ಪಾರಿವಾಳದ ಗುಟರು….. ನಾನು ದಿನಚರಿ ಪುಸ್ತಕದಲ್ಲಿ ಬರೆಯುವುದು ತೀರಾ ಕಡಿಮೆ, ಇವತ್ತು ಸುಮ್ಮನೆ ಹಾಳೆಗಳನ್ನು ತಿರುವಿ ನೋಡಿದೆ; ಅಲ್ಲಿನ ಕೆಲವು ಸಾಲುಗಳ ಕೆಳಗೆ ತಾರೀಖು ನಮೂದಿಸಿದ್ದೇನೆ, ಇನ್ನು ಕೆಲವು ಕಡೆ ಪೆನ್ಸಿಲ್ನಲ್ಲಿ ಬರೆದ ಸಣ್ಣ ಸಣ್ಣ ಟಿಪ್ಪಣಿಗಳಿವೆ, ‘ಇವತ್ತು ಅವಳನ್ನು ನೋಡಿದೆ,…
Category: ಅನುದಿನ ಕವನ
ಅನುದಿನ ಕವನ-೧೮೪೨, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಅಕಾವ್ಯ!
ಅಕಾವ್ಯ! ಪಾಯಖಾನೆಯಲ್ಲಿ ಇರುವಾಗ ಅಷ್ಟೇ ಅಲ್ಲ ಅದರ ಬಾಗಿಲುಗಳಿಗೆ ಚಿಲಕ ಹಾಕಲಾಗದಿರುವಾಗ ಅಥವಾ ಹಾಕಿದರೂ ನೆಟ್ಟಗೆ ಕೂರದಿರುವಾಗ…. ಹಾಡಲು ಬರದಿದ್ದರೂ ಸಡನ್ನಾಗಿ ನಾನು ಗಾಯಕಿಯಾಗಿ ಬಿಡುತ್ತೇನೆ! ಹೌದು ಹಾಡುವುದಕ್ಕೆ ಅದು ಜಾಗವಲ್ಲ…. ಆದರೂ ಹಾಡುವೆ ಒಮ್ಮೆ ಹೀಗಾಯಿತು ನಳ ಜೋರಾಗಿ ಬಿಡೋಣವೆಂದರೆ…
ಅನುದಿನ ಕವನ-೧೮೪೧, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಸಂಕ್ರಾಂತಿಗೊಂದು ಸಾನೆಟ್
ಸಂಕ್ರಾಂತಿಗೊಂದು ಸಾನೆಟ್ ರಾಜನಾಜ್ಞೆಗೆ ನವಿಲು ನಾಟ್ಯಗೈಯಲುಂಟೆ? ಕಾನೂನು ಕಟ್ಟಳೆಗೆ ಕೋಗಿಲೆ ಕೂಗಲುಂಟೆ! ಬೆದರಿಕೆಗೆ ಹೆದರಿ ರವಿ ಪಥ ಬದಲಿಸಲುಂಟೆ? ಕೋಟಿ ನೋಟಲಿ ಚಂದಿರನ ತೂಗಲುಂಟೆ! ಜಾಲತಾಣದಿ ಗೆಣಸು ಗೆಜ್ಜರಿ ಬೆಳೆಯಲುಂಟೆ? ಚಿನ್ನದ ಬಳ್ಳದಲಿ ಅನ್ನವನು ಅಳೆಯಲುಂಟೆ! ಪಬ್ಬು ಬಾರ್ ಗಳಲಿ ಕಬ್ಬು…
ಅನುದಿನ ಕವನ-೧೮೪೦, ಕವಯತ್ರಿ: ಭುವನಾಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ:ಒಂದು ನಿರುಪಯುಕ್ತ ಕನಸು
ಒಂದು ನಿರುಪಯುಕ್ತ ಕನಸು ಕಾಣೆಯಾದವರು ಸಿಕ್ಕು ಬಿಡುತ್ತಾರೆ ಕನಸಿನೊಳಗೆ ಹೇಗೆ ಹಿಡಿದು ಕೊಡುವುದು ಕಳೆದುಕೊಂಡವರಿಗೆ? ಅದೇ ಗೋದಿ ಬಣ್ಣ ಹೋಳು ಮಾರೆ ಒಣಗಿದ ತುಟಿ ಗಾಯಗೊಂಡ ಹೃದಯ ತೇಲುಗಣ್ಣು ಕೆದರಿದ ಕಪ್ಪು ಬಿಳಿಪು ಕೂದಲು ಎತ್ತರ? ಎತ್ತರವ ಅಳೆಯುವುದು ಕಣ್ಣಿನ ತಾಕತ್ತಲ್ಲ…
ಅನುದಿನ ಕವನ-೧೮೩೯, ಕವಿ: ಎ. ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಡೋಂಟ್ವರಿ ರೀ..!
“ಇದು ನಾವು ನೀವು ನಿತ್ಯ ಪಾಲಿಸಲೇಬೇಕಾದ ಬಾಳತತ್ವಗಳ ಮಾರ್ಮಿಕ ಕವಿತೆ. ಬದುಕಿನ ಕಟು ವಾಸ್ತವಗಳ ನಿವೇದಿಸುವ ಸತ್ಯ ಸಂವೇದನೆಗಳ ಸಾತ್ವಿಕ ಭಾವಗೀತೆ. ಬೇಡದಕ್ಕೆಲ್ಲ ವೃಥಾ ವರಿ ಮಾಡ್ಕೊಂಡು ಒದ್ದಾಡುವುದೇಕೆ.? ಭ್ರಮೆ-ಭ್ರಾಂತುಗಳ ಬಿಟ್ಟು ಕಹಿಸತ್ಯಗಳನ್ನು ಅರಗಿಸಿಕೊಂಡು ಸಿಹಿಯಾಗಿ ಬದುಕಬಾರದೇಕೆ.? ಡೋಂಟ್ವರಿ ಅನ್ಕೊಂಡು ನಮ್ಮತನವನ್ನು…
ಅನುದಿನ ಕವನ-೧೮೩೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು, ಕವನದ ಶೀರ್ಷಿಕೆ:ಸಂಸ್ಕೃತಿಯ ನಕ್ಷೆ
ಸಂಸ್ಕೃತಿಯ ನಕ್ಷೆ ಪ್ರಪಂಚದ ದೊಡ್ಡ ನಕ್ಷೆಯಲ್ಲಿ ಸಂಸ್ಕೃತಿ ಒಂದು ಬೆಳಕಿನ ಬಿಂದು; ಆದರೆ ಆ ಬೆಳಕಿಗೆ ಯಾರಿಗೆ ಹಕ್ಕು ಎಂಬುದನ್ನು ಯುಗಗಳ ನೆರಳುಗಳು ಇಂದಿಗೂ ನಿರ್ಧರಿಸುತ್ತವೆ. ಆ ನೆರಳಿನ ಮಧ್ಯೆ ನನ್ನ ಅಪ್ಪ—ಒಬ್ಬ ಕವಿ— ತನ್ನ ಪದಗಳಿಂದ ಹೊಳೆಯುವ ಚಂದ್ರನನ್ನೇ ಜನರ…
ಅನುದಿನ ಕವನ-೧೮೩೭, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಇಂದೇಕೋ ಮೌನವೂ ಮೌನವಾಗಿದೆ ಸಾಕಿ ಮನದ ಅಲೆಯೂ ಸಿಂಪಿಯೊಳಡಗಿದೆ ಸಾಕಿ ಮಧುಶಾಲೆಯ ತುಂಬ ನೋವಿನ ಬಟ್ಟಲು ಮಧುವೂ ಕಂಬನಿಯಲಿ ಲೀನವಾಗಿದೆ ಸಾಕಿ ಕಡಲ ಒಡಲಿನಲಿ ಅದೆಂತಹ ವೇದನೆಯೊ ತೀರದ ದಾಹದಲಿ ಉಕ್ಕೇರುತಲಿದೆ ಸಾಕಿ ನೀರವವಾಗಿದೆ ವಸಂತನ ಕೋಗಿಲೆ ಗಾನ ಮಾಮರದ…
ಅನುದಿನ ಕವನ-೧೮೩೬, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ:ಅಂಬೇಡ್ಕರ್ ಎಂಬ ಹೆಸರು….
ಅಂಬೇಡ್ಕರ್ ಎಂಬ ಹೆಸರು…. ಎದೆ ದುಃಖವನೆಲ್ಲ ಕಳೆದ ಅಂಬೇಡ್ಕರ್ ಎಂಬ ಹೆಸರು ಭಾರತದ ಉಸಿರು ಬಡಬಗ್ಗರ ನೆರಳು… ಬಿಕ್ಕಳಿಸಿ ಹೆಪ್ಪುಗಟ್ಟಿದ ನೋವ ಎದೆಯಲ್ಲಿಟ್ಟು ಮುಟ್ಟಿಸಿಕೊಳ್ಳದೆ ಶೋಷಣೆಗೆ ಒಳಪಟ್ಟು ಕುದಿಕುದಿವ ರಕ್ತವ ತಣ್ಣಗಾಗಿಸಿ ಸೋತು ಹೋದವರ ಮೇಲೆತ್ತಿ ತೋರುಬೆರಳ ತೋರಿ ಸ್ವಾಭಿಮಾನದ ಬದುಕ…
ಅನುದಿನ ಕವನ-೧೮೩೫, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಮೈಸೂರು
ಅವನು ಸದಾ ಕೊರಗುತ್ತಲೇ ಇದ್ದ ಕಾರಣ ಕೇಳಿದರೆ ಕಣ್ಣೀರು ಹರಿಸುತ್ತಿದ್ದ ಅವನ ಮುಖದಲ್ಲಿ ನಗು ಕಂಡ ದಿನ ಅವನೆದುರಿನ ಖಾಲಿ ಹಾಳೆಗಳು ಅಕ್ಷರದ ಸಾಲುಗಳಲ್ಲಿ ಕಂಗೊಳಿಸುತ್ತಿದ್ದವು ಅವನು ಹಪಹಪಿಸಿದ್ದು ಅತ್ತಿದ್ದು ಬೆವರಿಳಿಸಿದ್ದು ಅನಾಮಧೇಯನಾಗಿದ್ದು ಅವರ ಮುಖವಾಡವಿಲ್ಲದ ಪ್ರೀತಿಗಾಗಿ ಕಾಲ ಚಕ್ರ ಉರುಳಿದಂತೆ…
ಅನುದಿನ ಕವನ-೧೮೩೪, ಕವಿ: ಡಾ. ಶಿವಕುಮಾರ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ದುರ್ಯೋಧನ
ದುರ್ಯೋಧನ ತಳಮಳದ ಕೊಳ ಮೊಗ್ಗು ಕಳಚಿ ನೆಲಕೆ ಬೀಳುವ ಹೊತ್ತು ಬಾಣನೆಟ್ಟರೂ ಘಾಸಿಗೊಳ್ಳದ ಕಟ್ಟಾಳು ಭೀಷ್ಮರ ಮುದ್ದಿನ ಕೂಸು ಅಗಲಿದ ಗದೆಯ ಮುಟ್ಟಲಾಗದೆ ತನ್ನದೇ ಹೆಜ್ಜೆ ಗುರುತಿನ ಮೇಲೆ ಕುಸಿದು ಬಿದ್ದ ದುರ್ಯೋಧನ ! ಹಾರಿ ತುಂಡು ತುಂಡಾಗಿತ್ತು ಕಿರೀಟ ಝಾಡಿಸಿ…
