ವಿಶ್ವ ಕಾವ್ಯ ದಿನದ ಶುಭಾಶಯಗಳು ನನ್ನ ನಿನ್ನ ನಡುವೆ ನೀನಿದ್ದೀಯೆ ನಾನೂ ಇದ್ದೇನೆ ದಡದ ಎರಡೂ ಬದಿಯಲ್ಲಿ ನಾವಿಲ್ಲ ನಡುವೆ ಹರಿವ ನದಿಯೂ ಇಲ್ಲ ಸೇತುವೆ ಕಟ್ಟುವುದು ಕಷ್ಟಸಾಧ್ಯ. ನೀನಿದ್ದೀಯೆ ನಾನೂ ಇದ್ದೇನೆ ಭೂಮಿ ಆಕಾಶಗಳ ಅಂತರದಲ್ಲಿ ನಾವಿಲ್ಲ ನಡುವೆ ತೇಲುವ…
Category: ಅನುದಿನ ಕವನ
ಅನುದಿನ ಕವಿತೆ:೧೫೪೦, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ
ಅವಳಿಗೆ ನಡೆಯುವುದೂ ಕಷ್ಟ. ನೀವು ಗಮನಿಸಿರಬೇಕು ನಾನೂ ಗಮನಿಸಿದ್ದೇನೆ ಆಗಾಗ. ಅವಳ ಬಳಿ ದೊಡ್ಡದೊಂದು ಮೂಟೆಯೇ ಇದೆ.. ಅವಳ ಮುತ್ತಜ್ಜಿ ಅವಳ ಅಜ್ಜಿಗೆ ಕೊಟ್ಟಿದ್ದು. ಅವಳ ಅಜ್ಜಿ ಅವಳಮ್ಮನಿಗೆ ಕೊಟ್ಟಿದ್ದು.. ಅವಳಮ್ಮ ಅವಳಿಗೆ ಕೊಟ್ಟಿದ್ದು.. ನಯ, ನಾಜೂಕು, ಭಯ, ಹಿಂಜರಿಕೆ, ಮೃದುತ್ವ,…
ಅನುದಿನ ಕವಿತೆ-೧೫೩೯, ಕವಯಿತ್ರಿ: ರೇಣುಕಾ ರಮಾನಂದ, ಹೊನ್ನಾವರ ಉತ್ತರ ಕನ್ನಡ ಜಿ.
ನೀನು ವಾಕಿಂಗ್ ಹೊರಟು ಮರೆಯಾಗಿಬಿಡುವ ತಿರುವಿನಲ್ಲಿ ಹೆಸರಿಲ್ಲದ ಹೂವಿನ ಮರವೊಂದಿದೆ …
ಅನುದಿನ ಕವನ-೧೫೩೮, ಕವಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ:ನಶ್ವರದ ಜೀವ
ನಶ್ವರದ ಜೀವ ಸಿಡಿದೆದ್ದ ಜ್ವಾಲೆಯೊಳು ಮೌನದ ಆಹುತಿ ಅಳುತಿದೆ. ಗೊತ್ತಿಲ್ಲ ಅಳುತಿದೆ…. ಮನ ಪಳ್ಳೆoದು ಆಗಸದ ಮೋಡ ಒಡೆದು ಚೂರಾಗಿದೆ ಇದಕೆ ಮರದ ರೆಂಬೆ ಕೊಂಬೆ ಗಳೆಲ್ಲ ಮಾತಾಡದೆ ಕಣ್ಣೀರು ಸುರಿಸುತ್ತಿವೆ… ಹಿಸುಕಿದೆ ಕತ್ತು ಜೀವನದ ಜ್ವಾಲೆಯಲಿ, ತಲೆಬುಡವಿಲ್ಲದ ದಾರಿಯಲಿ ಯೋ…
ಅನುದಿನ ಕವನ-೧೫೩೭, ಕವಯಿತ್ರಿ: ಮಂಜುಳಾ ಭಾರ್ಗವಿ, ಬೆಂಗಳೂರು,
ನಗೆಯ ನೋಟಕ್ಕೆ ಬೆಳದಿಂಗೊಂದು ತಾಕಬೇಕಿತ್ತು, ಅವಳ ಅಸ್ತಿತ್ವಕ್ಕೆ ಚೂರು ಸುಳಿವು ಕೊಡಬೇಕಿತ್ತು. ಅದೆಷ್ಟೋ ರಣಗಾಯಗಳಿನ್ನೂ ಹಸಿಯಾಗೇ ಇತ್ತು ಆದರೂ ಒಂದೆರಡು ನೋವಗುಳಿಗೆಗಳ ನುಂಗಬೇಕಿತ್ತು. ದಿಕ್ಕುಗಳಾಚೆ ಏನಿದೆ ಎಂದು ಒಮ್ಮೆಯಾದರೂ ಹುಡುಕಬೇಕಿತ್ತು.ಪತನಗೊಂಡ ಶಾಸನಗಳನು ಒಮ್ಮೆ ಪರಿಶೀಲಿಸಬೇಕಿತ್ತು. ಅವನ ಹಕೀಕತ್ತಿನ ಜಗತ್ತಿನೊಳಗೆ ಹೆಜ್ಜೆಗಳ ಲೆಕ್ಕವಿಡಬೇಕಿತ್ತು.…
ಅನುದಿನ ಕವನ-೧೫೩೬, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು
ಪುನಃ….ಪುನಃ.. ನಿನ್ನ ನೆನಪಿನಾಳದ ಭಾವ ಕಡಲಿಗೆ ಧುಮುಕುತ್ತೇನೆ. ನಿನ್ನ ನೋಡುವ ಕಾತುರದಿ….ಕೌತುಕದಿ.! ಈಜುತ್ತೇನೆ….ಈಜುತ್ತೇನೆ… ಕೈಕಾಲು ಸೋತರೆ ವಾಸ್ತವದ ದಡಕ್ಕೆ ಬಂದು ಕೊಂಚ ವಿರಮಿಸುತ್ತೇನೆ.! ಪುನಃ ಏಕಾಂತದಿ ನಿನ್ನ ಬಿಟ್ಟಿರಲಾಗದ ಭಾವ ಆವರಿಸಿ ಕಲ್ಪನೆಯ ನಿನ್ನ ನೆನಪಿನ ಕಡಲಿಗೆ ಧುಮುಕುತ್ತೇನೆ.! ಭಾವ ಕಡಲಲಿ…
ಅನುದಿನ ಕವನ-೧೫೩೫, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ ಕಲಬುರಗಿ, ಕವನದ ಶೀರ್ಷಿಕೆ:ಯಾರು ಬದಲಾಗಿದ್ದಾರೆ?
ಯಾರು ಬದಲಾಗಿದ್ದಾರೆ? ಆಯಸ್ಸು ಮುಗಿಯದೆ ಆಯಾಸವಿಲ್ಲದೆ ಭೂಮಿ ಸುತ್ತುತ್ತಿದೆ ಪ್ರತಿಫಲ ಬಯಸದ ನೇಸರ ಬೇಸರಿಲ್ಲದೆ ಬಿಸಿಲು ಬೆಳಕು ನೀಡುತ್ತಿದ್ದಾನೆ ಚಂದ್ರ ನೀಲಿ ಗಗನದಲಿ ನಕ್ಷತ್ರಗಳ ಮಧ್ಯ ತೇಲುತ್ತ ಬೆಳದಿಂಗಳು ಚಲ್ಲುತ್ತಿದ್ದಾನೆ ಮಳೆ ಗಾಳಿ ಉಷ್ಣ ಶೀತ ಸಕಲ ಜೀವಗಳಿಗೂ ನೆರವಾಗಿ ಆಗಾಗ…
ಅನುದಿನ ಕವನ-೧೫೩೪, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು
ಹೋಳಿಯ ಬಣ್ಣವಿರಲಿ ಒಂದು ಚೂರು ಪಿಂಕು ಬಲು ತಂಪು ಕಣ್ಣಿಗೆ!! ಬರಲಿ ಬಿಡು ಬಣ್ಣಗಳ ಮಳೆ ಚಿಮ್ಮುತ್ತ ಚೆಲ್ಲುತ್ತ ಬಣ್ಣಗಳ ಬಣ್ಣವನ್ನು!!. ಜೊತೆಗೂಡಿ ನಡೆದಾಡಿ ಆಡುವುದು ಹೇಗೆ ಹೋಳಿಯನ್ನು. ಜೊತೆ ಬಿಟ್ಟು ನಡೆವಾಗ ನೀನು!! ಬಂದು ಬಿಡು ಇತ್ತ ನನ್ನತ್ತ ಆಡಿಬಿಡೋಣ…
ಅನುದಿನ ಕವನ-೧೫೩೩, ಕವಯಿತ್ರಿ: ನಂದಿನಿ ಹೆದ್ದುರ್ಗ
ಒಂದು ನೋಟಕ್ಕಾಗಿ ಹಂಬಲಿಸಿದಾಗೆಲ್ಲ ಸ್ಟೀರಿಂಗ್ ಹಿಡಿದ ಅವನಿಗೆ ಮೂರೇ ನಿಮಿಷಕ್ಕೆ ಹದಿನೆಂಟು ಕಿಮಿ ದೂರದ ಮನೆ ಸಿಗುತ್ತದೆ ಅಥವಾ ಹದಿಮೂರು ಬಾರಿ ತಮ್ಮ ತಂಗಿ ನಾದಿನಿ ಚಿಕ್ಕಪ್ಪ ಕರೆ ಮಾಡುತ್ತಾರೆ ಅಥವಾ ಯಾರಿಗೋ ಹುಷಾರು ತಪ್ಪಿ ಎಮರ್ಜೆನ್ಸಿ ಬೀಳುತ್ತದೆ ಹಣೆಯ ಮೇಲಿದ್ದ…
ಅನುದಿನ ಕವನ-೧೫೩೨, ಕವಯಿತ್ರಿ: ಸಮುದ್ಯತಾ ಕಂಜರ್ಪಣೆ
ಪರಿಚಯ ಸ್ನೇಹವಾಗುವ, ಸ್ನೇಹ ಪ್ರೇಮವಾಗುವ ಘಟ್ಟದಲ್ಲಷ್ಟೇ ಒಲವಿಗೊಂದಿಷ್ಟು ತೂಕ.. ಆಮೇಲೆ ಬದುಕು ಅಂಗಾತ ಬಿದ್ದ ಜಿರಳೆಯಂತೆ. ಕದಲಲಾರದೇ ಸುಮ್ಮನೇ ಒದ್ದಾಡುವ ಅಸಹಾಯಕತೆ. ಒಲವ ಬಿಟ್ಟು ಮುನ್ನಡೆದವರಿಗೂ ಗೊತ್ತು ಎಲ್ಲ ಘನತೆಯನ್ನೂ ಕಳೆದು ಪ್ರೇಮಿಯನ್ನು ಯಾರೋ ಆಗಿಸಿಬಿಡುವ ಗೌರವವೇ ಇಲ್ಲದ ವಿದಾಯಗಳಷ್ಟೇ ಬದುಕನ್ನು…
