ಅನುದಿನ ಕವನ-೧೭೮೧, ಕವಿ: ಲೋಕಿ, ಬೆಂಗಳೂರು

* ವಿದಾಯಗಳು ಪೂರ್ಣಗೊಳ್ಳುವುದಿಲ್ಲ ನೆನಪುಗಳು ಕಾಡುವಾಗ * ಪ್ರೀತಿಯನ್ನು ಪೂರ್ಣ ನಂಬುಗೆಯೊಂದಿಗೆ ಆಸ್ವಾಧಿಸಬಾರದು * ವಿದಾಯಕ್ಕೂ ಮುನ್ನ ಅಪ್ಪುಗೆಯೊಂದು ಬಾಕಿ ಉಳಿದುಬಿಡುತ್ತದೆ * ಕೊರಳಲ್ಲಿ ಉಳಿದ ಹನಿಗಳನ್ನು ನಗುವೆಂಬ ಅಣೆಕಟ್ಟು ಹಿಡಿದಿಟ್ಟುಕೊಂಡಿದೆ * ಹಳತು ದಿನಗಳು ಕ್ಯಾಲೆಂಡಿರಿನಲ್ಲಿಯೇ ಕೆಂಪು ಶಾಯಿಯಲ್ಲಿ ಉಳಿದುಬಿಟ್ಟಿದೆ…

ಅನುದಿನ ಕವನ-೧೭೮೦, ಕವಿ: ಎನ್.‌ಕೆ.‌ಹನುಮಂತಯ್ಯ ಕವನದ ಶೀರ್ಷಿಕೆ:ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ ನಾಡಿಗೆ ಕನ್ನಡಿಯಾದ ಬಡವಿ ಸಾಲುಮರದ ತಿಮ್ಮಕ್ಕ ಗಿಡ ಮರ ಸಾಕಿ ಸಲುಹಿದ ತಾಯಿ ಸಾಲು ಮರದ ತಿಮ್ಮಕ್ಕ ನೋವಿನ ಸುಡುಗಾಡಲ್ಲಿ ಹಸಿರು ಹಡೆದ ತಿಮ್ಮಕ್ಕ ಹೊಲಸೆಂದು ನೂಕಿದ ಮಡಿಲಿನ ಒಳಗೆ ಪಕ್ಷಿ ತೂಗಿದ ತಿಮ್ಮಕ್ಕ ಬಿಸಿಲಿನ ಕಡಲಲಿ ನೆರಳ…

ಅನುದಿನ ಕವನ-೧೭೭೯, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ, ಕವನದ ಶೀರ್ಷಿಕೆ: ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ

ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ಸಾಲು ಮರವೇ ಹಾಗೆ…! ಗಿಡದ ನೆರಳನೇ ಮಕ್ಕಳಾಗಿಸಿಕೊಂಡು ಕಪ್ಪು,ಕೆಂಪು ನೆಲವೆನ್ನದೇ ಹಿಂಗಿ ನುಂಗಿದ ನೀರಲಿ ಬೇರುಗಳು ಗಟ್ಟಿಗೊಂಡು ಕೊರಡು ಕಾಂಡಲ್ಲೂ ಚಿಗುರೊಡೆದು, ಬಳಿ ಬರುವವಗೆ ಸೊಂಪಾದ ತಂಪ ನೆರಳ ನೀಡಿ ಗಂಧ ಗಾಳಿಯಲಿ ಮರದವ್ವನ ಹೆಸರಿನ…

ಅನುದಿನ ಕವನ-೧೭೭೮, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಕವಿದ ಮೋಡ ಕೊಂಚ ಬಾನಲಿ ಮಳೆಯ ತಂದ ನಿನ್ನ ಗುಂಗಲಿ ಕಳೆದು ಹೋದೆ ನಿನ್ನಲಿ ನೀನೆ ಕಾಣಲು ಕಣ್ಣಲಿ ಕನವರಿಕೆ ನೂರಾರು ಜನ ಜಾತ್ರೆ ನಡುವೆ ನಾ ದಾರಿ ತಪ್ಪಿ ನಿಂತೆ ನೀ ಎಲ್ಲೆಲ್ಲೂ ಹೀಗೇಕೆ ಕಾಡುವೆ ಓ ಬಾಲೆ ಕುಸುಮಬಾಲೆ…

ಅನುದಿನ ಕವನ-೧೭೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಗಂಡಸೆರಲ್ಲರೂ ಕೆಟ್ಟವರಲ್ಲ ..

ಗಂಡಸೆರಲ್ಲರೂ ಕೆಟ್ಟವರಲ್ಲ .. ಅರೆ ಇವಳೇನು ಇದಕ್ಕಿದಂತೆ ಹಾಯಿ ತಪ್ಪಿದ ದೋಣಿಯಂತೆ, ಅಲೆಗಳ ಮಧ್ಯ ತೇಲುತ್ತಾ ಸಾವಿರ ಮಾತುಗಳ ತೂಕ ಹೊತ್ತಂತೆ, ಫೆಮಿನಿಸಂನ ಹೊಳೆ ಬಿಟ್ಟಂತಿದೆ ಎಂದು ನೀವಂದುಕೊಂಡರೆ, ನನಗದು ಅಚ್ಚರಿಯೇನಲ್ಲ. ರಾತ್ರಿ ಊರೂರು ದಾಟಿ ಬರುವ ಅವರ ಹೆಜ್ಜೆಗಳಲ್ಲಿ ದಣಿದ…

ಅನುದಿನ‌ ಕವನ-೧೭೭೬, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಯುದ್ಧ!!?

ಯುದ್ದ!!? ಒಲವಯುದ್ದವೋ…? ವಿರಾಮವೋ..? ಸಂಧಾನವೋ..? ಆತ್ಮಾನುಬಂಧವೋ…? ಅದ್ಯಾವುದರ ಸೆಳೆತವೋ‌ ಕಾಣೆ ನಾ?!! ಒಲವಲಿ‌ ಮಿಂದೇಳುವ ಘಳಿಗೆಯಲಿ… ನನ್ನೊಳಗೆ ನೀನೋ…!? ನಿನ್ನೊಳಗೆ ನಾನೋ!!? ಏನೆಂದೂ ಅರಿಯೆ ನಾ.!. ಸೋತದ್ದು ನಾನೋ… ಗೆದ್ದದ್ದು ನೀನೋ…!? ಅಥವಾ ಸೋಲು ಗೆಲುವುಗಳ ಮೀರಿದ ಭಾವದ ಯುದ್ದದಲಿ ಇಬ್ಬರೂ…

ಅನುದಿನ ಕವನ-೧೭೭೫, ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಸೋಕಿತು ಒಲವ ತಂಗಾಳಿಯ ಅಲೆಯು ಈ ದಿನ ನಿನ್ನಿಂದ ಬಾಳಿಗೆ ಪ್ರೀತಿಯ ಹೊಳೆಯು ಈ ದಿನ ಮಧುರ ಯಾನದ ಪ್ರತಿ ಪುಟವು ಬಣ್ಣದ ಹಾಡು ಕದಪು ತುಂಬ ಖುಷಿಯ ಕಳೆಯು ಈ ದಿನ ಸೀಳ್ಳೆ ಹಾಕುತ ಕಂಪು ಬೀರಿದೆ ಸಂಪಿಗೆ…

ಅನುದಿನ ಕವನ-೧೭೭೪, ಕವಯತ್ರಿ: ಡಾ. ಸುಮ ವೈ, ಬಳ್ಳಾರಿ, ಕವನದ ಶೀರ್ಷಿಕೆ:ಅಂತಃಶಕ್ತಿ

ಅಂತಃಶಕ್ತಿ ರಸ್ತೆಯ ಬದಿಯಲೊಂದು ಪುಟ್ಟ ಗೂಡಂಗಡಿ ಅಗಲೀಕರಣದ ನೆಪವೊಡ್ಡಿ ನೆಲ ಸಮಗೊಳಿಸಿದರೆ ಅದನು ದಿಕ್ಕು ತೋಚದಂತಾದ ಅಂಗಡಿಯ ಮಾಲೀಕ ಹೊಟ್ಟೆಪಾಡಿಗೆಂದು ಹೊಸ ದಾರಿ ಹುಡುಕಲು ಆರಂಭಿಸಿದ ಶಾಲೆಯ ಮುಂದೊಂದು ಬಲೂನಿನ ಸೈಕಲ್ ಹಿಡಿದ ಹಿಲಿಯಂ ಹೊಂದಿದ ಬಣ್ಣ ಬಣ್ಣದ ಬಲೂನುಗಳು ಅದಕಂಡು…

ಅನುದಿನ ಕವನ-೧೭೭೩, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ:ನಗುವ ಶೂನ್ಯ

ನಗುವ ಶೂನ್ಯ ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ ರೆಕ್ಕೆಯ ಹಕ್ಕಿಯ ಶೋಕ ಮನ ಅನುಭವಿಸುತ್ತಿರುವಾಗ ಮಾತು…

ಅನುದಿನ‌ ಕವನ-೧೭೭೨, ಹಿರಿಯ ಕವಿ: ವೈ ಜಿ ಅಶೋಕ್ ಕುಮಾರ್, ಬೆಂಗಳೂರು

ಅಕ್ಷರಗಳು ಒಣಗುವುದಿಲ್ಲ ಹೃದಯ ಹೊಕ್ಕು ಹೊರಬಂದ ಅಕ್ಷರಗಳು ಒಂದೊಂದು ಮೆಟ್ಟಿಲುಗಳಲ್ಲೂ ಕಾದು ಕುಳಿತಿರುತ್ತವೆ ಅಕ್ಷರಗಳನ್ನು ಸಹನೆಯಿಂದ ನೇವರಿಸಿ ಅವು ನಮ್ಮೊಳಗೇ ಮರಿ ಮಾಡುತ್ತವೆ ಅಕ್ಷರಗಳು ನಮ್ಮ ರುಚಿಗೆ ಈಡಾಗಿ ತುಳಿಸಿಕೊಂಡರೆ ಬೀದಿಗೆ ಬೀಳುತ್ತವೆ ಅಕ್ಷರಗಳು ಇತರರ ನಾಲಿಗೆಯಲ್ಲಿ ವರ್ಣಪಡೆದು ಬಹುರೂಪಿಯಾಗುತ್ತವೆ ಅಕ್ಷರಗಳು…