ಅನುದಿನ ಕವನ-೧೭೦೬, ಹಿರಿಯ ಕವಿ: ಮುನಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅವನು!?

ಅವನು.??! ಅವನು ಹಾಗೇನೆ ಪ್ರೀತಿ ವಿಶ್ವಾಸದ ಪ್ರತಿರೂಪ ಸ್ವಲ್ಪ ಮುಂಗೋಪಿ ಮನಸು ಹೂವಿನಂತೆ ಮೃದು ಮಾತು ಕಡಿಮೆ ತಾನಾಯಿತು ತನ್ನಷ್ಟಕ್ಕೆ ಮುನಿದು ಕ್ಷಣದಲ್ಲಿ ಕರಗುತ್ತಾನೆ ಪ್ರಪಂಚಕ್ಕೆ ಕಾಣದಂತೆ ಏಕಾಂತದಿ ಅವನು ಅಳುತ್ತಾನೆ ಕಣ್ಣೀರ ಹನಿ ಹರಿದು ಎಳೆಬಿಸಿಲು ಹೊನ್ನಕಿರಣ ಹಸಿರು ನಗುವಂತೆ…

ಅನುದಿನ ಕವನ-೧೭೦೫, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ನಿಸ್ವಾರ್ಥಿ ನನ್ನ ಮನಸು

ನಿಸ್ವಾರ್ಥಿ ನನ್ನ ಮನಸು ಗೊತ್ತೇ ಆಗದೆ ಮತ್ತೆ ಮತ್ತೆ ಕಣ್ತುಂಬಿ ತುಟಿಯಲಿ ಡೊಂಕು ಮೊಗದಿ ಪ್ರಶ್ನೆ ಸೋತು ಸುಮ್ಮನೆ ಒರಗಿ ಮೆಲ್ಲಗೆ ಬಾಗಿ ಒಳಗಿಣುಕಿದರೆ ಎದೆ ತುಂಬಿದ ಗಾಬರಿ ಅದೇನು ಅಸ್ತವ್ಯಸ್ತ ವಿಲಕ್ಷಣ ಆವರಣ ಆ ಮೂಲೇಲಿ ಮುಖ ಬಿಗಿದ ಮನಸು…

ಅನುದಿನ ಕವನ-೧೭೦೪, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ವಿಸ್ಮಯ ವೃತ್ತಾಂತ….!

“ಇದು ನಮ್ಮ ನಿಮ್ಮದೇ ಜೀವ-ಜೀವನದ ವಿಚಿತ್ರ ತಲ್ಲಣಗಳ ಕವಿತೆ. ಎಂದೆಂದಿಗೂ ಅರ್ಥವೇ ಆಗದ ವಿಸ್ಮಯ ಸಂವೇದನೆಗಳ ನಿತ್ಯ ಸತ್ಯ ಭಾವಗೀತೆ. ಇದು ನಮ್ಮೆಲ್ಲರ ಅನುದಿನದ ಲೋಕಾನುಭವವೂ ಹೌದು. ಅನುಕ್ಷಣದ ಸ್ವಾನುಭವವೂ ಹೌದು. ಇದು ಯುಗಯುಗದಿಂದ ಬದಲಾಗದ ಜಗದ ಮನಸ್ಥಿತಿಯೂ ಹೌದು. ಹೀಗೇಕೆಂದು…

ಅನುದಿನ ಕವನ-೧೭೦೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ಉರಿದ ಕುಲುಮೆ

ಉರಿದ ಕುಲುಮೆ ತಿರುಗಾಡುತ್ತಿದೆ ಭವ್ಯ ಭೂಮಿಯಲಿ ಅತಂತ್ರದ ಕುಲುಮೆ ಸ್ವಚ್ಛ ಝಳಕೆ ಸುತ್ತುತಿದೆ ಆದರೂ ಕೊನೆಯರಿಯದ ನಿಲುವು ಬರಿಗಾಲಿನ ಬೆಂಕಿಯೊಳು ನಡೆಯುತ್ತಿದೆ ಬಿಟ್ಟಿರುವ ಭುವ ಭಿಕ್ಷೆಗೆ ಎಲ್ಲಿಲ್ಲದ ಹಗರಣದ ಹಾರಾಟ ಬಿಸಿಲು ಕುದುರೆಯ ಮಾಧುರ್ಯಕೆ ಎಡರಿಲ್ಲದೆ ಕನಸ ಕಮರಿಕೆ…. ಬಾಳ ಬುತ್ತಿಗೆ…

ಅನುದಿನ ಕವನ-೧೭೦೨, ಕವಿ: ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ನಾನು ಮಲ್ಲಿಗೆ

ನಾನು ಮಲ್ಲಿಗೆ ಮನೆಯ ಹಿತ್ತಲಲ್ಲಿ ಹೂತು ಹಾಕುತ್ತಾರೆ ಬೆಂಬಲಕ್ಕೆ ಗೂಟ ಜಡಿದು ಬೆಳೆಯಲು ಬಿಡುತ್ತಾರೆ ಬೆಳೆದರೆ ಕತ್ತರಿಸುತ್ತಾರೆ ಕತ್ತರಿಸಿ ಮತ್ತೆ ಬೆಳೆಯಲು ಬಿಡುತ್ತಾರೆ ಮೈಯಲ್ಲ ಮೊಗ್ಗಾಗಲಿ ಎನ್ನುತ್ತಾರೆ ಅರಳಿ ಉದುರಿದರೆ ಕಸವೆಂದು ಮುಖ ಸಿಡಿಸಿಕೊಳ್ಳುತ್ತಾರೆ ಒಮ್ಮೊಮ್ಮೆ ಅರಳುವ ಮೊದಲೆ ಕಿತ್ತು ಕುತ್ತಿಗೆಗೆ…

ಅನುದಿನ ಕವನ-೧೭೦೧, ಕವಿ: ಮೇದರದೊಡ್ಡಿ ಹನುಮಂತ, ಕನಕಪುರ, ಕವನದ ಶೀರ್ಷಿಕೆ:ನಿಸರ್ಗದ ಗುಟುಕ ಚಹಾ!

ನಿಸರ್ಗದ ಗುಟುಕ ಚಹಾ! ಗಡಿಗಳಿಲ್ಲದ ಬಟಾ ಬಯಲು ಕಾಡಂಚಿನ ಹೊಲದ ಬಳಿ ಸೌದೆ ಪಿಳ್ಳೆಗಳ ಆಯ್ದು ಹಸುವಿನಲಿ ಹಾಲು ಕರೆದು ಬೆಂಕಿ ಹೊತ್ತಿಸಿ ಹದವಾಗಿ ಟೀ ಕಾಯಿಸಿ ಗುಟುಕು ಹೀರುವುದೆಂದರೆ ವಾರೆವ್ಹಾ! ರೋಮಾಂಚನ! ಗ್ಯಾಸ್ ಸ್ಟೌ ಯಾಂತ್ರಿಕತೆಗೆ ಒಗ್ಗಿಕೊಂಡ ದೇಹ ಮನಸು…

ಅನುದಿನ ಕವನ-೧೭೦೦, ರಾಷ್ಟ್ರಕವಿ ಡಾ.‌ಜಿ. ಎಸ್. ಶಿವರುದ್ರಪ್ಪ, ಕವನದ ಶೀರ್ಷಿಕೆ: ಹಣತೆ

ಹಣತೆ ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ ಇಂತೆ ಬೆಳಗುವುದಲ್ತೆ ಅಜ್ಞಾತವಾಸದಲಿ ದೀನವಾಗಿ. ಅಲ್ಲಿ ಸೌಧಗಳಲ್ಲಿ ಬೀದಿ ಸಾಲುಗಳಲ್ಲಿ ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ. ಧ್ಯಾನಗಾಂಭೀರ್ಯದಲಿ ಮತ್ತೆ ಸರಳತೆಯಲ್ಲಿ ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?…

ಅನುದಿನ ಕವನ-೧೬೯೯, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಪ್ಪ ಅಂದರೆ ಅಪ್ಪ ಅಷ್ಟೆ

ಅಪ್ಪ ಅಂದರೆ ಅಪ್ಪ ಅಷ್ಟೆ ಹೊಡೆದು ಹೊಡೆದೂ ಮಗ್ಗಿ ಕಲಿಸಿದ ಅಕ್ಷರದ ದಾರಿ ತೋರಲು ಶಾಲೆಗೆ ಕಳಿಸಿದ ತನ್ನೆಲ್ಲ ಕಷ್ಟಗಳ ನುಂಗಿ ಸುಖವನ್ನಷ್ಟೇ ಉಣಿಸಿದ ಆಲದ ಮರದಂತೆ ವಿಶಾಲವಾಗಿ ಹರಡಿ ತನ್ನ ಕುಡಿಯೆಂದು ಬೀಗಿದ ಆಗಸದ ಚುಕ್ಕೆಗಳನ್ನೆಣಿಸಲು ಕಲಿಸುತ್ತಲೇ ನೆಲದ ನಡಿಗೆಯ…

ಅನುದಿನ ಕವನ-೧೬೯೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಕ್ಷಮಿಸಿ ನಮ್ಮದು ಒಂದೇ ಬೇಡಿಕೆ

ಕ್ಷಮಿಸಿ ನಮ್ಮದು ಒಂದೇ ಬೇಡಿಕೆ ಕೇರಿಯೊಂದರ ನಡುವಿನ ಮರದಲ್ಲಿ ಎಂದಿಗೂ ಸೂರ್ಯನ ಬೆಳಕು ಕಾಣದ ಸಮಾನವಿಲ್ಲದ ಸಾವಿರಾರು ಎಲೆಗಳು, ಕತ್ತಲಲ್ಲೇ ಅವಿತು ಕೂತ ಕೊಂಬೆಗಳು, ಎಲ್ಲದರ ಅನುದಿನದ ಕೋರಿಕೆ ಒಂದೇ- ಬೆಳಕಿನೊಳಗೊಂದು ಸಮ ಬೆಳಕು ಮಾತ್ರ! ಬಾಡಿದ ಎಲೆಗಳಿಗೋ ನೆಲಕಚ್ಚುವ ಮುನ್ನ,…

ಅನುದಿನ ಕವನ-೧೬೯೭, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ. ಶಿವಮೊಗ್ಗ, ಕವನದ ಶೀರ್ಷಿಕೆ:ಸೈನಿಕನಾದರೂ….

ಸೈನಿಕನಾದರೂ…. ಅವನು ಅವಳ ಅಪ್ಪ ಅವನು ಅವಳ ಮಗ ಅವನು ಅವರ ಸೋದರ ಅವನು ಅವಳ ಗಂಡ ಅವನು ಅವಳ ಪ್ರೇಮಿ ಅವನು ಅವರ ಗೆಳೆಯ ಅವನು ಮಾವ ಭಾವ ಅವನಾದರೂ ಹೊಡೆದಾಡಿ ಯಾಕೆ ಸಾಯಬೇಕು? ಈ ಭೂಮಿ ನೀನು ಬೆವರು…