ಬೆಂಗಳೂರು ಸೆ. 8 : ಸೇಂಟ್ ಮೇರಿಯಮ್ಮನವರ ಬೆಸಿಲಿಕಾ ಚರ್ಚ್ ಅತ್ಯಂತ ದೊಡ್ಡ ಭಾವೈಕ್ಯತಾ ಕೇಂದ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ನಲ್ಲಿ ತಾಯಿ ಮೇರಿ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. …
Category: ರಾಜ್ಯ
ಶಿಕ್ಷಕರು, ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಹೀಗಾಗಿ ನಮ್ಮನ್ನು ಬೆಂಬಲಿಸುತ್ತಾರೆ -ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಶ್ವಾಸ
ಬೆಂಗಳೂರು ಸೆ 8: ಶಿಕ್ಷಕರು ಮತ್ತು ನಾಡಿನ ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಹೀಗಾಗಿ ಅವರೆಲ್ಲಾ ನಮ್ಮ ಪರವಾಗಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ…
ಅನುದಿನ ಕವನ-೯೮೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಬುದ್ಧ…
ಬುದ್ದ… ಬುದ್ದ ನಮ್ಮ ನಿದ್ದೆಯನ್ನು ಕದ್ದ ಬದುಕನ್ನು ಗೆದ್ದ… ಸದಾ ಚಲನಶೀಲ ಲವಲವಿಕೆ ನಮ್ಮ ಇರುವಿಕೆ ಗುರುತಿಸುವಿಕೆ ಬುದ್ದ… ಎಲ್ಲವೂ ಶೂನ್ಯ ನಗಣ್ಯ ನಮಗೆ ನಾವೇ ಧನ್ಯ- -ರಾಗಬೇಕಾದರೆ ಬೇಕು ನಿತ್ಯಸತ್ಯದ ದಾರಿಗೆ ಬುದ್ದ… ಕಾರುಣ್ಯ ಹೃದಯ, ತೇಜಸ್ಸು ಮೊಗ, ಹೊಳೆಯುವ…
ರಾಮನಗರ: ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಗೆ ಅರ್ಜಿ
ಜಾನಪದ ಲೋಕ(ರಾಮನಗರ): ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಲೋಕದಲ್ಲಿ ೨೦೨೩-೨೦೨೪ರ ಶೈಕ್ಷಣಿಕ ಸಾಲಿಗೆ ಕನಿಷ್ಟ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಂದ “ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ…
ಅನುದಿನ ಕವನ-೯೭೯, ಕವಿಯಿತ್ರಿ: ಡಾ. ಸುಮ ವೈ, ಬಳ್ಳಾರಿ, ಕವನದ ಶೀರ್ಷಿಕೆ: ನಾನು ಕಾರ್ಮಿಕಳಲ್ಲ
ನಾನು ಕಾರ್ಮಿಕಳಲ್ಲ ಪ್ರತಿ ದಿನ ಸೂರ್ಯೋದಯಕೆ ಮೊದಲೇ ಆರಂಭವಾಗುವದು ನನ್ನ ದಿನ ಪ್ರತಿನಿತ್ಯವೂ ಉಳಿದವರು ಏಳುವುದು ಆಮೇಲೇನಾ ಪ್ರತಿ ಕೆಲಸವೂ ಆಗಬೇಕು ಬಹುಬೇಗ ಪ್ರತಿ ಕೆಲಸ ನಂತರ ಮತ್ತೊಂದು ಕೆಲಸದ ಉದ್ವೇಗ ಪ್ರತಿ ಕೃತಿಗೂ ಹೀಯಾಳಿಕೆಯ ಮಾತು ಪ್ರತಿಬಾರಿಗೂ ಇದೇ ಆತು…
ಅನುದಿನ ಕವನ-೯೭೮, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಶಿಕ್ಷಕನ ಆತಂಕ!
ಶಿಕ್ಷಕನ ಆತಂಕ! ವರ್ಗದೊಳಗೆ ವರ್ಣಭೇದವಿರುವಾಗ ಪೂರ್ಣತೆಯನ್ಹೇಗೆ ವರ್ಣಿಸಲಿ? ಮೂರ್ತವನ್ನಷ್ಟೇ ಅರಗಿಸಿಕೊಳ್ಳುವವರಿಗೆ ಅಮೂರ್ತವನ್ಹೇಗೆ ಅರ್ಥೈಸಲಿ? ಸುರಕ್ಷತೆಯನ್ನರಸಿ ಬಂದಿರುವವರ ಮುಂದೆ ಹೋರಾಟವನ್ಹೇಗೆ ಚಿತ್ರಿಸಲಿ? ಮಿಥ್ಯವನ್ನಷ್ಟೇ ಒಪ್ಪಿಕೊಂಡವರೆದಿರು ಸತ್ಯದ ಪಾಠವನ್ಹೇಗೆ ಮಾಡಲಿ? ಒಡೆಯುವ ವಾರಸುದಾರರಿಗೆ ಕಟ್ಟುವದನ್ಹೇಗೆ ಕಟ್ಟಿಕೊಡಲಿ? ಚಾಡಿಯ ಬುತ್ತಿ ತಂದವರಿಗೆ ಎದೆಯ ಹಾಡನ್ಹೇಗೆ ಉಣಿಸಲಿ?…
ಶಿಕ್ಷಕರೆಂದರೆ ಸೂತ್ರದ ಗೊಂಬೆಗಳು……. -ಸಿದ್ಧರಾಮ ಕೂಡ್ಲಿಗಿ
ಸೆ.5 ಪ್ರತಿವರ್ಷದಂತೆಯೇ, ಪ್ರತಿ ವರ್ಷಾಚರಣೆಯಂತೆಯೇ ” ಶಿಕ್ಷಕರ ದಿನಾಚರಣೆ “. ಗುರುಬ್ರಹ್ಮ, ಗುರುವಿಷ್ಣು……….. ಎಂದು ಒಂದುದಿನ ಮಾತ್ರ ಹಾಡಿ ಹೊಗಳುವ ದಿನ. ನಗು ಬರುತ್ತಿದೆ ನನಗೆ. ಒಂದು ಅದ್ದೂರಿ ಸಮಾರಂಭ, ಅತಿಥಿ ಅಭ್ಯಾಗತರು, ಒಂದಷ್ಟು ಸನ್ಮಾನಗಳು, ಒಂದೊಳ್ಳೆಯ ಊಟ ಅಲ್ಲಿಗೆ ಶಿಕ್ಷಕರ…
ಅನುದಿನ ಕವನ-೯೭೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ, ಕವನದ ಶೀರ್ಷಿಕೆ: ಗುರು
ಗುರು ಅರಿಯಲಾರದ್ದನ್ನೆಲ್ಲ ಅರ್ಥೈಸಿ ಹೇಳಿದ ಗುರು ಉಳಿದರು ಎಲ್ಲರ ಮನದಲ್ಲಿ|| ಕಲಿಯಲಾರದವರನ್ನೆಲ್ಲ ಕಲಿಕೆಗೆ ತಂದ ಗುರು ಉಳಿದರು ಎಲ್ಲರ ಮನದಲ್ಲಿ|| ಇಂದಿಗೂ ಅಳಿಯದೇ ಉಳಿದಿವೆ ಮೇಲು ಕೀಳು ಎಂಬ ವಿಷಕಾರುವ ಮನಗಳು| ಬಡವ ಬಲ್ಲಿದರೆಂದು ಭೇದ ಮಾಡದ ಗುರು ಉಳಿದರು ಎಲ್ಲರ…
ಬಿ.ಜೆ.ಪಿ ಸಂಸದರೆಂಬ ತೊಗಲುಬೊಂಬೆಗಳ ಆತ್ಮಸಾಕ್ಷಿಗೆ ಒಂದಿಷ್ಟು ಪ್ರಶ್ನೆಗಳು….! -ಜಗದೀಶ ಕೊಪ್ಪ, ಮೈಸೂರು
ಕರ್ನಾಟಕದ ಬಿಜೆಪಿ ಸಂಸದರಿಗೆ ಬಹಿರಂಗ ಪತ್ರ! ಪ್ರಿಯ ಸಂಸದರೇ, …
ಶಿಕ್ಷಕರಲ್ಲೂ ಶ್ರೇಣೀಕೃತ ವ್ಯವಸ್ಥೆಯಿದೆ ಎಂದರೆ ನಂಬುವಿರಾ!?
ಪ್ರಾಥಮಿಕ ಶಾಲೆ ಶಿಕ್ಷಕಕರು ಪ್ರೌಢ ಶಾಲಾ ಶಿಕ್ಷಕಕರು ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಪದವಿ ಕಾಲೇಜಿನ ಶಿಕ್ಷಕರು ವಿಶ್ವ ವಿದ್ಯಾಲಯದ ಶಿಕ್ಷಕರು ಇವರಲ್ಲಿ ಬಹುತೇಕ ಜನ ಶಿಕ್ಷಕರು ತಮಗಿಂತ ಕೆಳಗಿನ ಹಂತದ ಶಿಕ್ಷಕರನ್ನು ಗೌರವಿಸುವುದಿಲ್ಲ, ತಮಗಿಂತಲೂ ಬುದ್ಧಿವಂತಿಕೆಯಲ್ಲಿ ಕಡಿಮೆ ಎಂದೇ ಭಾವಿಸುತ್ತಾರೆ.…
