ಫಿಲ್ಟರ್’ ಆಗದ ಚಿತ್ರವೊಂದರ ಹುಡುಕಾಟದಲ್ಲಿದ್ದೇನೆ ಈಗಿಲ್ಲಿ ಆಕಾಶ, ಚಂದ್ರ, ಹಕ್ಕಿ, ಹೂವು ಸೂರ್ಯೋದಯ, ಚಂದ್ರೋದಯ ಎಲ್ಲವೂ ಫಿಲ್ಟರ್ ಆಗಿದೆ! ಫ್ರೆಶ್, ಕ್ಲಿಯರ್. ವಾರ್ಮ್,ಕೂಲ್ ಭಾಷೆಗಳ ಅರ್ಥಮಾಡಿಕೊಳ್ಳಬೇಕಿದೆ ಒಂಚೂರು ಚಿತ್ರವನ್ನು ಮಸುಕು ಮಾಡಿದರೆ, ಮಂಜು ಮಂಜಾಗಿಸಿದರೆ, ಕಾಲ ಬದಲಿಸಿ ಕಪ್ಪು ಬಿಳುಪಿಗೆ ಮರಳಿ…
Category: ಅನುದಿನ ಕವನ
ಅನುದಿನ ಕವನ-೧೩೮೮, ಹಿರಿಯ ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಮೊಂಬತ್ತಿ ಬೆಳಕಲ್ಲಿ ಸತ್ಯದ ಹುಡುಕಾಟ
ಮೊಂಬತ್ತಿ ಬೆಳಕಲ್ಲಿ ಸತ್ಯದ ಹುಡುಕಾಟ ಸತ್ಯ ಎಲ್ಲೋ ಅವಿತುಕೊಂಡಿದೆ ಮೂಲೆಯಲ್ಲಿ ಬೆಳಕು ಸಾಲುತ್ತಿಲ್ಲ ಮೊಂಬತ್ತಿ ಹಿಡಿದು ಸತ್ಯ ಹುಡುಕುವವರ ಕಣ್ಣುಗಳು ಮಸುಕು ಮಸುಕು ನಾನಿಲ್ಲಿರುವೆ ಬಾ ಎಂದು ಸತ್ಯ ಕಿರುಚುತ್ತಿದೆ ಸತ್ಯವನ್ನು ಯಾರೋ ಬಲವಾಗಿ ಕಟ್ಟಿ ಹಾಕಿದ್ದಾರೆ ಆ ಕಡೆ ಇವರು…
ಅನುದಿನಕವನ-೧೩೮೭, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು
ಎದ್ದುಹೋದ ಆತ್ಮಗಳಿಗೆ ಇಲ್ಲಿ ಮತ್ತೆ ಮತ್ತೆ ದೇಹ ಸೇರುವ ಆತುರ. ಕಾಯುತ್ತಾ ಕುಳಿತಿವೆ ಇಲ್ಲೇ ಎಲ್ಲೋ, ಮೈಯೆಲ್ಲಾ ಕಿವಿಯಾಗಿಸಿಕೊಂಡು ಕರೆವ ಯಾವುದೋ ಒಂದು ದನಿಗಾಗಿ. ಆತ್ಮದ ಬಾಗಿಲು ತಿರುತಿರುಗಿ ಬಡಿದು ಉಪವಾಸದಲ್ಲಿ ಹಿಡಿದಿಡಿದು ಉಪ್ಪುಖಾರದ ರುಚಿ ತಪ್ಪಿಸಿ ಸೊಗಸಿನೆಳಸಿಕೆಗೆ ಕಣ್ಣು ಮುಚ್ಚಿಸಿ…
ಅನುದಿನ ಕವನ-೧೩೮೬, ಕವಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಗೊತ್ತೇ ಇರಲಿಲ್ಲ ……
ಗೊತ್ತೇ ಇರಲಿಲ್ಲ …… ಗೊತ್ತೇ ಇರಲಿಲ್ಲ….. ನೀನಿಷ್ಟು ಛಲಗಾರನೆಂದು ಗಟ್ಟಿ ಹಟದವನೆಂದು ಪಟ್ಟು ಬಿಡದವನೆಂದು ನಾನೂ ಹಟಮಾರಿಯೇ ಆದರೂ ಆ ಹಟಕ್ಕೆ ಮೆತ್ತಗೆ ಬಾಗುವ ಕೋಮಲತೆ ಇದೆ ಗೊತ್ತೇ ಇರಲಿಲ್ಲ…… ನೀನಿಷ್ಟು ಗಡಸು ಗುಂಡಿಗೆಯ ವಜ್ರಾದಪಿ ಕಠೋರ ಮೌನದ ಇಷ್ಟೆತ್ತರದ ಬೆಟ್ಟದಷ್ಟೇ…
ಅನುದಿನ ಕವನ-೧೩೮೫, ಕವಯಿತ್ರಿ: ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಮೈಸೂರು ಜಿ., ಕಾವ್ಯ ಪ್ರಕಾರ: ಗಝಲ್
ಗಝಲ್ ಅಕ್ಷರಸಾಲಿಗೆ ಭೀತಿಯ ಬಿತ್ತಿದರೆ ಸಾಹಿತ್ಯ ಸಾಗುವುದು ಹೇಗೆ ಸಾಕ್ಷರರಾಗಲು ಪಾಟಿಯ ಹಿಡಿಯದೆ ಸಾಹಿತಿ ಬೀಗುವುದು ಹೇಗೆ ಜ್ಞಾನದ ಜ್ಯೋತಿಯು ಹೊತ್ತಿ ಬೆಳಗಲು ದೇವಿ ಕೃಪೆಬೇಕಲ್ಲವೇ ಶಿರವ ಬಾಗದೆ ಭಿತ್ತಿಯಲಿ ಬರಹ ಆಗುವುದು ಹೇಗೆ ಕವಿಯ ಮನಕೆ ಭಾವನೆಯು ಮೂಡದೆ ಕವನ…
ಅನುದಿನ ಕವನ-೧೩೮೪, ಕವಯಿತ್ರಿ: ರಂಹೊ, ತುಮಕೂರು
ಆರ್ದ್ರಗೊಳ್ಳದ ಎದೆಯಲ್ಲಿ ಕವಿತೆ ಹುಟ್ಟುತ್ತವಾ… ಕಟ್ಟಿದ ಪದಗಳು ಹಾರಾಡುತ್ತವಷ್ಟೆ! ಅಕ್ಷರಗಳ ಹಂಗಿಲ್ಲ ಆರ್ದ್ರ ಮನಸಿಗೆ ಅದು ತುಡಿಯುತ್ತದೆ ಸುತ್ತಲಿನ ನೋವಿಗೆ ಸಣ್ಣ ಪುಟ್ಟ ಬೆರಗಿಗೆ! ಮತ್ತೇನಿಲ್ಲ ಎದೆ ಆರ್ದ್ರಗೊಂಡು ತುಡಿದರೆ ಕವಿತೆ ಮೊಳೆಯುತ್ತದೆ ಮರವಾಗಿ ನೆರಳಾಗುತ್ತದೆ ಹೂವಾಗಿ ಗಂಧವಾಗುತ್ತದೆ! …
ಅನುದಿನ ಕವನ-೧೩೮೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಬದುಕೆಂದರೇ ಹೀಗೇ….
ಬದುಕೆಂದರೆ ಹೀಗೇ…….. ಬದುಕೆಂದರೆ ಹೀಗೇ…….. ಎಲ್ಲೋ ಒಂದೆಡೆ ಗೊತ್ತಿಲ್ಲದ ಜೀವ ಆಕಸ್ಮಾತ್ ಪರಿಚಯವಾಗಿಬಿಡುತ್ತೆ…….ಅಪಾರ ಪ್ರೀತಿ, ಅಭಿಮಾನ, ಗೌರವ ಎಲ್ಲ ಇಟ್ಟುಕೊಳ್ಳುತ್ತೆ……. ಬದುಕೆಂದರೆ ಹೀಗೇ………… ಹೊರಟ ದಾರಿಯಲ್ಲೇ ಆಕಾಸ್ಮಾತ್ ಅಪಾಯಕಾರಿ ತಿರುವು ಬಂದುಬಿಡುತ್ತೆ……… ಇನ್ನೇನು ಮಾಡಲಿ ಅನ್ನೋದರೊಳಗೇ ನಿರಾಳವಾದ ಒಂದು ದಾರಿ ಸಿಕ್ಕುಬಿಡುತ್ತೆ…….…
ಅನುದಿನ ಕವನ-೧೩೮೩, ಯುವ ಕವಿ:ಅಮೋಘವರ್ಷ ಪಾಟೀಲ, ಕ್ಯಾಸನೂರು, ಕವನದ ಶೀರ್ಷಿಕೆ:ಭೀತಿ – ನನ್ನ ರೀತಿ..
ಭೀತಿ – ನನ್ನ ರೀತಿ.. ನನ್ನ ನಿಗೂಢವಾದ ಗುಪ್ತ ಲೋಪದಲ್ಲಿ ಭಯಗಳೆಂಬ ನೀಲಿ ನೆರಳುಗಳು ತಂಗಾಳಿಯಂತೆ ತೇಲುತ್ತವೆ, ಅವು ನನ್ನ ಸಂಕೀರ್ಣ ಚಿಂತನೆಗಳ ನೆಲೆಗಳಲ್ಲಿ ನೆಲೆಸಿ, ಕಾಡುತ್ತವೆ. ಏನು ನಡೆಯಬಹುದು, ಏನಾದರೂ ನಡೆದರೆ, ನಡೆಯದಿದ್ದರೆ, ಈ ಎಲ್ಲಾ ಭಯಗಳ ನಡುವೆ, ನಾನು…
ಅನುದಿನ ಕವನ-೧೩೮೧, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅವ್ವನಿಗೆ….
ಅವ್ವನಿಗೆ…. ಹುಲಿ ಮ್ಯಾಲೆ ಕುಂತವಳೆ ನಂಗೆ ಭಯ! ದುರು ದುರು ಅಂತ ನೋಡ್ತಾಳೆ ನಂಗೆ ಭಯ! ನಾಲ್ಗೆ ಚಾಚಿ ಬೆಚ್ಚಿ ಬೀಳಿಸ್ತಾಳೆ ನಂಗೆ ಭಯ! ತ್ರಿಶೂಲ ಬೇರೆ ಅದೆ ನಂಗೆ ಭಯ! ನನ್ನ ಎತ್ಕೊ… ಬಾಚಿ ತಬ್ಕೋ ಅಂತ ಕೇಳೋಕೂ ಭಯ!…
ಅನುದಿನ ಕವನ-೧೩೮೦, ಹಿರಿಯ ಕವಿ: ಎಂ.ಎಸ್.ರುದ್ರೇಶ್ವರ ಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮೋಹದ ಹೆಂಡತಿ
ಮೋಹದ ಹೆಂಡತಿ… ನಿನ್ನಲ್ಲಿರುವ ಗೋಲಿಗಳು ಗಾಜಿನವು ವಜ್ರದ ಹರಳುಗಳಲ್ಲ, ಎಂದರು ವಜ್ರ- ದ ವ್ಯಾಪಾರಿಗಳು ನನ್ನಲ್ಲಿರುವ ಗೋಲಿಗಳು ನಾನು ನನ್ನ ಬಾಲ್ಯದಲ್ಲಿ ಗೆಳೆಯರ ಜೊತೆ ಆಟವಾಡಿ, ಸೋತುಗೆದ್ದು; ಮನಸ್ಸಿನ ಮೂಲೆಯಲ್ಲಿ ಬಚ್ಚಿಟ್ಟುಕೊಂಡ ಅಪರೂಪದ ನೆನಪುಗಳು; ಈ ಗೋಲಿಗಳು ವ್ಯಾಪಾರಿಗಳಿಗೆ ಗಾಜಿನವು. ನನ್ನಲ್ಲಿರುವ…