ಅನುದಿನ ಕವನ-೧೬೯೬, ಕವಿ: ಬಸೂ, ಧಾರವಾಡ, ಕವನದ ಶೀರ್ಷಿಕೆ: ಸಮಯ

ಸಮಯ ಕೊನೆಗೂ ಗೆಳೆತನವ ಸಾಧಿಸಿದೆ ಮತ್ತು ಪ್ರೀತಿಸಿದೆ ನಾನು ಬರೆಯದಿರುವ ಕವನಗಳ ಜತೆಗೆ ನನ್ನ ಹತ್ತಿರಕೆ ಬರದ ಕನಸುಗಳ ಜತೆಗೆ ನನ್ನೊಳಗಿನ ಖಾಲಿ ಜಾಗಗಳ ಜತೆಗೆ ಮುನ್ಸೂಚನೆ ಕೊಡದೆ ಬದಲಾಗುವ ಮನ್ಸೂನಗಳ ಜತೆಗೆ ಮತ್ತು ಬದುಕನ್ನು ಪ್ರೀತಿಸಿದರೂ ಬೆಳೆವ ಏಕಾಂತಗಳ ಜತೆಗೆ…

ಅನುದಿನ‌ ಕವನ-೧೬೯೫, ತೆಲುಗು ಮೂಲ : ಮಹಾಕವಿ ಶ್ರೀ ಶ್ರೀ, ಕನ್ನಡಕ್ಕೆ : ಡಾ.ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಪಯಣಿಗ

ಪಯಣಿಗ ಕೂಳಿಗಾಗಿ,ಕೂಲಿಗಾಗಿ ನಗರದೊಳಗೇ… ಬದುಕಬೇಕೆಂದ ತಾಯಿ ಮಾತ ಕೇಳಲಾರದೆ ಹೊರಟು ಹೋದ ಪಯಣಿಗನ ಮೂರು ದಿನಗಳು ! ದಿಕ್ಕು ತಿಳಿಯದ ಸಮುದ್ರದ ನಡು ನೌಕೆಯ ಹಾಗೆ ಸಂಚರಿಸುತ್ತ,ಸಂಚಲಿಸುತ್ತ ಆತಂಕ ಪಡುತ್ತ, ದೀನನಾಗುತ್ತ ಅಲೆಯುತಿದ್ದರೆ- ಕಠಿಣ,ಕಠಿಣ,ತೀವ್ರ ತೀವ್ರಗಳ ಜ್ವರ ದಹಿಸಿ, ಭಯವೇರಿ ಪ್ರಲಾಪಿಸಿ…

ಅನುದಿನ ಕವನ-೧೬೯೪, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಅತೀತ‌ ಆಂತರ್ಯ

ಅತೀತ‌ ಆಂತರ್ಯ ಪ್ರೀತಿ… ದೇಹಾತೀತ ಎಂದು ಭಾವಿಸಿದ್ದೆ!! ನಿನ್ನ ಕೈಬೆರಳು ಸೋಕಲು ಚಡಪಡಿಸುವ ಈ ಕಾಯವ ಕಂಡು ದಿಗ್ಭ್ರಾಂತಳಾದೆ! ಪ್ರೀತಿ.. ನಿರಾಕರಣವೆಂದು ಭಾವಿಸಿದ್ದೆ! ನಿನ್ನ ಸಾಮಿಪ್ಯದಿ ಪುಟಿದೇಳುವ ಕಾಮನೆಗಳು ಅರಿವಿಗೆ ಬಂದು ಬೆಪ್ಪಳಾದೆ!! ಪ್ರೀತಿ… ಕಾಲವನ್ನು ಮೀರಿದ್ದು ಎಂದು ಭಾವಿಸಿದ್ದೆ! ನಿನ್ನ…

ಅನುದಿನ ಕವನ-೧೬೯೩, ಕವಿ: ವೈ.ಜಿ. ಅಶೋಕ‌ಕುಮಾರ್, ಬೆಂಗಳೂರು, ಕವನದ ಶೀರ್ಷಿಕೆ:ಹೂವಿಲ್ಲದ ಹಾಸಿಗೆ

ಹೂವಿಲ್ಲದ ಹಾಸಿಗೆ ಮೈ ತುಂಬಲು ಒಡವೆಯಿದೆ ಮನೆಯೊಡತಿ ಮನೆಯೊಳಿಲ್ಲ… ಅವನೋ ಬರಿ ಮೈ ದಾಸ ದಾಸವಾಳ ಗಿಡದಂತೆ ಮಡದಿ ಮನೆ ತುಂಬಾ ಹೂಗಳು… ಮಲ್ಲಿಗೆ ಸಂಪಿಗೆಯರು ಊರ ತುಂಬ ಘಮಲು ಕಿತ್ತು ಮುಡಿಯುವವರಿಗೆ ಬರವಿಲ್ಲ ಮೈದುಂಬಿವೆ ಕಾವೇರಿ ಹೇಮಾವತಿ ಕಪಿಲೆಯರು ಕೇಳುವವರು…

ಅನುದಿನ‌ ಕವನ-೧೬೯೨, ಕವಿ: ಎ.ಎನ್.‌ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಕವಿತೆಯೆಂದರೆ…

“ಇದು ಕವಿತೆಯ ಮೇಲೊಂದು ಮಧು ಮಧುರ ಕವಿತೆ. ಕಾವ್ಯದ ಭಾವಭಾಷ್ಯಗಳ ಬೆಳಕಾಗಿಸುವ ಅಕ್ಷರ ಪ್ರಣತೆ. ಕವಿತೆಯ ಈ ಸಾಲುಗಳು ನನ್ನದಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಸ್ವಾನುಭವ, ಲೋಕಾನುಭವ, ರಸಾನುಭಾವಗಳ ಚಿರ ಚಿರಂತನ ಜೀವದೊರತೆಯೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. ಕವಿತೆಯೆಂದರೆ……

ಅನುದಿನ ಕವನ-೧೬೯೧, ಕವಯಿತ್ರಿ: ✍️ ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಕಾವ್ಯ ಪ್ರಕಾರ: ತನಗಗಳು

ತನಗಗಳು ಅಳೆಯಲಾಗದೆಂದೂ ಶರಧಿ ಒಡಲನು ಹಿಡಿಯಲು ಆಗದು ಮುಗಿಲಿನ ಬಿಲ್ಲನು ಬಾನ ತಾರೆಗಳಲಿ ಚಿತ್ತಾರದ ಸೊಬಗು ಕಂಗಳ ಬಿಂಬದಲಿ ಸೆಳೆವುದು ಹೊಳಪು ಅನುರಾಗ ಮೂಡಲು ಜಗದ ಭಯವಿಲ್ಲ ಕಡಿವಾಣ ಹಾಕಲು ಮನಸು ಒಪ್ಪದಲ್ಲ ನುಡಿಯಲಿ ಮೆರುಗು ತೊರೆವುದು ಮಸುಕು ನೀಗುವುದು ಕೊರಗು…

ಅನುದಿನ ಕವನ-೧೬೯೦, ಕವಯತ್ರಿ: ಮಮತಾ ಅರಸೀಕೆರೆ

ಒಲುಮೆಯೊಂದು ಬಳಿ ಬರಲು ಕಾಯುತಿದೆ ಆಸೆ ಹಲವು ಮನಕೆ ನಲುಮೆಯೊಂದು ಬಳಸು ದಾರಿಯಲಿ ನಿಂತಿದೆ ಏನು ಹೇಳಲಿ ಅದಕೆ ಸುಪ್ತ ಬಯಕೆ ಗರಿಗೆದರಿ ಧಾವಿಸಿದೆ ನವಿರಾಗಿ ಸವರಲೆಂದೆ ತನುವ ತಪ್ತ ಸಾಗರ ದಾಟಿ ಹಾಯ್ದಿದೆ ಕನಸು ಹಿಡಿಯಲೆಂದೆ ಕರವ ನೆಲವ ತಾಕದೆ…

ಅನುದಿನ ಕವನ-೧೬೮೯, ಕವಿ: ಎಎಂಪಿ‌ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಭಾರತ ಸ್ವಾತಂತ್ರ್ಯ

ಭಾರತ ಸ್ವಾತಂತ್ರ್ಯ ಫಿರಂಗಿ ಗುಂಡಿನ ಗುಡುಗಲ್ಲ ಖಡ್ಗದಿ ಚಿಮ್ಮಿದ ರಕ್ತವೃಷ್ಟಿಯಲ್ಲ ಸತ್ಯಾಗ್ರಹದ ಶಾಂತಿ ಮಂತ್ರದಿ ಪಲ್ಲವಿಸಿತೀ ಸ್ವಾತಂತ್ರ್ಯಪುಷ್ಪ ಗಾಂಧಿಯ ಚರಕದಿ ಹೊಮ್ಮಿತು ಒಗ್ಗಟ್ಟಿನ ಖಾದಿ ಆಂಗ್ಲರ ದುರಾಡಳಿತದ ಅಂತ್ಯಕೆ ಹಾಡಿತು ನಾಂದಿ ಭಾರತೀಯರ ಸ್ವದೇಶಿ ಮಂತ್ರಕೆ ಬಿರುಕಾಯಿತು ಆಂಗ್ಲರ ಕೋಟೆ ಮ್ಯಾಂಚೆಸ್ಟರ್‌…

ಅನುದಿನ ಕವನ-೧೬೮೮, ಯುವ ಕವಿ:✍️ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ,  ಚಿತ್ರದುರ್ಗ, ಕವನದ ಶೀರ್ಷಿಕೆ:ಇಲ್ಲಿ ಕೇಳು ಗೆಳೆಯ..

ಇಲ್ಲಿ ಕೇಳು ಗೆಳೆಯ.. ಜೋರುಮಳೆಯಾಗಿ ನೀನು ಒಮ್ಮೆಲೆ ಅಬ್ಬರಿಸಿ ತಣ್ಣಗಾಗ ಬೇಡ ಜಿಟಿ ಜಿಟಿ ಹನಿಯಂತೆ ಸುರಿದು ತೇವ ಕಾಯುವ ಜಡಿಯಂತಾಗು ಮೊದಲು ಮುತ್ತಿಡುತ್ತಲೆ ಮುಂದುವರೆಯ ಬೇಕು ಮೈಯೆಲ್ಲಾ ಹಣ್ಣಾಗಿ ಮೆತ್ತಗಾಗುವ ಮೊದಲು ಈಗತಾನೆ ಮಾಗಿದ ತುಟಿಗಳ ರುಚಿಸವಿಯಬೇಕು ಕತ್ತಲ ಕೋಣೆಗೆ…

ಅನುದಿನ‌ಕವನ-೧೬೮೭, ಕವಯತ್ರಿ: ರಂಹೊ, ತುಮಕೂರು, ಚಿತ್ರ ಕೃಪೆ: ಸಂಘಮಿತ್ರೆ

ನನಗೆ ಗೊತ್ತು ನೀವೆಲ್ಲ ನನ್ನನ್ನು ದುರ್ಬೀನು ಹಾಕಿಕೊಂಡು ಹುಡುಕುತ್ತೀರಿ! ಸಂಪುಟ-ಸ್ಮಾರಕ ಮಂದಿರ-ಮಸೀದಿ ಗಲ್ಲಿ-ಗಟಾರ ಗುಡಿಸಲು-ಮಹಲುಗಳಲ್ಲಿ! ಸೂರ್ಯ ಚಂದ್ರ ಚುಕ್ಕಿಗಳ ವಿಸ್ಮಯಗಳಲ್ಲಿ ಈ ನೆಲದ ಬೇರಿನ ನೀರವ ಮೌನಗಳಲ್ಲಿ ಚಿಗುರು ಹೂ ಹಣ್ಣುಗಳ ಸಂಭ್ರಮದಲ್ಲಿ… ತಪ್ಪದೇ ಕೆದಕುತ್ತಿರಿ ಹೆದ್ದಾರಿ ಬದಿಯ ಹುಡುಗಿಯರ ಕನವರಿಕೆಗಳಲ್ಲಿ…