ಒಮ್ಮೆ ಅಪ್ಪಿಕೊಂಡು ನೋಡಿ ಯಾರನ್ನು ಎಂದು ನೀವೇ ನಿರ್ಧರಿಸಿ ಅಪ್ಪುಗೆಯ ಬಿಸುಪನ್ನು, ಸೊಗಸನ್ನು ಅನುಭವಕ್ಕೆ ತಂದುಕೊಳ್ಳಲಾದರೂ ಒಮ್ಮೆ ತಬ್ಬಿಕೊಂಡು ನಿಲ್ಲಿ ಹಗೂರವಾಗಿ, ಬಿಗಿಯಾಗಿ ಅಪ್ಪುವಾಗ ಏನಾಗುತ್ತದೆ ಹೇಳಿ ಎದುರಲ್ಲಿರುತ್ತದೆ ಒಂದು ಆಕೃತಿ ಶಿಲೆಯಂತೆ ನೀವಿರುತ್ತೀರಿ ಅಮೂರ್ತವು ಕಲೆಯ ಮೂರ್ತವಾಗಬೇಕೆಂದರೆ ಉಳಿಯ ಅಪ್ಪುಗೆಯೂ…
Category: ಅನುದಿನ ಕವನ
ಅನುದಿನ ಕವನ-೧೭೪೯, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಸಂತ….!
“ಇದು ಸಂತನಾಗುವ ಸತ್ಯ ಸಮೀಕರಣದ ಸಾತ್ವಿಕ ಕವಿತೆ. ಒಳಗಣ ಸತ್ವ, ಹೊರಗಣ ಮಹತ್ವ ಏಕೀಕರಣವಾಗುವ ತಾತ್ವಿಕ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಹರಿವಿದೆ. ಅರ್ಥೈಸಿದಷ್ಟೂ ಆಧ್ಯಾತ್ಮದ ಹರವಿದೆ. ಆತ್ಮೋನ್ನತಿಯ ಸಾರವಿದೆ. ಬೆಳಕ ನಿಯತಿಯ ವಿಸ್ತಾರವಿದೆ. ಓದಿದಷ್ಟೂ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ…
ಅನುದಿನ ಕವನ-೧೭೪೮, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ನಿನ್ನ ನೆನಪಾದಾಗ
ನಿನ್ನ ನೆನಪಾದಾಗ ನಿನ್ನ ನೆನಪಾದಾಗ ಬಿರಿಯುತ್ತದಲ್ಲ ಎದೆ ಅರಳುತ್ತದಲ್ಲ ಮುಗುಳ್ನಗು ಪಕ್ಕದಲ್ಲೇ ಹೂ ಬೀಳುವ ನಿಶಬ್ದತೆಯೂ ಉಸುರುತ್ತದೆ ನಿನ್ನ ಹೆಸರಿನ ಪುಳಕ ನಂತರ ಮಿಲನದ ನಡುಕ ಮಳೆಯ ಮೊದಲ ಹನಿ ಬೀಳುವ ಮುನ್ನದ ವಾಸನೆ ಯಾತರದು? ನೀನು ಸರಿದಾಡಿದಾಗಿನ ನೆನಪು. ಕಣ್ಣಿನ…
ಅನುದಿನ ಕವನ-೧೭೪೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಸಾಲು ಸಾಲು…
ಸಾಲು ಸಾಲು … ಪ್ರೀತಿಗೆ ಯಾವ ಜಾತಿಯೂ ಬೇಡ ಎನ್ನುವ ನಾವುಗಳೇ ಕೆಲವೊಮ್ಮೆ ನಮ್ಮ ಹೃದಯವನ್ನು ಸಂಪ್ರದಾಯಗಳ ತೀರದಲ್ಲಿ ಮುಳುಗಿಸಿ ನೀರು ಕುಡಿಸುತ್ತಿರುತ್ತೇವೆ. ಕೆಲವೊಮ್ಮೆ ಹಾಳೆಗಳಲ್ಲಿ ಬಿಡಿಸುವ ರೇಖೆಗಳನ್ನು ನಮ್ಮ ಉಸಿರಿನ ಮೇಲೆ ಎಳೆದುಕೊಂಡಿರುತ್ತೇವೆ.. ಇಂದಿಗೂ ನಮ್ಮ ಒಲವನ್ನು ಜಾತಿ- ಧರ್ಮಗಳೇ…
ಅನುದಿನ ಕವನ-೧೭೪೭, ಕವಿ:ಲೋಕಿ, ಬೆಂಗಳೂರು
ಅಪ್ಪ ಬಿಸಾಡಿದ್ದ ಅದೇಷ್ಟೋ ಹಾಳೆ ಉಂಡೆಗಳ ನಡುವೆ ಒಂದನ್ನೆತ್ತಿ ಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದ ಹಾಳೆಯ ನಡುವೆ ಕೆಲವು ಪೂರ್ಣಪದಗಳು ಕೆಲವು ಹೊಂದಾಣಿಕೆಗೆ ನಿಲುಕದ ಅಕ್ಷರಗಳು ಗೀಚಿ ಗೀಚಿ ಕಾಟು ಹಾಕಿದ ಚಿತ್ತಾದ ಸಾಲುಗಳು ಅಚ್ಚರಿ ಎಂಬಂತೆ ಅಲ್ಲಲ್ಲಿ ನೋವಿನ…
ಅನುದಿನ ಕವನ-೧೭೪೬, ಕವಿ:ತರುಣ್ ಎಂ ಆಂತರ್ಯ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ
ಅಡುಗೆ ಮನೆಯ ಬೇಲಿಯೊಳಗಿನ ಅಮ್ಮಳು ಹೂ ತುಂಬಿ.. ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ…
ಅನುದಿನ ಕವನ-೧೭೪೫, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು
ನೀ ತಿರಸ್ಕರಿಸಿ ನನ್ನೊಲವಿಗೆ ಬೆನ್ನು ಹಾಕಿದಾಗಲೇ ನಾ ಕಂಬನಿ ತುಂಬಿದ ಕಂಗಳಲ್ಲಿ ಸಿಗದ ಬದುಕಿಗೆ ಮರುಗಬಾರದೆಂದು ಹೊಸ ಜೀವನಕೆ ಭರವಸೆಯ ದೀಪ ಬೆಳಗಿಸಿಬಿಟ್ಟೆ! ನೀ ತಿರುಗಿ ನೋಡದೇ ಹೋಗಿ ಕೆಟ್ಟೆ! ನಿನ್ನ ಪ್ರೀತಿಯಿಂದ ವಂಚಿತಳಾಗಿ ನಾ ಬಿಕ್ಕಿ..ಬಿಕ್ಕಿ ಅತ್ತೆ! ಆದರೂ ಗೆಲವು…
ಅನುದಿನ ಕವನ-೧೭೪೪, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಎದೆಯಲೊಂದು ಬಾಣ ನಾಟಿದೆಯೇನೊ ನೋವನು ಆಲಿಸುವೆಯಾ ಸಾಕಿ ಚುಕ್ಕೆ ಚಂದ್ರಮರೆಲ್ಲ ಆಗಸದಿ ತೇಲಾಡುತಿಹರು ಅವರಿಗೂ ನಶೆಯೇನೋ ಜಗದ ಜಂಜಡ ಕಳೆದು ನಿಂತಿಹೆನು ಧ್ಯಾನಸ್ಥ ಮನವ ನೋಡುವೆಯಾ ಸಾಕಿ ಅದೇಕೆ ಬರಿದಾದ ಜಾಂಬುಗಳೇ…
ಅನುದಿನ ಕವನ-೧೭೪೩, ಕವಿ: ಎಮ್ಮಾರ್ಕೆ, ಕಾವ್ಯ ಪ್ರಕಾರ: ಗಜಲ್
ಗಜಲ್ ಈ ಮನುಷ್ಯನೀಗ ಮೌಲ್ಯಗಳ ಮರೆತಿದ್ದಾನೆ ಬೆಸೆಯಬೇಕಿರುವ ಬಂಧಗಳ ಮರೆತಿದ್ದಾನೆ ರೀತಿ ರಿವಾಜುಗಳು ಗಂಟುಮೂಟೆಯಲ್ಲಿವೆ ನಿಯತ್ತು,ನಿಯಮ ನೀತಿಗಳ ಮರೆತಿದ್ದಾನೆ ಸ್ವಾರ್ಥದ ತೀರ್ಥಕೆ ಒಡ್ಡುವ ಕೈ ಹೆಚ್ಚಾಗಿವೆ ದಾನವತ್ವದಿ ದಾನ ಧರ್ಮಗಳ ಮರೆತಿದ್ದಾನೆ ಕಾಯಕದಲ್ಲಿಯೇ ಕೈಲಾಸವ ಕಾಣಬೇಕಿದೆ ಗೊತ್ತಿದ್ದರೂ ಗೈದ ಕರ್ಮಗಳ ಮರೆತಿದ್ದಾನೆ…
ಅನುದಿನ ಕವನ-೧೭೪೨, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ತಿರುವು
ತಿರುವು ಯಾವ ತಿರುವಿನೊಳು ಬದುಕು ಸಾಗುತ್ತಿದೆಯೋ ಕಾಣೆ?.. ತಗ್ಗು ದಿಮ್ಮಿಗಳ ನಡುವೆ ಆಯಾಸದ ಭರವಸೆಗಳ ಭ್ರಮೆ ಯೊಳು ಅಥವಾ ರಭಸದ ಗಾಲಿಯಲಿ ತಿರುಗುತ್ತ ತನ್ನದೇ ಆದ ಚಹರೆಯಲಿ ತಿರುವು ತೇಲುತ್ತಿದೆ…. ಬದುಕಿನ ದುಸ್ಸಾರದಿ ಒಂಟಿ ದೇಹ ಅಳುಕುತ್ತ ಸುತ್ತಲೂ ಹರಡಿರುವ ಗಾಳಿ…
