ಈ ಯುದ್ಧಗಳ ಕುರಿತು…. ಈ ಯುದ್ಧಗಳ ಕುರಿತು ಪದ್ಯ ಬರೆಯಲು ಆಗುವುದಿಲ್ಲ ಅಲ್ಲಿ ಸಾವಿರುತ್ತದೆ ನೋವಿರುತ್ತದೆ ಎಳೆ ಮಕ್ಕಳ ಆಕ್ರಂದನವಿರುತ್ತದೆ… ಅಲ್ಲಿ ಸತ್ತವರ ಲೆಕ್ಕ ಎಣಿಸಲಾಗುತ್ತದೆ ಮದ್ದುಗುಂಡುಗಳ ಶಬ್ಧವಿರುತ್ತದೆ ಮಕ್ಕಳು ಮರಿಗಳ ಗೋಳಾಟವಿರುತ್ತದೆ ದೊರೆಗೆ ಲಾಭದ ದುರುದ್ದೇಶವಿರುತ್ತದೆ ಈ ಯುದ್ಧಗಳೇ ಆಗೆ…
Category: ರಾಜ್ಯ
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ರ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಚುನಾವಣೆ ನಡೆದ ಸಂಧರ್ಭದಲ್ಲಿ ರಾಜ್ಯಕಾರ್ಯಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಹುದ್ದೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ ಪದಾಧಿಕಾರಿಗಳ…
ಅನುದಿನ ಕವನ-೧೯೦೧, ಕವಿ:ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕಾವ್ಯ ಪ್ರಕಾರ: ಗಜಲ್
ಗಜಲ್ ಇರಲಿಲ್ಲಿ ಇಲ್ಲವೊಂದು ನನಗಿಲ್ಲಿ ಯಾವ ಸರಿ ಕಾರಣವು ನೀನಿರದೆ ಬಾಳಿನಲಿ ನೆಪವೊಂದು ಹುಡುಕುತಿದೆ ಮನವು ಪಂಜರ ಮುರಿದರು ಹಾರದೆ ಹಕ್ಕಿ ಇಲ್ಲಿಯೇ ಉಳಿದಿದೆ ಏಕೋ ಬಂಧನವೆ ಹಿತವಾಗಿ ನೀಲ ಬಾನಾಗಿದೆ ಈಗ ನೋವು ಏನಿಲ್ಲ, ಏನಿದೆಯೋ, ಅದಾರ ಕೇಡು ದೃಷ್ಟಿ…
ಅನುದಿನ ಕವನ-೧೯೦೦, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೆನಪುಗಳ ಒಲುಮೆ
ನೆನಪುಗಳ ಒಲುಮೆ ಅರುಚಾಟ ಕಿರುಚಾಟಕೆ ಸೆಡುವಾಗಿದೆ ಮೌನದ ನೆನಪ ಒಲುಮೆ ಇದು ಸಿರಿಯ ಸ್ವತ್ತಲ್ಲ ಇದಕೆ ತಂಗಾಳಿಯ ಹಸಿರು ನೆಲ ಕೈ ಬೀಸಿ ಕರೆಯುತ್ತಿದೆ. . ಆದರೂ ಜಾಡಿರದ ಪ್ರೀತಿ ಒಲುಮೆಗೆ ಕಬ್ಬಿಣದ ಕುಲುಮೆ ಬಗ್ಗು ಬಡಿಯುತ್ತಿದೆ ಬ್ಯಾಸರದ ಉಸಿರು ನಗೆ…
ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಚಿಂತನೆಗಳ ಮಂಥನ ಅತ್ಯಗತ್ಯ -ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಶಂಕರಘಟ್ಟ(ಶಿವಮೊಗ್ಗ), ಮಾ.14: ಇಡೀ ಜಗತ್ತಿಗೆ ಮಾದರಿ ವ್ಯಕ್ತಿತ್ವಗಳಾದ ಬುದ್ದ ಬಸವ ಗಾಂಧಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಂಥನ ಮಾಡುವುದು ಪ್ರಸ್ತುತ ಅತ್ಯಗತ್ಯ ಎಂದು ಖ್ಯಾತ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ…
ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು: ಸಿಎಂ ಸಿದ್ದರಾಮಯ್ಯ
ಪತ್ರಕರ್ತರಿಗೆ ವೃತ್ತಿಧರ್ಮ ಬಹಳ ಮುಖ್ಯ: ಸಿಎಂ ಬೆಂಗಳೂರು ಮಾ 13: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ…
ಅನುದಿನ ಕವನ-೧೮೯೯, ಹಿರಿಯ ಕವಿ: ಗುಲ್ಜಾರ್, ಕನ್ನಡಕ್ಕೆ: ಚಿದಂಬರ ನರೇಂದ್ರ, ಬೆಂಗಳೂರು
ಕಂಡಿದ್ದೀಯ? ಮುಟ್ಟಿ ನೋಡಿದ್ದೀಯಾ ಒಮ್ಮೆಯಾದರೂ ಆತ್ಮವನ್ನ? ನಿಗಿ ನಿಗಿಸುತ್ತಿರುವ ದಟ್ಟ ಮಂಜಿನ ಬಿಳೀ ಚಾದರದೊಳಗೆ, ಉಸಿರಾಡುತ್ತಿರುವ ಒಳದನಿಗೆ ಒಮ್ಮೆಯಾದರೂ ಕಿವಿಗೊಟ್ಟಿದ್ದೀಯಾ? ರಾತ್ರಿ ದೋಣಿಯಲ್ಲೊಮ್ಮೆ ಸರೋವರದ ತೀರದಲ್ಲಿ ಡೇರೆ ಹಾಕಿದಾಗ, ನೀರಿನ ಅಲೆಗಳ ನಡುವಿನ ಗುಸುಗುಸು, ಬಿಕ್ಕುತ್ತಿರುವ ಗಾಳಿಯ ಒಳಗುದಿಯನ್ನು ಎಂದಾದರೂ ಕೇಳಿಸಿಕೊಂಡಿದ್ದೀಯಾ?…
ಅನುದಿನ ಕವನ-೧೮೯೮, ಕವಿ: ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ನನ್ನ ಮನದ ಮೌನ ಮಂದಿರದಲ್ಲಿ ದಿನವೂ ದೀಪ ಬೆಳಗಲಿದೆ , ಕೋಪದ ಕತ್ತಲೆಯನ್ನು ಸೀಳಿ ಕರುಣೆಯ ಬೆಳಕು ಹರಡಲಿದೆ. ನೋವಿನ ಮಾತುಗಳು ಹೋಗಿ, ಸ್ಮೃತಿಗಳ ನೆರಳು ಮಂಕಾಗಿ, ಕ್ಷಮೆಯ ಮೃದುವಾದ ಸ್ವರದಲ್ಲಿ ಮನದ ನೋವು ಕರಗುತ್ತದೆ. ಬಂಧನದ ದ್ವೇಷದ ಸರಪಳಿ ಕ್ಷಮೆಯ…
ಅನುದಿನ ಕವನ-೧೮೯೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ: ದೇವರಾಗುವುದು ಸುಲಭ
ದೇವರಾಗುವುದು ಸುಲಭ ಉಳಿಪೆಟ್ಟು ತಿನ್ನುವ ಶಿಲೆಯಷ್ಟೇ ದೇವರಾಗುವುದಿಲ್ಲ, ಉಳಿಯನ್ನೂ ನಯವಾಗಿ ಸಿಹಿಮಾತುಗಳಿಂದ ಕರಗಿಸಿಬಿಡುವ ನಡೆದಾಡುವ ದೇವರುಗಳೂ ಉಂಟು ಈ ನೆಲದ ಮೇಲೆ ತಪ್ಪುಗಳನ್ನೆಲ್ಲ ಎತ್ತಿ ತೋರಿಸದಿದ್ದರೆ ದೋಷಗಳನ್ನು ಖಂಡಿಸದೆ ಅಪ್ಪಿ ಮುದ್ದಾಡಿಬಿಟ್ಟರೆ ಇದಿರಿದಿರು ಸುಖಾಸುಮ್ಮನೆ ಹಾಡಿ ಹೊಗಳಿಬಿಟ್ಟರೆ ಇಲ್ಲಿ ದೇವರಾಗುವುದು ಬಲು…
ಅನುದಿನ ಕವನ-೧೮೯೬, ಕವಿ: ಸಿದ್ದು ಜನ್ನೂರು, ಚಾಮರಾಜನಗರ
ಬುದ್ಧನಾಗಬೇಕಿಲ್ಲ…! ನೀನು ಬುದ್ಧನಾಗಬೇಕಿಲ್ಲ ಅವನ ಹಾದಿ ಹಿಡಿದರೆ ಸಾಕಿತ್ತು ನೀನು ಯುದ್ಧ ಬಿಟ್ಟು ಶಾಂತಿಪ್ರಿಯ ಅಶೋಕನಂತಾಗುತ್ತಿದ್ದೆ… ಯುದ್ಧವೆಂದರೆ ಅಶೋಕ ರಕ್ತದ ಕೋಡಿಯನ್ನೆ ಹರಿಸಿದ ಶೂರ ಕೊನೆಗೆ ಆ ಸಾವು-ನೋವು ಕೈ ಇಲ್ಲದ ಕಾಲಿಲ್ಲದ ಸೈನಿಕರ ಗೋಳಾಟ ಚೀರಾಟ ಸಂಕಟ ಎಲ್ಲಾವನ್ನು ಕಣ್ಣೆದುರೆ…
