ಅನುದಿನ ಕವನ-೧೫೬೩, ಕವಿ: ಸಿದ್ಧರಾಮ‌ಕೂಡ್ಲಿಗಿ, ಕವನದ ಶೀರ್ಷಿಕೆ: ನಾನು ಬರೆಯುತ್ತೇನೆ

ನಾನು ಬರೆಯುತ್ತೇನೆ ನಾನು ಬರೆಯುತ್ತೇನೆ ಯಾರನ್ನೂ ಮೆಚ್ಚಿಸಲಲ್ಲ ಹೊಗಳಿಸಿಕೊಳ್ಳಲೂ ಅಲ್ಲ ಉಪದೇಶಕ್ಕಾಗಿ ಖಂಡಿತ ಅಲ್ಲ ಕೇವಲ – ಹೃದಯದ ಮಿಡಿತವನ್ನು ಅಕ್ಷರಗಳನ್ನಾಗಿಸುವುದಕ್ಕಾಗಿ ಮತ್ತು ಆಗಾಗ ಸಾಯುವ ಬದುಕನ್ನು ಮತ್ತೆ ಬದುಕಿಸುವುದಕ್ಕಾಗಿ ನಾನು ಬರೆಯುತ್ತೇನೆ ನನ್ನೊಳಗೆ ಅರಳಿದ ಹೂಗಳು ಮತ್ತೊಬ್ಬರ ಮನಗಳಲ್ಲೂ ಅರಳಲೆಂದು…

ಅನುದಿನ ಕವನ-೧೫೬೨, ಕವಿ:ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು

ಒಂಟಿತನವಿಲ್ಲಿ ಮುಗಿಯುವುದಿಲ್ಲ ನಿರೀಕ್ಷೆಗಳು ಹೆಗಲು ಹೇರಿದ ಚೀಲ ಆಸರೆಗಳು ತಾತ್ಕಾಲಿಕ ಖಾಯಂ ಊರುಗೋಲಿಗಿಲ್ಲಿ ನಾಳೆಗಳು ಭಿಕ್ಷೆ ಬೇಡಿಸುತ್ತವೆ ದಿನವು ಎಡವುತ್ತಿರುವ ಕಾಲಿಗಿಲ್ಲಿ ರಕುತದ ಹರಿವು ಸಹ ಜಡ ತಿಳಿವೊಲ್ಲದು ಚಿಕಿತ್ಸಕದ ರೂಪ ಕೀವು ಕಟ್ಟಿದ ಆಳದ ಗಾಯಗಳಿಗೆ ದೂಡುತ್ತಿರುವ ಗಳಿಗೆಗಳು ನನ್ನಂತೆ…

ಅನುದಿನ ಕವನ-೧೫೬೧, ಕವಯಿತ್ರಿ: ಪಾರ್ವತಿ ಸ್ವಪ್ನ, ಬೆಂಗಳೂರು, ಕವನದ ಶೀರ್ಷಿಕೆ:ನನ್ನೊಲವೇ

ನನ್ನೊಲವೇ ನೀನಿರಲು ಜೊತೆಯಲ್ಲಿ… ಜಾಜಿ ಮಲ್ಲಿಗೆಯ ಕಂಪು ಹಕ್ಕಿಗಳ ಕಲರವ ಇಂಪು ಸುಡುವ ಸೂರ್ಯನೂ ತಂಪು… ನೀನಿರಲು ಜೊತೆಯಲ್ಲಿ…. ಹೃದಯ ಮಾಡುವುದು ನರ್ತನ ಮುಳ್ಳಿನ ಹಾದಿಯು ಹೂಬನ ಬದುಕು ಸುಂದರ ನೀನದರ ಚೇತನ….. ನೀನಿರಲು ಜೊತೆಯಲ್ಲಿ…….. ನಾಳೆಗಳ ಚಿಂತೆಯಿಲ್ಲಾ. ನೆನ್ನೆಗಳ ಅರಿವು…

ಅನುದಿನ ಕವನ-೧೫೬೦, ಕವಿ: ಎ.ಎನ್ ರಮೇಶ ಗುಬ್ಬಿ, ಕವನದ ಶೀರ್ಷಿಕೆ: ಅನೂಹ್ಯ ಕವನ!

ಅನೂಹ್ಯ ಕವನ.! ಸುಸ್ವರ ಅಪಸ್ವರಗಳ ರಾಗ ವಿರಾಗಗಳ ಮಹಾನ್ ಕೀರ್ತನ.! ಸಹಸ್ರ ಭಾವಗಳ ಬಗೆಬಗೆ ಬಣ್ಣಗಳ ಮಯೂರ ನರ್ತನ.! ರಂಗು ರಂಗಿನಾಟದ ಮಾಯಾ ಛಾಯೆಯ ಇಂದ್ರಚಾಪ ದರ್ಶನ.! ಅನುಕ್ಷಣ ಅನೂಹ್ಯ ಅನಿರೀಕ್ಷಿತಗಳ ಬಿಚ್ಚಿ ಬೆಚ್ಚಿಸುವ ಸಂಚಲನ.! ಅರಿವು ಅಧ್ಯಯನಗಳ ಪರಿಧಿಗೆಂದು ನಿಲುಕದ…

ಅನುದಿನ ಕವನ-೧೫೫೯, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನ ಮಲ್ಲಿಗೆ…

ನನ್ನ ಮಲ್ಲಿಗೆ… ಒಲವಿಗೆಗಲ ಕೊಟ್ಟೆ ನೀನು ಒಲವಿನೊಲವ ಚೆಲುವು ನೀನು ಒಲವೆ ಆಗಿ ಬಂದೆ ನೀನು ಒಲವನೊತ್ತ ಗೆಲುವು ನೀನು ನನ್ನ ನಾಳೆ ಮಲ್ಲಿಗೆ… ಎಲ್ಲ ಬೇನೆ ದೂಡಿದವಳೇ ಕೂಡಿಕೊಂಡೆ ಕಷ್ಟ ಕಳೆದು ನೂರು ಬಾರಿ ಮೆಚ್ಚಿದವಳೇ ಬಂದೆ ಬಳಿಗೆ ನೋವ…

ಅನುದಿನ ಕವನ-೧೫೫೮, ಕವಯಿತ್ರಿ: ಡಾ.‌ಭಾರತಿ ಅಶೋಕ್, ಹೊಸಪೇಟೆ

ಬರಗೆಟ್ಟ ಭರವಸೆಗಳು ನೆಲಕ್ಕೊರಗಿ ಆಲಾಪಿಸುತ್ತಿರುವಾಗ ಅಲ್ಲೊಮ್ಮೆ ಮಳೆ ಸುರಿದು ತಂಪಾದ ವಾರ್ತೆಗೆ ಕಿವಿಯಾನಿಸಿ ಇಲ್ಲೂ ಅಂತಹದ್ದೆ ತಂಪಿಗೆ ಹಪಾಹಪಿಸಿ ಸೋತಾಗ… ಇನ್ನೆಲ್ಲೋ ಮತ್ತದೆ ತಂಪಿನ ಸುವಾರ್ತೆ ಆಸೆಯ ಪಸೆ ಒಸರಿಸುತ್ತದೆ. ಪಸೆಯೂ ಇಲ್ಲವಾಗಿ ಒರಟು ದೇಹ ಒರಟೊರಟಾದ ನೆಲಕ್ಕೊರಗಿ ಬೆನ್ನ ನವೆ…

ಅನುದಿನ ಕವನ-೧೫೫೭, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ!

ನಾನೂ ನಿಮ್ಮ ಕಾಲದಲ್ಲಿಯೇ ಇದ್ದೇನೆ! (ಒಂದು ಗದ್ಯದಂತಹ ಪದ್ಯ!) `ನಿಮ್ಮ ಕಾಲದಲ್ಲಿ ಇಷ್ಟು ಜಂಜಾಟವಿರಲಿಲ್ಲ ‘ ಯುವಕರು, ಮಕ್ಕಳು ಹೇಳುತ್ತಲೇ ಇರುತ್ತಾರೆ. `ನನ್ನ ಕಾಲವೆಂದರೇನು?’ ಯೋಚಿಸುತ್ತೇನೆ ಬದುಕಿರುವಷ್ಟು ದಿನ ನನ್ನದೇ ಕಾಲವಲ್ಲವೇ? ಯೌವನವಷ್ಟೇ ಕಾಲವೇ? ವೃದ್ಧಾಪ್ಯವಲ್ಲವೇ? ಜಂಜಡಗಳ ಸ್ವರೂಪ ಬದಲಾಗಿದೆ, ನಿಜ…

ಅನುದಿನ ಕವನ-೧೫೫೬, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ:ಹೇಳಬೇಕಿದೆ ನಿನಗೆ ಮಗಳೇ…..

ಹೇಳಬೇಕಿದೆ ನಿನಗೆ ಮಗಳೇ….. ಬದುಕಿನಲ್ಲಿ ಎಲ್ಲರನ್ನೂ ಮೆಚ್ಚಿಸಲು ಅಸಾಧಾರಣ, ಅದ್ಭುತವೆನಿಸಿಕೊಳ್ಳಲು ದಿನವೂ ತೇಯಬೇಕಾಗಿಲ್ಲ , ನೆನಪಿರಲಿ ನಿನ್ನೊಳಗೆ ,ನೀನೇ ಇರುವುದಿಲ್ಲ ಆಗ ಅಲ್ಲಿ ಹತ್ತು ಜನರಲ್ಲಿ ಹನ್ನೊಂದನೆಯವಳಾಗಿ ಸಾಮಾನ್ಯವಾದ ಬದುಕೊಂದ ಅಪ್ಪಿಬಿಡು ಬದುಕಿನೋಟದ ಸ್ಪರ್ಧೆಯ ಗೋಜೇ ಬೇಡ ಗೆದ್ದವರಿಗೊಂದು ಚಪ್ಪಾಳೆಯ ತಟ್ಟಿಬಿಡು…

ಅನುದಿನ ಕವನ-೧೫೫೫, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ:ಕೊನೆಯ ಕಂಬನಿಯ ಮುಗುಳ್ನಗೆ!

ಕೊನೆಯ ಕಂಬನಿಯ ಮುಗುಳ್ನಗೆ! ಮುರಿದು ಬಿದ್ದ ರೆಕ್ಕೆಯ ಹಕ್ಕಿಯ ವಿಲವಿಲ ಸದ್ದು ಕೇಳುತ್ತಿಲ್ಲ ಏಕೋ ಕಿವುಡಾಗಿದೆ ಆಗಸ ಕುರುಡಾಗಿದೆ ಭೂಮಿ ಕೊರಳಲ್ಲಿ ಸಿಕ್ಕಿ ಕರ್ಕಶವಾಗಿದೆ ಕೂಹೂ ಯಾರಿಗೂ ಬೇಡದ ನೋವು ಬಿಕ್ಕಿ ಬಿಕ್ಕಿ ದೂರ ಸರಿವ ನೆರಳುಗಳ ನಡುವೆ ಜೋತುಬಿದ್ದ ಪಂಜರವೊಂದು…

ಅನುದಿನ ಕವನ-೧೫೫೪, ಕವಯಿತ್ರಿ:ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ಬಿಸಿಲ ಝಳದ ಹನಿಗಳು

ಬಿಸಿಲ ಝಳದ ಹನಿಗಳು 1. ಉದ್ದಾನುದ್ದ ರಸ್ತೆಯ ತುಂಬಾ ಚಲ್ಲಾಡಿದ ಬಿಸಿಲಿನ ಝಳ ಆ ತಿರುವಲ್ಲಿ ಸತಾಯಿಸುವ ನಿನ್ನ ನೆನಪು 2. ಬಿಸಿಲಿಗೆ ತಂಪಾಗುವ ಹಂಗಿಲ್ಲ ರಸ್ತೆ ತುಂಬಾ ಬೇಗೆಯ ಹಾವಳಿ ಅಲ್ಲಲ್ಲಿ ಬಿರುಕುಬಿಟ್ಟ ಹಾದಿಗೆ ನೆನಪುಗಳ ತೇಪೆ 3. ಬಿಸಿಲು…