ಆಕಾಶವೆಂಬ ಭೋಧಿವೃಕ್ಷದ ಕೆಳಗೆ ಮಾತುಗಳ ಮಾನಿನಿಗೆ ಸಿಲುಕಿ ಮನಸ ಸರೋವರಕೆ ಕಲ್ಲೆಸೆದು ರಾಡಿಗೊಳಿಸದಂತೆ ಮೌನದ ನಿಶೆಗೆ ಮಾರು ಹೋಗಿ ಪವಡಿಸಿದ್ದೇನೆ ‘ಆಕಾಶವೆಂಬ ಭೋಧಿವೃಕ್ಷ’ ದ ಕೆಳಗೆ ಹೀಗೆಲ್ಲಾ ಇದ್ದನಂತೆ ಬುದ್ದನೆಂಬ್ಬೊಬಾತ ಅವನಂತೆ ನಾನೆಂಬ ಸೋಗಿನ ಪರಿಧಿಯಲಿ ದುರಾಶೆಗಳ ದು:ಖದ ಈ ದುರಿತ…
Category: ಅನುದಿನ ಕವನ
ಅನುದಿನ ಕವನ-೧೬೦೫, ಕವಯಿತ್ರಿ: ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಅತಂತ್ರ ಅವಸ್ಥೆ
ಅತಂತ್ರ ಅವಸ್ಥೆ ನೆಲಕ್ಕುರುಳಿ ರೋಧಿಸಿದೆ ಹಲವಾರು ತಾಳಿ ಕುಂಕುಮ ದ ಆರಾಟ ಈ ಅನ್ಯಾಯಕೆ ರಕ್ತ ಸಿಕ್ತ ರಾಕ್ಷಸರ ಕುಡುಗೋಲು ಸುತ್ತಿಗೆಯ ಕೆಂಪು ಸಲಾಮು ವ್ಯವಸ್ಥೆಯ ವ್ಯಂಗ್ಯ ನಗೆಗೆ ಕುಣಿಯುತಿವೆ… ಪರ್ಯಾಟನೆಯ ಕೆಲವು ಮುಗ್ಧತೆಯ ಮರಗಳು ಈ ಸಂಕೋಲೆಗೆ ಹೆದರಿ ವಂಚಿತ…
ಅನುದಿನ ಕವನ-೧೬೦೪, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ಮೌನ ಅರಿಯದೆ
ನಿನ್ನ ಮೌನ ಅರಿಯದೆ ನಿನ್ನ ಮೌನ ಅರಿಯದೆ ಹೋದೆ ಮೌನದೊಳಗಿನ ಪ್ರೀತಿಯ ಕಾಣದೆ ಮರೆಯಾದೆ ನಿನ್ನ ಪ್ರೀತಿ ಗುರುತಿಸದೆ ಅಳಿದೆ ಪ್ರೀತಿಯ ಆಪ್ತತೆಗಿಷ್ಟು ಆಸರೆಯಾಗದೆ ಮಣ್ಣಾದೆ ಮಾತಿನ ಬಾಣ ಎದುರಿಸಬಹುದೆ ನಿನ್ನ ಮೌನದ ಹಿಮಶರವ ಚುಚ್ಚಿಕೊಂಡು ನವೆದೆ ಮಾತಿನ ಕಹಿಯ ನುಂಗಬಹುದೆ…
ಅನುದಿನ ಕವನ-೧೬೦೩, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಬಾನುದೀಪ
‘ಬಾನುದೀಪ’ ‘ಬಾನು’ ಬೆಳಗಿದ ‘ದೀಪ’, ಮುನ್ನಡೆಸಿತು ಕನ್ನಡವ, ‘ಬೂಕರ್’ಗೆ; ಇಷ್ಟು ಕಾಲ ಬೇಕಾಯ್ತು, ಕರ್ನಾಟಕವ ಪರಿಚಯಿಸಲು, ಜಗತ್ತಿಗೆ. -ಡಾ. ಬಸವರಾಜ ಸಾದರ, ಬೆಂಗಳೂರು
ಅನುದಿನ ಕವನ-೧೬೦೨, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ:ಕಾದಿಹಳು ಶಾಕುಂತಲೆ…
ಕಾದಿಹಳು ಶಾಕುಂತಲೆ… ಎನಿತು ಕನಸುಗಳ ಸಂಗಮವೋ ಎನಿತು ಕಾತುರತೆಯ ನಿರೀಕ್ಷೆಯೋ ಮಾಸಗಳುರುಳಿದೆ ನೀನೆಂದು ಬರುವೆಯೋ.. ಭಾವಗಳರಳಿ ಬಳ್ಳಿಯಲಿ ತೊನೆದಾಡಿದೆ ಪ್ರೀತಿಯರಳಿ ಮನದಲಿ ತೋಯ್ದಾಡಿದೆ ವಸಂತ ಮರಳಿದೆ ನೀನೆಂದು ಬರುವೆಯೋ.. ಕಾಳಿದಾಸನ ಮೇಘ ಸಂದೇಶ ತಲುಪಲಿಲ್ಲವೇ ನನ್ನ ಮನದಾಳದ ಪ್ರೀತಿಯೋಲೆ ಕಾಣಲಿಲ್ಲವೇ ಹೂಮಾಲೆ…
ಅನುದಿನ ಕವನ-೧೬೦೧, ಕವಿ: ಜ್ಯೋತಿ ಪ್ರಿಯ, ಬಳ್ಳಾರಿ, ಕವನದ ಶೀರ್ಷಿಕೆ: ತಾಯಿ
ತಾಯಿ ಅನುದಿನವೂ ನೀಡುವಳು ಅನ್ನ ಪ್ರತಿಫಲಾಪೇಕ್ಷೆಯಿರದೆ, ತನ್ನೊಡಲ ಕುಡಿ ಬದುಕಿ ಬಾಳಲೆಂದು ಜಗಕೆ ಬೆಳಕ ತರಲಿ ಎಂದು॥ ತನ್ನ ತಾ ಮರೆತು ಪೊರೆವಳು ಒಡಲ,ಒಲವ ಕುಡಿಗಳ, ಸುಲಿಗೆ ಮಾಡುವವರಿಗೂ ಸಲಿಗೆ ನೀಡುತ ಸಲುಹುವಳು ಮಮತೆಯಿಂದ॥ ಜೀವಪ್ರೀತಿಯ ಪಾಠ ಸಾರ ಹೊತ್ತ ಅವಳು…
ಅನುದಿನ ಕವನ-೧೬೦೦, ಕವಯಿತ್ರಿ: ರಾಧಾ ಶಂಕರ್ ವಾಲ್ಮೀಕಿ ತಿಪಟೂರು, ಕವನದ ಶೀರ್ಷಿಕೆ: ಯಾರೇ ನೀನು ಚೆಲುವೆ
ಯಾರೇ ನೀನು ಚಲುವೆ ಯಾರೇ ನೀನು ಚೆಲುವೆ ಒಬ್ಬಳೇ ಯಾಕೆ ನಿಂತಿರುವೆ ಮಂಜು ಮುಸುಕಿನ ನಡುವೆ ಯಾರಿಗಾಗಿ ಕಾದು ಕುಳಿತಿರುವೆ ಚಿಗುರು ಮೀಸೆಯ ಗೆಳೆಯ ಬಿಡುವೆಯ ಸ್ವಲ್ಪ ದಾರಿಯ ನಿನಗ್ಯಾಕೆ ಹೇಳಬೇಕು ವಾರ್ತೆಯ ಬಂದ ಹಾದಿಯಲ್ಲೇ ಹೊರಡುವೆಯ ದಿಟ್ಟಿಸಿ ನೋಡಬೇಡವೋ ಮಾವ…
ಅನುದಿನ ಕವನ-೧೫೯೯, ಕವಿ: ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ, ಕವನದ ಶೀರ್ಷಿಕೆ:ನೋವು
ನೋವು ನೂರು ಆಸೆಗಳ ನೂಕಿ ಬಂದು ಬಿಡು ಎದೆಯ ಕದ ತೆರೆದಿರುವೆ ಸಾವಿರ ಸವಾಲು ಬಂದರು ಹೆದರದೆ ಬಂದು ಬಿಡು ಕಾದಿರುವೆ ಮನದ ನೋವಿಗೆ ಸಾಂತ್ವನದ ನುಡಿ ಬೇಕಿಲ್ಲವೆಂದು ನಂಬಿರುವೆ ಹೊಸಕುವ ಕೈಗಳು ಹೆಚ್ಚಾಗಿವೆ ಇಲ್ಲಿ ಎಂದು ನಾನು ಅರಿತಿರುವೆ ಹೃದಯದ…
ಅನುದಿನ ಕವನ-೧೫೯೮ , ಕವಿ: ಲೋಕೇಶ್ ಮನ್ವಿತಾ(ಲೋಕಿ), ಬೆಂಗಳೂರು
ದಣಿವಾದ ಪದವೊಂದು ದಣಿವಾರಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಕಂಗಳಿಗೆ ಬಿದ್ದಿದ್ದು ನೀರು ಕೊಡಲೇ ? ತಿಂಡಿ ತಿಂದ್ಯಾ ? ಯಾರು? ನಿನ್ನ ದೂಡಿದರೂ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದ ಮೇಲೂ ಅದರ ಮೌನ ನನ್ನನ್ನು ಮೌನವಾಗಿಸಿತು ಅದು ಸಹಿಸಿಕೊಂಡು ಉಂಟಾದ ಪದರಗಳ ಮೇಲೆ ಬೆರಳಿಟ್ಟಾಗಲೇ ಅವಕ್ಕಾಗಿದ್ದು…
ಅನುದಿನ ಕವನ-೧೫೯೭, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಕವಿತೆಗಳು ಸಾವನ್ನುಪ್ಪುವುದಿಲ್ಲ…
ಕವಿತೆಗಳು ಸಾವನ್ನುಪ್ಪುವುದಿಲ್ಲ… ಉರಿದು ಬಿದ್ದ ಉಲ್ಕೆಗಳು ಮತ್ತೆ ಉರಿಯುವಂತೆ ಈ ಕವಿತೆಗಳು ಉರಿಯುತ್ತವೆ… ಈ ಕವಿತೆಗಳು ಸಾವನ್ನಪ್ಪುವುದಿಲ್ಲ ಸೂರ್ಯನಂತೆ ಸದಾ ಸಂಚರಿಸುತ್ತ ಒಂದೆಡೆ ಕತ್ತಲಾದರೆ ಮತ್ತೊಂದು ಕಡೆ ಬೆಳಕಾಗುತ್ತವೆ… ಕವಿತೆಗಳು ಸಂಭ್ರಮಕ್ಕೆ ಋಷಿ ನೀಡುವ ಬಣ್ಣಗಳಂತೆ ದುಃಖಕ್ಕೋ ಸಂತೈಸುವ ಸರಕುಗಳು ಓದಿದಷ್ಟು…
