ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಅತ್ತಲ ಪಡುವಣದ ಸುಳಿಗಾಳಿ ಇತ್ತಲ ಕತ್ತಲರಾಜ್ಯದಲ್ಲಿ ತೀಡಿದ ದಶಂಬರದ ಚಳಿಗಾಲದಲ್ಲಿ ಚಂದ್ರಮಂಡಲದ ಬೆಳಕಿನಲ್ಲಿ ಕುರುಬ ಬೊಪ್ಪೇಗೌಡನು ಮಂಟೇಸ್ವಾಮಿ ನಿರ್ವಾಣ ಹೊಂದುವಾಗ ಕುರಿರೊಪ್ಪದ ಜೀವತಾಣದ ಉಸಿರು…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೮೧೯, ಕವಯತ್ರಿ: ಎನ್.ಸಂಧ್ಯಾರಾಣಿ, ಬೆಂಗಳೂರು, ಕವನದ ಶೀರ್ಷಿಕೆ: ಪಾಂಚಾಲಿ
ಪಾಂಚಾಲಿ ಅಗ್ನಿಯಿಂದ ಹುಟ್ಟಿದವಳು ಬಾಳೆಲ್ಲಾ ಧಗಧಗ, ಧಗಧಗ ಉರಿದವಳು ದ್ರುಪದ ರಾಜನನಿಗೆ ಮಗಳು, ಜಗದೋದ್ಧಾರನಿಗೆ ತಂಗಿ ಉಪಪಾಂಡವರಿಗೆ ತಾಯಿ, ಕುಂತಿಗೆ ಸೊಸೆ ಅಭಿಮನ್ಯುವಿಗೆ ದೊಡ್ಡಮ್ಮ ಗಂಡಂದಿರ ವಿಷಯ ಬೇಡಬಿಡಿ ಎಲ್ಲರಿಗೂ ಸೇರಿದವರು ಯಾಕೋ ಯಾರಿಗೂ ಸೇರಿದವರಾಗುವುದಿಲ್ಲ… ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟಿದವಳಲ್ಲ ದ್ರುಪದನ…
ಅನುದಿನ ಕವನ-೧೮೧೮, ಕವಯತ್ರಿ:ಗಾಯತ್ರಿ ಬಿ, ತೋರಣಗಲ್ಲು, ಕವನದ ಶೀರ್ಷಿಕೆ: ನಗುಮುಖದ ನೋವಿನ ಗೆರೆ
ನಗುಮುಖದ ನೋವಿನ ಗೆರೆ ನಗು ಮುಖದ ನೋವಿನ ಗೆರೆಗಳಳಿಸುವ ಮಾಂಸದ ತಡಿಕೆಯಾದೆ ದುಃಖವೆಂಬ ವಿಷಕೆ ಸಿಹಿ ಗಾಳಿಯಾಗಿ ಮನದಾಳದ ಮಾತಿಗೆ ಸೇತುವೆಯಾದೆ. ಕಾಡ್ಗಿಚ್ಚಿನ ಹೊಟ್ಟೆಕಿಚ್ಚಿಗೆ ಮುಂಗಾರು ಮಳೆಯಾಗಿ ಇಬ್ಬನಿಯಂತೆ ಕರಗಿಸಿದೆ ಮನಸಿನ ಭಾರವ ಬಾಡಿದ ಮೊಗದ ಕಳೆಗೆ ನೀನಾದೆ ವನೌಷಧಿಯಂತೆ. ಮೌನದ…
ಅನುದಿನ ಕವನ-೧೮೧೭, ಕವಯತ್ರಿ: ಡಾ.ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಪ್ರೀತಿಸುವುದು ಬಲು ಸುಲಭ
ಪ್ರೀತಿಸುವುದು ಬಲು ಸುಲಭ ಪ್ರೀತಿಸುವುದು ಬಲು ಸುಲಭ ನಾನು ನೀನಾದರಾಯಿತು. ಉಲಿವುದೆಲ್ಲವೂ ಪ್ರೀತಿಯೇ ಆದರೆ ಹಾಗೆ ನಟಿಸುವುದು? ಹಾಗೆ ನಟಿಸುವುದಕ್ಕೆ ನೀನು ನೀನಾಗಿರಲೇಬೇಕು ಪ್ರತಿ ಕ್ಷಣವೂ ಪ್ರೀತಿಸುವುದು ಬಲು ಸುಲಭ ಮಾತಿಗೆ ತಡಕಾಡುವಂತಿಲ್ಲ,ನಾಲಿಗೆಗೆ ಜರಡಿ ಬೇಕಿಲ್ಲ ಆದರೆ ಹಾಗೆ ನಟಿಸಲು ಮಾತು…
ನಾ ಓದಿದ ಪುಸ್ತಕ: ಹೆಕ್ಕಿತಂದ ನೆನಪುಗಳು (ಕೃತಿಕಾರರು: ಗುರುರಾಜ್ ಕೊಡ್ಕಣಿ, ಯಲ್ಲಾಪುರ) , ಪುಸ್ತಕ ಓದಿದವರು:ಶ್ರೀಪಾದ್ ಭಟ್, ಯಲ್ಲಾಪುರ
ಮಿತ್ರರು, ನಮ್ಮ ಊರಿನ ಪತ್ರಿಕಾ ಅಂಕಣಕಾರರೂ ಯುವ ಲೇಖಕರೂ ಆದ ಸಾಹಿತ್ಯ ಪ್ರೀತಿಯ ಜೀವ ಗುರುರಾಜ್ ಕೊಡ್ಕಣಿಯವರ ಹೆಕ್ಕಿತಂದ ನೆನಪುಗಳು ಎಂಬ ಕೃತಿ ಅಂಕಿತದಿಂದ ಇದೀಗ ಪ್ರಕಟವಾಗಿದೆ. ಇದನ್ನು ಓದಿದವರು ಖಂಡಿತ ತಮ್ಮ ಬಾಲ್ಯಕ್ಕೆ ಹಿಂದಿರುಗುತ್ತಾರೆ, ಹೀಗೆ ಮಾಡುವುದು ಈ ಕೃತಿಯ…
ಅನುದಿನ ಕವನ-೧೮೧೬, ಕವಯತ್ರಿ:ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ಮನೆಯ ಮುಂದಿನ ಮರಕ್ಕೆ ಜೋತ ಮುದಿ ಜೀವ ತಲೆಗೆ ಸುತ್ತಿದ ರುಮಾಲು ಮೇಲೊಂದಿಷ್ಟು ಹುಲ್ಲಿನ ಎಳೆಗಳು ಏಸುಕ್ರಿಸ್ತ ತೊಟ್ಟ ಮುಳ್ಳಿನ ಕಿರೀಟದಂತೆ ಕೈಯ ತುಂಬೆಲ್ಲ ಒರಟು ಗೆರೆಗಳು ಮೊಳೆ ಹೊಡೆಯುವುದಷ್ಟೇ ಬಾಕಿ ಮುಖ ಕ್ಷಮೆಯ ಮೀರಿಸುವಂತೆ ಶೂನ್ಯ ದಿಟ್ಟಿಸುತ್ತಿತ್ತು ನೇಗಿಲೇ ಶಿಲುಬೆಯಾದಮೇಲೆ…
ಕಥೆ:ನಾನು, ಕತೆಗಾರರು: ಗಾಯತ್ರಿ ಬಿ, ತೋರಣಗಲ್ಲು
ನಿನ್ನೆಸರಲ್ಲಿ ಬದುಕಿದೆನು.ನಿನ್ನುಸಿರಲ್ಲಿ ಬೆರೆತಿಹೆನು. ತನುಮನವ ಆವರಿಸಿ ಅರ್ಧನಾರೀಶ್ವರನಂತೆ ಕಾಣುವ ನಿನಗೆ ನೀನೇ ಯಾರೆಂದು ತಿಳಿಯದು ? ಎಂತಹ ವಿಪರ್ಯಾಸ ! ಅಂದು, ಯಾಕೋ ಸ್ವಲ್ಪ ಮನಸ್ಸಿಗೆ ಕಸಿವಿಸಿ, ಬೇಸರ. ಎದ್ದು ಓಡಿ ಹೋಗಿ ಕನ್ನಡಿಯ ಮುಂದೆ ನಿಂತರೆ ನನ್ನನ್ನು ನೋಡಿ ನಗುವ…
ಅನುದಿನ ಕವನ-೧೮೧೫, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಬದುಕಿನೊಂದಿಗೆ ಎಷ್ಟು ನಡೆದರು ಸಾವಿನ ಬಂಡಿಯ ಏರಲೇಬೇಕಲ್ಲ ಎಷ್ಟು ನನ್ನವರೆಂದರೂ ಕೊನೆಗೊಮ್ಮೆ ಪಾಜಿಯ ತಲುಪಲೇಬೇಕಲ್ಲ ನೀರವತೆಯ ಒಂಟಿ ದಾರಿಯಲಿ ಅದೆಷ್ಟೊಂದು ಹೆಗಲೇರಿವೆ ಸದ್ದುಗಳು ಮುಗಿಯದ ದಾರಿಯೆಂದು ಸಾಗುವಾಗಲೇ ಬಯಕೆಯ ಸುಡಲೇಬೇಕಲ್ಲ ಅರಿವು ಮರೆವುಗಳೆಂಬ ಒಡನಾಟಗಳ ನಡುವೆಯೆ ಬೆಳಗಿದ ದೀಪವಿದು ಏಸು…
ಅನುದಿನ ಕವನ-೧೮೧೪, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ?
ನನ್ನ ಕವಿತೆಗೊಂದು ಶೀರ್ಷಿಕೆ ಕೊಡುವಿರಾ? ಅವಳ ಮುಗುಳ್ನಗೆ ನನ್ನ ಬದುಕಿಗೆ ಬರೆದ ಮುನ್ನುಡಿಯಂತಿತ್ತು. ಅಲ್ಲಿ ನಾನಿದ್ದೆ, ಅವಳಿದ್ದಳು ಪದ್ಯ ಇತ್ತು, ರಸ್ತೆ ಬದಿಯ ಮರಗಳಿದಗದ್ದವು, ನೀವೂ ಇದ್ದಿರಿ… ಈಗ ಅವಳ ಹುಬ್ಬು ಗಂಟಿಕ್ಕಿವೆ. ಹೂದಾನಿಯಲ್ಲಿನ ಹೂವಿನ- ಹಾಗೆ, ಸಾಯುತ್ತಿದೆ ಪ್ರೀತಿ ಉಸಿರುಕಟ್ಟಿ.…
ಅನುದಿನ ಕವನ-೧೮೧೩, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಗೆಳತಿ ಕವಿತೆಯೆಂದರೆ…
“ಕವಿತೆಯ ಮಾಧುರ್ಯ ಬಣ್ಣಿಸುವ ಸ್ವರ ರಿಂಗಣಗಳ ಸವಿ ಸುಂದರ ಕವಿತೆ. ಕಾವ್ಯ ಸೌಂದರ್ಯದ ಭಾವಭಾಷ್ಯಗಳ ಅನಾವರಣಗೊಳಿಸುವ ಮಧು ಮಧುರ ಅಕ್ಷರಪ್ರಣತೆ. ಹೆಚ್ಚೇನೂ ಹೇಳಲಾರೆ. ಓದಿದಷ್ಟೂ ಆಪ್ತವಾಗುತ್ತದೆ. ಆಳಕ್ಕಿಳಿದಷ್ಟೂ ಆತ್ಮೀಯವಾಗುತ್ತದೆ. ಆಸ್ವಾಧಿಸಿದಷ್ಟೂ ಆನಂದವಾಗುತ್ತದೆ. ಆರಾಧಿಸುವವರ ಆಂತರ್ಯ ಬೆಳಗುವ ಮಧುರಾನುಭೂತಿಯೇ ಕಾವ್ಯದ ಔದಾರ್ಯ. ಇದುವೆ…
