ಹುರಿದು ತಿನ್ನಲು ಎತ್ತಿಟ್ಟಿದ್ದ ಹಲಸಿನ ಬೀಜ ತೇವ ತಾಕಿ ಮೊಳಕೆಗಟ್ಟಿದೆ.. ಕರೆಂಟು ಬಿಲ್ಲು ಕಟ್ಟದ ಕೋಣೆಗೂ ವ್ಯವಹಾರ ಗೊತ್ತಿಲ್ಲದ ದಡ್ಡ ಚಂದಿರ ಬೆಳದಿಂಗಳು ಹರಿಸಿದ್ದಾನೆ ಸರಿ ರಾತ್ರಿಯಲ್ಲೊಬ್ಬ ಅಗಂತುಕ ಅತಿಥಿ; ಈ ಮರಿ ಕಪ್ಪೆಗೆ ಈ ತಿಂಗಳ ಬಾಡಿಗೆ ಕಟ್ಟಿಲ್ಲವೆಂಬುದು ತಿಳಿದಿಲ್ಲ…
Category: ರಾಜ್ಯ
ಅನುದಿನ ಕವನ-೧೭೮೧, ಕವಿ: ಲೋಕಿ, ಬೆಂಗಳೂರು
* ವಿದಾಯಗಳು ಪೂರ್ಣಗೊಳ್ಳುವುದಿಲ್ಲ ನೆನಪುಗಳು ಕಾಡುವಾಗ * ಪ್ರೀತಿಯನ್ನು ಪೂರ್ಣ ನಂಬುಗೆಯೊಂದಿಗೆ ಆಸ್ವಾಧಿಸಬಾರದು * ವಿದಾಯಕ್ಕೂ ಮುನ್ನ ಅಪ್ಪುಗೆಯೊಂದು ಬಾಕಿ ಉಳಿದುಬಿಡುತ್ತದೆ * ಕೊರಳಲ್ಲಿ ಉಳಿದ ಹನಿಗಳನ್ನು ನಗುವೆಂಬ ಅಣೆಕಟ್ಟು ಹಿಡಿದಿಟ್ಟುಕೊಂಡಿದೆ * ಹಳತು ದಿನಗಳು ಕ್ಯಾಲೆಂಡಿರಿನಲ್ಲಿಯೇ ಕೆಂಪು ಶಾಯಿಯಲ್ಲಿ ಉಳಿದುಬಿಟ್ಟಿದೆ…
ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ
ಬಳ್ಳಾರಿ. ನ. 16: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದೊಂದಿಗೆ ನ. 22 ಮತ್ತು 23 ರಂದು ಎರಡು ದಿನಗಳ ಕಾಲ ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ…
ಬಳ್ಳಾರಿಯಲ್ಲಿ ‘ಐದನಿ’ ಪ್ರಶಸ್ತಿ ಪ್ರದಾನ: ಪ್ರಾಕ್ತನಶಾಸ್ತ್ರಜ್ಞ ಪ್ರೊ.ರವಿ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ – ಡಾ.ಕುಂ ವೀ ಶ್ಲಾಘನೆ
ಬಳ್ಳಾರಿ, ನ.15:ಪ್ರಾಕ್ತನಶಾಸ್ತ್ರಜ್ಞ ಪ್ರೊ.ರವಿ ಕೋರಿಶೆಟ್ಟರ್ ಅವರು ಅಪೂರ್ವ ಸಾಧಕ, ಸಂಶೋಧನಾ ಜಂಗಮ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಕುಂ ವೀರಭದ್ರಪ್ಪ (ಕುಂವೀ) ಶ್ಲಾಘಿಸಿದರು. ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ…
ಅನುದಿನ ಕವನ-೧೭೮೦, ಕವಿ: ಎನ್.ಕೆ.ಹನುಮಂತಯ್ಯ ಕವನದ ಶೀರ್ಷಿಕೆ:ಸಾಲುಮರದ ತಿಮ್ಮಕ್ಕ
ಸಾಲುಮರದ ತಿಮ್ಮಕ್ಕ ನಾಡಿಗೆ ಕನ್ನಡಿಯಾದ ಬಡವಿ ಸಾಲುಮರದ ತಿಮ್ಮಕ್ಕ ಗಿಡ ಮರ ಸಾಕಿ ಸಲುಹಿದ ತಾಯಿ ಸಾಲು ಮರದ ತಿಮ್ಮಕ್ಕ ನೋವಿನ ಸುಡುಗಾಡಲ್ಲಿ ಹಸಿರು ಹಡೆದ ತಿಮ್ಮಕ್ಕ ಹೊಲಸೆಂದು ನೂಕಿದ ಮಡಿಲಿನ ಒಳಗೆ ಪಕ್ಷಿ ತೂಗಿದ ತಿಮ್ಮಕ್ಕ ಬಿಸಿಲಿನ ಕಡಲಲಿ ನೆರಳ…
ಕೆಯುಡಬ್ಲ್ಯೂಜೆ ವತಿಯಿಂದ ನ.16ರಂದು ಮಂಡ್ಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ -ಶಿವಾನಂದ ತಗಡೂರು
ಬೆಂಗಳೂರು, ನ. 15: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನ.16ರಂದು ಭಾನುವಾರ ಸಂಜೆ 6ಕ್ಕೆ ಮಂಡ್ಯದಲ್ಲಿ ರಾಷ್ಟ್ರೀಯ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು…
ಅನುದಿನ ಕವನ-೧೭೭೯, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ, ಕವನದ ಶೀರ್ಷಿಕೆ: ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ
ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ಸಾಲು ಮರವೇ ಹಾಗೆ…! ಗಿಡದ ನೆರಳನೇ ಮಕ್ಕಳಾಗಿಸಿಕೊಂಡು ಕಪ್ಪು,ಕೆಂಪು ನೆಲವೆನ್ನದೇ ಹಿಂಗಿ ನುಂಗಿದ ನೀರಲಿ ಬೇರುಗಳು ಗಟ್ಟಿಗೊಂಡು ಕೊರಡು ಕಾಂಡಲ್ಲೂ ಚಿಗುರೊಡೆದು, ಬಳಿ ಬರುವವಗೆ ಸೊಂಪಾದ ತಂಪ ನೆರಳ ನೀಡಿ ಗಂಧ ಗಾಳಿಯಲಿ ಮರದವ್ವನ ಹೆಸರಿನ…
ಅನುದಿನ ಕವನ-೧೭೭೮, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ
ಕವಿದ ಮೋಡ ಕೊಂಚ ಬಾನಲಿ ಮಳೆಯ ತಂದ ನಿನ್ನ ಗುಂಗಲಿ ಕಳೆದು ಹೋದೆ ನಿನ್ನಲಿ ನೀನೆ ಕಾಣಲು ಕಣ್ಣಲಿ ಕನವರಿಕೆ ನೂರಾರು ಜನ ಜಾತ್ರೆ ನಡುವೆ ನಾ ದಾರಿ ತಪ್ಪಿ ನಿಂತೆ ನೀ ಎಲ್ಲೆಲ್ಲೂ ಹೀಗೇಕೆ ಕಾಡುವೆ ಓ ಬಾಲೆ ಕುಸುಮಬಾಲೆ…
ಅನುದಿನ ಕವನ-೧೭೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಗಂಡಸೆರಲ್ಲರೂ ಕೆಟ್ಟವರಲ್ಲ ..
ಗಂಡಸೆರಲ್ಲರೂ ಕೆಟ್ಟವರಲ್ಲ .. ಅರೆ ಇವಳೇನು ಇದಕ್ಕಿದಂತೆ ಹಾಯಿ ತಪ್ಪಿದ ದೋಣಿಯಂತೆ, ಅಲೆಗಳ ಮಧ್ಯ ತೇಲುತ್ತಾ ಸಾವಿರ ಮಾತುಗಳ ತೂಕ ಹೊತ್ತಂತೆ, ಫೆಮಿನಿಸಂನ ಹೊಳೆ ಬಿಟ್ಟಂತಿದೆ ಎಂದು ನೀವಂದುಕೊಂಡರೆ, ನನಗದು ಅಚ್ಚರಿಯೇನಲ್ಲ. ರಾತ್ರಿ ಊರೂರು ದಾಟಿ ಬರುವ ಅವರ ಹೆಜ್ಜೆಗಳಲ್ಲಿ ದಣಿದ…
ಅನುದಿನ ಕವನ-೧೭೭೬, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಯುದ್ಧ!!?
ಯುದ್ದ!!? ಒಲವಯುದ್ದವೋ…? ವಿರಾಮವೋ..? ಸಂಧಾನವೋ..? ಆತ್ಮಾನುಬಂಧವೋ…? ಅದ್ಯಾವುದರ ಸೆಳೆತವೋ ಕಾಣೆ ನಾ?!! ಒಲವಲಿ ಮಿಂದೇಳುವ ಘಳಿಗೆಯಲಿ… ನನ್ನೊಳಗೆ ನೀನೋ…!? ನಿನ್ನೊಳಗೆ ನಾನೋ!!? ಏನೆಂದೂ ಅರಿಯೆ ನಾ.!. ಸೋತದ್ದು ನಾನೋ… ಗೆದ್ದದ್ದು ನೀನೋ…!? ಅಥವಾ ಸೋಲು ಗೆಲುವುಗಳ ಮೀರಿದ ಭಾವದ ಯುದ್ದದಲಿ ಇಬ್ಬರೂ…
