ದೊಡ್ಡವರ ಸಹವಾಸ ನಾವು ಹೂವು ಹಣ್ಣು ಬೆಳೆದು ಕೊಡಬೇಕು ನಾವು ಜೀವ ಉಳಿಸುವ ಔಷಧಿ ಕಳಿಸಿ ಕೊಡಬೇಕು ಪ್ರತಿಯಾಗಿ ಅವರಿಂದ ಜೀವ ತೆಗೆಯುವ ಅಸ್ತ್ರ ಶಸ್ತ್ರಗಳನ್ನು ನಾವು ಖರೀದಿಸಬೇಕು ಆದರೆ ಅವರು ಹೇಳಿದರೆ ಮಾತ್ರ ಪ್ರಯೋಗಿಸಬೇಕು ಅವರು ಬಯಸಿದಾಗ ಯುದ್ಧ ಮಾಡಬೇಕು,…
Category: ಅನುದಿನ ಕವನ
ಅನುದಿನ ಕವನ-೧೫೯೫, ಕವಯಿತ್ರಿ: ಶಿಲ್ಪಾಮ್ಯಾಗೇರಿ, ಗದಗ, ಕವನದ ಶೀರ್ಷಿಕೆ: ಲೋಕದ ಸೀಮೆ ದಾಟಿದವ
ಲೋಕದ ಸೀಮೆ ದಾಟಿದವ ಈ ರಾತ್ರಿ ವಿಚಿತ್ರವಾಗಿದೆ ಹಾಲುಬೆಳಕಲ್ಲೂ ಹಾಲಾಹಲ ಕುದಿಯುತ್ತಿದೆ ಪ್ರಶಾಂತ ನಟ್ಟಿರುಳು ಬೇಗೆಗಳ ಚಿಮ್ಮಿಸುತ್ತಿದೆ ಇಲ್ಲೊಂದು ಹಸುಳೆಯ ಆಕ್ರಂದನ ತುಂಬಿಕೊಳ್ಳಲು ಅಲ್ಲೊಂದು ಜೀವದ ತಹತಹ ಖಾಲಿಯಾಗಲು ಇಗೋ ಬೆಳಕು ಬೆಳಕಿನಾಟ ತಣ್ಣಗಿದೆ ಇದ್ದೂ ಇಲ್ಲದಂತೆ ಅಗೋ ಕತ್ತಲು ಕತ್ತಲಿನಾಟ…
ಅನುದಿನ ಕವನ-೧೫೯೪, ಕವಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ
ಅದೇಕೋ ಗೊತ್ತಿಲ್ಲ , ಬುದ್ದನ ಬಗ್ಗೆ ಒಂದು ಪ್ರಬುದ್ಧ ಪದ್ಯ ಬರೆಯಲು ನನಗಿನ್ನೂ ಆಗುತ್ತಿಲ್ಲ…! ಅವನಂತ ಭವ್ಯ ನಗು ಎಲ್ಲೂ ಕಂಡಿಲ್ಲ…! ಪ್ರತಿ ಭಾರಿ ಅವನನ್ನು ಬೆರಗಿನಿಂದ ನೋಡುವೆ ದ್ವಂದ್ವದ ಲೆಕ್ಕಾಚಾರದಲ್ಲಿ ಅವನನ್ನು ಅಳೆಯುವೆ…! ಆದರೆ ಅವನದೋ…. ಸದಾ ಅದೇ ಮುಖಭಾವ…
ಅನುದಿನ ಕವನ-೧೫೯೩, ಕವಿ: ಅರ್ಜುನ ನಿಡಗುಂದೆ, ಸದಲಗಾ, ಬೆಳಗಾವಿ ಜಿ. ಕವನದ ಶೀರ್ಷಿಕೆ: ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ
ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ ನಾನು ಹೊರಟೆ ಈಗ ಬುದ್ಧರ ಅನ್ವೇಷಣೆಯತ್ತ….! ನಾನು ಹೊರಟೆ ಈಗ ಅಂತಿಮ ಸತ್ಯದ ಶೋಧದತ್ತ….! ನಾನು ಹೊರಟೆ ಈಗ ಮನಶ್ಯಾಂತಿಯ ಅರಸುತ್ತ…! ನಾನು ಹೊರಟೆ ಈಗ ನವ ಕ್ರಾಂತಿಯ ನಿರ್ಮಿಸುವತ್ತ….! ನಾನು ಅನಾದಿಕಾಲದಿಂದಲೂ ದಾರಿಯನ್ನು…
ಅನುದಿನ ಕವನ-೧೫೯೨, ಕವಿ: ಸಿದ್ದು ಜನ್ನೂರು ಕವನದ ಶೀರ್ಷಿಕೆ: ನನ್ನಬುದ್ಧ
ನನ್ನ ಬುದ್ಧ… ಒಂದು ಧ್ಯಾನದ ನಡುವೆ ಬುದ್ಧ ಎದೆಗೆ ಜೋತು ಬೀಳುತ್ತಾನೆ ಸಮಾಧಾನಕ್ಕೂ ನೆಮ್ಮದಿಗೂ ಅವನು ಸದಾ ಜೊತೆ ನಿಲ್ಲೋ ಜೊತೆಗಾರ…. ನಾವು ನಮ್ಮನ್ನೆ ಮರೆತು ಸದಾ ನಮಗಾಗಿ ಮಿಡಿಯುವವರೊಂದಿಗೆ ಹೇಗಿರಬೇಕೆಂದು ಬುದ್ಧ ಕಲಿಸುತ್ತಾನೆ… ಅವನು ಪ್ರೀತಿಯನ್ನು ಮತ್ತಷ್ಟು ವಿಸ್ತರಿಸಿದ ತಥಾಗತನೆಂಬುದು…
ಅನುದಿನ ಕವನ-೧೫೯೧, ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಮುದ್ನಾಳ, ಯಾದಗಿರಿ
ಬೆಲೆ ಕಟ್ಟಲಾಗದು ಬೆವರಿಗೆ ಬೆಲೆ ಕಟ್ಟಲಾಗದು ಬೆವರಿಗೆ ಹೆಣ್ಣು ಮರೆಯಲಾಗದು ತವರಿಗೆ ಋಣವ ತೀರಿಸಲಾಗದು ಹುಟ್ಟಿದೂರಿಗೆ. ಆಶ್ರಯ ನೀಡುವುದು ಮಾಳಿಗೆ ಬೆಳದಿಂಗಳ ತಂಪು ತಂತು ಬಾಳಿಗೆ ಬಡಿದಾಡದಿರು ತಮ್ಮ ಹೊಟ್ಟೆ ಕೂಳಿಗೆ. ತೂತು ಬಿದ್ದರೂ ತಲೆಯ ಸೂರಿಗೆ ಉಪ್ಪಿಲ್ಲದಿದ್ದರು ಚಿಂತೆಯಿಲ್ಲ ಸಾರಿಗೆ…
ಅನುದಿನ ಕವನ-೧೫೯೦, ಕವಯಿತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಕಪ್ಪು ಅಜಂಡ
ಕಪ್ಪು ಅಜಂಡ ಕಪ್ಪು ಅಜಂಡದೊಳು ತಿರುಗಿ ತಿರುಗಿ ಕೆಂಪು ವಸ್ತ್ರ ರಾಜಕೀಯ ಧೋರಣೆಗೆ ಸಿಲುಕಿ ಸುಸ್ತಾಗಿ ಕೆಳಗೆ ಬೀಳುತಿದೆ… ಸುತ್ತ ಕಮರಿದ ಕೂದಲು ಗಡ್ಡಗಳು ನಿರುವಿಲ್ಲದೆ ಒದ್ದಾಡಿ ಕಪ್ಪು ಹೊದಿಕೆಯ ನೇಣಿಗೆ ಶರಣಾಗಿ ಕಣ್ಮುಚ್ಚಿತ್ತಿವೆ… ಅತಂತ್ರ ಕುತಂತ್ರಗಳ ಕಂಬಿಗಳಲಿ ಹವಾಯಿ ಚಪ್ಪಲಿಗಳು…
ಅನುದಿನ ಕವನ-೧೫೮೯, ಕವಯಿತ್ರಿ: ಮಂಜುಳಾ ಭಾರ್ಗವಿ, ಬೆಂಗಳೂರು,
ನೀ ಋತುವಿನಂತೆ ತಾಕಿ ಹೋದ ನಂತರವೂ ಕೂಡ ಕಣ್ಣ ಪಸೆಯಲ್ಲಿ ಸುನಾಮಿಯಂತ ಕಂಬನಿಯೊಂದು ಅಲೆಯಂತೆ ಅಪ್ಪಳಿಸುತ್ತಲೇ ಇದೇ. ಸಾವಿರ ಅಲೆಗಳು ಬಂದು ಎದೆ ತಾಕಿದರೂ ನಿನ್ನ ಮಾತುಗಳೆಲ್ಲ ಮೋಡವಾಗಿ ಮೈ ಮೇಲೆ ಇಳಿದಂತಾಗಿ ಪ್ರತಿ ಮುಂಗಾರಿಗೂ ಮೈ ಒಡ್ದುತ್ತೇನೆ. ಒಮ್ಮೊಮ್ಮೆ ಚಂಡ…
ಅನುದಿನ ಕವನ-೧೫೮೮, ಕವಿ:ಬಸೂ, ಧಾರವಾಡ
ಬೇಲಿಯನ್ನು ಅವರು ಎತ್ತರವಾಗಿಯೇ ಕಟ್ಟಿದ್ದರು ವಸಂತ ನನಗೆ ಘಮದ ಆತ್ಮವಾಗುವುದು ಕಲಿಸಿತು ಪಂಜರವನ್ನು ಅವರು ಬಲವಾಗಿಯೇ ತಯಾರಿಸಿದ್ದರು ವಸಂತ ನನಗೆ ಹಾಡುಹಕ್ಕಿಯ ಸ್ವರವಾಗುವುದು ಕಲಿಸಿತು ಕಬ್ಬಿಣದ ಬಾಗಿಲುಗಳನ್ನೇ ಅವರು ಮನೆಗೆ ಇರಿಸಿದ್ದರು ವಸಂತ ನನಗೆ ನಂಬುಗೆ ಬೆಳೆಸಿ ಕನಸಾಗುವುದು ಕಲಿಸಿತು ಸುಂದರ…
ಅನುದಿನ ಕವನ-೧೫೮೭, ಕವಯಿತ್ರಿ: ಡಾ.ಕೆ. ಎನ್. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ:ಮೋಹಕ ಗುಲ್ಮೊಹರ್….
ಮೋಹಕ ಗುಲ್ಮೊಹರ್…. ವೈಶಾಖದ ಬಿರುಬಿಸಿಲಿಗೆ ಒಳಗೊಳಗೇ ಬೆಂದು ಮುದುಡಿಕೊಂಡ ಗಿಡಬಳ್ಳಿ ಸಾಲುಮರಗಳ ರಸ್ತೆಯಿಕ್ಕೆಲವೂ ಕುಲುಕುಲು ನಗುವಿನೊಂದಿಗೆ ನಡು ಕುಲುಕಿಸುತ್ತಾ ನಿಂತಿದೆ ಅಪೂರ್ವ ಚೆಲುವು ನಿಂತಂತೆ ದೇವಲೋಕದ ಒಲವು ಪೂರ್ವದಿಂದ ಸೀದಾ ನಡುನೆತ್ತಿಯ ಮೇಲೆ ಬಂದುನಿಂತ ಸೂರ್ಯನಿಗೆ ಮುಖಮಾಡಿ ಸುಡುಬಿಸಿಲೇ ಪ್ರಾಣವೆನ್ನುವ ಹಾಗೆ…
