ನಿನ್ನ ಹೃದಯದಲಿ… ಬರೆದದ್ದೆಲ್ಲ ಅಳಿಸುವುದು ನಿನ್ನ ಕಣ್ಣೀರಿಗೆ! ಅಳಿಸುವುದನ್ನೇಕೆ ಬರೆಯಲಿ? ನಿನ್ನ ನಗುವ ಬರೆಯಲೆ? ನಗಿಸುತ ನಿನ್ನ ಹೊತ್ತು ತಿರುಗಲೆ? ಬರೆದದ್ದೆಲ್ಲ ಸುಡುವುದು ನಿನ್ನ ಕಣ್ಣ ಕಿಡಿಗೆ! ಕಿಡಿಯಾಗುವುದನ್ನೇಕೆ ಬರೆಯಲಿ? ನಿನ ಕಾಡಿಗೆಯ ಬರೆಯಲೆ? ಕಾಡಿಸುತ ನಿನ್ನ ಹಿಂದೆ ಓಡಾಡಲೆ? ಬರೆದದ್ದೆಲ್ಲ…
Category: ರಾಜ್ಯ
ಪುಸ್ತಕ ಓದುವ ಮೂಲಕ ಗಳಿಸುವ ಜ್ಞಾನಾರ್ಜನೆ ಹೆಚ್ಚು ಪರಿಣಾಮಕಾರಿ -ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು, ಫೆ. 10: ಜ್ಞಾನಾರ್ಜನೆಗೆ ಪುಸ್ತಕಗಳ ಓದು ಬಹಳ ಅಗತ್ಯ. ಉಳಿದೆಲ್ಲಾ ಜ್ಞಾನ ಮೂಲಗಳಿಗಿಂತ ಪುಸ್ತಕ ಓದಿನ ಮೂಲದ ಜ್ಞಾನಾರ್ಜನೆ ಬಹಳ ಪರಿಣಾಮಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ನಗರದಲ್ಲಿ ವೀರಲೋಕ ಪ್ರಕಾಶನ ಶನಿವಾರ ಆಯೋಜಿಸಿದ್ದ ಪುಸ್ತಕ ಸಂತೆಯನ್ನು ಉದ್ಘಾಟಿಸಿ…
ಅನುದಿನ ಕವನ-೧೧೩೬, ಕವಿ: ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ, ಕವನದ ಶೀರ್ಷಿಕೆ: ನೀ….., (ಚಿತ್ರ ಕೃಪೆ:ಕಂದನ್ ಜಿ ಮಂಗಳೂರು)
ನೀ… ನನ್ನ ತಪ್ಪಷ್ಟೇ ತೇಲಿಸುವೆ ಸರಿಗಳನ್ನೇಕೆ ಮುಳುಗಿಸುವೆ? ಮಾತಷ್ಟೇ ಮೊನಚೆನ್ನುವೆ ಚುಚ್ಚುವ ಹಚ್ಚೆಯನ್ನೇಕೆ ಇಚ್ಚಿಸುವೆ? ಸಿಟ್ಟಷ್ಟೇ ರಟ್ಟು ಮಾಡುವೆ ಸಮಾಧಾನವನ್ನೇಕೆ ಗುಟ್ಟಾಗಿಸಿರುವೆ? ಮೊಂಡುತನವಷ್ಟೇ ತೋರಿಸುವೆ ಮೊಂಡಿಯೂರಿದ್ದನ್ನೇಕೆ ಮುಚ್ಚಿಟ್ಟಿರುವೆ? ಎಡವಿದ್ದಷ್ಟೇ ದೊಡ್ಡಾಗಿಸುವೆ ಎದ್ದು ನಡೆದದ್ದನ್ನೇಕೆ ಸಣ್ಣಾಗಿಸಿರುವೆ? ಕವಿತೆಯನ್ನು ಸವಿಯುವೆ ಕವಿಯನ್ನೇಕೆ ಹದಹಾಕಿ ತಿವಿಯುವೆ?…
ಅನುದಿನ ಕವನ-೧೧೩೫, ಕವಿ: ಅಮರೇಶ್ ನಾಗಲಾಪುರ, ರಾಯಚೂರು , ಕವನದ ಶೀರ್ಷಿಕೆ: ಹಣ್ಣೆಲೆ
ಹಣ್ಣೆಲೆ ಹಣ್ಣೆಲೆ ನಾ ಉದುರುವ ಮುನ್ನ ತಿಳಿದುಕೋ ನನ್ನ ಸಾರ್ಥಕ ಜೀವನವನ್ನ ಓ ಮಾನವಾ ನಾ ಚಿಗುರಿದಾಗ ವಾಸಂತವಾದೆ ಪರಿಮಳ ಬೀರುವ ಹೂವಿನ ಜೊತೆಯಾದೆ ರಸಭರಿತ ಹಣ್ಣಾಗಲು ನೆರವಾದೆ ಎಲೆಯಾಗಿ ಸಕಲ ಜೀವ ರಾಶಿಗೆ ನೆರಳಾದೆ, ಉಸಿರಾದೆ ಹಣ್ಣೆಲೆಯಾಗಿ ಉದುರಿ ನನ್ನ…
ಅನುದಿನ ಕವನ-೧೧೩೪, ಕವಯಿತ್ರಿ:ವರಮಹಾಲಕ್ಷಿ.ಟಿ ಆರ್, ಚಿಕ್ಕನಾಯಕನಹಳ್ಳಿ, ಕವನದ ಶೀರ್ಷಿಕೆ: ಅವಳಲ್ಲಿ ಪ್ರಾರ್ಥನೆ
ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ವರಮಹಾಲಕ್ಷ್ಮಿ ಅವರು ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿಯಾಗಿ, ಮಹಿಳಾ ಒಕ್ಕೂಟದ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಮಹಿಳೆಯರ ಪ್ರಗತಿಯ ಬಗ್ಗೆ ತುಡಿಯುವ ಹಾಗೂ ಸುಂದರ ಆಶಯಗಳಿರುವ ಇವರ ಬಹುತೇಕ ಕವಿತೆಗಳಲ್ಲಿ ಮಹಿಳೆಯ ಬದುಕೇ ಕೇಂದ್ರಬಿಂದು. …
ಅನುದಿನ ಕವನ-೧೧೩೩, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಝಲ್ ಕಡಲ ಒಡಲಲಿ ಮೀಯುವದ ತಡೆದು ಒಡಲನೆ ಕಡಲಾಗಿಸಿ ಮೀಯುತಿರುವೆಯಲ್ಲ ಸರಸಿ ಸರೋವರದಿ ಸರಸಕ್ಕೆ ಕರೆಯುತಲಿರಲು ವಿರಹದ ಬಿಸಿಯನೇರಿಸಿ ಖುಷಿ ಪಡುವೆಯಲ್ಲ ಅರ್ಪಣಾ ತರ್ಪಣದಿ ಒಪ್ಪ ಓರಣದಿಂದ ಅರ್ಪಿಸಲು ಅವಸರದಿ ಕಾಯುತಿರುವೆಯೇಕೆ ಅಪ್ಪಿ ತಪ್ಪಿಯು ಅಪ್ಪಲಾರದೆ ಅನುಮಾನಿಸಿ ಅರಸಿ ಐಸಿರಿಯ ಅಸಡ್ಡೆಯಲಿ…
ಅನುದಿನ ಕವನ-೧೧೩೨, ಕವಿ:ಡಾ. ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ
ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ ಇದು ಮಾಗಿ ಕಾಲ ಕರಗಿ ನೆಲಕ್ಕಿಳಿಯುತ್ತವೆ ಎಲೆ ಕೊರಗಿ ಮುಗಿಲ ಮೇಲಿಂದ ಒಣಗಿ ಒರಗುವುದೇನು ಸಂಭ್ರಮದ ಸಂಗತಿಯೆ? ಸುಡು ಮಂಜು ಕೆಡು ಕೆಂಡ ಹೃದಯಕ್ಕೆ ಉಳಿ ಬಡಿವ ದೆವ್ವ ಗಾಳಿ ಬೋಳು ಮರ; ಒಡಲೊಳಗೆ ಬಿಸೀ…
ಅನುದಿನ ಕವನ-೧೧೩೧, ಹಿರಿಯ ಕವಿ: ಡಾ. ನಟರಾಜ್ ಹುಳಿಯಾರ್, ಬೆಂಗಳೂರು, ಕವನದ ಶೀರ್ಷಿಕೆ: ನೀಲು,….
ನೀಲು… ಎಲ್ಲೊ ಕಡಲಿನ ಮುತ್ತಾಗಿ ಮೂಡಿ ಇನ್ನೆಲ್ಲೊ ತೊರೆಯಾಗಿ ಹರಿದು ಮತ್ತೆಲ್ಲೊ ಗಿಳಿಯಾಗಿ ಕೂಗಿ ಅವಳು ನೂರು ಅವತಾರವನ್ನೆತ್ತಿದಳು. ಅವಳು ದ್ರೌಪದಿಯ ಶ್ರೀಮುಡಿ, ವೈದೇಹಿಯ ವಿರಹ; ಕಾಳಿದಾಸನ ವನದ ಸಖಿಯರ ತುರುಬಿನಲ್ಲಿ ಮಲ್ಲಿಗೆಯ ದಂಡೆ. ಅವಳು ಅಕ್ಕಮಹಾದೇವಿಯ ಆತ್ಮ ಹೆಲೆನ್ನಳ ನಖ,…
ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ -ಕೆ.ವಿ.ಪ್ರಭಾಕರ್
ದಾವಣಗೆರೆ ಫೆ 4: ಪತ್ರಕರ್ತರು ವಿಶ್ವಾಸಾರ್ಹತೆ ಬೆಳೆಸಿಕೊಳ್ಳದಿದ್ದರೆ ವೃತ್ತಿಯ ವಿಶ್ವಾಸಾರ್ಹತೆ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 38 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. …
ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ
ಹಂಪಿ(ವಿಜಯನಗರ).ಫೆ.4: ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ಉತ್ಸವದಲ್ಲಿ 12 ಲಕ್ಷ ಜನರು ಭಾಗಿಯಾಗಿ ಉತ್ಸವವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ…
