ಅನುದಿನ ಕವನ-೧೯೦೫, ಕವಯತ್ರಿ: ಡಾ.ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು

ಬೊಗಸೆ ಹಿಡಿದಿದ್ದೇನೆ ಯುಗಾದಿ ನೀನು ಅಣಿ ಮಾಡಿರುವ ಬೇವು ಬೆಲ್ಲಕ್ಕೆ : ನೆನ್ನೆ ಇಂದಿನೊಂದಿಗೆ ಧುತ್ತೆಂದು ನಿಲ್ಲಬಹುದಾದ ನಾಳೆಗಳ ಆಳ ಇಳಿದಷ್ಟೂ ನಿಗೂಢ ದಾರಿ ತಿಳಿಯಬೇಕಿಲ್ಲ ಬಿಡು ಸೃಷ್ಟಿ ಸ್ಥಿತಿ ಲಯ ಪರಮಕಾರಣ ಅನುಸರಣ ಬೆನ್ನ ಹಿಂದಿನ ಹೆಜ್ಜೆ ತಂದು ನಿಲ್ಲಿಸಿದೆ…

ಅನುದಿನ ಕವನ-೧೯೦೪, ಕವಿ: ಶಿ.ಜು.ಪಾಶ, ಶಿವಮೊಗ್ಗ, ಕವನದ ಶೀರ್ಷಿಕೆ: ಕವಿಸಾಲು

ಕವಿಸಾಲು 1. ಹೊಗಳದಿದ್ದರೆ ಸಂತಸಗೊಳ್ಳುವುದಿಲ್ಲ ಯಾರೂ… ಸುಳ್ಳು ಹೇಳದೇ ಹೊಗಳಲಾಗುವುದಿಲ್ಲ ಯಾರಿಗೂ… 2. ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ ಇಲ್ಲಿ… ಅದುವೇ ಸಂಬಂಧಗಳ ಸುಗಂಧವೂ, ಸೌಂದರ್ಯವೂ! 3. ಶಾಂತವಿಡು ಮನಸು; ಪ್ರತಿ ಪ್ರಶ್ನೆಗೂ ಉತ್ತರ ನೀಡುವುದು ಕಾಲ! 4. ನಿನ್ನೊಳಗೇ ಮುಳುಗಿ ಹುಡುಕುತ್ತಿರುವೆ…

ಅನುದಿನ ಕವನ-೧೯೦೩, ಕವಯತ್ರಿ: ರಮ್ಯ ಕೆ ಜಿ, ಮೂರ್ನಾಡು, ಕಾವ್ಯ ಪ್ರಕಾರ: ಗಜ಼ಲ್

ಗಜ಼ಲ್ ಈ ಊರಿಗೆ ಹೆಸರೇನೆಂದು ಕೇಳಬೇಡ ಈ ದೂರಿಗೆ ಸಾಕ್ಷಿ ಬೇಕೆಂದು ಕೇಳಬೇಡ ಜಾತ್ರೆಯಲೂದಿದ ಗಾಳಿ ಬುಗ್ಗೆ ನಾನು ಹಾರುವ ದಿಕ್ಕು ಯಾವುದೆಂದು ಕೇಳಬೇಡ ಮಿಡಿಯೊಡೆದ ಮಾವು ಘಮ್ಮೆಂದಿದೆ ಗಂಧ ಹಬ್ಬಿದ ದೂರವೆಷ್ಟೆಂದು ಕೇಳಬೇಡ ಹೂ ತೂಗಿದ ಹಕ್ಕಿ ಹಾಡೇ ನೆಪವಾಯ್ತು…

ಅನುದಿನ ಕವನ-೧೯೦೨, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಈ ಯುದ್ಧಗಳ‌ ಕುರಿತು….

ಈ ಯುದ್ಧಗಳ ಕುರಿತು…. ಈ ಯುದ್ಧಗಳ ಕುರಿತು ಪದ್ಯ ಬರೆಯಲು ಆಗುವುದಿಲ್ಲ ಅಲ್ಲಿ ಸಾವಿರುತ್ತದೆ ನೋವಿರುತ್ತದೆ ಎಳೆ ಮಕ್ಕಳ ಆಕ್ರಂದನವಿರುತ್ತದೆ… ಅಲ್ಲಿ ಸತ್ತವರ ಲೆಕ್ಕ ಎಣಿಸಲಾಗುತ್ತದೆ ಮದ್ದುಗುಂಡುಗಳ ಶಬ್ಧವಿರುತ್ತದೆ ಮಕ್ಕಳು ಮರಿಗಳ ಗೋಳಾಟವಿರುತ್ತದೆ ದೊರೆಗೆ ಲಾಭದ ದುರುದ್ದೇಶವಿರುತ್ತದೆ ಈ ಯುದ್ಧಗಳೇ ಆಗೆ…

ಅನುದಿನ ಕವನ-೧೯೦೧, ಕವಿ:ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕಾವ್ಯ ಪ್ರಕಾರ: ಗಜಲ್

ಗಜಲ್ ಇರಲಿಲ್ಲಿ ಇಲ್ಲವೊಂದು ನನಗಿಲ್ಲಿ ಯಾವ ಸರಿ ಕಾರಣವು ನೀನಿರದೆ ಬಾಳಿನಲಿ ನೆಪವೊಂದು ಹುಡುಕುತಿದೆ ಮನವು ಪಂಜರ ಮುರಿದರು ಹಾರದೆ ಹಕ್ಕಿ ಇಲ್ಲಿಯೇ ಉಳಿದಿದೆ ಏಕೋ ಬಂಧನವೆ ಹಿತವಾಗಿ ನೀಲ ಬಾನಾಗಿದೆ ಈಗ ನೋವು ಏನಿಲ್ಲ, ಏನಿದೆಯೋ, ಅದಾರ ಕೇಡು ದೃಷ್ಟಿ…

ಅನುದಿನ ಕವನ-೧೯೦೦, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೆನಪುಗಳ ಒಲುಮೆ

ನೆನಪುಗಳ ಒಲುಮೆ ಅರುಚಾಟ ಕಿರುಚಾಟಕೆ ಸೆಡುವಾಗಿದೆ ಮೌನದ ನೆನಪ ಒಲುಮೆ ಇದು ಸಿರಿಯ ಸ್ವತ್ತಲ್ಲ ಇದಕೆ ತಂಗಾಳಿಯ ಹಸಿರು ನೆಲ ಕೈ ಬೀಸಿ ಕರೆಯುತ್ತಿದೆ. . ಆದರೂ ಜಾಡಿರದ ಪ್ರೀತಿ ಒಲುಮೆಗೆ ಕಬ್ಬಿಣದ ಕುಲುಮೆ ಬಗ್ಗು ಬಡಿಯುತ್ತಿದೆ ಬ್ಯಾಸರದ ಉಸಿರು ನಗೆ…

ಅನುದಿನ ಕವನ-೧೮೯೯, ಹಿರಿಯ ಕವಿ: ಗುಲ್ಜಾರ್, ಕನ್ನಡಕ್ಕೆ: ಚಿದಂಬರ ನರೇಂದ್ರ, ಬೆಂಗಳೂರು

ಕಂಡಿದ್ದೀಯ? ಮುಟ್ಟಿ ನೋಡಿದ್ದೀಯಾ ಒಮ್ಮೆಯಾದರೂ ಆತ್ಮವನ್ನ? ನಿಗಿ ನಿಗಿಸುತ್ತಿರುವ ದಟ್ಟ ಮಂಜಿನ ಬಿಳೀ ಚಾದರದೊಳಗೆ, ಉಸಿರಾಡುತ್ತಿರುವ ಒಳದನಿಗೆ ಒಮ್ಮೆಯಾದರೂ ಕಿವಿಗೊಟ್ಟಿದ್ದೀಯಾ? ರಾತ್ರಿ ದೋಣಿಯಲ್ಲೊಮ್ಮೆ ಸರೋವರದ ತೀರದಲ್ಲಿ ಡೇರೆ ಹಾಕಿದಾಗ, ನೀರಿನ ಅಲೆಗಳ ನಡುವಿನ ಗುಸುಗುಸು, ಬಿಕ್ಕುತ್ತಿರುವ ಗಾಳಿಯ ಒಳಗುದಿಯನ್ನು ಎಂದಾದರೂ ಕೇಳಿಸಿಕೊಂಡಿದ್ದೀಯಾ?…

ಅನುದಿನ ಕವನ-೧೮೯೮, ಕವಿ: ಡಾ.‌ಅಮ್ಮಸಂದ್ರ ಸುರೇಶ್, ಮೈಸೂರು

ನನ್ನ ಮನದ ಮೌನ ಮಂದಿರದಲ್ಲಿ ದಿನವೂ ದೀಪ ಬೆಳಗಲಿದೆ , ಕೋಪದ ಕತ್ತಲೆಯನ್ನು ಸೀಳಿ ಕರುಣೆಯ ಬೆಳಕು ಹರಡಲಿದೆ. ನೋವಿನ ಮಾತುಗಳು ಹೋಗಿ, ಸ್ಮೃತಿಗಳ ನೆರಳು ಮಂಕಾಗಿ, ಕ್ಷಮೆಯ ಮೃದುವಾದ ಸ್ವರದಲ್ಲಿ ಮನದ ನೋವು ಕರಗುತ್ತದೆ. ಬಂಧನದ ದ್ವೇಷದ ಸರಪಳಿ ಕ್ಷಮೆಯ…

ಅನುದಿನ ಕವನ-೧೮೯೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ದೇವರಾಗುವುದು ಸುಲಭ

ದೇವರಾಗುವುದು ಸುಲಭ ಉಳಿಪೆಟ್ಟು ತಿನ್ನುವ ಶಿಲೆಯಷ್ಟೇ ದೇವರಾಗುವುದಿಲ್ಲ, ಉಳಿಯನ್ನೂ ನಯವಾಗಿ ಸಿಹಿಮಾತುಗಳಿಂದ ಕರಗಿಸಿಬಿಡುವ ನಡೆದಾಡುವ ದೇವರುಗಳೂ ಉಂಟು ಈ ನೆಲದ ಮೇಲೆ ತಪ್ಪುಗಳನ್ನೆಲ್ಲ ಎತ್ತಿ ತೋರಿಸದಿದ್ದರೆ ದೋಷಗಳನ್ನು ಖಂಡಿಸದೆ ಅಪ್ಪಿ ಮುದ್ದಾಡಿಬಿಟ್ಟರೆ ಇದಿರಿದಿರು ಸುಖಾಸುಮ್ಮನೆ ಹಾಡಿ ಹೊಗಳಿಬಿಟ್ಟರೆ ಇಲ್ಲಿ ದೇವರಾಗುವುದು ಬಲು…

ಅನುದಿನ ಕವನ-೧೮೯೬, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಬುದ್ಧನಾಗಬೇಕಿಲ್ಲ…! ನೀನು ಬುದ್ಧನಾಗಬೇಕಿಲ್ಲ ಅವನ ಹಾದಿ ಹಿಡಿದರೆ ಸಾಕಿತ್ತು ನೀನು ಯುದ್ಧ ಬಿಟ್ಟು ಶಾಂತಿಪ್ರಿಯ ಅಶೋಕನಂತಾಗುತ್ತಿದ್ದೆ… ಯುದ್ಧವೆಂದರೆ ಅಶೋಕ ರಕ್ತದ ಕೋಡಿಯನ್ನೆ ಹರಿಸಿದ ಶೂರ ಕೊನೆಗೆ ಆ ಸಾವು-ನೋವು ಕೈ ಇಲ್ಲದ ಕಾಲಿಲ್ಲದ ಸೈನಿಕರ ಗೋಳಾಟ ಚೀರಾಟ ಸಂಕಟ ಎಲ್ಲಾವನ್ನು ಕಣ್ಣೆದುರೆ…