ಅಂಬೇಡ್ಕರ್ ಎಂದರೆ ಅಂಬೇಡ್ಕರ್ ಎಂದರೆ ಸಾಮರಸ್ಯದ ಪಿತ ಸಮಸಮಾಜಕ್ಕ ಸತ್ಪಥವ ತೋರಿದಾತ ಸರ್ವರೂ ಸಮಾನರು ಎಂದಾತ ಆನಂದ-ಪರಮಾನಂದ ನೀಡಿದಾತ!!1!! ಅಂಬೇಡ್ಕರ್ ಎಂದರೆ ಅಕ್ಷರದ ಕ್ಷೀರಸಾಗರ ಅಕ್ಕರೆಯ ಅರಿವಿನ ಮಹಾಸಾಗರ ಆರ್ಭಟಗಳನು ಅಡಗಿಸಿದ ಹೋರಾಟಗಾರ ಬಾಳ ಗೆಲುವಿನ ದಾರಿ ತೋರಿದ ಛಲಗಾರ!!2!! ಅಂಬೇಡ್ಕರ್…
Category: ರಾಜ್ಯ
ಅನುದಿನ ಕವನ-೧೫೬೫, ಕವಿ: ಟಿ.ಪಿ.ಉಮೇಶ್ ಹೊಳಲ್ಕೆರೆ, ಕವನದ ಶೀರ್ಷಿಕೆ: ರಸಭರಿತ ಕವಿತೆ
ರಸಭರಿತ ಕವಿತೆ ಮೂಡಿ ಬಿದ್ದಂತಲ್ಲ ಚಿಗುರು ಎಲೆಯಾಗಬೇಕು ಹೂವ ಒಡಮೂಡಿಸಬೇಕು ಈಚು ಕಾಯಿ ದೋರೆ ಹಣ್ಣು ಮಾಗಿ ಮಾಗಿ ಉದುರಬೇಕು ಅದಾಗಲೇಬೇಕು ಅದು ಗುರುತ್ವಾಕರ್ಷಣೆ! ವಾತಾನುಕೂಲಿ ವಿಜ್ಞಾನಿಯ ತರ್ಕ ಮಂಡನೆ! ಉದುರಿದ ಹಣ್ಣು ನನ್ನ ಕೋಮಲೆಯ ಕಣ್ಣು; ಹಣ್ಣ ಘಮವನ್ನೇ ಆಘ್ರಾಣಿಸದ…
ಅನುದಿನಕವನ-೧೫೬೪, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ಖಾಲಿ ಗಾಜಿನ ಮುಂದೆ ನಾನು… ಮದಿರೆ ಸುರಿಯುತ್ತಿದ್ದಂತೆ ನೋಡುತ್ತಿದ್ದೇನೆ ಇನ್ನೂ.. ಬಂಗಾರದ ಬಣ್ಣ.. ಆಗಸದ ಚಂದ್ರನೂ ಮಧುಪಾತ್ರೆಯೊಳಗೆ ಕಾಣುವಂತೆ.. ಮದಿರೆ ತುಂಬುತ್ತ ಹೋದಂತೆ ಜಗವೆಲ್ಲ ಖಾಲಿಯಾಗುತ್ತಿತ್ತು.. ನಾನು ಮದಿರೆಯಾಗಿದ್ದಿದ್ದರೆ.. ನೀನು ಜೊತೆಯಿರುತ್ತಿದ್ದೆ.. ಎಲ್ಲ ಕಾಲದಲೂ ನೆನೆಯುತ್ತಿದ್ದೆ.. ಬಳಲಿದಾಗ, ದುಃಖವಾದಾಗ.. ಸಂತಸದಲ್ಲಿ… ಪ್ರತಿ…
ಅನುದಿನ ಕವನ-೧೫೬೩, ಕವಿ: ಸಿದ್ಧರಾಮಕೂಡ್ಲಿಗಿ, ಕವನದ ಶೀರ್ಷಿಕೆ: ನಾನು ಬರೆಯುತ್ತೇನೆ
ನಾನು ಬರೆಯುತ್ತೇನೆ ನಾನು ಬರೆಯುತ್ತೇನೆ ಯಾರನ್ನೂ ಮೆಚ್ಚಿಸಲಲ್ಲ ಹೊಗಳಿಸಿಕೊಳ್ಳಲೂ ಅಲ್ಲ ಉಪದೇಶಕ್ಕಾಗಿ ಖಂಡಿತ ಅಲ್ಲ ಕೇವಲ – ಹೃದಯದ ಮಿಡಿತವನ್ನು ಅಕ್ಷರಗಳನ್ನಾಗಿಸುವುದಕ್ಕಾಗಿ ಮತ್ತು ಆಗಾಗ ಸಾಯುವ ಬದುಕನ್ನು ಮತ್ತೆ ಬದುಕಿಸುವುದಕ್ಕಾಗಿ ನಾನು ಬರೆಯುತ್ತೇನೆ ನನ್ನೊಳಗೆ ಅರಳಿದ ಹೂಗಳು ಮತ್ತೊಬ್ಬರ ಮನಗಳಲ್ಲೂ ಅರಳಲೆಂದು…
ಅನುದಿನ ಕವನ-೧೫೬೨, ಕವಿ:ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು
ಒಂಟಿತನವಿಲ್ಲಿ ಮುಗಿಯುವುದಿಲ್ಲ ನಿರೀಕ್ಷೆಗಳು ಹೆಗಲು ಹೇರಿದ ಚೀಲ ಆಸರೆಗಳು ತಾತ್ಕಾಲಿಕ ಖಾಯಂ ಊರುಗೋಲಿಗಿಲ್ಲಿ ನಾಳೆಗಳು ಭಿಕ್ಷೆ ಬೇಡಿಸುತ್ತವೆ ದಿನವು ಎಡವುತ್ತಿರುವ ಕಾಲಿಗಿಲ್ಲಿ ರಕುತದ ಹರಿವು ಸಹ ಜಡ ತಿಳಿವೊಲ್ಲದು ಚಿಕಿತ್ಸಕದ ರೂಪ ಕೀವು ಕಟ್ಟಿದ ಆಳದ ಗಾಯಗಳಿಗೆ ದೂಡುತ್ತಿರುವ ಗಳಿಗೆಗಳು ನನ್ನಂತೆ…
ಕಾರಂತ ರತ್ನ ಪ್ರಶಸ್ತಿ ಪ್ರದಾನ: ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ -ಚೋರನೂರು ಟಿ ಕೊಟ್ರಪ್ಪ.
ಬಳ್ಳಾರಿ.ಏ.೯. ಮನುಷ್ಯನ ಸರ್ವಾಂಗ ಸುಂದರ ಬದುಕಿನ ನಿರ್ಮಾಣಕ್ಕೆ ಕಲೆ ಮತ್ತು ಸಂಸ್ಕೃತಿ ಪೂರಕವಾಗಿವೆ. ಕಲಾವಿದರು ಮತ್ತು ಕಲಾಭಿವೃದ್ಧಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಳವಾದಂತೆ ಕಲೆಯ ಬೆಳವಣಿಗೆ ತಾನಾಗಿಯೇ ಆಗುತ್ತದೆ. ಆದರೂ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯ ಎಂದು ಕನ್ನಡ…
ಅನುದಿನ ಕವನ-೧೫೬೧, ಕವಯಿತ್ರಿ: ಪಾರ್ವತಿ ಸ್ವಪ್ನ, ಬೆಂಗಳೂರು, ಕವನದ ಶೀರ್ಷಿಕೆ:ನನ್ನೊಲವೇ
ನನ್ನೊಲವೇ ನೀನಿರಲು ಜೊತೆಯಲ್ಲಿ… ಜಾಜಿ ಮಲ್ಲಿಗೆಯ ಕಂಪು ಹಕ್ಕಿಗಳ ಕಲರವ ಇಂಪು ಸುಡುವ ಸೂರ್ಯನೂ ತಂಪು… ನೀನಿರಲು ಜೊತೆಯಲ್ಲಿ…. ಹೃದಯ ಮಾಡುವುದು ನರ್ತನ ಮುಳ್ಳಿನ ಹಾದಿಯು ಹೂಬನ ಬದುಕು ಸುಂದರ ನೀನದರ ಚೇತನ….. ನೀನಿರಲು ಜೊತೆಯಲ್ಲಿ…….. ನಾಳೆಗಳ ಚಿಂತೆಯಿಲ್ಲಾ. ನೆನ್ನೆಗಳ ಅರಿವು…
ಅನುದಿನ ಕವನ-೧೫೬೦, ಕವಿ: ಎ.ಎನ್ ರಮೇಶ ಗುಬ್ಬಿ, ಕವನದ ಶೀರ್ಷಿಕೆ: ಅನೂಹ್ಯ ಕವನ!
ಅನೂಹ್ಯ ಕವನ.! ಸುಸ್ವರ ಅಪಸ್ವರಗಳ ರಾಗ ವಿರಾಗಗಳ ಮಹಾನ್ ಕೀರ್ತನ.! ಸಹಸ್ರ ಭಾವಗಳ ಬಗೆಬಗೆ ಬಣ್ಣಗಳ ಮಯೂರ ನರ್ತನ.! ರಂಗು ರಂಗಿನಾಟದ ಮಾಯಾ ಛಾಯೆಯ ಇಂದ್ರಚಾಪ ದರ್ಶನ.! ಅನುಕ್ಷಣ ಅನೂಹ್ಯ ಅನಿರೀಕ್ಷಿತಗಳ ಬಿಚ್ಚಿ ಬೆಚ್ಚಿಸುವ ಸಂಚಲನ.! ಅರಿವು ಅಧ್ಯಯನಗಳ ಪರಿಧಿಗೆಂದು ನಿಲುಕದ…
ಅನುದಿನ ಕವನ-೧೫೫೯, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನ ಮಲ್ಲಿಗೆ…
ನನ್ನ ಮಲ್ಲಿಗೆ… ಒಲವಿಗೆಗಲ ಕೊಟ್ಟೆ ನೀನು ಒಲವಿನೊಲವ ಚೆಲುವು ನೀನು ಒಲವೆ ಆಗಿ ಬಂದೆ ನೀನು ಒಲವನೊತ್ತ ಗೆಲುವು ನೀನು ನನ್ನ ನಾಳೆ ಮಲ್ಲಿಗೆ… ಎಲ್ಲ ಬೇನೆ ದೂಡಿದವಳೇ ಕೂಡಿಕೊಂಡೆ ಕಷ್ಟ ಕಳೆದು ನೂರು ಬಾರಿ ಮೆಚ್ಚಿದವಳೇ ಬಂದೆ ಬಳಿಗೆ ನೋವ…
ಅನುದಿನ ಕವನ-೧೫೫೮, ಕವಯಿತ್ರಿ: ಡಾ.ಭಾರತಿ ಅಶೋಕ್, ಹೊಸಪೇಟೆ
ಬರಗೆಟ್ಟ ಭರವಸೆಗಳು ನೆಲಕ್ಕೊರಗಿ ಆಲಾಪಿಸುತ್ತಿರುವಾಗ ಅಲ್ಲೊಮ್ಮೆ ಮಳೆ ಸುರಿದು ತಂಪಾದ ವಾರ್ತೆಗೆ ಕಿವಿಯಾನಿಸಿ ಇಲ್ಲೂ ಅಂತಹದ್ದೆ ತಂಪಿಗೆ ಹಪಾಹಪಿಸಿ ಸೋತಾಗ… ಇನ್ನೆಲ್ಲೋ ಮತ್ತದೆ ತಂಪಿನ ಸುವಾರ್ತೆ ಆಸೆಯ ಪಸೆ ಒಸರಿಸುತ್ತದೆ. ಪಸೆಯೂ ಇಲ್ಲವಾಗಿ ಒರಟು ದೇಹ ಒರಟೊರಟಾದ ನೆಲಕ್ಕೊರಗಿ ಬೆನ್ನ ನವೆ…