ಸಾಧ್ಯವಾಗಿಸಿಕೊ ಸಾಧ್ಯವಾದರೆ… ನನ್ನನ್ನು ನಿನ್ನ ಆತ್ಮಕ್ಕೆ ಅಂಟಿಸಿಕೊಳ್ಳಲು ನಿನ್ನ ಹೃದಯ ಬಡಿತವಾಗಲು ನಿನ್ನ ನಿಟ್ಟುಸಿರ ಶಬ್ದವಾಗಲು ನಿನ್ನ ನಾಡಿಯೊಳಗಿನ ಮಿಡಿತವಾಗಲು ನಿನ್ನ ಹೊಕ್ಕುಳೊಳಗಿಂದ ಉಬ್ಬುವ ಆಲೋಚನೆಯ ಸಂತತನವಾಗಲು ಆಯಾಚಿತವಾಗಿ ಒದಗಿದೆ ಸಂದರ್ಭ ಯಾವತ್ತಿಗೂ ನೀನು ಕಾಣುವ ಅಸಹಜ ಕನಸಿನ ಸಣ್ಣ ಭಾಗವಾಗಿಸಿಕೊಳ್ಳಲು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೭೯೪, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಸಾವಿರ ಜಪಗಳ ಮಾಡಿದರೂ ಮನ ಶುದ್ಧಿಯಾದವರ ಕಾಣಲಿಲ್ಲ ಹತ್ತು ಹುದ್ದೆಗಳನೇರಿದರೂ ಜನರ ಸೇವೆ ಮಾಡಿದವರ ಕಾಣಲಿಲ್ಲ ನೂರು ಕೂವೆಗಳ ಚಿತ್ತದ ಹುತ್ತದಲಿ ಅಡಗಿಹುದು ಕರಿನಾಗರ ವ್ರತ ನೇಮಗಳನು ಮಾಡಿಯೂ ಸರಳ ನಡೆಯವರ ಕಾಣಲಿಲ್ಲ ಹಗಲಿರುಳುಗಳ ಜೋಕಾಲಿಯಲಿ ಜೀಕಿ ಮರೆತು ಬೆಳೆದಿಹರು…
ಅನುದಿನ ಕವನ-೧೭೯೩, ಕವಯತ್ರಿ: ಭುವನಾ ಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ: ಒಂದು ಮಧ್ಯಂತರ
ಒಂದು ಮಧ್ಯಂತರ ಬಿಟ್ಟು ಹೋದೆ ನೀನು ನಡುದಾರಿಯಲಿ ಪೋಣಿಸುತ್ತಿರುವಾಗ ನಾನು ಕೊನೆಯ ಮುತ್ತನು ನುಂಗಿ ಹಾಕಿತು ಮಾತು ಕೊನೆಯ ಮೌನವನು ನಟ್ಟಿರುಳ ಕತ್ತಲೆ ಸ್ಫೋಟಿಸುತ್ತಿತ್ತು ಕಟ್ಟಕಡೆಯ ನಕ್ಷತ್ರವೂ ಸುಟ್ಟು ಕರಕಲಾಗುತಿತ್ತು ಬರಿದಾಗುತ್ತಿರೋ ಕಡಲ ಕೊನೆಯ ಹನಿಗಳಲಿ ಕಡಲ ತೀರ ಉಸಿರಾಡುತಿತ್ತು ಬರಡು…
ಅನುದಿನ ಕವನ-೧೭೯೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ನಮ್ಮ ಸಂವಿಧಾನ ನಮ್ಮ ಹೆಮ್ಮೆ
ನಮ್ಮ ಸಂವಿಧಾನ ನಮ್ಮ ಹೆಮ್ಮೆ ಭಾತೃತ್ವದ ಬೆಸುಗೆ ನಮ್ಮ ಸಂವಿಧಾನ ಪ್ರಜೆಗಳಿಗೆ ಪರಮಾಧಿಕಾರ ಪ್ರಧಾನ ಸರ್ವರಿಗೂ ಸಮಬಾಳು ಎಂಬ ಧ್ಯೇಯ ಸಾರುತಿವೆ ವಿಧಿ ವಿಧಾನಗಳ ಅಧ್ಯಾಯ ನಮ್ಮಭಾಷೆ ಬೇರೆ ಬೇರೆ ಭಾವ ಒಂದೆ ಮಾಡುವ ಕರ್ಮ ಬೇರೆ ಧರ್ಮ ಒಂದೆ ರಾಜ್ಯಗಳು…
ಅನುದಿನ ಕವನ-೧೭೯೦, ಕವಿ: ಹಂದಿಕುಂಟೆ ನಾಗರಾಜ, ಸಿರಾ, ಕವನದ ಶೀರ್ಷಿಕೆ: ದಯವಿಟ್ಟು ಕ್ಷಮಿಸಿ
ದಯವಿಟ್ಟು ಕ್ಷಮಿಸಿ ಈಗ.. ವಿಳಾಸ ಬದಲಾಗಿದೆ, ಈ ಮೊದಲಿನಂತೆ ನೀವು ಅಲ್ಲಿ ಹುಡುಕಬೇಡಿ ನನ್ನನ್ನು ಬೇಕಂತಲೇ ಬದಲಾಯಿಸಿದ್ದಲ್ಲ, ಬದಲಾವಣೆ ಜಗದ ನಿಯಮ ಅಂತಾ ನೀವೇ ಹೇಳ್ತಿದ್ರಿ ತಾನೆ..! ಕಾಲದ ಕೈಯಲ್ಲಿನ ಗಡಿಯಾರ ನಡೆದಂತೆ, ನಾವೂ ಕೂಡಾ… ನಮ್ಮ ದಾರಿ ಕೆಲವೊಮ್ಮೆ ನಾವೇ…
ಅನುದಿನ ಕವನ-೧೭೮೯, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಒಲವಿನ ಬಾಣದ ಮೊನೆಯು ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ ಸುರಿಸೆಂದು ಹಿಂಬದಿಯ ನೆರಳೂ ಭೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ ಚೈತ್ರದ…
ಅನುದಿನ ಕವನ-೧೭೮೮, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನಾನು..ನೀನು
ನಾನು..ನೀನು ಭಾವನೆಗಳಿಗೆಲ್ಲಾ ಬಣ್ಣದ ನೀರು ಬೆರೆಸಿ ನಿನ್ನೆಡೆಗೆ ಹಾಗೇ ನದಿಯಾಗಿ ಹರಿಯಬಲ್ಲೆ ಸುಮ್ಮನೆ ನಾನು… ಅದೇ ನದಿಯ ನಡುವೆ, ಹರಿವ ನೀರಿನ ಪರಿವೆಯೇ ಇಲ್ಲದೆ ದಡಕ್ಕೆ ಮುಖ ಮಾಡಿ ನಿಂತ ಅಣೆಕಟ್ಟು ನೀನು .. ಮಾತುಗಳ ಬಸಿದು, ಎಲ್ಲಾ ತಲುಪಿಸಿ ಬರಿದಾಗಿಬಿಡಬಲ್ಲೆ…
ಅನುದಿನ ಕವನ-೧೭೮೭, ಕವಯತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಆಘಾತ
ಆಘಾತ ಆಚೆ ಈಚೆ ಗುಂಪು ಸ್ಥoಭಗಳು ಒದ್ದಾಡುತ್ತಿವೆ ನಿಲ್ಲದೇ ಬಿದ್ದ ಬಡ ಕಾರ್ಯದ ಕೈಗಳೆತ್ತಲು.. ಇದರ ಕುತಂತ್ರಕ್ಕೆ ಕಣ್ಣಿದ್ದು ಕುರುಡಾಗಿ ಸುಮ್ಮನೆ ಕಿವಿಗಳು ಆಶ್ವಾಶನೆಯ ಬೇರೊಳು ಸಿಕ್ಕಿ ಅನ್ನ್ಯಾಯದ ಛಾಯ ಚಿತ್ರಕ್ಕೆ ಮಲಗಿದ್ದ ದಿಂಬು ಹಾಸಿಗೆ ನಿಟ್ಟುಸಿರು ಬಿಡುತ್ತಿದೆ…. ಭವ್ಯ ಭರತ…
ಅನುದಿನ ಕವನ-೧೭೮೬, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಮರೀಚಿಕೆ
“ಇದು ನಿತ್ಯ ಹಾಲಾಹಲ ನುಂಗಿಯೂ ಹಸನ್ಮುಖಿಯಾಗಿ ನಿಂತವರ ಕವಿತೆ. ಬೆಂಕಿಯುಂಡು ಶೀತಲ ಕಿರಣಗಳ ಚೆಲ್ಲಿ ನಗುವವರ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬಾಳಯುದ್ದದ ಸಾರವೇ ಅಡಗಿದೆ. ಅರ್ಥೈಸಿದಷ್ಟೂ ಸಾವಿರದ ಸಾವಿರ ಸಾವಿರ ಸತ್ಯ ಸತ್ವ ತತ್ವಗಳ ವಿಸ್ತಾರವೇ ಇದೆ. ಓದಿ…
