ಅನುದಿನ ಕವನ-೧೭೪೬, ಕವಿ:ತರುಣ್ ಎಂ ಆಂತರ್ಯ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ

ಅಡುಗೆ ಮನೆಯ ಬೇಲಿಯೊಳಗಿನ ಅಮ್ಮಳು ಹೂ ತುಂಬಿ.. ಅಡುಗೆ ಮನೆಯ ಕಿಟಕಿಯಿಂದ ಬೀಳುವ ಸೂರ್ಯನ ಹೊಂಗಿರಣಕೆ ಸದ್ದಿಲ್ಲದೆ ಮುಂಜಾನೆ ಅರಳುತ್ತ, ತಿಳಿಗಾಳಿಗೆ ಮೈಯೊಡ್ಡಿ ಹಾರಲು ಶುರುಮಾಡುತ್ತಳೆ ನವಿರಾದ ರೆಕ್ಕೆಬಿಚ್ಚಿ ಉರಿವ ಒಲೆಯ ಬೆಂಕಿಗೆ ಉಸಿರ ಊದುತ್ತ ಸ್ವರವಿರದ ಕೊಳಲಾಗಿ , ಬೇಗೆಯಲ್ಲಿ…

ಅನುದಿನ ಕವನ-೧೭೪೫, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು

ನೀ ತಿರಸ್ಕರಿಸಿ ನನ್ನೊಲವಿಗೆ ಬೆನ್ನು ಹಾಕಿದಾಗಲೇ ನಾ ಕಂಬನಿ ತುಂಬಿದ ಕಂಗಳಲ್ಲಿ ಸಿಗದ ಬದುಕಿಗೆ ಮರುಗಬಾರದೆಂದು ಹೊಸ ಜೀವನಕೆ ಭರವಸೆಯ ದೀಪ‌ ಬೆಳಗಿಸಿಬಿಟ್ಟೆ! ನೀ ತಿರುಗಿ ನೋಡದೇ ಹೋಗಿ ಕೆಟ್ಟೆ! ನಿನ್ನ ಪ್ರೀತಿಯಿಂದ ವಂಚಿತಳಾಗಿ ನಾ ಬಿಕ್ಕಿ..ಬಿಕ್ಕಿ ಅತ್ತೆ! ಆದರೂ ಗೆಲವು…

ಅನುದಿನ ಕವನ-೧೭೪೪, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಮಧು ಬಟ್ಟಲಿಗೆ ದಾಹವಾಗಿದೆಯೇನೋ ಮಧುವ ಕೊಡುವೆಯಾ ಸಾಕಿ ಎದೆಯಲೊಂದು ಬಾಣ ನಾಟಿದೆಯೇನೊ ನೋವನು ಆಲಿಸುವೆಯಾ ಸಾಕಿ ಚುಕ್ಕೆ ಚಂದ್ರಮರೆಲ್ಲ ಆಗಸದಿ ತೇಲಾಡುತಿಹರು ಅವರಿಗೂ ನಶೆಯೇನೋ ಜಗದ ಜಂಜಡ ಕಳೆದು ನಿಂತಿಹೆನು ಧ್ಯಾನಸ್ಥ ಮನವ ನೋಡುವೆಯಾ ಸಾಕಿ ಅದೇಕೆ ಬರಿದಾದ ಜಾಂಬುಗಳೇ…

ಅನುದಿನ ಕವನ-೧೭೪೩, ಕವಿ: ಎಮ್ಮಾರ್ಕೆ, ಕಾವ್ಯ ಪ್ರಕಾರ: ಗಜಲ್

ಗಜಲ್ ಈ ಮನುಷ್ಯನೀಗ ಮೌಲ್ಯಗಳ ಮರೆತಿದ್ದಾನೆ ಬೆಸೆಯಬೇಕಿರುವ ಬಂಧಗಳ ಮರೆತಿದ್ದಾನೆ ರೀತಿ ರಿವಾಜುಗಳು ಗಂಟುಮೂಟೆಯಲ್ಲಿವೆ ನಿಯತ್ತು,ನಿಯಮ ನೀತಿಗಳ ಮರೆತಿದ್ದಾನೆ ಸ್ವಾರ್ಥದ ತೀರ್ಥಕೆ ಒಡ್ಡುವ ಕೈ ಹೆಚ್ಚಾಗಿವೆ ದಾನವತ್ವದಿ ದಾನ ಧರ್ಮಗಳ ಮರೆತಿದ್ದಾನೆ ಕಾಯಕದಲ್ಲಿಯೇ ಕೈಲಾಸವ ಕಾಣಬೇಕಿದೆ ಗೊತ್ತಿದ್ದರೂ ಗೈದ ಕರ್ಮಗಳ ಮರೆತಿದ್ದಾನೆ…

ಅನುದಿನ ಕವನ-೧೭೪೨, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ತಿರುವು

ತಿರುವು ಯಾವ ತಿರುವಿನೊಳು ಬದುಕು ಸಾಗುತ್ತಿದೆಯೋ ಕಾಣೆ?.. ತಗ್ಗು ದಿಮ್ಮಿಗಳ ನಡುವೆ ಆಯಾಸದ ಭರವಸೆಗಳ ಭ್ರಮೆ ಯೊಳು ಅಥವಾ ರಭಸದ ಗಾಲಿಯಲಿ ತಿರುಗುತ್ತ ತನ್ನದೇ ಆದ ಚಹರೆಯಲಿ ತಿರುವು ತೇಲುತ್ತಿದೆ…. ಬದುಕಿನ ದುಸ್ಸಾರದಿ ಒಂಟಿ ದೇಹ ಅಳುಕುತ್ತ ಸುತ್ತಲೂ ಹರಡಿರುವ ಗಾಳಿ…

ಅನುದಿನ ಕವನ-೧೭೪೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಜಾದೂ…!

“ಇದು ಒಲವಿನಂಬರದ ಬೆಳದಿಂಗಳ ಬಾಲೆಯ ಕಿರಣಗಳ ಸುಂದರ ಕವಿತೆ. ಅಪೂರ್ವ ಅನುರಾಗ ಬಾಲಿಕೆಯ ಪ್ರೇಮ ರಿಂಗಣಗಳ ಮಧುರ ಭಾವಗೀತೆ. ಈ ಪದ್ಯದ ಚರಣ ಚರಣದಲ್ಲು ಪ್ರೀತಿಯ ಹೂರಣವಿದೆ. ಸಾಲು ಸಾಲಿನಲ್ಲು ಒಲವಿನ ಚಾರಣವಿದೆ. ಪದ ಪದಗಳಲ್ಲು ಪ್ರೇಮದ ತೋರಣವಿದೆ. ಅಕ್ಷರ ಅಕ್ಷರದಲ್ಲು…

ಅನುದಿನ‌ ಕವನ-೧೭೪೦, ಹಿರಿಯ‌ ಕವಿ: ಡಾ.‌ಮೊಗಳ್ಳಿ ಗಣೇಶ್ ಕವನದ ಶೀರ್ಷಿಕೆ: ಎಲ್ಲವೂ ಸಾಧ್ಯ

ನಾಡಿನ‌ ಹೆಸರಾಂತ ಕತೆಗಾರ, ವಿಮರ್ಶಕ, ಕವಿ ಡಾ.‌ಮೊಗಳ್ಳಿ ಗಣೇಶ್ ಅವರ ಅಕಾಲಿಕ‌ ನಿಧನದಿಂದ ಕನ್ನಡ ಸಾಹಿತ್ಯ ಬಡವಾದಂತೆ ಭಾಸವಾಗಿದೆ. ತಮ್ಮ ನೇರ, ನಿಷ್ಠುರ, ದಿಟ್ಟ ಬರಹಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಅರವತ್ತೆರಡು ಖಂಡಿತಾ ಸಾಯುವ ವಯಸಲ್ಲ. ಎಂಟತ್ತು ವರ್ಷ ನಮ್ಮೊಂದಿಗೆ ಇದ್ದಿದ್ದರೆ…

ಅನುದಿನ ಕವನ-೧೭೩೯, ಕವಿ: ಶಂಕರ್‌ ಎನ್ ಕೆಂಚನೂರು, ಕುಂದಾಪುರ

ಉಕ್ಕೇರುವ ಕಡಲು ತನಗೆ ತಾನೇ ಶಾಂತವಾಗುತ್ತದೆ ಯಾರ ಸಾಂತ್ವನವೂ ಇಲ್ಲದೆ ನಾನು ನೀನು ಇದೇ ಸಮುದ್ರದಿಂದ ಆವಿಯಾದ ನೀರು ಕುಡಿದವರು ಅದರ ಉಪ್ಪು ತಿಂದವರು ಇವೆರಡೂ ಬೆರೆತಿರುವ ಗಾಳಿಯನ್ನು ಉಸಿರಾಡಿದವರು ನಾವು ಕಡಲಿನಷ್ಟು ಮಹತ್ತು ಉಳ್ಳವರು ಅಲ್ಲದಿರಬಹುದು ಆದರೆ, ಇದೇ ಕಡಲಿನ…

ಅನುದಿನ ಕವನ-೧೭೩೮ , ಕವಿ: ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್ ನಿನ್ನ ಪಿಳಿಪಿಳಿ ಕಣ್ಣುಗಳಲಿ ಪ್ರೀತಿಯ ಕಡಲು ಉಕ್ಕುತಿದೆ ಈಗೀಗ ಹುಡುಗಾಟದ ಒನಪ ರಾತ್ರಿಗಳಲಿ ಬಣ್ಣದ ಕನಸುಗಳು ಮೊಳೆಯುತಿವೆ ಈಗೀಗ . ಶಬ್ದಕೆ ನಿಲುಕದ ನಾಚಿಕೆ ಬೆಣ್ಣೆ ಕೆನ್ನೆಯ ಸವರುತಿದೆ ಈಗೀಗ ಮುನಿಸು ಕರಗಿ ಮೋಹ ಕುಣಿಯುತ ಕಚಗುಳಿ ಇಡುತಿದೆ ಈಗೀಗ…

ಅನುದಿನ ಕವನ-೧೭೩೭, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ, ಕವನದ ಶೀರ್ಷಿಕೆ: ಗಾಂಧಿ ಗಿಡದ ಹೂಗಳು…!

ಗಾಂಧಿ ಗಿಡದ ಹೂಗಳು…! ಅಂದು ಗಾಂಧೀ ನೆಟ್ಟ ಗಿಡದ ಹೂಗಳು ಇಂದು, ಎಂದೆದಿಗೂ ಅರಳಿ ಪರಿಮಳದ ಕಂಪು ಸೂಸುತ್ತಿವೆ ಚಳುವಳಿಯ ಗೀತೆ ಹಾಡಿ ಹೋರಾಟದ ದಶ ದಿಕ್ಕು ವರ್ಣಿಸಿ ಭವಿಷ್ಯದೆಡೆಗೆ ಬೆಳಕು ಚಲ್ಲುತ್ತಿವೆ ಗುಲಾಮಗಿರಿಗೆ ಸೆಡ್ಡು ಹೊಡೆದು,ಮಣ್ಣಲ್ಲಿ ಮಣ್ಣಾಗಿ ಹೋದವರಿಗೆ ಪುನಃ…