ಕಡ ಕೊಡುವುದಿಲ್ಲ! ನಮ್ಮ ದಾರಿಯನ್ನು ನಾವೇ ನಡೆಯಬೇಕು ಯಾರೂ ಅವರ ಕಾಲುಗಳನ್ನು ಕಡ ಕೊಡುವುದಿಲ್ಲ! ಪ್ರೇಮವನ್ನಾದರೂ ಮೈದುಂಬಿ ನಾವೇ ಉಸಿರಾಡಬೇಕು ಯಾರೂ ಅವರ ಗಾಳಿಗೂಡುಗಳನ್ನು ಕಡ ಕೊಡುವುದಿಲ್ಲ ! ನೊಂದು ಬೆಂದು ಬಸಿದು ಗಳಿಸಿ ಇಳಿಸಿ ಹೊರಡಬೇಕು, ತಿಳಿವ ಅರಿವ ಕಣ್ಣ…
Category: ಅನುದಿನ ಕವನ
ಅನುದಿನ ಕವನ-೧೭೨೭, ಕವಯತ್ರಿ: ಶೀಲಾ ಅರಕಲಗೂಡು, ಕವನದ ಶೀರ್ಷಿಕೆ:ಮೆರೆಸೋಣ ಸ್ವಂತಿಕೆ
ಮೆರೆಸೋಣ ಸ್ವಂತಿಕೆ ಸ್ವಂತ ದೇಶ ಬಿಟ್ಟು ಹೊರಗೆ ಬಾಳುವಾಸೆ ಏತಕೆ ಪರದೇಶದ ದಾಸ್ಯವೇಕೆ ಮೆರೆಸಬೇಕು ಸ್ವಂತಿಕೆ ಇಲ್ಲೆ ಹುಟ್ಟಿ ಇಲ್ಲೆ ಬೆಳೆದು ದುಡಿಮೆ ಹೊರಗದೇತಕೆ ಬೆಳೆಸಿದಂಥ ದೇಶವನ್ನು ತೊರೆದು ಹೋಗಲೇತಕೆ ನಮ್ಮ ದೇಶ ನಮ್ಮ ಹೆಮ್ಮೆ ಎಂಬ ಭಾವ ಬೆಳೆಯಲಿ ತಾಯ…
ಅನುದಿನ ಕವನ-೧೭೨೬, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ನಿನ್ನ ಪ್ರೀತಿ ಕೊನೆಯಾಗದು…
ನಿನ್ನ ಪ್ರೀತಿ ಕೊನೆಯಾಗದು… ಆದಷ್ಟು ಗಾಢ ಮೌನವಾಗಿಯೆ ನಿನ್ನ ಪ್ರೀತಿಸಿದೆ; ಮೌನದ ಪ್ರೀತಿಗೆ ನಿನ್ನ ನಿರಾಕರಣೆ ಅರ್ಥವಾಗದು! ಬಹಳಷ್ಟು ಒಬ್ಬಂಟಿಯಾಗಿಯೆ ನಿನ್ನ ಪ್ರೀತಿಸಿದೆ; ಒಂಟಿತನದ ಆಪ್ತತೆಗೆ ನಿನ್ನ ತಿರಸ್ಕಾರದ ಅಪಸ್ವರ ಕೇಳಿಸದು! ಅದೆಷ್ಟು ದೂರದಿಂದಲೇ ನಿನ್ನೊಲವ ಆರಾಧಿಸಿದೆ; ದೂರದಿ ನನ್ನ ವಿರಹದ…
ಅನುದಿನ ಕವನ-೧೭೨೫, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ., ಕಾವ್ಯ ಪ್ರಕಾರ:ಗಜಲ್
ಗಜಲ್ ಕಣ್ಣೊಳಗಿನ ಬೆಳಕು ಆರಿಹೋಗುತಿದೆ ಬಂದುಬಿಡು ಬದುಕಿನ ಪಾತ್ರೆಯೆಲ್ಲ ಬರಿದಾಗುತಿದೆ ಬಂದುಬಿಡು ನಿನ್ನ ನಿರೀಕ್ಷೆಯಲಿ ಮೊಂಬತ್ತಿಯೂ ಕುಗ್ಗಿಹೋಗಿದೆ ಹರಣ ದೀಪವು ನಿಶೆಯೊಳಗೆ ಕರಗುತಿದೆ ಬಂದುಬಿಡು ಮಧುಬಟ್ಟಲ ಪ್ರತಿ ಗುಟುಕೂ ಕಂಬನಿ ಮಿಡಿಯುತಿದೆ ಒಲವಿನ ಎದೆ ಬಡಿತವು ಮಂದವಾಗುತಿದೆ ಬಂದುಬಿಡು ಮನಸುಗಳು ಒಂದಾದರೂ…
ಅನುದಿನ ಕವನ-೧೭೨೪, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ಅವಳು ಬದುಕನ್ನು ದ್ವೇಷಿಸುವಷ್ಟೇ ಸಲೀಸಾಗಿ ಪ್ರೀತಿಸುತ್ತಾಳೆ.. ನಡುರಾತ್ರಿಯೋ ನಸುಕೋ ತಿಳಿಯದ ಹೊತ್ತಲ್ಲಿ ಗೋಡೆಗೊರಗಿ ಕೂತಾಗ ಬದುಕು ನಾಭಿಯಿಂದ ಉಕ್ಕಿ ಬಂದು ಗಂಟಲಲ್ಲಿ ಕೂತುಬಿಡುತ್ತದೆ.. ದ್ವೇಷಿಸುತ್ತಾಳೆ ಬದುಕನ್ನು ಹಿಂದೆಂದಿಗಿಂತ ಹೆಚ್ಚಾಗಿ ಉಗುಳಲೂ, ನುಂಗಲೂ ಆಗದಂತೆ. ಹಸಿದು ಹೆಜ್ಜೆ ಕುಸಿದ ಹೊತ್ತಿಗೆ ಬಡಿಸುತ್ತದೆ ಬದುಕು…
ಅನುದಿನ ಕವನ-೧೭೨೩, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಅನುಸಂಧಾನ
“ಇದು ಜೀವ-ಜೀವನದ ಅನುಸಂಧಾನದ ನಿತ್ಯ ಸತ್ಯ ಕವಿತೆ. ಬದುಕು-ಬೆಳಕಿನ ಆತ್ಮಾನುಸಂಧಾನದ ಚಿರ ಚಿರಂತನ ಭಾವಗೀತೆ. ’ತಲ್ಲಣಿಸದಿರು ತಾಳು ಮನವೆ’, ’ಚಿಂತಿಯಾಕ ಮಾಡತಿ ಚಿನ್ಮಯನಿದ್ದಾನೆ’, ’ಬಂದದ್ದೆಲ್ಲ ಬರಲಿ ಭಗವಂತನ ದಯೆಯೊಂದಿರಲಿ’ ಎಂಬ ಅಮೃತನುಡಿಗಳ ಸತ್ಯದರ್ಶನವೆ ಈ ಕವಿತೆ. ದಿವ್ಯಬೆಳಕಿನ ಭಾವ-ಭಾಷ್ಯಗಳ ಅಕ್ಷರಪ್ರಣತೆ. ಏನಂತೀರಾ.?”…
ಅನುದಿನ ಕವನ-೧೭೨೨, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಸಾವಿನ ಕನಸು
ಸಾವಿನ ಕನಸು ಕೋಣೆಯ ಒಳಗೆ ಮೈಗಂಟಿ ಸುಡುವ ಜ್ವರ ಕಿಟಕಿಯ ಪರದೆ ಸರಿಸಿದರೆ ಸಣ್ಣಗೆ ಸುರಿವ ಮಳೆ ಹೊರಗೆ ಹಿತವಾದ ನರಳಿಕೆಯೊಂದಿಗೆ ತುಂತುರು ಹನಿಗಳ ಜೋಗುಳಕೆ ತಲೆದೂಗಿ ಹಾಗೆ ಅಂಗಾತವಾದವನ ಕಣ್ಣಲ್ಲಿ ಸಾವಿನ ನವಿಲು ಸಾವಿರ ಕಣ್ಣುಗಳ ಗರಿಗೆದರಿ ಎದೆಯ ಮೇಲೆ…
ಅನುದಿನ ಕವನ-೧೭೨೧, ಕವಿ: ತರುಣ್ ಎಂ ಆಂತರ್ಯ✍️, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ: ಬದುಕು ಬವಣೆ
ಬದುಕು ಬವಣೆ ಹಸಿವು ಆರ್ತನಾದದಿ ಅಬ್ಬರಿಸುತ್ತ ಉಸಿರು ಸದ್ದಿಲ್ಲದೆ ಬಿಕ್ಕಳಿಸುವಾಗ ಬೆವರ ಬಸಿದು ದೇಹವು ಕಂಬನಿಯೊಂದಿಗೆ ಸೇರಿ ಬೊಗಸೆ ತುಂಬಿದಾಗ ಹಗಲು ಇರುಳುಗಳಲಿ ಅರಿವಿರದೆ ಮುಗ್ಧತೆಯು ಬೀದಿಯಲಿ ಬದುಕು ಹೊತ್ತು ತಿರುಗುವಾಗ ಅಜ್ಞಾನದ ಅಂಧಕಾರವು ಸುತ್ತಲು ಕವಿದು ದಾರಿಕಾಣದಾಗ ಯಾವ ಕಡೆಯಿಂದಲು…
ಅನುದಿನ ಕವನ-೧೭೨೦, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಚಿತ್ರಾಂಗದಾ
ಚಿತ್ರಾಂಗದಾ ನನ್ನನ್ನು ಸುಂದರಿಯೆಂದು ಕರೆಬೇಡ, ಸೌಂದರ್ಯವೆಂಬ ಚೀಲದಲ್ಲಿ ಹೆಣ್ಣಿನ ಆತ್ಮವನ್ನು ಹೊತ್ತೊಯ್ಯಲು ಸಾಧ್ಯವಿಲ್ಲ. ನನ್ನನ್ನು ಪತ್ನಿಯೆಂತಲೂ ಗುರುತಿಸಬೇಡ, ಅದೇ ಹಣೆಪಟ್ಟಿ ನನ್ನ ಲಲಾಟದ ಮೇಲೆ ಮುದ್ರಿಸಿದರೆ ನನ್ನ ಬಾಹುಗಳ ಶಕ್ತಿಯನ್ನು ಕಾಣದೆ ಹೋಗುತ್ತೀ. ನಾನು ರಾಜಕುಮಾರಿ ಆದರೆ ಅರಮನೆ ಗೋಡೆಗಳೊಳಗೆ ಬಂಧಿತಳಾಗಿ…
ಅನುದಿನ ಕವನ-೧೭೧೯, ಕವಿ: ರಾಜ್(ಮುನಿರಾಜ್), ಬೆಂಗಳೂರು, ಕವನದ ಶೀರ್ಷಿಕೆ: ಕವಿ ಎನ್ನುವರು…!
ಕವಿ ಎನ್ನುವರು..! ನಾನು ಬರೆಯುತ್ತೇನೆ ಅಲೆಗಳು ಗಾಳಿಗು ಬೆಂಕಿಯ ಜ್ವಾಲೆಗು ಬರೆಯುತ್ತೇನೆ. ಕವನ ಕವಿತೆಯೊ ಕನಸುಗಳ ಕೂಡಿ ಹಾಕಿ ಭಾವನೆಗಳ ಶಬ್ದಗಳ ಸೇರಿಸಿ ಓದುವವರು ಕೇಳುವವರು ಇಲ್ಲದಿದ್ದರೂ ನನ್ನಷ್ಟಕ್ಕೆ ಬರೆಯುತ್ತೇನೆ. ಬಾಷಾಜ್ಞಾನ ಕಡಲೆಯಷ್ಟು ಖಾಲಿ ಬುರುಡೆಯಲಿ ವ್ಯಾಕರಣ ಸಾಹಿತ್ಯ ಗೊತ್ತಿಲ್ಲದಿದ್ದರು ಓದಿದ್ದನ್ನು…
