೂಡು ಕೆಡಿಸಿ ನಡೆದ…

ಅನುದಿನ ಕವನ-೧೮೬೬, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅಮ್ಮನಿಗೆ ಋಣಿ

#ಹುಟ್ಟಿಗೊಂದು ಕವಿತೆ ಅಮ್ಮನಿಗೆ ಋಣಿ ಜೋಲಿ ಹಾಕಿ ಲಾಲಿ ಹಾಡಿ ನೀ ತೂಗಿ ಬಿಟ್ಟ ಕಾಯ ನಾನು ಖಾಲಿ ಇದ್ದ ಕುಂಭದಲ್ಲಿ ನೀ ತುಂಬಿಸಿಟ್ಟ ವಾಯು ನಾನು ಕಾಣದಂತೆ ಕರುಳಿನೊಳಗೆ ಗುಡಿಯ ಕಟ್ಟಿ ಇರಿಸಿದೆ ನೋಯದಂತೆ ಕಾವುಕೊಟ್ಟು ಹುಡಿಯಲಿರಿಸಿ ರಮಿಸಿದೆ ಅರಿಯದಾದೆ…

ಅನುದಿನ ಕವನ-೧೮೬೫, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ: ಇಲ್ಲಿ ಕೇಳೆ ಇವಳೇ

ಇಲ್ಲಿ ಕೇಳೆ ಇವಳೇ ಇಲ್ಲಿ ಕೇಳೆ ಇವಳೇ ಅದೆಷ್ಟು ದಿನ ಬಯಸಿದ್ದೇನೋ ನಿನ್ನೊಡನೆ ಹೀಗೆ ಜಗವ ಮರೆತು ಬುಜಕ್ಕೆ ಭುಜ ಹಚ್ಚಿ ಕೂಡಬೇಕೆಂದು ಇಂದು ಈಡೇರಿದಂತಿದೆ ನೋಡು ಆದರೆ ಅದೆಷ್ಟು ಹೊತ್ತು ಕೂಡುವುದು ಸುಮ್ಮನೆ ಭಾವ ತೀರದ ಮೇಲೆ ಏರಿ ಇಳಿಯುತಿರುವ…