ಮಗಳೆಂದರೆ ಹಾಗಲ್ಲವೆ… ಇವಳ ಕಿರುನಗೆಯೊಳಗೆ ಕವಿತೆ ಅಡಗಿದೆ ಮಾತು ಹೂವಿನ ಹಾಗೆ ಬೆಳಕನಿಯುವ ಪರಿಮಳ ಸುತ್ತಲೂ ಹಾಗೆ ಇರುವುದು ತಳಿರು ಚಿಗುರೊಡೆದು ಗಂಧವಿತ್ತಂತೆ… ಬೀಸೋ ಗಾಳಿಯ ಜೋರು ಸದ್ದಿಗೆ ತಣ್ಣನೆಯ ಹೊದಿಕೆ ಇವಳ ಕಿರುನಗೆ ಎಡಬಲದಲ್ಲಿ ಅರಳೋ ಮೊಗ್ಗಿಗೆ- ಸಾಕ್ಷಿಯಂತೆ ಚೈತ್ರೋದಯ…
Category: ಅನುದಿನ ಕವನ
ಅನುದಿನ ಕವನ-೧೫೫೨, ಕವಿ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಸಿದ್ಧಗಂಗಾ ಶ್ರೀಗಳ ಸುಪ್ರಭಾತ
ಸಿದ್ಧಗಂಗಾ ಶ್ರೀಗಳ ಸುಪ್ರಭಾತ ಸಿದ್ಧ ಗಂಗೆಯ ಸಿದ್ಧಿಪುರುಷ ನಿನ್ನ ಸ್ಮರಣೆ ನಮಗೆ ಹರುಷ ಬಡವರ ಬಾಳಿನ ಭಾಗ್ಯವಿಧಾತ ನಿನ್ನ ನೆನವೇ ಬದುಕಿನ ಸುಪ್ರಭಾತ ಅನ್ನವನಿಟ್ಟು ನನ್ನಿಯ ನುಡಿಸಿದರು ಅಕ್ಷರಗಳ ರಂಗೋಲಿ ಬರೆಸಿದರು ಆಶ್ರಯವಿಟ್ಟರು ಮಹಾ ಮಾತೆಯಾಗಿ ತ್ರಿವಿಧ ದಾಸೋಹದ ಶ್ರೀಪತಿಯಾಗಿ ಬಿಕ್ಷೆಯ…
ಅನುದಿನ ಕವನ-೧೫೫೧, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಬಂದ ಕೆಲಸ ಮುಗಿದ ಮೇಲೆ ನಿಲ್ಲದೆ ಹೋಗಲೇಬೇಕು ಎಲ್ಲವನು ಕಳಚಿದ ನಂತರ ನೋಡದೆ ಹೋಗಲೇಬೇಕು ಎದೆಯ ಬಾಂದಳದಿ ಎಷ್ಟೊಂದು ರಂಗಿನ ಕಾಮನಬಿಲ್ಲು ಬಿಸಿಲು ಮಳೆಯು ಕರಗಿದೊಡನೆ ಇರದೆ ಹೋಗಲೇಬೇಕು ಪುಟ್ಟ ತಲೆಯಲು ಎಷ್ಟೊಂದು ಬಯಕೆಯ ಬಾನಾಡಿಗಳು ತೇಲುವ ಶಕ್ತಿ ಮುಗಿದೊಡನೆ…
ಅನುದಿನ ಕವನ-೧೫೫೦, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಯುಗಾದಿ ಮತ್ತೆ ಬರುತ್ತಿದೆ….
ಯುಗಾದಿ ಮತ್ತೆ ಬರುತಿದೆ….. ನಿನ್ನೆಗಳ ಬಿಡದೆ ಗುಡಿಸಿ ಪೇರಿಸಿ ಅದರೊಡಲಲಿ ಹಸಿರು ಚಿಗುರಿಸಿ ಕೆಂದಳಿರ ನೆರಳಲಿ ಪವಡಿಸಿ ಕಣ್ಬಿಟ್ಟ ಮರಿ ಹಕ್ಕಿ ಕೊರಳಲಿ ರಾಗ ನುಡಿಸಿ ಮೈಮರೆಸಿ ತೆರೆ ಒಂದ ಪಸರಿಸುತ ಯುಗಾದಿ ಮತ್ತೆ ಬರುತಿದೆ ಸಮಯದ ಬೆನ್ನೇರಿ ಹುಸಿ ನಗುತ…
ಅನುದಿನ ಕವನ-೧೫೪೯, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ಅವ್ವನ ಉಗಾದಿ
ಅವ್ವನ ಉಗಾದಿ ನೋಡಕ್ ನಮ್ಮವ್ವ ಶರಣೆ ಆದರೆ ಒಂದೀಟ್ ಬ್ಯಾರೆ ಉಗಾದಿ ಅಂದ್ರು,ಯಾಕಿದ್ದೀತೇಳಂತ ನಸುಕೀಲೇ ಎದ್ದು ನಿದ್ದೇಲಿರೊ ಮಕ್ಳು ಮರೀನ ಹಾಸೀದ ಕೌದಿನೇ ಮಗುಚಿ ಮೈ ಮೇಲೆಳೆದು ಮಾಯವಾದ್ರೆ . ಮಲಗಿದ ಮಕ್ಳು ಹಾಸ್ಗೇಲಿ ಮಿಸ್ಕಾಡುತ್ಲೇ ಎಂಟಾಣೆ ಕೂಲಿ ತರಾಕಿ ನೋಡಾಕ್…
ಅನುದಿನ ಕವನ-೧೫೪೮, ಹಿರಿಯ ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ತನಗಗಳು
ತನಗಗಳು ೧ ಯುಗಾದಿಯ ಹಬ್ಬಕೆ ಹೊಸತು ಸಂವತ್ಸರ ಮರೆಯೋಣ ನಾವೆಲ್ಲ ಹಿಂದಿನೆಲ್ಲ ಮತ್ಸರ ೨ ವಸಂತಾಗಮನಕೆ ಹೊಂಗೆ ಹೂವಿನ ಘಮ ದುಂಬಿಗಳ ದಾಂಗುಡಿ ಸಂಗೀತದ ಸಂಭ್ರಮ ೩ ಸುಖ ದುಃಖಗಳವು ಬೇವು ಬೆಲ್ಲಗಳಂತೆ ಯುಗಾದಿ ನೆಪದಲಿ ಬಿಡೋಣ ಎಲ್ಲ ಚಿಂತೆ ೪…
ಅನುದಿನ ಕವನ-೧೫೪೭, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೆಂದರೆ ಬರೀ ಕವಿತೆಯಲ್ಲ
ನಾನೆಂದರೆ ಬರೀ ಕವಿತೆಯಲ್ಲ ಆಕಾಶವೆಂದರೆ ಬರೀ ನೀಲಿಯಲ್ಲ ಕೆಂಪೋ, ಕಪ್ಪೋ …ಯಾವಾಗ ಯಾವ ಬಣ್ಣವೋ ಬೆಂಕಿ ಕಾರುವುದೋ, ಮಿಂಚುವುದೋ ಗುಡುಗುವುದೋ, ತಂಪು ಮಳೆಸುರಿಸುವುದೋ? ನೆಲವೆಂದರೆ ಬರೀ ಸಪಾಟಲ್ಲ ದಿಣ್ಣೆ, ಕೊರಕಲು, ಕಣಿವೆ.. ಎಲ್ಲಿ ಏನಿರುವುದೋ ಕಂಪಿಸುವುದೋ, ಬಿರಿಯುವುದೋ ನಡುಗಿಸುವುದೋ, ಬೆಳೆಯ ತೂಗಿಸುವುದೋ?…
ಅನುದಿನ ಕವನ-೧೫೪೬, ಕವಯಿತ್ರಿ: ಎಚ್ ಎಸ್ ಮುಕ್ತಾಯಕ್ಕ, ರಾಯಚೂರು, ಕವನದ ಶೀರ್ಷಿಕೆ: ಗುಲ್ಜಾರರ ಕಾವ್ಯ
ಗುಲ್ಜಾರರ ಕಾವ್ಯ… ಮೂಲ – ಗುಲ್ಜಾರ್ ಕನ್ನಡಕ್ಕೆ – ಎಚ್. ಎಸ್. ಮುಕ್ತಾಯಕ್ಕ 1. ಜಗತ್ತು ಆ ಕ್ಷಣ ಎಷ್ಟು ಸುಂದರವಾಗಿ ಕಾಣುವುದು! ಯಾರಾದರೂ ನಿನ್ನ ನೆನಪು ತುಂಬಾ ಆಗುತ್ತದೆ ಎಂದಾಗ! 2. ಬದುಕು ಇಂದೇಕೋ ನನ್ನ ಮೇಲೆ ಮುನಿದಿದೆ. ಇರಲಿಬಿಡಿ,…
ಅನುದಿನ ಕವಿತೆ-೧೫೪೫, ಕವಯಿತ್ರಿ: ಸಂಘಮಿತ್ರೆ ನಾಗರಕಟ್ಟೆ, ಕವನದ ಶೀರ್ಷಿಕೆ:ಹೀಗೊಂದು ದಿನ ಬರಬಹುದು
ಹೀಗೊಂದು ದಿನ ಬರಬಹುದು ಸಿಡಿಮಿಡಿಗೊಂಡ ಸೂರ್ಯನನ್ನು ಶಾಂತಗೊಳಿಸಿ ಮತ್ತೆ ಬರಲೇಳಲು ಜನರು ಕವಿಗಳಾದ ನಮ್ಮತ್ತ ಧಾವಿಸಿ ಬರಬಹುದು ಬಿರಿದು ಬಾಯ್ತೆರೆದ ಇಳೆಯ ದಾಹವನ್ನು ತಣಿಸಲು.. ನಮ್ಮ ಕವಿತೆಗಳಿಂದಲೇ ಅವುಗಳಿಗೆ ನೀರುಣಿಸಲು ಜನರು ನಮ್ಮತ್ತ ಧಾವಿಸಿ ಬರಬಹುದು.. ಹೆಣ್ಣೊಬ್ಬಳ ನಾಲಗೆಯ ಸೀಳಿದರೂ ತುಟಿಕ್ಪಿಟಿಕ್…
ಅನುದಿನ ಕವನ-೧೫೪೪, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಬಿಡದಿದ್ದರೆ…
ಬಿಡದಿದ್ದರೆ… ಅಸ್ತಿತ್ವವಿರುವುದು ಯಾರದ್ದೋ ಜೊತೆಗಿನ ಪೈಪೋಟಿಯಲ್ಲಲ್ಲ, ಹೋಲಿಕೆಯಲ್ಲೂ ಅಲ್ಲ ಗುಲಾಬಿಯೊಂದು ಅರಳಿದರೆ ತಾವರೆಯಂತಿಲ್ಲವೆಂದು ಗೊಣಗುವುದಿಲ್ಲ ಬೇವಿನ ಮರವೆಂದೂ ಮಾವಿನಮರಕ್ಕೆ ತನ್ನನ್ನು ತಾನು ಹೋಲಿಸುವುದಿಲ್ಲ ಬುವಿಗೆ ಸೂರ್ಯನಷ್ಟು ಸನಿಹವಿಲ್ಲವೆಂದು ನಕ್ಷತ್ರಗಳು ಯಾವತ್ತೂ ಕೊರಗುವುದಿಲ್ಲ ಯಾರೋ ಗುರುತು ಹಾಕಿಟ್ಟ ಮೈಲಿಗಲ್ಲ ಮುಟ್ಟಲೆಂದು ಹುಚ್ಚರಂತೆ ಓಡಬೇಕಿಲ್ಲ…