ಅವಳ ಮೊನಚು ಮಾತುಗಳು ಕತ್ತಲನ್ನು ತುಂಡರಿಸಿ ಎದೆಗೆ ನಾಟಿ ಎಚ್ಚರಿಸುವ ಜ್ವಾಲಾಮುಖಿ… ಕಡು ಕೋಪದ ನಡುವೆ ತೂರಿ ಬೀಡುವ ಹುಸಿ ನಗೆ ಸಂಕಟಗಳ ದಿಕ್ಕಾಪಾಲಾಗಿಸೋ ಬಿರುಗಾಳಿ… ನಾನೇ ಮರೆತಿದ್ದ ಸಾಲುಗಳು ನನ್ನ ಕೆಣಕುವಾಗ ಅವಳೇ ಬರೆದ ಅವಳ ಹೆಸರು ನೆತ್ತಿ ಸುಡುವ…
Category: ರಾಜ್ಯ
ತಾರತಮ್ಯ ಮಾಡದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಆಗ್ರಹಿಸಿ ನಾಳೆ(ಜು.10) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಸಾವಿರಾರು ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಭಾಗಿ
ಬೆಂಗಳೂರು, ಜು.9: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ತಾರತಮ್ಯ ಮಾಡದೇ ಪ್ರಸಕ್ತ ಸಾಲಿಗೂ ಮುಂದುವರೆಸಬೇಕು ಬೇಡಿಕೆ ಸೇರಿದಂತೆ ತಮ್ಮ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ…
ಅನುದಿನ ಕವನ-೧೬೫೧, ಕವಯತ್ರಿ: ಸಂಘಮಿತ್ರೆ ನಾಗರಘಟ್ಡ, ಬೆಂಗಳೂರು, ಕವನದ ಶೀರ್ಷಿಕೆ:ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ
ನೆತ್ತರಿನ ಎದೆಯಲ್ಲೊಂದು ಪ್ರೇಮಗೀತೆ ನಾ ನಿನ್ನನ್ನು ಹೇಗೆ ಪ್ರೀತಿಸುತ್ತೇನೆಂದರೆ ಗುಟ್ಟಿನ ಸಮಯದಲ್ಲಿ ಗುನುಗುವ ಪಿಸುಮಾತಿನಂತಲ್ಲ, ಕತ್ತಲೆಯ ಹೊರತಾಗಿಯೂ ಉರಿಯುವ ಬೀದಿ ದೀಪದಂತೆ ಬಂಡಾಯದ ವಾಕ್ಯಗಳ ನಡುವೆಯೂ ನಿನ್ನ ಹೆಸರೇ ಬೇರೂರಿದೆ ನಿನ್ನ ಪ್ರತೀ ಅಪ್ಪುಗೆಯೂ ಸಂಸತ್ತಿನಲ್ಲಿ ಮರೆಯಾದ ಘೋಷಣೆಗಳಂತಿವೆ. ನಾ ನಿನ್ನನ್ನು…
ರಾಷ್ಟ್ರೀಯ ಸಂಶೋಧನಾ ವಿಚಾರ ಸಮ್ಮೇಳನಕ್ಕೆ ಚಾಲನೆ: ಬಹುತ್ವವನ್ನು ಗೌರವಿಸಿದಾಗ ಕನ್ನಡ ಸಂಸ್ಕೃತಿ ಉಳಿಯುವುದು -ಜಾನಪದ ವಿದ್ವಾಂಸ. ಪ್ರೊ. ಹಿ.ಚಿ.ಬೋರಲಿಂಗಯ್ಯ
ಶಂಕರ ಘಟ್ಟ (ಕುವೆಂಪು ವಿವಿ), ಜು.8: ಎಪ್ಪತ್ತರ ದಶಕದಲ್ಲಿದ್ದ ವಾಗ್ವಾದಗಳು ಇಂದು ಕುಂಠಿತಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಪುನರ್ ಮನನ ಅತಿಅಗತ್ಯವಾಗಿದೆ. ಬಹುತ್ವವನ್ನು ಗೌರವಿಸಿದಾಗ ಮಾತ್ರ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ,…
ಅನುದಿನ ಕವನ-೧೬೫೦, ಕವಯಿತ್ರಿ:ಡಾ. ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ: ನೀ ಹಾಗೆ ಹೇಳಬಾರದಿತ್ತು
ನೀ ಹಾಗೆ ಹೇಳಬಾರದಿತ್ತು ನನ್ನ ಆಂತರ್ಯದ ಚೆಲುವಿಂದ ನಿನ್ನ ಅಲಂಕರಿಸುವಂತೆ ನೀ ಹೇಳಬಾರದಿತ್ತು ನನ್ನ ನೆತ್ತರಿನಿಂದ ನಿನ್ನ ವರ್ಣಸಿ ಬರೆಯುವಂತೆ ನೀ ಪೀಡಿಸಬಾರದಿತ್ತು ನಾ ಬಾಡಿದರೂ ನೀ ಮುಡಿಗೇರಿಸಿ ನಗಬಾರದಿತ್ತು ನನ್ನೀ ಚೆಲುವು ಒಲವೆಲ್ಲಾ ನಿನ್ನದೆಂದು ನೀ ಭಾವಿಸಬಾರದಿತ್ತು ನನಗೂ ಒಂದು…
ಬಳ್ಳಾರಿಯಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರು ಸಂವಿಧಾನದ ಮೌಲ್ಯಗಳನ್ನು ಬೆಸೆಯುವ ನೇಕಾರರಾಗಬೇಕಿದೆ -ಸಿ.ಎಂ. ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಬಳ್ಳಾರಿ ಜು 7: ನಮ್ಮ ಸಂವಿಧಾನ ಪ್ರತ್ಯೇಕವಾಗಿ “ಪತ್ರಿಕಾ ಸ್ವಾತಂತ್ರ್ಯ” ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು. ರಾಜ್ಯ ಮತ್ತು ಜಿಲ್ಲಾ…
ಅನುದಿನ ಕವನ-೧೬೪೯, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನೀನೇ ಮೊದಲು ನೀನೇ ಕೊನೆ
ನೀನೇ ಮೊದಲು ನೀನೇ ಕೊನೆ ನೀನೇ ಮೊದಲು ನೀನೇ ಕೊನೆ; ಮತ್ತೊಂದ ಬಯಸದು ನನ್ನ ಮನಸೇ! ನೀನೇ ಗುರಿಯು ನೀನೇ ದಾರಿ; ಇನ್ನೊಂದ ಅರಿಯದು ನನ್ನ ಉಸಿರೇ! ಮೊದಲ ನೋಟ ಮೊದಲ ಭೇಟಿ; ಮರೆಯಲಾರೆ ನಿನ್ನೆಜ್ಜೆ ಹಿಂಬಾಲಿಸುವೆ! ಮೊದಲ ಮಾತು ಮೊದಲ…
ಅನುದಿನ ಕವನ-೧೬೪೮, ಕವಿ: ಬಿ. ಶ್ರೀನಿವಾಸ, ದಾವಣಗೆರೆ, ಕವನದ ಶೀರ್ಷಿಕೆ:ಹರಿದ ಶರಟಿನ ಬೆಳಕು
ಹರಿದ ಶರಟಿನ ಬೆಳಕು ಗಡಿಬಿಡಿಯಲ್ಲಿ ಎಷ್ಟೊಂದು ಜನರನ್ನು ಮರೆತೆ ಬಿಡುತ್ತೇವೆ? ಎತ್ತಿ ಆಡಿಸಿದ ಕೈಗಳನು ಹೆಗಲ ಮೇಲೆ ಹೊತ್ತು ಜಗವ ತೋರಿಸಿದವರನು ಸಲೀಸಾಗಿ ಸ್ಮ್ರತಿಗೆ ಸರಿಸಿ ನಡೆದು ಬಿಡುತ್ತೇವೆ ಸುಮ್ಮನೆ ಹಚ್ಚಿಕೊಂಡ ಕೆಲಸಗಳ ನಡುವೆ ಸಾಲಿಗೆ ಹೋಗುವಾಗ ಬೆಳಕು ತರುವನೆಂದುಕೊಂಡ ಅವೇ…
ಅನುದಿನ ಕವನ-೧೬೪೭, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ
ಅವಳ ನಗು ಖಾಲಿ ಹಾಳೆಯ ಮೇಲಿನ ಒಂದು ಪುಟ್ಟ ಕವಿತೆ… ಸರಾಗವಾಗಿ ದಕ್ಕುವ ಸೂರ್ಯಕಾಂತಿಯ ಕಲರವ ಒಂಟಿ ನೆಲದ ಮೇಲನ ಕೇದಿಗೆ ಕಾಡಿಗೆ ಘಮ್ಮೆಂದು ಕಂಪಸೂಸಿ ಜೋಕಾಲಿ ತೂಗಿದಂತೆ ತೂಗಿ ಆಕಾಶಕ್ಕೆ ಬಣ್ಣ ಬಳಿದಂತೆ… ಮಳೆ ಬಿದ್ದು ಮಣ್ಣು ಊರಿಗೆಲ್ಲ ಹರಡಿ…
ಅನುದಿನ ಕವನ-೧೬೪೬, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ , ಕಾವ್ಯಪ್ರಕಾರ: ಗಜಲ್
ಗಜ಼ಲ್ ಯಾವುದೋ ಅಲೆಯೊಂದು ಹರಿದಿದೆ ನಮ್ಮ ನಡುವೆ ಯಾವುದೋ ಕಲೆಯೊಂದು ಉಳಿದಿದೆ ನಮ್ಮ ನಡುವೆ ಸಂಜೆ ಹೂಗಳ ಗಂಧ ಹಾಯುವ ದೂರವೆಷ್ಟೋ? ಎದೆಗೆ ಕಚಗುಳಿಯಿಟ್ಟ ಚಿಟ್ಟೆ ಹಾರುತ್ತಿದೆ ನಮ್ಮ ನಡುವೆ ಕಣ್ಣು ಕೂಡಿದ ಘಳಿಗೆಗೆ ಪಾರಿಜಾತವೇ ಅರಳಿತಂತೆ ಹೂ ಉದುರಿಸಿಕೊಂಡ ಹಾದಿಯೊಂದಿದೆ…